ಪೋಷಕರೇ ಎಚ್ಚರ ! ನಿಮ್ಮ ಮಕ್ಕಳೇನಾದರು ಹೆಚ್ಚು ಸಮಯ ಮೊಬೈಲ್, ಸೋಶಿಯಲ್ ಮೀಡಿಯಾಗಳಲ್ಲಿ ಜಾಸ್ತಿ ಸಮಯವನ್ನು ಕಳೆಯುತ್ತಾರೋ, ಅಂಥಹ ಮಕ್ಕಳಿಗೆ ಹೃದಯದ ಮೇಲೆ ಪರಿಣಾಮ ಬೀರುತ್ತದೆ.

ನಮಸ್ಕಾರ ಸ್ನೇಹಿತರೆ,

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಿನ ಸಮಯ ಮೊಬೈಲ್ ನಲ್ಲಿಯೇ ಕಳೆಯುತ್ತಿದ್ದಾರೆ. ಮೊಬೈಲ್ಎನ್ನುವುದು ಒಂದು ಅಪಾಯಕಾರಿ ವಸ್ತು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಕ್ಕಳು ವಿದ್ಯಾಭ್ಯಾಸವನ್ನು ಮಾಡದೆ ಮೊಬೈಲ್ ಗೆ ಮಾರು ಹೋಗುತ್ತಿದ್ದಾರೆ. ಮೊಬೈಲ್ ಇಲ್ಲವೆಂದರೆ ಊಟ ಮಾಡುವುದಿಲ್ಲ ಎನ್ನುವುದು ಓದುವುದಿಲ್ಲ ಎನ್ನುವುದು ಇದೇ ರೀತಿಯಾಗಿ ಪೋಷಕರನ್ನು ಎದುರಿಸುತ್ತಿದ್ದಾರೆ ಹಾಗಾಗಿ ಪೋಷಕರು ಮೊಬೈಲ್ ಅನ್ನು ಮಕ್ಕಳ ಕೈಗೆ ಕೊಡುತ್ತಾರೆ ಆದರೆ ಇದೊಂದು ದೊಡ್ಡ ದುಷ್ಪರಿಣಾಮವಾಗಿದೆ. ಮೊಬೈಲ್ನ ಬಳಕೆಯಿಂದಾಗಿ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನಹರಿಸದೆ ಹೆಚ್ಚಿನ ಗಮನವನ್ನು ಮೊಬೈಲ್ ಗೆ ನೀಡುತ್ತಿದ್ದಾರೆ.

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಂತೂ ಕೊರೋನಾದಿಂದಾಗಿ ಮೊಬೈಲ್ ನಲ್ಲಿ ಆನ್ಲೈನ್ ಕ್ಲಾಸ್ ಕೇಳಬೇಕೆಂದು ಎಲ್ಲರೂ ಕೂಡ ಮೊಬೈಲನ್ನು ಮಕ್ಕಳಿಗೆ ಕೊಡಿಸಿದ್ದಾರೆ. ಆದರೆ ಈಗ ಆನ್ಲೈನ್ ಕ್ಲಾಸ್ ಇಲ್ಲದೆ ತರಗತಿಗೆ ಹೋಗಿ ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ. ಆದರೂ ಸಹ ಮೊಬೈಲ್ನ ಮೇಲಿರುವ ಆಸಕ್ತಿ ಅವರಿಗೆ ಕಡಿಮೆಯಾಗಿಲ್ಲ ಹೆಚ್ಚಿನ ಗಮನ ಮೊಬೈಲ್ ಮೇಲೆ ಇದೆ. ಮೊಬೈಲ್ ಬಳಸುವುದರಿಂದ ಉಪಯುಕ್ತ ವಾಗುವುದಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ದುಷ್ಪರಿಣಾಮವೇ ಬೀರುತ್ತದೆ.

ಚಿಕ್ಕ ಚಿಕ್ಕ ಮಕ್ಕಳು ಮೊಬೈಲ್ ಅನ್ನು ಬಳಸುವುದು ತಪ್ಪು ಏಕೆಂದರೆ ಮಕ್ಕಳ ಆರೋಗ್ಯ ಇದರಿಂದಾಗಿ ಹಾಳಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಗಮನವನ್ನು ಅರಿಸಿ ಮೊಬೈಲ್ನ ಬಳಕೆಯನ್ನು ಕಡಿಮೆ ಮಾಡಿಸಿ ಇನ್ನು ಆ ಮೊಬೈಲ್ ನಲ್ಲಿ ಬರುವ ಸಾಮಾಜಿಕ ಮಾಧ್ಯಮಗಳ ಸೋಶಿಯಲ್ ಮೀಡಿಯಾಗಳ ವೀಡಿಯೋಸ್ಗಳು ಎಲ್ಲವೂ ಕೂಡ ಮಕ್ಕಳ ಆಲೋಚನೆಗಳ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಚಿಕ್ಕ ಚಿಕ್ಕ ಮಕ್ಕಳಿಗೆ ಮೊಬೈಲ್ ಕೊಡುವುದು ಸೂಕ್ತವಲ್ಲ.

ಪ್ರಸ್ತುತ ದಿನದಲ್ಲಂತೂ ಸಾಮಾಜಿಕ ಮಾಧ್ಯಮಗಳು ನಮ್ಮ ಬದುಕಿನಲ್ಲಿ ಎಷ್ಟು ಮಟ್ಟಗೆ ಅವಲಂಬಿತವಾಗಿವೆ ಎಂದರೆ ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಲು ಪ್ರತಿ ಕ್ಷಣವೂ ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟ್ಟರ್, ನಂತಹ ತಾಣಗಳನ್ನು ಗಮನಿಸುತ್ತಲೇ ಇರುತ್ತೇವೆ. ಇತ್ತೀಚಿಗೆ ವಿಶ್ವ ವಿದ್ಯಾನಿಲಯ ಒಂದರಲ್ಲಿ ನಡೆಸಲಾದ ಒಂದು ಅಧ್ಯಯನದ ಪ್ರಕಾರ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದಾಗಿ ದೀರ್ಘಕಾಲಿನ ಉರಿಯುತ ಗಳ ಪ್ರಮಾಣ ಹೆಚ್ಚುತ್ತದೆ ಮತ್ತು ದೇಹದಲ್ಲಿ ಸೀ ರಿಯಾಕ್ಟಿವ್ ಪ್ರೊಟೀನ್ ಉತ್ಪಾದನೆ ಹೆಚ್ಚಾಗುತ್ತದೆ.

ಇದರಿಂದಾಗಿ ವ್ಯಕ್ತಿಗೆ ಮಧುಮೇಹ, ವಿಧವಿಧವಾದ ಕ್ಯಾನ್ಸರ್ ಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಇನ್ನು ಮುಂತಾದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಅಧ್ಯಯನದಲ್ಲಿ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳನ್ನು ನೋಡುವುದರಿಂದಾಗಿ ವ್ಯಕ್ತಿಗೆ ತಲೆನೋವು,ಕಣ್ಣು ಉರಿ, ಎದೆ ಮತ್ತು ಬೆನ್ನು ನೋವಿನ ತೊಂದರೆಗಳನ್ನು ಹೊಂದಿರುವುದಾಗಿಯೂ ಹೇಳಿದ್ದಾರೆ.ಮತ್ತು ನೀವು ಆರೋಗ್ಯ ಸಮಸ್ಯೆಗೆ ಬೇಗ ತುತ್ತಾಗುತ್ತೀರಾ.

ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ಚಿಕ್ಕವರಿಗೆ ಮತ್ತು ದೊಡ್ಡವರಿಗೆ ನಿದ್ರಾಹೀನತೆ ಮತ್ತು ಭಾವನಾತ್ಮಕ ಏರಿಳಿತಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಹದಿ iಅರೆಯದವರು ಮತ್ತು ಯುವ ಜನರಲ್ಲಿ ಅವರವರ ಆಲೋಚನೆಗಳು ಅಸ್ಥಿರವಾಗಿರುತ್ತವೆ. ಇದರಿಂದಾಗಿ ಸಾಮಾಜಿಕ ಮಾಧ್ಯಮಗಳ ಅತಿಯಾದ ಹೆಚ್ಚಿನ ಬಳಕೆಯಿಂದಾಗಿ ಅನಾರೋಗ್ಯಗಳು ಉಂಟಾಗಬಹುದು.ಮೊಬೈಲ್ನ ಬಳಕೆಯಿಂದಾಗಿ ತೀವ್ರ ಮಟ್ಟದ ಕಾಯಿಲೆಗಳು ಬೇಗ ಆವರಿಸಿಕೊಳ್ಳುತ್ತವೆ.

ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ತಲೆನೋವು ಮುಂತಾದ ಕೆಲವು ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಕೆಲವರಿಗೆ ನಿದ್ದೆಯ ಬರುವುದಿಲ್ಲ ಇದಕ್ಕೆ ಮುಖ್ಯ ಕಾರಣವೇ ಮೊಬೈಲ್ ನ ಬಳಕೆ. ಮೊಬೈಲ್ನ ಅತಿಯಾದ ಬಳಕೆಯಿಂದ ಮನುಷ್ಯನಿಗೆ ನಿದ್ದೆ ಬರುವುದಿಲ್ಲ. ಸಾಕಷ್ಟು ಹೊತ್ತು ಉತ್ತಮ ಗುಣಮಟ್ಟದ ನಿದ್ದೆ ಮಾಡುವುದು ವ್ಯಕ್ತಿ ಒಬ್ಬನ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯ.ಎಂಟು ಗಂಟೆಗಳ ಕಾಲ ನಿದ್ದೆ ಮಾಡಬೇಕು ಮನುಷ್ಯ. ಆದರೆ ಒಟ್ಟು ನಿದ್ದೆಯ ಅವಧಿ 6 ತಾಸುಗಳಿಗಿಂತ ಕಡಿಮೆ ಪ್ರಮಾಣ ಇರುವುದು ಕಂಡು ಬಂದಿದೆ.

ಸಾಮಾಜಿಕ ಮಾಧ್ಯಮಗಳನ್ನು ತೀವ್ರವಾಗಿ ಬಳಸುವವರಲ್ಲಿ ರಾತ್ರಿ ಸಮಯ ರಕ್ತದೊತ್ತಡ ಹೆಚ್ಚಾಗುತ್ತದೆ.ದೈಹಿಕ ಚಟುವಟಿಕೆಯ ಕೊರತೆ, ಆಲಸ್ಯ ಮತ್ತು ಕಡಿಮೆ ದೈಹಿಕ ಸಾಮರ್ಥ್ಯಗಳಿಂದ ಬೊಜ್ಜು ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ತೀರ ಸಣ್ಣ ವಯಸ್ಸಿನಲ್ಲಿ ಆರಂಭವಾಗುತ್ತದೆ. ಅಧಿಕ ಸಮಯ ಸಾಮಾಜಿಕ ಮಾಧ್ಯಮಗಳನ್ನು ಬಳಸುವವರಲ್ಲಿ ಬೇಕಾಬಿಟ್ಟಿ ತಿಂಡಿ ತಿನಿಸು ತಿನ್ನುವ ಅಭ್ಯಾಸವು ಕೂಡ ಇರುತ್ತದೆ.

ಇನ್ನು ಮುಂದೆ ಆದರೂ ಸಾಮಾಜಿಕ ಮಾಧ್ಯಮಗಳ ನೋಟಿಫಿಕೇಶನ್ಗಳನ್ನು ಮ್ಯೂಟ್ ಮಾಡಿ. ಒಳ್ಳೆ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಪುಸ್ತಕವನ್ನು ಓದುವುದು,ಇಷ್ಟವಾದ ಕ್ರೀಡೆಯಲ್ಲಿ ಭಾಗವಹಿಸುವುದು, ನೃತ್ಯ ಮಾಡುವುದು, ಹಾಡು ಹೇಳುವುದು, ವಿದ್ಯಾಭ್ಯಾಸ ಮಾಡುವುದು, ಮೊಬೈಲ್ನ ಬಳಕೆಯನ್ನು ತುಂಬಾ ಕಡಿಮೆ ಮಾಡಿ ಈ ಎಲ್ಲಾ ಹವ್ಯಾಸಗಳಲ್ಲಿ ನಿಮ್ಮನ್ನು ನೀವು ಭಾಗವಹಿಸಿಕೊಳ್ಳಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment