ಹುಲಿ ಉಗುರಿನ ಸರದಾರ ವರ್ತೂರ್ ಸಂತೋಷ್ ರವರು ಬಿಗ್ ಬಾಸ್ ಮನೆಗೆ ಬರ್ತಾರ ? ಎಂದು ಕಾದು ನೋಡಬೇಕಿದೆ.

ಎಲ್ಲರಿಗೂ ನಮಸ್ಕಾರ…

ಕನ್ನಡದ ರಿಯಾಲಿಟಿ ಶೋ ಆದ ಬಿಗ್ ಬಾಸ್ ಮನೆಗೆ ವರ್ತೂರ್ ಸಂತೋಷ ರವರ ಆಗಮನವಾಗಿತ್ತು. ಅದೇ ರೀತಿ ವರ್ತುರ್ ಸಂತೋಷ ಅವರು ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಟವನ್ನು ಆಡುತ್ತಿದ್ದರು. ಆದರೆ ಹುಲಿ ಉಗುರಿನ ಸರದಾರ ವರ್ತೂರ್ ಸಂತೋಷ್ ಈಗ ಹುಲಿ ಉಗುರಿನ ಪೆಂಡೆಂಟ್ ಪ್ರಕರಣದಲ್ಲಿ ಬಂದಿಯಾಗಿದ್ದರೂ ಆದರೆ ಈಗ ಬಂಧನದಿಂದ ಪರಿಹಾರ ಸಿಕ್ಕಿದೆ. ಅರಣ್ಯ ಇಲಾಖೆಯು ಜಾಮೀನು ಕೊಡುವುದಿಲ್ಲವೆಂದು ವಿರೋಧ ವ್ಯಕ್ತಪಡಿಸಿತ್ತು.

WhatsApp Group Join Now
Telegram Group Join Now

ಆದರೆ ಈಗ ನ್ಯಾಯಾಲಯವು ಅರಣ್ಯ ಇಲಾಖೆಯವರಿಗೆ ವರ್ತೂರು ಸಂತೋಷ್ ರವರಿಗೆ ಜಾಮೀನು ಕೊಡಬೇಕೆಂದು ತಿಳಿಸಿದೆ. ಒಟ್ಟಾರೆ ನ್ಯಾಯಾಲಯದಿಂದ ವರ್ತುರ್ ಸಂತೋಷ ಅವರಿಗೆ ಜಾಮೀನು ಸಿಕ್ಕಿದ್ದು ವಿಶ್ರಾಂತಿ ಪಡೆದಂತಾಗಿದೆ. ವರ್ತೂರ್ ಸಂತೋಷ್ ಅವರು ಸೋಮವಾರ ಜಾಮಿನಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಗುರುವಾರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಶುಕ್ರವಾರ ವರ್ತೂರ್ ಸಂತೋಷ ಅವರಿಗೆ ಜಾಮೀನು ದೊರಕಿದೆ. ಕೆ ನಟರಾಜ್ ಅರಣ್ಯ ಇಲಾಖೆಯು ಕಾನೂನಾತ್ಮಕವಾಗಿ ಬಂಧಿಸದೆ ಅವರನ್ನು ಪ್ರಶ್ನಿಸದೆ,ಬಂಧಿಸಿದ್ದಾರೆ ಇದು ಪಿತೂರಿ ಎಂದು ಅನಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ವರ್ತೂರ್ ಸಂತೋಷ್ ಅವರನ್ನು ಭಾನುವಾರ ರಾತ್ರಿ ಬಿಗ್ ಬಾಸ್ ಮನೆಯ ಚಿತ್ರೀಕರಣದ ವೇಳೆ ಬೆಂಗಳೂರಿನ ವರವಲಯದಲ್ಲಿ ವರ್ತೂರ್ ಸಂತೋಷ್ ರವರನ್ನು ಬಂಧಿಸಲಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಹುಲಿ ಉಗುರಿನ ಲಾಕೆಟ್ ಧರಿಸಿದ್ದರು ಬಿಗ್ ಬಾಸ್ ಚಿತ್ರೀಕರಣ ವೇಳೆ ಅರಣ್ಯ ಇಲಾಖೆಯವರಿಗೆ ಕಂಡು ಬಂದಿದೆ. ಅದರಿಂದಾಗಿ ಅರಣ್ಯ ಇಲಾಖೆಯವರು ಬಿಗ್ ಬಾಸ್ ಮನೆಯ ವರ್ತುರ್ ಸಂತೋಷ್ ರವರನ್ನು ಬೆಂಗಳೂರಿನ ವರವಲಯಕ್ಕೆ ಕರೆತಂದು ಬಂದಿಸಿದ್ದರು. ಅವರು ಧರಿಸಿದ್ದಂತಹ ಹುಲಿ ಉಗುರಿನ ಲಾಕೆಟ್ ಅನ್ನು ಅರಣ್ಯ ಇಲಾಖೆಯವರು ತೆಗೆದುಕೊಂಡು ಹುಲಿ ಉಗುರನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷಿಸಲು ಕಳಿಸಿದ್ದರು. ಫಲಿತಾಂಶಗಳು ಬಾಕಿ ಉಳಿದಿದೆ. ಆದರೆ ವರ್ತೂರು ಸಂತೋಷ್ ರವರು ಇದು ಹುಲಿ ಉಗುರಿನ ಲಾಕೆಟ್ ಎಂದು ಒಪ್ಪಿಕೊಂಡಿದ್ದಾರೆ.

ವರ್ತೂರ್ ಸಂತೋಷ್ ಶುಕ್ರವಾರ ರಾತ್ರಿ 8 ಗಂಟೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದಾರೆ. ವಿಧಿ ವಿಧಾನಗಳ ಮೂಲಕವೇ ಹೊರಬಂದರು ಸಂತೋಷ್ ಸ್ನೇಹಿತರು ಅಭಿಮಾನಿಗಳು ಭರ್ಜರಿ ಸ್ವಾಗತ ಮಾಡಿದರು.ವರದಿಗಳ ಪ್ರಕಾರ ಸೋಮವಾರ ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಗೆ ಬರುತ್ತಾರೆಂದು ತಿಳಿಸಿದ್ದಾರೆ.

ಬಿಗ್ ಬಾಸ್ ಸೀಸನ್ ಹತ್ತಕ್ಕೆ ರೈತನಾಗಿ ಆಯ್ಕೆಯಾದ ಸ್ಪರ್ಧಿ ಎಂದರೆ ಅದುವೇ ವರ್ತೂರ್ ಸಂತೋಷ್ ರವರು. ಇದುವರೆಗೂ ಯಾರು ಕೂಡ ರೈತನಾಗಿ, ಆಯ್ಕೆಯಾದ ಸ್ಪರ್ಧಿಗಳು ಎಂದಿಗೂ ಬಂದೇ ಇಲ್ಲ, ಆದರೆ ಈ ಹತ್ತು ವರ್ಷದ ಹತ್ತನೇ ಸೀಸನ್ ನಲ್ಲಿ ವರ್ತೂರು ಸಂತೋಷ್ ರವರು ಆಯ್ಕೆಯಾಗಿ, ಬಿಗ್ ಬಾಸ್ ಮನೆ ಒಳಗೆ ಹೋಗಲು ಪ್ರೇಕ್ಷಕರ ನೇರಮತದಿಂದ ಮನೆಗೆ ಪ್ರವೇಶಿಸಿದರು. ಆದರೆ ಕಳೆದ ಏಳು ದಿನಗಳಿಂದ ವರ್ತೂರ್ ಸಂತೋಷ್ ರವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಲು ಆಗುತ್ತಿಲ್ಲ.

ಏಕೆಂದರೆ ಅರಣ್ಯ ಇಲಾಖೆಯು ವರ್ತೂರ್ ಸಂತೋಷ್ ರವರನ್ನು ಹುಲಿಯ ಉಗುರಿನ ಪ್ರಕರಣದ ಸಲುವಾಗಿ ಬಿಗ್ ಬಾಸ್ ಮನೆಗೆ ಬಂದು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದರು. ಈ ಪ್ರಕರಣವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಹುಲಿಯ ಉಗುರಿನ ಲಾಕೆಟ್ ಅನ್ನು ಪಡೆದುಕೊಂಡು, ಜಾಮೀನಿನ ಮಂಜೂರಿನಲ್ಲಿ ಹೊರಬಂದ ವರ್ತೂರು ಸಂತೋಷ್. ಮತ್ತೆ ವರ್ತೂರು ಸಂತೋಷ್ ರವರು ಬಿಗ್ ಬಾಸ್ ಮನೆಗೆ ಮರಳಿ ಬರುತ್ತಿದ್ದಾರೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು. ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ…

Leave a Comment