AMP Scholarship 2024:-
ಎಲ್ಲರಿಗೂ ನಮಸ್ಕಾರ: AMP ಸ್ಕಾಲರ್ಶಿಪ್ ಅಡಿಯಲ್ಲಿ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ 10,000 ಸಹಾಯಧನವನ್ನು ಸರ್ಕಾರವು ನೀಡಿದೆ. ಯಾರೆಲ್ಲ ಪಿಯುಸಿ ಪಾಸ್ ಆಗಿರುವ ವಿದ್ಯಾರ್ಥಿಗಳು ಈಗಲೇ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ. ಈಗಾಗಲೇ ಭಾರತ ಸರ್ಕಾರವು ಬಡ ವಿದ್ಯಾರ್ಥಿ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಆರ್ಥಿಕ ನೆರವನ್ನು ನೀಗಿಸಲು ಹಲವಾರು ಸ್ಕಾಲರ್ಶಿಪ್ ಯೋಜನೆಗಳನ್ನು ಕೈಗೊಂಡಿದೆ. ಅದೇ ರೀತಿಯಾಗಿ ಈ ಸ್ಕಾಲರ್ಶಿಪ್ ಯೋಜನೆ ಒಂದಾಗಿದೆ. ಈ ಸ್ಕಾಲರ್ಶಿಪ್ ಅಡಿಯಲ್ಲಿ ಪಿಯುಸಿ ಪಾಸ್ ಆಗಿರುವ ಬಡ ವಿದ್ಯಾರ್ಥಿಗಳಿಗೆ 10,000 ಸಹಾಯಧನವನ್ನು ನೀಡುತ್ತೇನೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ.
ಹೌದು ಬಡ ವಿದ್ಯಾರ್ಥಿಗಳಿಗೆ ಮತ್ತು ಹಿಂದುಳಿದ ವರ್ಗದ ಮುಸ್ಲಿಂ ವಿದ್ಯಾರ್ಥಿಗಳಿಗೆ ಈ ಯೋಜನೆ ಅಡಿಯಲ್ಲಿ 10,000 ಸಹಾಯಧನ ನೀಡಲಾಗುತ್ತಿದೆ. ಇದರಿಂದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವನ್ನು ನೀಡಲು ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಷನಲ್ಸ್ ಸಂಸ್ಥೆಯು ಈ AMP 2024ರ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. ಈ ಅಡಿಯಲ್ಲಿ ಈಗಾಗಲೇ ಕೆಲವು ಹಿಂದುಳಿದ ವರ್ಗದ ಮುಸ್ಲಿಂ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಅನ್ನು ಪಡೆಯುವ ಮೂಲಕ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ಅದೇ ರೀತಿಯಲ್ಲಿ ನೀವೇನಾದರೂ ಈ ಸ್ಕಾಲರ್ಶಿಪ್ ಗೆ ಏಗೇ ಅರ್ಜಿ ಸಲ್ಲಿಸುವುದು, ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳನ್ನು ಈ ಲೇಖನದಲ್ಲಿ ನಾವು ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ.
AMP ವಿದ್ಯಾರ್ಥಿ ವೇತನ.!
ಹೌದು ‘ಅಸೋಸಿಯೇಷನ್ ಆಫ್ ಮುಸ್ಲಿಂ ಪ್ರೊಫೆಷನಲ್ಸ್’ ಸಂಸ್ಥೆಯು ಈ ಯೋಜನೆಯನ್ನು 2013ರಲ್ಲಿ ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನವನ್ನು ನೀಡಲು ಪ್ರಾರಂಭಿಸಿತು. ಈ ವಿದ್ಯಾರ್ಥಿ ವೇತನವನ್ನು ಅಗತ್ಯವಿರುವ ಹಿಂದುಳಿದ ವರ್ಗದ ಮತ್ತು ಬಡ ಮುಸ್ಲಿಂ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ ಮಾಡಲು ಈ ಸ್ಕಾಲರ್ಶಿಪ್ ಯೋಜನೆಯನ್ನು ಜಾರಿ ಮಾಡಿದ್ದು. ಈ ಯೋಜನೆ ಅಡಿಯಲ್ಲಿ ಪಿಯುಸಿ ಪಾಸ್ ಆಗಿರುವ ಎಲ್ಲಾ ಮುಸ್ಲಿಂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು 10,000 ವಿದ್ಯಾರ್ಥಿ ವೇತನವನ್ನು ಪಡೆಯಬಹುದು. ಈಗಾಗಲೇ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಈ ಯೋಜನೆ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದು ನೀವು ಸಹ ಈಗಲೇ ಅರ್ಜಿ ಸಲ್ಲಿಸುವ ಮೂಲಕ ಈ ಸ್ಕಾಲರ್ಶಿಪ್ ಅನ್ನು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು.!
- ಈ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಭಾರತದ ನಿವಾಸಿ ಆಗಿರಬೇಕು.
- ಅಷ್ಟೇ ಅಲ್ಲದೆ ಬಡ ರೇಖೆಗಿಂತ ಕೆಳಗಿರುವ ಮತ್ತು ಹಿಂದುಳಿದ ವರ್ಗಕ್ಕೆ ಸೇರುವ ಮುಸ್ಲಿಂ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
- ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ವಯಸ್ಸಿನ ಮಿತಿಯು 19 ರಿಂದ 20 ವರ್ಷದ ವಯಸ್ಸನ್ನು ಹೊಂದಿರಬೇಕು.
- ಅಷ್ಟೇ ಅಲ್ಲದೆ ಭಾರತದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಪದವಿಯನ್ನು ಓದುತ್ತಿರಬೇಕು. ಅಥವಾ ವೈದ್ಯಕೀಯ ಮತ್ತು ವಾಸ್ತುಶಿಲ್ಪದಂತಹ ವೃತ್ತಿಯ ಕ್ಷೇತ್ರಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ಅಷ್ಟೇ ಅಲ್ಲದೆ ಈ ವಿದ್ಯಾರ್ಥಿಯು ಮೊದಲಿನಿಂದಲೂ ಸರ್ಕಾರ ಅಥವಾ ಸರ್ಕಾರಿ ಅನುದಾನದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರಬೇಕು.
ಈ ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾರಿಗಳು.?
ಈ ಯೋಜನೆಗೆ ನೀವೇನಾದರೂಈ ಅರ್ಜಿ ಸಲಿಸಬೇಕೆಂದುಕೊಂಡಿದ್ದೀರಾ.? ಹಾಗಾದರೆ ನಾವು ಹೇಳುವಂತಹ ಎಲ್ಲಾ ಮುಖ್ಯ ದಾಖಲೆಗಳನ್ನು ಹೊಂದಿಸಿಕೊಂಡು, ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸುವ ಮೂಲಕ 10000 ಹಣವನ್ನು ಪಡೆದುಕೊಳ್ಳಬಹುದಾಗಿದೆ. ಆ ದಾಖಲೆಗಳು ಯಾವುವು ಎಂದರೆ:-
- 10 ಮತ್ತು 12ನೇ ತರಗತಿಯ ಮಾಸ್ ಕಾರ್ಡ್
- ಆಧಾರ್ ಕಾರ್ಡ್
- ಹಿಂದಿನ ವರ್ಷದ ಪದವಿ ಅಂಕಪಟ್ಟಿಗಳು
- ಫೋಟೋ
- ವಿದ್ಯಾರ್ಥಿಯ ವಿಳಾಸಕ್ಕೆ ಸಂಬಂಧಪಟ್ಟ ದಾಖಲೆಗಳು
- ಕಾಲೇಜಿನ ಫೀಸ್ ರೆಸಿಪ್ಟ್
- ಪಾಸ್ ಬುಕ್
ಅರ್ಜಿಯನ್ನು ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು.?
ವಿದ್ಯಾರ್ಥಿಯು ಈ ಸ್ಕಾಲರ್ಶಿಪ್ ಪಡೆಯಲು ನಾವು ಹೇಳಿರುವಂತಹ ಈ ಎಲ್ಲಾ ಮುಖ್ಯ ದಾಖಲೆಗಳನ್ನು ಹೊಂದಿಸಿಕೊಂಡು. ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ನಲ್ಲೂ ಸಹ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಇದೇ ತಿಂಗಳಾದ ಆಗಸ್ಟ್ 15 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿರುವುದರಿಂದ ಆ ದಿನದೊಳಗೆ ಅರ್ಜಿಯನ್ನು ಸಲ್ಲಿಸಿ. ಧನ್ಯವಾದಗಳು.