ಎಲ್ಲರಿಗೂ ನಮಸ್ಕಾರ..
ಕರ್ನಾಟಕ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯ ಕೂಡ ಒಂದು, ಈಗಾಗಲೇ ಸರ್ಕಾರದಿಂದ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದ್ದು ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ವಿತರಣೆ ಸಾಧ್ಯವಾಗದ ಕರಣ ಸರ್ಕಾರದಿಂದ ಕೆಲವು ಹೊಸ ನಿಯಮಗಳನ್ನು ಈ ಬಾರಿ ಜಾರಿ ಮಾಡಿದ್ದು ನಿಯಮಗಳ ಪ್ರಕಾರ ಕಳೆದ ಜುಲೈ ತಿಂಗಳಿನಿಂದ ಅಕ್ಕಿ ಬದಲಾಗಿ ಹಣ ನೀಡುವುದಾಗಿ ಆ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುದಾಗಿ ಸರ್ಕಾರದಿಂದ ಆದೇಶ ಹೊರಡಿಸಿದ್ದು, ಆದರೆ ಈವರೆಗೂ ಸಹ ರೇಷನ್ ಕಾರ್ಡ್ದಾರರಿಗೆ ಅಕ್ಕಿಯನ್ನು ಬಂದಿಲ್ಲ ಕೆಲವರಿಗೆ ಹಣ ಬಂದಿದ್ದರು ಯಾವ ಬ್ಯಾಂಕ್ ಖಾತೆಗೆ ಹಣ ಬಂದಿದೆ ಎಂಬ ಸ್ಟೇಟಸ್ ಸಿಗುತ್ತಿಲ್ಲ ಆದ್ದರಿಂದ ನೀವು ನಿಮ್ಮ ರೇಷನ್ ಕಾರ್ಡ್ ಗೆ ಬಂದಿರುವಂತಹ ಆ ಅಕ್ಕಿ ಹಣವನ್ನು ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು. ಯಾವ ರೀತಿ ಚೆಕ್ ಮಾಡುವುದು ಹೇಗೆ ಚೆಕ್ ಮಾಡುವುದು ಎಂಬ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ..
ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ನಿಮಗೆ ಇನ್ನೂ ಕೂಡ ಬಂದಿಲ್ವಾ.?
ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೇ ಗ್ಯಾರಂಟಿ ಯೋಜನೆ ಆಗಿರುವ ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಚಾಲನೆ ನೀಡಿದೆ ಆದರೆ ರೇಷನ್ ಕಾರ್ಡ್ ಹೊಂದಿರುವ ಪ್ರತಿ ಒಬ್ಬ ಸದಸ್ಯನಿಗೆ 10 ಕೆಜಿ ಅಕ್ಕಿ ವಿತರಣೆ ಮಾಡುವುದಾಗಿ ಸರ್ಕಾರ ತಿಳಿಸಿದ್ದು ಅಕ್ಕಿಯ ಸಮಸ್ಯೆಯಿಂದ ಇದೀಗ ಎಲ್ಲಾ ರೇಷನ್ ಕಾರ್ಡ್ದಾರರಿಗೂ 10 ಕೆ.ಜಿ ಅಕ್ಕಿ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಸರ್ಕಾರ ಮತ್ತೆ ಕೆಲವು ಹೊಸ ನಿಯಮಗಳನ್ನು ತಿಳಿಸಿದ್ದು ಇದರ ಪ್ರಕಾರ ಪ್ರತಿ ಸದಸ್ಯರಿಗೆ ಅಕ್ಕಿಯ ಬದಲು ಹಣ ನೀಡುವುದಾಗಿ ಸರ್ಕಾರ ಆದೇಶ ಜಾರಿ ಮಾಡಿದ್ದು ಪ್ರತಿ ಕೆಜಿಗೆ 35 ರೂಪಾಯಿಯಂತೆ ಒಬ್ಬ ಸದಸ್ಯನಿಗೆ 10 ಕೆಜಿಗೆ ಹಣವನ್ನು ನೀಡಲಾಗುತ್ತದೆ ಅದು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಈಗಾಗಲೇ ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಮೂರು ತಿಂಗಳ ಅಕ್ಕಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಆದರೆ ಈವರೆಗೂ ಕೆಲವು ರೇಷನ್ ಕಾರ್ಡ್ದಾರರಿಗೆ ಅಂದರೆ ಸುಮಾರು 60ರಷ್ಟು ರೇಷನ್ ಕಾರ್ಡ್ ದಾರಿಗೆ ಕೇವಲ ಒಂದೇ ತಿಂಗಳ ಅಕ್ಕಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಇನ್ನು ಎರಡು ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗುವಲ್ಲಿ ಸಮಸ್ಯೆಯಾಗಿದೆ. ಹಾಗಾದರೆ ಆ ಹಣ ಬಂದಿದೆಯೇ ಅಥವಾ ಇಲ್ಲವೇ ಯಾವ ಯಾವ ತಿಂಗಳ ಹಣ ಈಗಾಗಲೇ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಷ್ಟೆಷ್ಟು ಹಣ ಜಮಾ ಆಗಿದೆ ಎಂಬ ಬಗ್ಗೆ ತಿಳಿಯಲು ಈ ಕೆಳಗೆ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.
ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಸರ್ಕಾರದಿಂದ ಈಗಾಗಲೇ ಎಲ್ಲರ ಬ್ಯಾಂಕ್ ಖಾತೆಗೆ ಜಮಾ.?
ಈಗಾಗಲೇ ತಿಳಿಸಿದ ಹಾಗೆ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಾಗಿ ಹಣ ನೀಡಲು ಸರ್ಕಾರ ಮುಂದಾಗಿದ್ದು ಈಗಾಗಲೇ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತಿದೆ ಸದ್ಯ ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ರೇಷನ್ ಕಾರ್ಡ್ ಹೊಂದಿರುವವರು ಇಂದು ಈಗಾಗಲೇ ಎಲ್ಲರಿಗೂ ಜುಲೈ ತಿಂಗಳ ಅಕ್ಕಿ ಅಣ್ಣ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಆದರೆ ನಂತರದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಯಾವುದೇ ಹಣ ರೇಷನ್ ಕಾರ್ಡ್ ದಾರರಿಗೆ ಬಂದಿರದೆ ಇರುವುದು ಎಲ್ಲರಿಗೂ ಗೊಂದಲವನ್ನು ಉಂಟುಮಾಡಿದೆ.
ಹೌದು ಏಕೆಂದರೆ ಈಗಾಗಲೇ ರಾಜ್ಯ ಸರ್ಕಾರದಿಂದ ಕೆಲವು ಹೊಸ ನಿಯಮಗಳನ್ನು ಜಾರಿ ಮಾಡಿದ್ದು ಕಡ್ಡಾಯವಾಗಿ ಬಿಪಿಎಲ್ ಕಾಡಿಗೆ ಆಧಾರ್ ಲಿಂಕ್ ಆಗಿರಲೇಬೇಕು ಅಂದರೆ ಎಲ್ಲಾ ಸದಸ್ಯರ ಆಧಾರ್ ಲಿಂಕ್ ಆಗಿರಬೇಕು ಅಥವಾ e-kyc ಮಾಡಿಸಿರಬೇಕು ಮತ್ತು ರಾಜ್ಯ ಸರ್ಕಾರದಿಂದ ಕೆಲವು ಬಿಪಿಎಲ್ ಕಾರ್ಡ್ಗಳನ್ನು ಈಗಾಗಲೇ ರದ್ದು ಕೂಡ ಮಾಡಲಾಗಿದೆ ಹಾಗೆ ಗೃಹಲಕ್ಷ್ಮಿ ಗೃಹಜೋತಿ ಯೋಜನೆಗೂ ಸಂಬಂಧ ಪಟ್ಟ ಹಾಗೆ ಈ ರೇಷನ್ ಕಾರ್ಡ್ ನ ಕೆಲವು ಹೊಸ ಅಪ್ಡೇಟ್ಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ ಈ ಎಲ್ಲಾ ಕಾರಣಗಳಿಂದ ನಮ್ಮ ಬಿಪಿಎಲ್ ಕಾರ್ಡ್ ನಲ್ಲಿ ಯಾವುದಾದರೂ ಸಮಸ್ಯೆ ಉಂಟಾಗಿರಬಹುದು ಇದರಿಂದ ನಮಗೆ ಹಣ ಜಮವಾಗುವಲ್ಲಿ ಸಮಸ್ಯೆ ಉಂಟಾಗುತ್ತಿರಬಹುದೇ ಎಂಬ ಗೊಂದಲಗಳು ಇವೆ ಆದ್ದರಿಂದ ನಿಮಗೆ ಅನ್ನಭಾಗ್ಯ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಜಮ ಹಾಗಿಲ್ಲದಿದ್ದರೆ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಷ್ಟು ಹಣ ಜಮಾ ಆಗಿದೆ ಎಂಬ ಬಗ್ಗೆ ಸಂಪೂರ್ಣವಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು..
ಅಕ್ಕಿ ಹಣ ಸರ್ಕಾರದಿಂದ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿದೆಯೇ ಎಂದು ಚೆಕ್ ಮಾಡುವುದು ಹೇಗೆ.?
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಈ ಹೊಸ ನಿಯಮ ಜಾರಿ ಮಾಡಿದ ಸಮಯದಲ್ಲೇ ಕೆಲವು ನಿಯಮಗಳನ್ನು ಜನರಿಗೆ ಅಂದರೆ ರೇಷನ್ ಕಾರ್ಡ್ ದರರಿಗೆ ನೀಡಿದ್ದು ಈ ನಿಯಮಗಳನ್ನು ಪಾಲಿಸಿದವರಿಗೆ ಮಾತ್ರ ಪ್ರತಿ ತಿಂಗಳು ಅಕ್ಕಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು.
ಹೌದು ಬಿಪಿಎಲ್ ಕಾರ್ಡ್ ಹೊಂದಿರುವವರು ಕಡ್ಡಾಯವಾಗಿ ಕಾರ್ಡಿನ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಅಥವಾ e-kyc ಮಾಡಿಸಿರಬೇಕು ಎಂದು ತಿಳಿಸಿತ್ತು, ಅಲ್ಲದೆ ಈಗಾಗಲೇ e-kyc ಮಾಡಿಸಿದ್ದ ಕಾರ್ಡ್ ದಾರರಿಗೆ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಉಳಿದವರಿಗೆ ಕೆಲವು ದಿನಗಳ ಕಾಲಾವಕಾಶವನ್ನು ಸಹ ಸರ್ಕಾರ ನೀಡಿತ್ತು, ಇನ್ನು ಈಗಾಗಲೇ ಎಲ್ಲಾ ರೇಷನ್ ಕಾರ್ಡ್ ಬಳಕೆದಾರರಿಗೆ ಜುಲೈ ತಿಂಗಳ ಅಕ್ಕಿ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು ಇನ್ನು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣ ಬಂದಿಲ್ಲ. ಆದರೆ ಕೆಲವರಿಗೆ ಈ ಹಣ ಬಂದಿದ್ದು ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಷ್ಟು ಹಣ ಜಮಾ ಆಗಿದೆ ಎಂದು ತಿಳಿದುಕೊಳ್ಳುವುದು ಸಮಸ್ಯೆಯಾಗಿದೆ ಆದರೆ ಇದನ್ನು ನೀವು ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.
ಹಾಗಾದ್ರೆ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ.?
ನೀವು ನಿಮ್ಮ ಮೊಬೈಲ್ ನಲ್ಲಿ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ ಎಂದು ತಿಳಿದುಕೊಳ್ಳಲು ಕೆಲವು ಹಂತಗಳಿವೆ ಅಂತಗಳನ್ನು ನೀವು ಸರಿಯಾಗಿ ಪಾಲಿಸಿದ್ದೆ ಆದಲ್ಲಿ ನೀವು ಸುಲಭವಾಗಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
- ಮೊದಲು ನೀವು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://ahara.kar.nic.in/lpg/
- ನಂತರ ನಿಮಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ.
- ಇದರಲ್ಲಿ ಮೊದಲು ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು ಇಲ್ಲಿ ನಿಮಗೆ ಮೂರು ಜಿಲ್ಲೆಗಳ ಆಯ್ಕೆ ಸಿಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ ಯಾವುದು ಎಂದನ್ನು ಚೆಕ್ ಮಾಡಿ ಆಯ್ಕೆ ಮಾಡಿ.
- ನಂತರ ನಿಮಗೆ ಇನ್ನೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ “ನೇರ ನಗದು ವರ್ಗಾವಣೆ ಸ್ಥಿತಿ” ಮೇಲೆ ಕ್ಲಿಕ್ ಮಾಡಿ
- ನಂತರ ಇದರಲ್ಲಿ ವರ್ಷ ಮತ್ತು ತಿಂಗಳು ಆಯ್ಕೆ ಆಗಿರುತ್ತದೆ, ಇದರಲ್ಲಿ RC no. ಎಂಬಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ನಂತರ ಕ್ಯಾಪ್ಚ ಎಂಟರ್ ಮಾಡಿ GO ಮೇಲೆ ಕ್ಲಿಕ್ ಮಾಡಿ.
- ಕೊನೆಯದಾಗಿ ನಿಮಗೆ ನೀವು ಎಂಟರ್ ಮಾಡಿರುವ ರೇಷನ್ ಕಾರ್ಡ್ ನಂಬರ್ ಯಾರ ಹೆಸರಿನಲ್ಲಿದೆ ಆ ರೇಷನ್ ಕಾರ್ಡ್ ನಂಬರ್ ನಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ಹಾಗೆ ಈಗಾಗಲೇ ಆ ರೇಷನ್ ಕಾರ್ಡ್ ಗೆ ಸರ್ಕಾರದಿಂದ ಎಷ್ಟು ಹಣ ಜಮಾ ಆಗಿದೆ ಅದು ಯಾವ ಯಾವ ದಿನಾಂಕದಲ್ಲಿ ಜಮಾ ಆಗಿದೆ ಹಾಗೆ ಆ ಹಣ ಯಾವ ಬ್ಯಾಂಕ್ ಖಾತೆಗೆ ಜಮಹಾಗಿದೆ ಎಂಬ ಎಲ್ಲಾ ಮಾಹಿತಿಗಳು ಕೂಡ ನಿಮಗೆ ಸಿಗುತ್ತದೆ.
ಇದರಲ್ಲಿ ನೀವು ನಿಮ್ಮ ರೇಷನ್ ಕಾರ್ಡಿಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಅಣ ಯಾವ ಯಾವ ತಿಂಗಳು ಎಷ್ಟೆಷ್ಟು ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂಬ ಬಗ್ಗೆ ಸಂಪೂರ್ಣವಾಗಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು. ಈಗಲೇ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ಧನ್ಯವಾದಗಳು…