ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ಬಂದಿಲ್ದವರು ಈಗಲೇ ಈ ಕೆಲಸ ಮಾಡಿ!

ಹೌದು ಬಹಳಷ್ಟು ಜನಕ್ಕೆ ಗೃಹಲಕ್ಷ್ಮಿಜನೆಯ ಮೊದಲ ಕಂತಿನ ಹಣ ಹಾಗೂ ಎರಡನೇ ಕಂತಿನ ಹಣ ದೊರೆತಿಲ್ಲ, ಈ ಕುರಿತು ಬಹಳಷ್ಟು ಜನ ಗೊಂದಲದಲ್ಲಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 80 ಲಕ್ಷಕ್ಕಿಂತ ಹೆಚ್ಚಿನ ಗೃಹಿಣಿಯ ಬ್ಯಾಂಕ್ ಖಾತೆಗೆ ಈಗಾಗಲೇ ಮೊದಲ ಕಂತಿನ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ ಹಾಗೂ ಉಳಿದ ಗೃಹಿಣಿಯರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಾಗದೇ ಇರುವ ಕಾರಣಗಳನ್ನು ತಿಳಿಸಿದ್ದಾರೆ ಹಾಗಾದ್ರೆ ಆ ಕಾರಣಗಳೇನು ಎಂದು ತಿಳಿಯೋಣ ಬನ್ನಿ.

WhatsApp Group Join Now
Telegram Group Join Now

ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ತಲುಪಿಲ್ಲವೆಂದರೆ ನೀವು ಯಾವ ಕೆಲಸ ಮಾಡಬೇಕು ಎಂದು ಕೂಡ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಪೂರ್ತಿ ಓದಿ.

ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿರುವ ಪ್ರಕಾರ ಈಗಾಗಲೇ 80 ಲಕ್ಷಕ್ಕಿಂತ ಹೆಚ್ಚಿನ ಗೃಹಿಣಿಯರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ ಉಳಿದ ಗೃಹಿಣಿಯರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಾಗದೇ ಇರಲು ಕಾರಣಗಳು ಹೀಗಿವೆ.

  1.  ಗೃಹಿಣೀಯರ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಗೆ ಲಿಂಕ್ ಆಗದೆ ಇರುವುದು
  2.  ಗೃಹಲಕ್ಷ್ಮಿ ಯೋಜನಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನೀಡಿರುವ  ದಾಖಲೆಗೂ ತಮ್ಮ ಆಧಾರ್ ಹಾಗೂ ಬ್ಯಾಂಕ್ ಖಾತೆಯಲ್ಲಿರುವ ದಾಖಲೆಗೂ ಹಾಗೂ ಹೆಸರಿಗೂ ಇರುವ ಮಿಸ್ ಮ್ಯಾಚ್
  3.  ರೇಷನ್ ಕಾರ್ಡ್ ರದ್ದಾಗಿದ್ದು ಅದೇ ರೇಷನ್ ಕಾರ್ಡ್ ಬಳಸಿಕೊಂಡು ಅರ್ಜಿ ಸಲ್ಲಿಸಿರುವುದು
  4.  ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದರು ಕೂಡ ಅರ್ಜಿ ಸಲ್ಲಿಕೆ ಆಗಿದೆಯಾ ಇಲ್ಲವ ಎಂದು ಪರಿಶೀಲಿಸಿಕೊಳ್ಳದಿರುವುದು
  5.  ಆಧಾರ್ ಕಾರ್ಡ್ ನಲ್ಲಿ ಹಾಗೂ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹೆಸರನ್ನು ತಪ್ಪಾಗಿ ನೀಡಿರುವುದು
  6.  ಬ್ಯಾಂಕ್ ಖಾತೆ ಸ್ಥಿತಿ ಸ್ಥಗಿತವಾಗಿರುವುದು

ಈ ಇಷ್ಟು ಕಾರಣಗಳನ್ನು ಸ್ವತಃ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದು ನೀವು ಈ ಕೂಡಲೇ ನಿಮ್ಮ ಆಧಾರ್ಕಾಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ ಇಲ್ವಾ ಒಂದು ವೇಳೆ ಲಿಂಕ್ ಆಗಿದ್ದರು ಕೂಡ ನಿಮ್ಮ ಬ್ಯಾಂಕ್ ನ ಸ್ಥಿತಿ ಆಕ್ಟಿವ್ ಇದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳಬೇಕಾಗುತ್ತದೆ.

ಕೆಲವೊಂದಷ್ಟು ಗೃಹಿಣಿಯರು ಅರ್ಜಿ ಸಲ್ಲಿಸಿದ ಬಳಿಕ ತಮ್ಮ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಂಡಿಲ್ಲ ಕೆಲವೊಂದಷ್ಟು ತಾಂತ್ರಿಕ ಕಾರಣಗಳಿಂದ ಹಾಗೂ ನೀವು ನೀಡಿರುವ ಮಾಹಿತಿಗಳ ಕೊರತೆಯಿಂದಾಗಿ ಅರ್ಜಿಯನ್ನು ರಿಜೆಕ್ಟ್ ಮಾಡಲಾಗಿರುತ್ತದೆ ಹಾಗಾಗಿ ನೀವು ಇಲ್ಲಿ ನೀಡಿರುವ ನಂಬರ್ ಗೆ 8147500500 ನಿಮ್ಮ ರೇಷನ್ ಕಾರ್ಡ್ ನಂಬರನ್ನು ಮೆಸೇಜ್ ಮಾಡುವ ಮೂಲಕ ನಿಮ್ಮ ಅರ್ಜಿಯ ಸ್ಥಿತಿಯನ್ನು ಕ್ಷಣಮಾತ್ರದಲ್ಲಿ ಚೆಕ್ ಮಾಡಿಕೊಳ್ಳಬಹುದು..

ಹಾಗೂ ನೀವು ಆಧಾರ್ ಕಾರ್ಡಿನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯಾ ಇಲ್ವಾ ಎಂದು ಚೆಕ್ ಮಾಡಿಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಇದ್ದಲ್ಲಿ ಸರ್ಕಾರ ಯಾವುದಾದರೂ ಒಂದು ಬ್ಯಾಂಕ್ ಕಾತಿಗೆ ಮಾತ್ರವಷ್ಟೇ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ತಿಳಿದುಕೊಳ್ಳಲು ನೀವು ಆಧಾರ್ ಕಾರ್ಡ್ ನ ವೆಬ್ಸೈಟ್ ಗೆ ಭೇಟಿ ನೀಡಿ ಚೆಕ್ ಮಾಡಿಕೊಳ್ಳಬಹುದು ಒಂದು ವೇಳೆ ಬ್ಯಾಂಕ್ ಖಾತೆ ಲಿಂಕ್ ಆಗಿದ್ದು ನಿಮ್ಮ ಬ್ಯಾಂಕ್ ಖಾತೆಯ ಸ್ಥಿತಿ ಇನ್ಯಾಕ್ಟಿವ್ ಎಂದು ಬಂದರೆ ನೀವು ಅದನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ ಸರಿ ಪಡಿಸಿಕೊಂಡ ಬಳಿಕವಷ್ಟೇ ನಿಮಗೆ ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗುವಂತದ್ದು.

ಮೇಲೆ ತಿಳಿಸಿದ ಎಲ್ಲಾ ದಾಖಲಾತಿಗಳು ಹಾಗೂ ಮಾಹಿತಿಗಳು ಸರಿಯಾಗಿದ್ದರೂ ಕೂಡ ನಿಮಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬಂದಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಯಾವುದೇ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡುವ ಮೂಲಕ ಹಾಗೂ ಸಿಡಿಪಿಓ ಅಧಿಕಾರಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ನೀಡುವ ಮೂಲಕ ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಹಣ ಬರೆದಿರುವ ಕುರಿತು ಚರ್ಚಿಸಿ ಪರಿಹಾರ ಪಡೆದುಕೊಳ್ಳಬಹುದು.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment