HDFC ಪರಿವರ್ತನಾ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ! 75 ಸಾವಿರ ಹಣ ಈ ವಿದ್ಯಾರ್ಥಿವೇತನದಲ್ಲಿ ಸಿಗಲಿದೆ, ಈ ರೀತಿ ಅರ್ಜಿಯನ್ನು ಸಲ್ಲಿಸಿರಿ.

ಎಲ್ಲರಿಗೂ ನಮಸ್ಕಾರ…

ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 75,000 ಹಣ ಈ ವಿದ್ಯಾರ್ಥಿ ವೇತನದಲ್ಲಿ ಸಿಗಲಿದೆ. ಈ ವಿದ್ಯಾರ್ಥಿ ವೇತನವು ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಹಾಗೂ ಇನ್ನೂ ಉನ್ನತ ಶಿಕ್ಷಣವನ್ನು ಪಡೆದುಕೊಂಡು ಹೆಚ್ಚೆಚ್ಚು ಅಭಿವೃದ್ಧಿಯನ್ನು ಕಾಣಲಿ, ಎಂದು ಈ ವಿದ್ಯಾರ್ಥಿ ವೇತನವನ್ನು HDFC ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳಿಗಾಗಿಯೇ 75,000 ಹಣವನ್ನು ನೀಡಲಿದೆ. ನೀವು ಕೂಡ ಈ ಒಂದು ಸ್ಕಾಲರ್ಶಿಪ್ ನಲ್ಲಿ ಅರ್ಜಿಯನ್ನು ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಿರಿ.

WhatsApp Group Join Now
Telegram Group Join Now

1 ನೇ ತರಗತಿಯಿಂದ 12ನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ, ಹಾಗೂ ಪದವಿದಾರರಿಗೆ ಐಟಿಐ ಡಿಪ್ಲೋಮೋ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸಲ್ಲುತ್ತದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ಈ ವಿದ್ಯಾರ್ಥಿ ವೇತನ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ದೊರೆಯುತ್ತದೆ. ಯಾರು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹರು ಹಾಗೂ ಯಾವ ಯಾವ ತರಗತಿಗೆ ಎಷ್ಟು ಹಣ ವಿದ್ಯಾರ್ಥಿ ವೇತನ ದೊರೆಯುತ್ತದೆ, ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದುವ ಮೂಲಕ ವಿಷಯವನ್ನು ತಿಳಿಯಿರಿ.

HDFC ಪರಿವರ್ತನಾ ಸ್ಕಾಲರ್ಶಿಪ್ !

HDFC ಬ್ಯಾಂಕ್ ಕಡೆಯಿಂದ ಈ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ದೊರೆಯುತ್ತದೆ 2023-24ನೇ ಸಾಲಿನಲ್ಲಿ ECSS ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಿಗಾಗಿಯೇ 75,000 ಹಣವನ್ನು ಮೀಸಲಿಟ್ಟು ಎಲ್ಲಾ ಅರ್ಹ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಿದೆ HDFC ಬ್ಯಾಂಕ್. ECSS ಕಾರ್ಯಕ್ರಮದ ಉದ್ದೇಶವೇನೆಂದರೆ ಪ್ರತಿಭಾವಂತ ವಿದ್ಯಾರ್ಥಿಗಳು ಮುಂದಿನ ಶಿಕ್ಷಣವನ್ನು ಮುಂದುವರಿಸಲು ಹಲವಾರು ಸಮಸ್ಯೆಗಳು ಅವರ ಜೀವನದಲ್ಲಿ ಎದುರಾಗಬಹುದು.

ಅಂತಹ ಒಂದು ಸಮಸ್ಯೆಗಳನ್ನು ತೊರೆದು ಹಾಕಿ ಮುಂದಿನ ಶಿಕ್ಷಣವನ್ನು ಪಡೆದು ಉನ್ನತ ಮಟ್ಟದಲ್ಲಿ ಇರಬೇಕು ಮುಂದೊಂದು ದಿನ ಒಳ್ಳೆಯ ಉದ್ಯೋಗವನ್ನು ಪಡೆದುಕೊಂಡು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಈ ಒಂದು ವಿದ್ಯಾರ್ಥಿ ವೇತನವನ್ನು ಬ್ಯಾಂಕ್ ನೀಡಲು ಮುಂದಾಗಿದೆ. ಕೆಲ ವಿದ್ಯಾರ್ಥಿಗಳ ಸಮಸ್ಯೆ ಏನೆಂದರೆ, ಮುಂದಿನ ತರಗತಿಗಳನ್ನು ಓದಲು ಹಣ ಇರುವುದಿಲ್ಲ ಮತ್ತು ಕಾಲೇಜಿಗೂ ಕೂಡ ಶುಲ್ಕವನ್ನು ಕಟ್ಟಲು ಮೊತ್ತ ಇರುವುದಿಲ್ಲದ ಕಾರಣದಿಂದ ಅವರ ಶಿಕ್ಷಣವನ್ನು ತ್ಯಜಿಸುತ್ತಾರೆ ಇಂತಹ ವಿದ್ಯಾರ್ಥಿಗಳು ಬ್ಯಾಂಕ್ ನೀಡುವ ವಿದ್ಯಾರ್ಥಿ ವೇತನವನ್ನು ಬಳಸಿಕೊಂಡು ನಿಮ್ಮ ಶಿಕ್ಷಣವನ್ನು ಮುಂದುವರೆಸಿರಿ.

ಈಗಾಗಲೇ 2023 ನೇ ಸಾಲಿನಲ್ಲಿ ಹಲವಾರು ವಿದ್ಯಾರ್ಥಿ ವೇತನವು ಜಾರಿಯಾಗಿಯೇ, ಅರ್ಹ ವಿದ್ಯಾರ್ಥಿಗಳಿಗೆ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಆಗಿದೆ. ನೀವು ಕೂಡ ಅವರಂತೆಯೇ ವಿದ್ಯಾರ್ಥಿ ವೇತನವನ್ನು ಪಡೆಯುತ್ತೀರಿ ಎಂದು ಬಯಸಿದರೆ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿಯೇ 75,000 ವಿದ್ಯಾರ್ಥಿ ವೇತನವನ್ನು ಪಡೆಯಿರಿ. ಎಲ್ಲಾ ವಿದ್ಯಾರ್ಥಿಗಳು ಕೂಡ ಹಲವಾರು ಕನಸುವಿನ ಗುರಿಗಳನ್ನು ಹೊಂದಿರುತ್ತಾರೆ ಆ ಗುರಿಯನ್ನು ತಲುಪಲು ಉನ್ನತ ಶಿಕ್ಷಣವನ್ನು ಪಡೆಯಲೇಬೇಕು,

ಆ ಶಿಕ್ಷಣಕ್ಕೆ ಹೆಚ್ಚಿನ ಹಣವು ಕೂಡ ಬೇಕಾಗುತ್ತದೆ ಆ ಹಣದ ಕೊರತೆಯನ್ನು ತೊರೆದು ಹಾಕಲು ಬ್ಯಾಂಕ ಕಡೆಯಿಂದ ವಿದ್ಯಾರ್ಥಿವೇತನ ಸಿಗಲಿದೆ ಆ ಸ್ಕಾಲರ್ಶಿಪ್ ಬಳಸಿಕೊಂಡು ನೀವು ಮುಂದಿನ ಶಿಕ್ಷಣವನ್ನು ಮುಂದುವರಿಸಿ ಉನ್ನತ ಉದ್ಯೋಗದಲ್ಲಿ ಇರಬಹುದು. ನೀವು ಕೂಡ ಪ್ರತಿಭಾವಂತ ವಿದ್ಯಾರ್ಥಿಗಳೆ ಆದರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ ಈ ವಿದ್ಯಾರ್ಥಿ ವೇತನದಲ್ಲಿ ಸಿಗುವ ಹಣವನ್ನು ಪಡೆಯುತ್ತೀರಿ.

HDFC ವಿದ್ಯಾರ್ಥಿ ವೇತನಕ್ಕೆ ಇವರು ಮಾತ್ರ ಅರ್ಹರು.

ಒಂದನೇ ತರಗತಿಯಿಂದ 12ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ವಿದ್ಯಾರ್ಥಿ ವೇತನ ಸಲ್ಲುತ್ತದೆ ಹಾಗೂ ಸ್ನಾತಕೋತ್ತರ ಪದವಿದಾರರು ಡಿಗ್ರಿ ಪದವೀದಾರರು ಐಟಿಐ, ಮತ್ತು ಡಿಪ್ಲೋಮೋ ಶಿಕ್ಷಣವನ್ನು ದುತ್ತಿರುವ ವಿದ್ಯಾರ್ಥಿಗಳು ಈ ಒಂದು HDFC ಸ್ಕಾಲರ್ಶಿಪ್‌ಗೆ ಅರ್ಹರು. ನೀವು ಕೂಡ ಈ ಶಿಕ್ಷಣದಲ್ಲೇ ವ್ಯಾಸಂಗ ಮಾಡುತ್ತಿದ್ದರೆ ಈ ಕೂಡಲೇ ನಿಮ್ಮ ಫೋನಿನಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ 75 ಸಾವಿರವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯಿರಿ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದೆ ಹಾಗಾಗಿ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿರಿ.

PG ವಿದ್ಯಾರ್ಥಿಗಳಿಗೆ HDFC ಸ್ಕಾಲರ್ಶಿಪ್ ದೊರೆಯಲಿದೆ.

  • ESCC ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆಗಳೇನೆಂದರೆ ವಿದ್ಯಾರ್ಥಿಯು ಭಾರತದಲ್ಲಿರುವ ಭಾರತೀಯ ಪ್ರಜೆಯಾಗಿರಬೇಕು.
  • MSC, MA, M-Tech MBA, ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ಪ್ರಸ್ತುತ ವರ್ಷದಲ್ಲಿ ಓದುತ್ತಿರಬೇಕು ಅಂತಹ ವಿದ್ಯಾರ್ಥಿಗಳು ಮಾತ್ರ ಈ ಕೂಡಲೇ ಅರ್ಜಿ ಸಲ್ಲಿಸಲು ಸಾಧ್ಯ.
  • ಪದವಿ ಶಿಕ್ಷಣದಲ್ಲಿ ಶೇಕಡ 55% ಅಂಕವನ್ನು ವಿದ್ಯಾರ್ಥಿಯು ಗಳಿಸಿರಬೇಕು.
  • ಪಿಜಿ ವಿದ್ಯಾರ್ಥಿಯ ಕುಟುಂಬದ ಆದಾಯವು ಎರಡುವರೆ ಲಕ್ಷಕ್ಕಿಂತ ಹೆಚ್ಚಿನ ಹಣ ಮೀರಿರಬಾರದು, ವಾರ್ಷಿಕವಾಗಿ ಈ ಹಣದ ಆದಾಯವನ್ನು ಪರಿಗಣಿಸಲಾಗುತ್ತದೆ.

ಈ ಕೋರ್ಸ್ ಗಳಿಗೆ ಬೇರೆ ಬೇರೆ ರೀತಿಯ ವಿದ್ಯಾರ್ಥಿ ವೇತನವನ್ನು ಹಂಚಿಕೆ ಮಾಡಲಾಗುತ್ತದೆ ಮೊದಲನೆಯದಾಗಿ ಎಂಎಸ್ಸಿ, ಎಂಎ, ಕೋರ್ಸ್ ಅನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ರೂ.30000 ಹಣ ವಿದ್ಯಾರ್ಥಿ ವೇತನವಾಗಿ ಸಿಗಲಿದೆ. ಹಾಗೂ ವೃತ್ತಿಪರ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುವ ವಿದ್ಯಾರ್ಥಿಗಳಿಗೆ ಅಂದರೆ ಆಯ್ಕೆ ಮಾಡಿಕೊಂಡು ಓದುವ ವಿದ್ಯಾರ್ಥಿಗಳಿಗೆ 75,000 ಹಣ ವಿದ್ಯಾರ್ಥಿ ವೇತನವಾಗಿ ಸಿಗಲಿದೆ.

ಶಾಲಾ ವಿದ್ಯಾರ್ಥಿಗಳಿಗೆ ESCC ವಿದ್ಯಾರ್ಥಿ ವೇತನ !

ಒಂದನೇ ತರಗತಿಯಿಂದ 12ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಐಟಿಐ ಡಿಪ್ಲೋಮೋ ಇತರೆ ಪಾಲಿಟೆಕ್ನಿಕ್ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳು ಖಾಸಗಿ ಅಥವಾ ಸರ್ಕಾರಿ ವಲಯಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದರೆ ಎರಡು ವಲಯಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಕೂಡ ವಿದ್ಯಾರ್ಥಿ ವೇತನ ಸಲ್ಲುತ್ತದೆ. ಅರ್ಜಿ ಸಲ್ಲಿಸಬೇಕೆಂದು ಬಯಸುವವರು ವಿದ್ಯಾರ್ಥಿಯು ತಮ್ಮ ಇಂದಿನ ಶಿಕ್ಷಣದಲ್ಲಿ ಕನಿಷ್ಠವಾದರೂ 55% ಅಂಕವನ್ನು ಗಳಿಸಿರಬೇಕು ಅಂತಹ ವಿದ್ಯಾರ್ಥಿಗಳು ಮಾತ್ರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯ.

ವಿದ್ಯಾರ್ಥಿಯ ಕುಟುಂಬದ ಆದಾಯವು ಎರಡುವರೆ ಲಕ್ಷಕ್ಕಿಂತ ಹೆಚ್ಚಿನ ಹಣ ಮೀರಿರಬಾರದು. ಶಾಲಾ ವಿದ್ಯಾರ್ಥಿಗಳಿಗೆ ಬೇರೆಬೇರೆ ರೀತಿಯ ವಿದ್ಯಾರ್ಥಿ ವೇತನವನ್ನು ಹಂಚಿಕೆ ಮಾಡಲಾಗಿದೆ ಮೊದಲನೆಯದಾಗಿ ಒಂದನೇ ತರಗತಿಯಿಂದ ಆರನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ 15,000 ಹಣವನ್ನು ಮೀಸಲಿಡಲಾಗಿದೆ ಅಷ್ಟು ಹಣ ಮಾತ್ರ ನಿಮಗೆ ವಿದ್ಯಾರ್ಥಿ ವೇತನವಾಗಿ ಸಿಗಲು ಸಾಧ್ಯ. ಏಳನೇ ತರಗತಿಯಿಂದ 12ನೇ ತರಗತಿಯವರೆಗೂ ಹಾಗೂ ಪಾಲಿಟೆಕ್ನಿಕ್ ಡಿಪ್ಲೋಮೋ ಐಟಿಐ ಗಳಂತಹ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ರೂ 18,000 ಹಣ ವಾರ್ಷಿಕವಾಗಿ ಸಿಗುತ್ತದೆ ಹಾಗಾಗಿ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ನಿಮ್ಮ ಫೋನಿನ ಮೂಲಕವೇ ಸಲ್ಲಿಸಿರಿ.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲಾತಿಗಳು.

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಹಿಂದಿನ ಶಿಕ್ಷಣದ ಅಂಕಪಟ್ಟಿ.
  • ಆದಾಯ ಪ್ರಮಾಣ ಪತ್ರ
  • ಪ್ರಸ್ತುತ ಶಿಕ್ಷಣವನ್ನು ಪಡೆಯುತ್ತಿದ್ದರೆ ಕಾಲೇಜಿನ ದಾಖಲಾತಿಯ ಪತ್ರವು ಕೂಡ ಬೇಕಾಗುತ್ತದೆ.
  • ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನಾಂಕವಾಗಿದೆ ಹಾಗಾಗಿ ಹಿಂದೆ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ !

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಮೊದಲಿಗೆ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅನಂತರ ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು ಆದ್ದರಿಂದ ಈ ಲಿಂಕನ್ನು ಕ್ಲಿಕ್ಕಿಸಿರಿ. Apply Onlineವೆಬ್ಸೈಟ್ ಪುಟ ತೆರೆದ ನಂತರ ಡ್ಯಾಶ್ ಬೋರ್ಡ್ ನ ಬಲಭಾಗದಲ್ಲಿ ರಿಜಿಸ್ಟರ್ ಎಂಬ ಇಂಗ್ಲೀಷ್ ಪದ ಇರುತ್ತದೆ. ಆ ಅರಿಜಿಸ್ಟರ್ ಎಂಬುದನ್ನು ಕ್ಲಿಕ್ಕಿಸಿರಿ ಕ್ಲಿಕ್ಕಿಸಿದ ನಂತರ ನಿಮ್ಮ ಫೋನ್ ನಂಬರ್ ಅಥವಾ ಇಮೇಲ್ ಐಡಿಯನ್ನು ನೀಡುವ ಮೂಲಕ ಪಾಸ್ವರ್ಡ್ ಹಾಗೂ ಇಮೇಲ್ ಐಡಿ ಎಂದು ನಮೂದಿಸಿ ಮತ್ತೊಮ್ಮೆ ಲಾಗಿನ್ ಆಗಿರಿ. ಡ್ಯಾಶ್ ಪೂರ್ಣ ಬಲಭಾಗದಲ್ಲಿ ಸ್ಕೂಲ್ ಅಥಾರಿಟಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.ನೀವು ಈಗಲೇ ಹೊಸ ನೋಂದಣಿ ಆಗುತ್ತಿದ್ದರೆ ಆಯ್ಕೆಗೆ ನ್ಯಾವಿಗೇಟ್ ಮಾಡಿ ಹಾಗೂ ಕ್ಲಿಕ್ ಮಾಡಿರಿ. ಈಗಾಗಲೇ ಲಾಗಿನ್ ಆಗಿದ್ದರೆ ನೀವು ಲಾಗಿನ್ ಪಾಸ್ವರ್ಡ್ ಅನ್ನು ನಮೂದಿಸಿ ಲಾಗಿನ್ ಆಗಬೇಕಾಗುತ್ತದೆ.

ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬೇಕಾಗಿರುವ ಎಲ್ಲಾ ದಾಖಲಾತಿಗಳನ್ನು ಭರ್ತಿ ಮಾಡಿರಿ.ವಿದ್ಯಾರ್ಥಿಯ ಎಲ್ಲಾ ದಾಖಲಾತಿಗಳನ್ನು ನಮೂದಿಸಬೇಕು ಹಾಗೂ ಸಬ್ಮಿಟ್ ಮಾಡುವ ದಾಖಲಾತಿಗಳನ್ನು ಕೂಡ ಸಲ್ಲಿಸಬೇಕು ಅನಂತನ ನಿಮ್ಮ ವೃತ್ತಿಯ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಈ ರೀತಿ ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು. ನಿಮ್ಮ ಸ್ನೇಹಿತರು ಕೂಡ ಈ ಮೇಲ್ಕಂಡ ರಹತ ಶಿಕ್ಷಣದಲ್ಲಿ ಓದುತ್ತಿದ್ದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ವಿದ್ಯಾರ್ಥಿ ವೇತನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment