ಎಲ್ಲರಿಗೂ ನಮಸ್ಕಾರ…
ಕರ್ನಾಟಕ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರೆಂಟಿ ಯೋಜನೆಯಾಗಿರುವಂತಹ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರ ಚಾಲನೆ ನೀಡಿದ್ದು ಈ ಯೋಜನೆಯಲ್ಲಿ ಇನ್ನು ಸಹ ಹಲವು ಸಮಸ್ಯೆಗಳು ಸರ್ಕಾರಕ್ಕೆ ಎದುರಾಗಿದೆ ಏನೆಂದರೆ ಗೃಹಲಕ್ಷ್ಮಿ ಯೋಜನೆಗೆ ರಾಜ್ಯದಲ್ಲಿ ಸುಮಾರು ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದು ಇದರಲ್ಲಿ ಸರ್ಕಾರದಿಂದ ಕೆಲವು ಮಹಿಳೆಯರ ಅರ್ಜಿಯನ್ನು ತಿರಸ್ಕರಿಸಿದ್ದು ಸುಮಾರು ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಎರಡು ಹಣ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಒಂದು ಹೊಸ ಲಿಸ್ಟ್ ಕೂಡ ಬಿಡುಗಡೆ ಮಾಡಿದೆ ಆ ಲಿಸ್ಟ್ ನಲ್ಲಿ ಇರುವಂತಹ ಮಹಿಳೆಯರಿಗೆ ಹಣ ಸಿಗುವುದಾಗಿ ಸರ್ಕಾರ ಯೋಜನೆ ಜಾರಿ ಮಾಡಿದ್ದು ಇದೀಗ ಇದರಲ್ಲಿ ಕೆಲವು ಸಮಸ್ಯೆಗಳು ಉಂಟಾಗಿದೆ.
ಈ ಸಮಸ್ಯೆಗಳಿಗೆ ಇದೀಗ ರಾಜ್ಯ ಸರ್ಕಾರ ಮತ್ತೊಂದು ಹೊಸ ಅಪ್ಡೇಟ್ ನೀಡಿದ್ದು ನಿಮಗೂ ಸಹ ಇನ್ನು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬ್ಯಾಂಕ್ ಖಾತೆಗೆ ಜಮಾ ಹಾಗಿಲ್ಲದಿದ್ದರೆ ಲೇಖನವನ್ನು ಪೂರ್ತಿಯಾಗಿ ಓದಿ ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್ನ ಬಗ್ಗೆ ತಿಳಿದುಕೊಳ್ಳಿ..
ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೂ ಸಹ ಇನ್ನು ಬಂದಿಲ್ವಾ.?
ಹೌದು ಈ ಪ್ರಶ್ನೆ ಬಹಳಷ್ಟು ಮಹಿಳೆಯರಲ್ಲಿ ಮೂಡಿದ್ದು ಈಗಾಗಲೇ ತಿಳಿಸಿದ ಹಾಗೆ ರಾಜ್ಯದಲ್ಲಿ ಈ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಹಾಗೆ ಸುಮಾರು ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದು ಇದರಲ್ಲಿ ರಾಜ್ಯ ಸರ್ಕಾರ ಕೆಲವು ಮಹಿಳೆಯರ ಹೆಸರನ್ನು ಲಿಸ್ಟ್ ನಿಂದ ತೆಗೆದುಹಾಕಿದ್ದು ಇದೀಗ ಒಂದು ಕೋಟಿ 28 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀಡುವುದಾಗಿ ಸರ್ಕಾರ ಲಿಸ್ಟ್ ಬಿಡುಗಡೆ ಮಾಡಿದ್ದು ಇದರ ಬೆನ್ನಲ್ಲೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದು ಈಗಾಗಲೇ ಸುಮಾರು 80 ರಿಂದ 85 ಲಕ್ಷ ಮಹಿಳೆಯರಿಗೆ ಈ ಯೋಜನೆಯ ಮೊದಲ ತಿಂಗಳ ಅಂದರೆ ಆಗಸ್ಟ್ ತಿಂಗಳ 2000 ಹಣ ಬ್ಯಾಂಕ್ ಖಾತೆಗೆ ಜಮಾ ಆಗಿದೆ.
ಅಲ್ಲದೆ ಇನ್ನು ಉಳಿದ ಸುಮಾರು 50 ಲಕ್ಷ ಮಹಿಳೆಯರಿಗೆ ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬ್ಯಾಂಕ್ ಖಾತೆಗೆ ಜಮಾ ಹಾಗಿಲ್ಲ ಈ ಬಗ್ಗೆ ರಾಜ್ಯ ಸರ್ಕಾರ ಪ್ರತಿ ಬಾರಿಯೂ ಒಂದೊಂದು ಹೊಸ ಸೂಚನೆಗಳನ್ನು ನೀಡುತ್ತಲೇ ಇದೆ ಮತ್ತು ಹಣ ಜಮಾ ಮಾಡಲು ಮಹಿಳೆಯರ ಅರ್ಜಿಗಳಲ್ಲಿ ಸಮಸ್ಯೆ ಇದೆ ಅವರ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದೆ ಎಂದು ಕೆಲವು ಹೊಸ ಹೊಸ ತಪ್ಪುಗಳನ್ನು ಹೇಳುತ್ತಿದೆ ಆದರೆ ಇದರಿಂದ ಈವರೆಗೂ ಬಹಳಷ್ಟು ಮಹಿಳೆಯರಿಗೆ ಹಣ ಜಮಾ ಮಾಡದಿರುವುದು ಒಂದು ಪ್ರಶ್ನೆಯಾಗಿ ಉಳಿದಿದೆ.
ಇನ್ನೂ ಆಗಸ್ಟ್ ತಿಂಗಳ ಹಣ ಬಂದಿರದ ಮಹಿಳೆಯರಿಗೆ ಹೊಸ ಅಪ್ಡೇಟ್ ನೀಡಿದ ಸರ್ಕಾರ.?
ಹೌದು ರಾಜ್ಯ ಸರ್ಕಾರದಿಂದ ಈಗಾಗಲೇ ಆಗಸ್ಟ್ ತಿಂಗಳ 2000 ಹಣ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಮಹಿಳೆಯರನ್ನು ಹೊರತುಪಡಿಸಿ ಲಿಸ್ಟ್ ನಲ್ಲಿ ಹೆಸರಿತ್ತು ಸಹ ಹಣ ಜಮಾ ಆಗದ ಮಹಿಳೆಯರ ಖಾತೆಗೆ 2000 ಹಣ ಜಮಾ ಮಾಡಲು ಕಾರ್ಯನಿರ್ವಹಿಸುತ್ತಿದ್ದು ಈ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ವಿಷಯವಾಗಿ ಒಂದು ಹೊಸ ಅಪ್ಡೇಟ್ ನೀಡಿದ್ದರು ಏನೆಂದರೆ ಸರ್ಕಾರದಿಂದ ಯಾವುದೇ ಯೋಜನೆಯ ಹಣ ಪಡೆಯಬೇಕು ಎಂದರು ಕಡ್ಡಾಯವಾಗಿ ಅದು ಆಧಾರ್ ಲಿಂಕ್ ಮೂಲಕವೇ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಆದ್ದರಿಂದ ನಿಮ್ಮ ಆಧಾರ್ ಕಾರ್ಡ್ಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ ಎಂದು ಚೆಕ್ ಮಾಡಿಸಿಕೊಳ್ಳಬೇಕಾಗಿ ತಿಳಿಸಲಾಗುತ್ತಿದೆ ಇದನ್ನು ಡಿ ಬಿ ಟಿ ಲಿಂಕ್ ಎಂದು ಕೂಡ ಕರೆಯಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು.
. ಆದರೆ ಇದೀಗ ಕೆಲವು ದಿನಗಳ ಬಳಿಕ ಇನ್ನೂ ಸಹ ಅಂದರೆ ಸೆಪ್ಟೆಂಬರ್ ತಿಂಗಳು ಮುಗಿಯಲು ಬಂದರು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಹಾಗಿಲ್ಲ ಆದ್ದರಿಂದ ಇದೀಗ ಸರ್ಕಾರದಿಂದ ಮತ್ತೊಂದು ಅಪ್ಡೇಟ್ ನೀಡಿದೆ ಏನೆಂದರೆ ಈಗಾಗಲೇ ಮಹಿಳೆಯರಿಗೆ ತಿಳಿಸಿರುವ ಕೆಲಸಗಳನ್ನು ಶೀಘ್ರದಲ್ಲಿ ಮಾಡಿದರೆ ಸೆಪ್ಟೆಂಬರ್ ನ ಕೊನೆಯಲ್ಲಿ ಆಗಸ್ಟ್ ತಿಂಗಳ 2,000 ಮತ್ತು ಸೆಪ್ಟೆಂಬರ್ ತಿಂಗಳ 2,000 ಸೇರಿದಂತೆ ಒಟ್ಟಾರೆ ನಾಲ್ಕು ಸಾವಿರ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ ಆದ್ದರಿಂದ ನಿಮಗಿನ್ನು ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬಂದಿಲ್ಲದಿದ್ದರೆ ಕಡ್ಡಾಯವಾಗಿ ಶೀಘ್ರದಲ್ಲಿ ಈ ಮೂರು ಕೆಲಸಗಳನ್ನು ಮಾಡುವುದು ಸೂಕ್ತ ಇಲ್ಲದಿದ್ದರೆ ಸೆಪ್ಟೆಂಬರ್ ನ ಕೊನೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದು ಡೌಟ್.
ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲದೆ ಹಣ ಪಡೆಯಲು ಮಾಡಬೇಕಾದ ಕೆಲಸ ಏನು.?
ಈ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಯೋಜನೆಗೆ ಸಂಬಂಧಪಟ್ಟ ಹಾಗೆ ಸುಮಾರು ಅರ್ಧದಷ್ಟು ಮಹಿಳೆಯರಿಗೆ ಮಾತ್ರ ಹಣ ಜಮಾ ಆಗಿ ಕೆಲವರಿಗೆ 2000 ಹಣ ಜಮಾ ಆಗದೆ ಇರುವ ಸಮಯದಲ್ಲಿ ತಿಳಿಸಿದ ಈ ಮೂರು ಕೆಲಸಗಳನ್ನು ಕಡ್ಡಾಯವಾಗಿ ಮಹಿಳೆಯರು ಮಾಡಬೇಕಾಗಿದೆ.
- ಮೊದಲನೆಯದಾಗಿ ಆಗಸ್ಟ್ ತಿಂಗಳ 2000 ಹಣ ನಿಮಗೆ ಬಂದಿಲ್ಲದಿದ್ದರೆ ಆ ಹಣ ಮತ್ತು ಸೆಪ್ಟೆಂಬರ್ ತಿಂಗಳ ಹಣ ಒಂದೇ ಬಾರಿ ಬರಲಿದೆ ಆದರೆ ಮೊದಲು ನೀವು ಕೇವಲ ಅರ್ಜಿ ಸಲ್ಲಿಸಿದರೆ ಮಾತ್ರ ಸಾಲದು ಆ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರಿಗೆ ಎಂದು ಚೆಕ್ ಮಾಡಿಕೊಳ್ಳಬೇಕು.
- ಎರಡನೆಯದಾಗಿ ಒಂದು ವೇಳೆ ನಿಮ್ಮ ಹೆಸರು ಫಲಾನುಭವಿಗಳ ಲಿಸ್ಟ್ ನಲ್ಲಿ ಇದ್ದು ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬಂದಿಲ್ಲ ಎಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಿಸಬೇಕು ಇದನ್ನು ಡಿ ಬಿ ಟಿ ಲಿಂಕ್ ಎಂದು ಕೂಡ ಕರೆಯಲಾಗುತ್ತದೆ ಇದನ್ನು ನಿಮ್ಮ ಬ್ಯಾಂಕ್ ನಲ್ಲಿ ಚೆಕ್ ಮಾಡಿಸಬೇಕಾಗುತ್ತದೆ.
- ಕೊನೆಯದಾಗಿ ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರು ಫಲಾನುಭವಿಗಳ ಲಿಸ್ಟ್ ನಲ್ಲಿ ಇದ್ದು ಆ ಮಹಿಳೆಯ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕೂಡ ಆಗಿದ್ದು ಒಂದು ವೇಳೆ ಹಣ ಬಂದಿಲ್ಲದಿದ್ದರೆ ಆ ಮಹಿಳೆ ಅವರ ಬಿಪಿಎಲ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಿಸಬೇಕು ಮತ್ತು ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಇರಬೇಕು.
ಈ ಮೇಲೆ ತಿಳಿಸಿದ ಈ ಮೂರು ಕೆಲಸಗಳನ್ನು ನೀವು ಶೀಘ್ರದಲ್ಲಿ ಮಾಡಿದರೆ ಈ ಎಲ್ಲಾ ಕೆಲಸಗಳ ಸ್ಟೇಟಸ್ ಚೆಕ್ ಮಾಡಿಕೊಂಡರೆ ಶೀಘ್ರದಲ್ಲಿ ಅಂದರೆ ಸೆಪ್ಟೆಂಬರ್ ನ ಕೊನೆಯಲ್ಲಿ ನಿಮಗೆ ಆಗಸ್ಟ್ ತಿಂಗಳ ಮತ್ತು ಸೆಪ್ಟೆಂಬರ್ ತಿಂಗಳ ಹಣ ಎರಡು ಸೇರಿದಂತೆ ಒಟ್ಟಾಗಿ ನಾಲ್ಕು ಸಾವಿರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ರಾಜ್ಯ ಸರ್ಕಾರದಿಂದ ಹೊಸ ಅಪ್ಡೇಟ್ ನೀಡಿದೆ ಇದರಂತೆ ನೀವು ಈ ಸ್ಟೇಟಸ್ ಗಳನ್ನು ಚೆಕ್ ಮಾಡಿ ಸರಿಪಡಿಸಿಕೊಳ್ಳಲು ಕೊನೆಯ ಒಂದು ವಾರ ಮಾತ್ರ ಬಾಕಿ ಉಳಿದಿದೆ ಈಗಲೇ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ಧನ್ಯವಾದಗಳು..