Tata capital Pankh scholarship 2024- 25 :  ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್‌ಗೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಿಗಲಿದೆ 12000.!

 Tata capital Pankh scholarship 2024- 25 :  ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್‌ಗೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಸಿಗಲಿದೆ 12000.!

 Tata capital Pankh scholarship 2024- 25:

 ಎಲ್ಲರಿಗೂ ನಮಸ್ಕಾರ: ಟಾಟಾ ಕಂಪನಿಯು ಹಿಂದುಳಿದ  ಬಡವರ್ಗದ ವಿದ್ಯಾರ್ಥಿಗಳಿಗೆ  ವಿದ್ಯಾಭ್ಯಾಸಕ್ಕೆ ಸಹಾಯವಾಗಲಿಂದು ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ 12,000 ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ. ಅದೇ ರೀತಿಯಲ್ಲಿ ಈ ಕಂಪನಿಯು ಈಗಾಗಲೇ ಕೆಲವು ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಮೂಲಕ ಸಹಾಯ ಮಾಡುತ್ತಿದ್ದು. ಈಗ ಮತ್ತೊಮ್ಮೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಪ್ರಾರಂಭಿಸಿದೆ. ಈ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೂ ಓದಿ. 

WhatsApp Group Join Now
Telegram Group Join Now

ಹೌದು ಭಾರತದ ಅತಿ ಉನ್ನತವಾದ ಕಂಪನಿ ಆದ ಟಾಟಾ ಕಂಪನಿಯು ದೇಶದ ಬಡವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಈ ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್ ಅಡಿಯಲ್ಲಿ 12000 ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.ಈ ವಿದ್ಯಾರ್ಥಿ ವೇತನಕ್ಕೆ ಯಾವ ರೀತಿ  ಅರ್ಜಿ ಸಲ್ಲಿಸಬೇಕು, ಅಗತ್ಯವಿರುವ ಮುಖ್ಯ ದಾಖಲೆಗಳು ಮತ್ತು ಈ ಯೋಜನೆ ಉದ್ದೇಶ, ಅರ್ಜಿ ಹಾಕಲು ಹೊಂದಿರಬೇಕೆಗಿರುವ ಅರ್ಹತೆಗಳು, ಈ  ಎಲ್ಲಾ ವಿಚಾರಗಳನ್ನು ನಾವು ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ.

 

 ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್.!

ಈ ಸ್ಕಾಲರ್ಶಿಪ್ ಅಡಿಯಲ್ಲಿ ಟಾಟಾ ಕಂಪನಿಯು  ವಿದ್ಯಾರ್ಥಿಗಳಿಗೆ 12000 ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು. ಈ ರೀತಿಯಾಗಿ ಬಡ ವಿದ್ಯಾರ್ಥಿಗಳು  ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತಿದ್ದು, ಈಗಾಗಲೇ ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ಕೆಲವು 11ನೇ ಮತ್ತು 12ನೇ ತರಗತಿ ವಿದ್ಯಾರ್ಥಿಗಳು, ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ 12,000 ವಿದ್ಯಾರ್ಥಿ ವೇತನವನ್ನು ಪಡೆಯುತ್ತಿದ್ದು, ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ನೀವು ಕೂಡ ಈ ವಿದ್ಯಾರ್ಥಿ ವೇತನವನ್ನು ಪಡೆಯಬೇಕೆಂದುಕೊಂಡಿದ್ದರೆ. ಈಗಲೇ ಈ ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ.

 Tata capital Pankh  scholarship  ವಿದ್ಯಾರ್ಥಿ ವೇತನದ ಉದ್ದೇಶ.?

 ಈ ಟಾಟಾ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನದ ಉದ್ದೇಶವೇನೆಂದರೆ, ದೇಶದ ಹಿಂದುಳಿದ ವರ್ಗದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ನೀಡುವುದು. ಅದರ ಜೊತೆಗೆ ದೇಶದಲ್ಲಿನ  ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡಲು ಈ ಯೋಜನೆಯನ್ನು ಕೈಗೊಂಡಿದೆ. ಅಷ್ಟೇ ಅಲ್ಲದೆ ಈ ಯೋಜನೆ ಅಡಿಯಲ್ಲಿ ಈಗಾಗಲೇ ಹಲವಾರು ವಿದ್ಯಾರ್ಥಿಗಳು ಪ್ರಯೋಜನಗಳನ್ನು ಪಡೆಯುತ್ತಿದ್ದು ನೀವು ಸಹ ಅರ್ಜಿಯನ್ನು ಸಲ್ಲಿಸುವ ಮೂಲಕ ಈ ಯೋಜನೆ ಅಡಿಯಲ್ಲಿ ಆರ್ಥಿಕ ನೆರವನ್ನು ಪಡೆದುಕೊಂಡು ಉನ್ನತ ವಿದ್ಯಾಭ್ಯಾಸವನ್ನು ಮಾಡಬಹುದಾಗಿದೆ. ಅದೇ ರೀತಿಯಲ್ಲಿ ಈ ಯೋಜನೆಗೆ  ಬಹುಬೇಗನೆ ಈ ಯೋಜನೆ ಅರ್ಜಿ ಸಲ್ಲಿಸಿ.

 ಟಾಟಾ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನದ ಅರ್ಹತೆಗಳು.?

  • ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಭಾರತದ ನಿವಾಸಿಯಾಗಿರಬೇಕು ಮತ್ತು ಭಾರತದ ಪ್ರಜೆಯಾಗಿರಬೇಕು.
  •  ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಭಾರತ ದೇಶದಲ್ಲಿ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲಿ 11ನೇ ಮತ್ತು 12ನೇ ತರಗತಿ  ವ್ಯಾಸಂಗ ಮಾಡುತ್ತಿರಬೇಕು.
  •  ಅಷ್ಟೇ ಅಲ್ಲದೆ ವಿದ್ಯಾರ್ಥಿ ಹಿಂದಿನ ವರ್ಷದ ವಿದ್ಯಾಭ್ಯಾಸದಲ್ಲಿ  ಶೇಕಡ 60% ಅಂಕಗಳೊಂದಿಗೆ ಪಾಸಾಗಿರಬೇಕು.
  • ITI, ಡಿಪ್ಲೋಮಾ ಮತ್ತು ಪದವಿ ವಿದ್ಯಾರ್ಥಿಗಳು ಸಹ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
  •  ಅರ್ಜಿಯನ್ನು ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು  ಎರಡು ಲಕ್ಷವನ್ನು ಮೀರಿರಬಾರದು.
  • ಅಷ್ಟೇ ಅಲ್ಲದೆ  ಭಾರತ ದೇಶದಲ್ಲಿ ಸ್ಥಾಪಿತವಾಗಿರುವ ಯಾವುದೇ ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ  ಪೋಷಕರ ಮಕ್ಕಳು ಸಹ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.

 ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು.?

 ಈ  ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಬೇಕೆಂದು ಕೊಂಡಿದ್ದೀರಾ.? ಹಾಗಾದರೆ ನಾವು ಹೇಳುವಂತಹ ಈ ಎಲ್ಲ ಮುಖ್ಯ ದಾಖಲೆಗಳನ್ನು ಹೊಂದಿಸಿಕೊಂಡು, ಈ  ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವ ಮೂಲಕ 12,000  ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ. ಆ ಮುಖ್ಯ  ದಾಖಲೆಗಳು ಯಾವುವು ಎಂದರೆ. 

  1. ಆಧಾರ್ ಕಾರ್ಡ್
  2.  ಆದಾಯ ದುಡಿಕರ್ಣ ಪತ್ರ
  3.  ಇಂದಿನ ವರ್ಷದ ಮಾಸ್ ಕಾರ್ಡ್
  4.  ಫೋಟೋ
  5.   ಇ-ಮೇಲ್ ಐಡಿ
  6.  ಫೋನ್ ನಂಬರ್
  7.  ಬ್ಯಾಂಕ್ ಪಾಸ್ ಬುಕ್

 ನಾವು ಮೇಲೆ ತಿಳಿಸಿರುವ ಅಂತಹ ಈ ಎಲ್ಲಾ ಮುಖ್ಯ ದಾಖಲೆಗಳನ್ನು ಒಂದುಗೂಡಿಸಿಕೊಂಡು ಈಗಲೇ ಅರ್ಜಿ ಸಲ್ಲಿಸಿ, ಏಕೆಂದರೆ  ಸೆಪ್ಟೆಂಬರ್ 31 ಈ ಅರ್ಜಿಯ ಕೊನೆ ದಿನಾಂಕವಾಗಿದೆ. 

 ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್‌ಗೆ  ಅರ್ಜಿ ಸಲ್ಲಿಸುವುದು ಹೇಗೆ.?

  ಈ  ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್‌ಗೆ ನೀವೇನಾದರೂ ಅರ್ಜಿ  ಸಲ್ಲಿಸಬೇಕೆಂದು ಕೊಂಡಿದ್ದೀರಾ.? ಹಾಗಾದರೆ ನಾವು ಹೇಳಿರುವಂತಹ  ಎಲ್ಲಾ ಮುಖ್ಯ ದಾಖಲೆಗಳನ್ನು ಹೊಂದಿಸಿಕೊಂಡು ಹತ್ತಿರದ ಸೈಬರ್ ಸೆಂಟರ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಧನ್ಯವಾದಗಳು. 

  

Leave a Comment