ಎಲ್ಲರಿಗೂ ನಮಸ್ಕಾರ,
ನಮಗೆಲ್ಲ ತಿಳಿದಿರುವ ಹಾಗೆ ಸರ್ಕಾರದ ಕೆಲವು ಉಪಯೋಗಗಳನ್ನು ಪಡೆದುಕೊಳ್ಳಲು ಪಡಿತರ ಚೀಟಿ( ರೇಷನ್ ಕಾರ್ಡ್) ಬಹಳ ಮುಖ್ಯವಾಗಿದೆ. ಆದರೆ ಸರ್ಕಾರದ ಹೊಸ ಹೊಸ ಯೋಜನೆಗಳಿಂದಾಗಿ ಹಲವಾರು ಅಭ್ಯರ್ಥಿಗಳಿಗೆ ಅದರ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೊಸದಾಗಿ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಸರ್ಕಾರವು ಆದೇಶವನ್ನು ಹೊರಡಿಸಿದೆ. ಹೊಸ ಪಡಿತರ ಚೀಟಿಗೆ, ಮತ್ತು ತಿದ್ದುಪಡಿ ಮಾಡಲು ಹಾಗೂ ಹೆಸರನ್ನು ಸೇರಿಸಲು ಅವಕಾಶವನ್ನು ಮಾಡಿಕೊಟ್ಟಿದ್ದು ಇದರ ಉಪಯೋಗವನ್ನು ಫಲಾನುಭವಿಗಳು ಪಡೆಯತಕ್ಕದ್ದು. ಇದಕ್ಕೆ ಬೇಕಾಗುವ ದಾಖಲೆಗಳು ಮತ್ತು ಯಾರು ಯಾರು ಈ ಉಪಯೋಗವನ್ನು ಪಡೆಯಬಹುದು ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುವುದು. ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ.
ರಾಜ್ಯ ಸರ್ಕಾರದಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ
ಸರ್ಕಾರದ ಹಲವು ಪ್ರಯೋಜನಗಳನ್ನು ಪಡಿತರ ಚೀಟಿಯ ಮೂಲಕ ಪಡೆಯಬಹುದಾಗಿದೆ. ಪಡಿತರ ಚೀಟಿಯಿಂದಾಗಿ ನಾವು ಸರ್ಕಾರದಿಂದ ಸಿಗುವ ಉಚಿತ ಯೋಜನೆಗಳನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಾರ್ಷಿಕ ಆದಾಯದ ಮೇಲೆ ಪಡಿತರ ಚೀಟಿ ವಿತರಿಸಲಾಗುತ್ತದೆ. ಇದರಲ್ಲಿ ಎಪಿಎಲ್ ಮತ್ತು ಬಿಪಿಎಲ್ ಎಂಬ ಎರಡು ರೀತಿಯಾದಂತಹ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತದೆ. ಈ ಪಡಿತರ ಚೀಟಿಯಿಂದ ನಮಗೆ ಸರ್ಕಾರವು ನೇರವಾಗಿ ಆಹಾರವನ್ನು ಒದಗಿಸಲು ಮತ್ತು ಉಪಯೋಗಗಳನ್ನು ಪಡೆಯಲು ಈ ಪಡಿತರ ಚೀಟಿಯನ್ನು ಜಾರಿಗೊಳಿಸಲಾಗಿದೆ. ಇದರಿಂದ ನಾವು ಹಲವು ಆಹಾರ ಧಾನ್ಯಗಳನ್ನು ಪಡೆಯಬಹುದಾಗಿದೆ. ಅತಿ ಬಡ ಕುಟುಂಬದ ವರ್ಗಗಳಿಗೆ ಅಥವಾ ಮಧ್ಯಮ ವರ್ಗದ ಜನರಿಗೆ ಇದು ಬಹಳ ಸಹಾಯಕವಾಗಿದೆ. ಈ ಪಡಿತರ ಚೀಟಿಯನ್ನು ಹೊಂದಿದ್ದರೆ ನಾವು ಸರ್ಕಾರದಿಂದ ಉಚಿತವಾಗಿ ಆಹಾರ ಧಾನ್ಯವನ್ನು ಪಡೆಯಬಹುದಾಗಿದೆ. ಇದನ್ನು ಮುಖ್ಯವಾಗಿ ದೇಶದ ಬಡತನವನ್ನು ಹೋಗಲಾಡಿಸಲು ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈಗಾಗಲೇ ಹಲವಾರು ಬಡ ಕುಟುಂಬ ಮತ್ತು ಮಧ್ಯಮ ಕುಟುಂಬದ ಜನರು ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಅದಲ್ಲದೆ ಪಡಿತರ ಚೀಟಿಯನ್ನು ನಾವು ಹೊಂದಿದ್ದರೆ ಮುಂಬರುವ ಹೊಸ ಹೊಸ ಸರ್ಕಾರದ ಯೋಜನೆಗಳನ್ನು ಪಡೆಯಬಹುದಾಗಿದೆ. ಈಗಾಗಲೇ ಈ ಪಡಿತರ ಚೀಟಿಯಿಂದ ಮಹಿಳೆಯರು ಪ್ರತಿ ತಿಂಗಳು ಗೃಹಲಕ್ಷ್ಮಿ ಹಣವನ್ನು ಪಡೆಯುತ್ತಿದ್ದಾರೆ.
ಹೊಸ ಪಡಿತರ ಚೀಟಿ/ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸುವ ವಿಧಾನ
ಹೊಸ ಬಿಪಿಎಲ್ ಹಾಗೂ ಎಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ನೀವು ಕೆಳಗೆ ತಿಳಿಸಿರುವ ಅಗತ್ಯ ಮತ್ತು ಅರ್ಹತಾಮಾನದೊಂಡಗಳೊಂದಿಗೆ ನಿಮ್ಮ ಹತ್ತಿರದ ಬೆಂಗಳೂರು ಅಥವಾ ಗ್ರಾಮವನ್ ಅಥವಾ ಯಾವುದೇ ಸೈಬರ್ ಸೆಂಟರ್ಗೆ ಭೇಟಿ ನೀಡಿ ಅರ್ಹ ದಾಖಲಾತಿಗಳೊಂದಿಗೆ ಆನ್ಲೈನ್ ಅರ್ಜಿ ಫಾರಂ ತೆಗೆದುಕೊಂಡು ಫಾರಂ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಆನ್ಲೈನ್ ನ ಮೂಲಕವೇ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ಕೆಲಸಗಳಲ್ಲಿ ನಿಮಗೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದೊರೆಯಲಿದೆ.
ಅಭ್ಯರ್ಥಿಗಳು ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಸರ್ಕಾರವು ಆದೇಶವನ್ನು ಹೊರಡಿಸಿದೆ. ಹಾಗಾಗಿ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ ಹೊಸ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ. ಸರ್ಕಾರವು ಎಪ್ರಿಲ್1 ರಿಂದ ಹೊಸ ಪಡಿತರ ಚೀಟಿಗೆ ಅಥವಾ ತಿದ್ದುಪಡಿಗೆ ಅವಕಾಶವನ್ನು ಮಾಡಿ ಕೊಟ್ಟಿರುವುದರಿಂದ ಈ ಕೂಡಲೇ ಅಭ್ಯರ್ಥಿಗಳು ತಮ್ಮ ತಿದ್ದುಪಡಿ ಅಥವಾ ಹೆಸರನ್ನು ಸೇರಿಸುವುದು, ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಹಲವಾರು ಜನ ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದು 2,95,000 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದಾರೆ. ಇದರಲ್ಲಿ ಸರ್ಕಾರವು 57,000 ಜನರಿಗೆ ರೇಷನ್ ಕಾರ್ಡ್ ವಿಲೇವಾರಿ ಮಾಡಿದ್ದು, ಇನ್ನುಳಿದ 2,40,000 ಅಭ್ಯರ್ಥಿಗಳಿಗೆ ಮಾರ್ಚ್ 31ರ ಒಳಗೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ತಿಳಿಸಿತ್ತು. ಹಾಗೆ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಏಪ್ರಿಲ್ 1 ರಿಂದ ಅವಕಾಶ ಮಾಡಿಕೊಟ್ಟಿದೆ. ಹೊಸ ಪಡಿತರ ಚೀಟಿಗೆ ಅಜ್ಜಿಯನ್ನು ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು.
- ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್/ ವೋಟರ್ ಐಡಿ
- ವಯಸ್ಸಿನ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಮನೆಯ ಸದಸ್ಯರ ಇತ್ತೀಚಿಗಿನ ಪಾಸ್ಪೋರ್ಟ್ ಸೈಜ್ ಫೋಟೋ
ಈ ಎಲ್ಲ ದಾಖಲೆಗಳನ್ನು ಹೊಂದಿದ್ದು ನೀವು ಸಂಬಂಧಪಟ್ಟ ನಿಮ್ಮ ಹತ್ತಿರದ ಇಲಾಖೆಗೆ ಭೇಟಿ ನೀಡಿ ಎಲ್ಲಾ ದಾಖಲೆ ಪತ್ರಗಳನ್ನು ಒದಗಿಸಿದರೆ ನಿಮಗೆ ಹೊಸ ರೇಷನ್ ಕಾರ್ಡ್ ಸಿಗುತ್ತದೆ. ಪಡಿತರ ಚೀಟಿಯನ್ನು ಪಡೆಯಲು ಸಂಬಂಧಪಟ್ಟ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ನಿಮಗೆ ಪಡಿತರ ಚೀಟಿಯಲ್ಲಿ ಯಾವುದಾದರೂ ಹೊಸ ತಿದ್ದುಪಡಿ ಅಥವಾ ಹೊಸ ಹೆಸರನ್ನು ನೋಂದಾಯಿಸಲು ಅಥವಾ ಸೇರಿಸಲು ಕೂಡ ಅವಕಾಶ ಮಾಡಿಕೊಡಲಾಗಿದೆ. ಇದರ ಜೊತೆಗೆ ನೀವು ಪಡಿತರ ಚೀಟಿಯನ್ನು ಪಡೆಯಲು ಮೊದಲಿಗೆ ಕರ್ನಾಟಕ ರಾಜ್ಯದ ನಿವಾಸಿ ಆಗಿರಬೇಕು.
ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಮುನ್ನ ಎಚ್ಚರ ವಹಿಸಿ
ಹೌದು ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಮುನ್ನ ಎಚ್ಚರ ವಹಿಸಿ, ಈಗಾಗಲೇ ಮೂಡುಗೆರೆಯಲ್ಲಿ 599 ಕಿಂತ ಹೆಚ್ಚಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ಪಡಿತರ ಚೀಟಿಯನ್ನು ರದ್ದು ಮಾಡಲಾಗಿದೆ. ಈ ರೀತಿ ನಿಮ್ಮ ಪಡಿತರ ಚೀಟಿ ರದ್ದು ಮಾಡುವ ಮುನ್ನ ಈ ಕೆಳಗೆ ತಿಳಿಸುವ ಕ್ರಮಗಳನ್ನು ನೀವು ಪಾಲಿಸಿದ್ದೀರಾ ಎಂದು ತಿಳಿದುಕೊಳ್ಳಿ. ಏಕೆಂದರೆ ಈಗಾಗಲೇ ರಾಜ್ಯದಲ್ಲಿ ಹಲವಾರು ಕುಟುಂಬಗಳು ಎಲ್ಲಾ ಸೌಲಭ್ಯವನ್ನು ಹೊಂದಿದ್ದರು ಸಹ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಇದರಿಂದಾಗಿ ಸರ್ಕಾರವು ಎಲ್ಲಾ ಪಡಿತರ ಚೀಟಿಯ ಮರುಪರಿಶೀಲನೆ ಮಾಡುತ್ತಿರುವುದರಿಂದ ಹಲವು ಕುಟುಂಬಗಳ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ. ಇದೇ ರೀತಿ ನಿಮ್ಮ ಕುಟುಂಬದ ರೇಷನ್ ಕಾರ್ಡ್ ರದ್ದು ಆಗಬಾರದೆಂದರೆ ಈಗಲೇ ಎಚ್ಚರ ವಹಿಸಿ. ಇದರಿಂದ ನೀವು ಮುಂದೆ ಸಿಗುವ ಸರ್ಕಾರದ ಯಾವುದೇ ಯೋಜನೆಯನ್ನು ಪಡೆಯಲಾಗುವುದಿಲ್ಲ.
BPL ಕಾರ್ಡ್ ಯಾರಿಗೆ ಸಿಗುವುದಿಲ್ಲ?
- ಯಾರ ಬಳಿ ನಾಲ್ಕು ಚಕ್ರದ ವಾಹನಗಳಿರುತ್ತದೆಯೋ ಅವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ಇದರ ಜೊತೆಗೆ ಯಾರು ಅವರ ಜೀವನೋಪಾಯಕ್ಕೆ ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದು ಅದು ಹಳದಿ ಬಣ್ಣದ ಬೋರ್ಡನ್ನು ಹೊಂದಿದ್ದರೆ ಅಂತಹ ಅಭ್ಯರ್ಥಿಗಳು ಬಿಪಿಎಲ್ ಕಾರ್ಡನ್ನು ಪಡೆಯಬಹುದು. ಇದರ ಜೊತೆಗೆ ಅಭ್ಯರ್ಥಿಯು ನಾಲ್ಕು ಚಕ್ರದ ವಾಹನವನ್ನು ಹೊಂದಿದ್ದು ಅದು ಬಿಳಿ ಬಣ್ಣದ ನಂಬರ್ ಪ್ಲೇಟ್ ಅನ್ನು ಹೊಂದಿದ್ದರೆ ಆ ಅಭ್ಯರ್ಥಿಗೆ ಬಿಪಿಎಲ್ ಕಾರ್ಡನ್ನು ನೀಡುವುದಿಲ್ಲ. ನಿಮ್ಮ ಬಳಿ ಬಿಳಿ ಬಣ್ಣದ ನಂಬರ್ ಪ್ಲೇಟ್ ಇರುವ ನಾಲ್ಕು ಚಕ್ರದ ವಾಹನವಿದ್ದರೆ ಈ ಕೂಡಲೇ ನಿಮ್ಮ ಪಡಿತರ ಚೀಟಿ ಬಿಪಿಎಲ್ ಆಗಿದ್ದರೆ ಈಗಲೇ ಎಪಿಎಲ್ ಆಗಿ ಬದಲಾಯಿಸಿ, ಏಕೆಂದರೆ ಇದೇ ಕಾರಣದಿಂದಾಗಿ ಮೂಡಿಗೆರೆಯಲ್ಲಿ 599 ಕಿಂತ ಅಧಿಕ ಬಿಪಿಎಲ್ ಕಾರ್ಡನ್ನು ರದ್ದುಗೊಳಿಸಲಾಗಿದೆ. ಹಾಗಾಗಿ ಈ ಕೂಡಲೇ ನಿಮ್ಮ ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಿಕೊಳ್ಳಿ.
- ಯಾರಿಗೆಲ್ಲ ಖಾಯಂ ಉದ್ಯೋಗ ಇರುತ್ತದೆ ಅವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ಇದರ ಜೊತೆಗೆ GST ಯನ್ನು ಸರ್ಕಾರಕ್ಕೆ ಕಟ್ಟುತ್ತಿರುವ ಅಭ್ಯರ್ಥಿಗಳಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ ಹಾಗೂ IT ಎನ್ನು ಕಟ್ಟುತ್ತಿರುವ ಅಭ್ಯರ್ಥಿಗಳಿಗೂ ಸಹ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ಇದರ ಜೊತೆಗೆ ಸೇವಾ ತೆರಿಗೆಯನ್ನು ಪಾವತಿಸುವವರೆಗೂ ಸಹ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.
- ಇದರ ಜೊತೆಗೆ ಭೂಮಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಅಂದರೆ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಮೂರು ಹೆಕ್ಟರ್ಗಿಂತ ಅಧಿಕ ಭೂಮಿಯನ್ನು ಹೊಂದಿದ್ದರೆ ನಿಮಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ಮೂರು ಹೆಕ್ಟರ್ಗಿಂತ ಕಡಿಮೆ ಭೂಮಿಯನ್ನು ಹೊಂದಿದ್ದರೆ ನೀವು ಬಿಪಿಎಲ್ ಕಾರ್ಡನ್ನು ಪಡೆಯಬಹುದಾಗಿದೆ. ಇನ್ನು ನಗರ ಪ್ರದೇಶದಲ್ಲಿ 1000 ಚದರಕ್ಕಿಂತ ಹೆಚ್ಚು ವಿಸ್ತೀರ್ಣ ಇರುವ ಸ್ವಂತ ಮನೆ ಹೊಂದಿದ್ದರೆ ನಿಮಗೆ ಬಿಪಿಎಲ್ ಕಾರ್ಡ್ ತೆಗೆದುಕೊಳ್ಳುವಂತಿಲ್ಲ. ಇದರ ಜೊತೆಗೆ ಎರಡು ಮೂರು ಮನೆಯನ್ನು ಹೊಂದಿದ್ದರೆ ನಿಮಗೆ ಬಿಪಿಎಲ್ ಕಾರ್ಡ್ ತೆಗೆದುಕೊಳ್ಳುವಂತಿಲ್ಲ.
- ಆದಾಯವು 1,20,000 ಕ್ಕಿಂತ ಹೆಚ್ಚು ಹೊಂದಿದ್ದರೆ ನೀವು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ. ಒಂದು ಲಕ್ಷ ಇಪತ್ತು ಸಾವಿರಕ್ಕಿಂತ ಕಡಿಮೆ ವಾರ್ಷಿಕ ಆದಾಯವನ್ನು ಹೊಂದಿದ್ದರೆ ನೀವು ಬಿಪಿಎಲ್ ಕಾರ್ಡನ್ನು ಪಡೆಯಬಹುದಾಗಿದೆ.
ಈ ಮೇಲೆ ತಿಳಿಸಿರುವ ನಿಯಮಗಳನ್ನು ನೀವು ಪಾಲಿಸಿದ್ದೀರಾ ಎಂದು ತಿಳಿದುಕೊಳ್ಳಿ. ಇಲ್ಲವಾದರೆ ಈ ಕೂಡಲೇ ನಿಮ್ಮ ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನು ಮಾಡಿಕೊಂಡು ಬಿಪಿಎಲ್ ಇಂದ ಎಪಿಎಲ್ ಕಾರ್ಡ್ ಗೆ ಬದಲಾಯಿಸಿಕೊಳ್ಳಿ. ಇಲ್ಲವಾದರೆ ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಮಾಹಿತಿ ನಿಮಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇನೆ. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. ಶುಭದಿನ…