ಎಲ್ಲರಿಗೂ ನಮಸ್ಕಾರ…
ಕರ್ನಾಟಕ ರಾಜ್ಯ ಸರ್ಕಾರದಿಂದ ಇದೀಗ BPL ಮತ್ತು APL ಕಾರ್ಡಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮತ್ತೊಂದು ಅವಕಾಶ ನೀಡುತ್ತಿದೆ ಈಗಾಗಲೇ ರಾಜ್ಯ ಸರ್ಕಾರ ನೀಡಿದ್ದ 5 ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳು ಜಾರಿಯಾಗಿದ್ದು ಇವುಗಳಲ್ಲಿ ಇನ್ನೂ ಕೆಲವು ಸಮಸ್ಯೆಗಳು ಇವೆ. ಈ ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ ಕ್ರಮವಾಗಿ ಕೆಲವು ಹೊಸ ನಿಯಮಗಳನ್ನು ಸರ್ಕಾರದಿಂದ ಜಾರಿ ಮಾಡಿದ್ದು ಈ ನಿಯಮಗಳ ಪ್ರಕಾರ ಕೆಲವು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ ಮತ್ತು ಕೆಲವು ಹೊಸ BPL ಮತ್ತು APL ಕಾರ್ಡಿಗೆ ಅರ್ಜಿ ಸಲ್ಲಿಸುವ ಬಗ್ಗೆ ಕೆಲವು ಹೊಸ ನಿಯಮಗಳನ್ನು ಜಾರಿ ಮಾಡಿದೆ. ನೀವು ಸಹ ಹೊಸದಾಗಿ BPL ಮತ್ತು APL ಕಾರ್ಡಿಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ..
BPL ಮತ್ತು APL ಕಾರ್ಡಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್.?
ಹೌದು ರಾಜ್ಯ ಸರ್ಕಾರದಿಂದ ಈ ಮೊದಲೇ ಹೊಸದಾಗಿ BPL ಮತ್ತು APL ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ ಒಂದು ಕಾಲಾವಕಾಶವನ್ನು ನೀಡಿದ್ದು ಆದರೆ ಅದೇ ಸಮಯದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಯ ಕೆಲವು ಅರ್ಜಿ ಸಮಸ್ಯೆಗಳು ಮತ್ತು ತಾಂತ್ರಿಕ ಸಮಸ್ಯೆಗಳು ಅಂದರೆ ಸರ್ವರ್ ಸಮಸ್ಯೆಗಳು ಇದ್ದ ಕಾರಣ ಹೊಸದಾಗಿ BPL ಮತ್ತು APL ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ ಸಮಸ್ಯೆ ಆಗಿದೆ ಅಂದರೆ ಹೊಸದಾಗಿ ಅರ್ಜಿ ಸಲ್ಲಿಸುವ ಅರ್ಜಿದಾರರಲ್ಲಿ ಕೇವಲ 30 ರಿಂದ 40% ರಷ್ಟು ಮಾತ್ರ ಜನರು ಅರ್ಜಿ ಸಲ್ಲಿಸಿದ್ದಾರೆ ಇನ್ನುಳಿದ ಅರ್ಜಿದಾರರಿಗೆ ಅವಕಾಶ ಇಲ್ಲದಂತಾಗಿದ್ದು ಇದೀಗ ರಾಜ್ಯ ಸರ್ಕಾರ ಅಂತಹ BPL ಮತ್ತು APL ಕಾರ್ಡ್ ಅರ್ಜಿದಾರರಿಗೆ ಇದೀಗ ಮತ್ತೊಂದು ಅವಕಾಶ ನೀಡಲಿದೆ.
ಈಗಾಗಲೇ ತಿಳಿಸಿದ ಹಾಗೆ BPL ಮತ್ತು APL ಕಾರ್ಡಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಇದೀಗ ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಮತ್ತೊಂದು ಅವಕಾಶ ನೀಡಿದ್ದು ಈ ಅವಕಾಶವನ್ನು ಅರ್ಜಿ ಸಲ್ಲಿಸುವವರು ಉಪಯೋಗಿಸಿಕೊಳ್ಳಬೇಕಾಗಿ ಸರ್ಕಾರದಿಂದ ಆದೇಶ ಹೊರಡಿಸಿದೆ ಅಲ್ಲದೆ 2023 ನೇ ಸಾಲಿನ ಕೊನೆಯ ಬಿಪಿಎಲ್ ಮತ್ತು ಎಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಅವಕಾಶ ಇದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ರಾಜ್ಯ ಸರ್ಕಾರದಿಂದ BPL ಮತ್ತು APL ಕಾರ್ಡಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ.?
ಹೌದು ಈಗಾಗಲೇ ತಿಳಿಸಿದ ಹಾಗೆ ರಾಜ್ಯ ಸರ್ಕಾರದಿಂದ BPL ಮತ್ತು APL ಕಾರ್ಡಿಗೆ ಅರ್ಜಿ ಸಲ್ಲಿಸಲು ಈ ಹಿಂದೆ ಒಂದು ಅವಕಾಶವನ್ನು ನೀಡಿತ್ತು ಆದರೆ ಆ ಸಮಯದಲ್ಲಿ ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶ ಕೂಡ ನೀಡಲಾಗಿದ್ದು ಆದ್ದರಿಂದ ಎಲ್ಲಾ ಕೇಂದ್ರಗಳಲ್ಲೂ ಸರ್ವ ಸಮಸ್ಯೆ ಉಂಟಾದ ಕಾರಣ ಹೊಸದಾಗಿ BPL ಮತ್ತು APL ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ ಮತ್ತು BPL ಮತ್ತು APL ಕಾರ್ಡ್ ನ ತಿದ್ದುಪಡಿ ಮಾಡಿಸುವವರಿಗೆ ಸಮಸ್ಯೆ ಉಂಟಾಗಿದ್ದು ಇದೀಗ ಇದನ್ನೆಲ್ಲಾ ಹರಿತ ರಾಜ್ಯ ಸರ್ಕಾರ 2023 ನೇ ಸಾಲಿನ ಕೊನೆಯ ಅವಕಾಶವನ್ನು ಇದೀಗ ಹೊಸದಾಗಿ BPL ಮತ್ತು APL ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ ಮತ್ತು ತಿದ್ದುಪಡಿ ಮಾಡಿಸುವವರಿಗೆ ಅವಕಾಶ ನೀಡಿದೆ.
BPL ಮತ್ತು APL ಕಾರ್ಡಿಗೆ ಹೊಸದಾಗಿ ಅರ್ಜಿ ಸಲ್ಲಿಸುವ ಮತ್ತು ತಿದ್ದುಪಡಿ ಮಾಡಿಸುವ ದಿನಾಂಕ ಯಾವುದು.?
ಸಾಮಾನ್ಯವಾಗಿ ನಿಮಗೆಲ್ಲಾ ತಿಳಿದಿರುವ ಹಾಗೆ ಈಗಾಗಲೇ ರಾಜ್ಯ ಸರ್ಕಾರದಿಂದ ಸುಮಾರು ಎಂಟರಿಂದ 10 ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದೆ ಇದರ ಜೊತೆಗೆ ಹೊಸದಾಗಿ BPL ಮತ್ತು APL ಕಾರ್ಡಿಗೆ ಅರ್ಜಿ ಸಲ್ಲಿಸುವ ಅವರಿಗೂ ಸಹ ಅವಕಾಶವನ್ನು ನೀಡಲಾಗಿತ್ತು ಆದರೆ ಸರ್ವರ್ ಸಮಸ್ಯೆಗಳಿಂದ ಅರ್ಜಿ ಸಲ್ಲಿಸಲು ಸಮಸ್ಯೆ ಉಂಟಾಗಿತ್ತು ಆದ್ದರಿಂದ ಇದೀಗ ಸರ್ಕಾರದಿಂದ ಮತ್ತೊಂದು ಅವಕಾಶ ನೀಡಿದ್ದು ಇದೆ ಅಕ್ಟೋಬರ್ 1 ನೇ ದಿನಾಂಕದಿಂದ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮತ್ತು BPL ಮತ್ತು APL ಕಾರ್ಡ್ ನ ತಿದ್ದುಪಡಿ ಮಾಡಿಸುವವರಿಗೆ ಕೊನೆಯ ಅವಕಾಶ ನೀಡಿದೆ.
ಹೌದು BPL ಮತ್ತು APL ಕಾರ್ಡಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮತ್ತು ತಿದ್ದುಪಡಿ ಮಾಡಿಸುವವರಿಗೆ ಅಕ್ಟೋಬರ್ ಒಂದನೇ ದಿನಾಂಕದಿಂದ ಅವಕಾಶ ನೀಡಿದ್ದು ಅರ್ಜಿ ಸಲ್ಲಿಸುವವರು ಅರ್ಜಿ ಸಲ್ಲಿಸಬಹುದು ಮತ್ತು ನಿಮ್ಮ ಹಳೆಯ ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ತಿದ್ದುಪಡಿ ಮಾಡಿಸಬೇಕು ಎಂದುಕೊಂಡಿದ್ದಲ್ಲಿ ಮಾಡಿಸಿಕೊಳ್ಳಬಹುದು.
BPL ಮತ್ತು APL ಕಾರ್ಡಿಗೆ ಹೊಸದಾಗಿ ಅರ್ಜಿ ಸಲ್ಲಿಸುವುದು ಮತ್ತು ತಿದ್ದುಪಡಿ ಮಾಡಿಸುವುದು ಎಲ್ಲಿ ಮತ್ತು ಹೇಗೆ.?
ರಾಜ್ಯ ಸರ್ಕಾರದಿಂದ BPL ಮತ್ತು APL ಕಾರ್ಡಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಮುಂದಿನ ಅಕ್ಟೋಬರ್ ಒಂದನೇ ದಿನಾಂಕದಿಂದ ಅವಕಾಶ ನೀಡುತ್ತಿದೆ ಆದರೆ ನಿಮಗೆ ಎಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸುವುದು ಎಂಬ ಯೋಚನೆ ಇರಬಹುದು ಈ ಬಗ್ಗೆ ರಾಜ್ಯ ಸರ್ಕಾರವೇ ಸ್ಪಷ್ಟ ಮಾಹಿತಿ ನೀಡಿದ್ದು ಅರ್ಜಿ ಸಲ್ಲಿಸಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಅವಕಾಶ ನೀಡಲಾಗುತ್ತದೆ ಅಂದರೆ ಅಕ್ಟೋಬರ್ ಒಂದನೇ ದಿನಾಂಕದಿಂದ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಸರ್ಕಾರದಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಅರ್ಜಿ ಸಲ್ಲಿಸುವವರು ಹತ್ತಿರದ ಆಹಾರ ಇಲಾಖೆಗೆ ಅಥವಾ ಗ್ರಾಮವನ್ನು ಕೇಂದ್ರ ಹಾಗೂ ಸಹಾಯ ಸೇವಕ ಕೇಂದ್ರಗಳಿಗೆ ಹೋಗಿ ಸರ್ಕಾರದಿಂದ ತಿಳಿಸಿರುವ ಎಲ್ಲಾ ದಾಖಲಾತಿಗಳನ್ನು ನೀಡಿ ಅರ್ಜಿ ಸಲ್ಲಿಸಬೇಕಾಗಿ ತಿಳಿಸಿದೆ.
ಅರ್ಜಿ ಸಲ್ಲಿಸಲು ಮುಖ್ಯವಾಗಿ ನೀಡಬೇಕಾದ ದಾಖಲಾತಿಗಳು ಯಾವು.?
ಈಗಾಗಲೇ ನೀವು ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದರೆ ನಿಮಗೆ ಯಾವೆಲ್ಲ ದಾಖಲಾತಿಗಳನ್ನು ನೀಡಬೇಕು ಎಂಬ ಬಗ್ಗೆ ನಿಖರವಾಗಿ ತಿಳಿದೇ ಇರುತ್ತದೆ. ಅಕ್ಟೋಬರ್ 1ರಿಂದ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾದಲ್ಲಿ ಅಥವಾ ತಿದ್ದುಪಡಿ ಮಾಡಿಸಿಕೊಳ್ಳಬೇಕಾಗಿತ್ತು ಮಾಡಿಸಿಕೊಳ್ಳಿ ಏಕೆಂದರೆ 2023 ನೇ ಸಾಲಿನ ಕೊನೆಯ ಅವಕಾಶ ಇದೆ.
ಇನ್ನು ಹೊಸದಾಗಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು.!
- ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ ಮುಖ್ಯವಾಗಿ ನಿಮ್ಮ ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ನಿಮ್ಮ ಮನೆಯ ಸದಸ್ಯರಲ್ಲಿ ಯಾರೆಲ್ಲಾ 18 ವರ್ಷ ಮೇಲ್ಪಟ್ಟವರು ಇದ್ದೀರಿ ಅಂತ ಅವರ ವೋಟರ್ ಐಡಿ
- ಮನೆಯ ಎಲ್ಲಾ ಸದಸ್ಯರ ಭಾವಚಿತ್ರ ಅಂದರೆ ಫೋಟೋ
- ಮನೆಯ ಸದಸ್ಯರಲ್ಲಿ ಚಿಕ್ಕ ಮಕ್ಕಳು ಇದ್ದಲ್ಲಿ ಅವರ ಶಾಲೆಯಿಂದ ಒಂದು ಸ್ಟಡಿ ಸರ್ಟಿಫಿಕೇಟ್
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ನೀವು ಈ ಹಿಂದೆ ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಹೊಂದಿದ್ದರೆ ಅದರ ಜೆರಾಕ್ಸ್ ಮತ್ತು ಇನ್ನಿತರ ಕೆಲವು ದಾಖಲಾತಿಗಳನ್ನು ಹೊಸದಾಗಿ ಅರ್ಜಿ ಸಲ್ಲಿಸಲು ಕೇಳಲಾಗುತ್ತದೆ
ಇನ್ನು ನಿಮ್ಮ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ನ ತಿದ್ದುಪಡಿ ಮಾಡಿಸಲು ಬೇಕಾಗುವ ದಾಖಲಾತಿಗಳು.?
- ಈಗಾಗಲೇ ತಿಳಿಸಿದ ಹಾಗೆ ನೀವು ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಹೊಂದಿರುತ್ತೀರಿ ಆದರೆ ಅದರಲ್ಲಿ ಮಾಹಿತಿ ತಪ್ಪಾಗಿದೆ ಎಂದರೆ ತಿದ್ದುಪಡಿ ಮಾಡಿಸಬೇಕಾಗುತ್ತದೆ.
- ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ತಿದ್ದುಪಡಿ ಮಾಡಿಸಲು ಕಡ್ಡಾಯವಾಗಿ ಆಧಾರ್ ಕಾರ್ಡ್ ಇರಲೇಬೇಕು
- ಕಾರ್ಡ್ ನಲ್ಲಿ ಒಂದು ವೇಳೆ ಹೆಸರು ತಪ್ಪು ಇದ್ದರೆ ಅದನ್ನು ಸರಿಪಡಿಸಲು ನಿಮ್ಮ ಆಧಾರ್ ಕಾರ್ಡ್ ಮತ್ತು ನಿಮ್ಮ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಬೇಕಾಗುತ್ತದೆ
- ಹಾಗೂ ಬೇರೆ ಯಾವುದಾದರೂ ಮಾಹಿತಿ ತಪ್ಪಾಗಿದ್ದರೆ ಅದಕ್ಕೆ ಸಂಬಂಧಪಟ್ಟ ಹಾಗೆ ಇನ್ನು ಬೇರೆ ಮಾಹಿತಿಗಳನ್ನು ಕೇಳುವ ಸಾಧ್ಯತೆ ಇದೆ
- ಹಾಗೂ ಕೊನೆಯದಾಗಿ ನಿಮ್ಮ ಬಿಪಿಎಲ್ ಕಾಡಿಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲದಿದ್ದರೆ ಮನೆಯ ಎಲ್ಲಾ ಸದಸ್ಯರು ಸಹ ಸೈಬರ್ ಸೆಂಟರ್ಗೆ ಭೇಟಿ ನೀಡಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕಾಗುತ್ತದೆ
ಈ ಎಲ್ಲ ಮಾಹಿತಿಗಳನ್ನು ಹೊಂದಿಸಿ ಇಟ್ಟರೆ ಇದೆ ಅಕ್ಟೋಬರ್ ಒಂದನೇ ದಿನಾಂಕದಿಂದ ಸರ್ಕಾರ ನೀಡುವ ಕಾಲಾವಕಾಶದಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬಹುದು ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಬಹುದು ಧನ್ಯವಾದಗಳು……