ದಸರಾ ಪ್ರಯುಕ್ತ ಗೃಹಲಕ್ಷ್ಮಿ ಯೋಜನೆಯ 4 ಸಾವಿರ ಹಣ ಬಿಡುಗಡೆ!

ಯಾರೆಲ್ಲ ಗೃಹಲಕ್ಷ್ಮಿ ಜನಕೆ ಅರ್ಜಿ ಸಲ್ಲಿಸಿದ್ದು ಗೃಹಲಕ್ಷ್ಮಿ ಯೋಜನೆಯ ಮೊದಲ ಹಾಗೂ ಎರಡನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದೀರಾ ನಿಮಗೆಲ್ಲರಿಗೂ ಕೂಡ ಇದೀಗ ರಾಜ್ಯ ಸರ್ಕಾರ ಬಹುದೊಡ್ಡ ಗುಡ್ ನ್ಯೂಸ್ ನೀಡಿದೆ.

ಬಹಳಷ್ಟು ಜನ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಇಲ್ಲಿಯವರೆಗೂ ಕೂಡ ಮೊದಲ ಹಾಗೂ ಎರಡನೇ ಕಂತಿನ ಹಣ ತಮ್ಮ ಬ್ಯಾಂಕ್ ಖಾತೆಗಳಿಗೆ ತಲುಪಿಲ್ಲ ಹಾಗೂ ಒಂದಷ್ಟು ಜನಕ್ಕೆ ಈಗಾಗಲೇ ಮೊದಲ ಕಂತಿನ ಹಣ ತಲುಪಿದ್ದು ಎರಡನೇ ಕಂತಿನ ಹಣ ತಮ್ಮ ಬ್ಯಾಂಕ್ ಖಾತೆಗಳಿಗೆ ತಲುಪಿಲ್ಲ ಈ ವಿಚಾರಕ್ಕೆ ಸಂಬಂಧಿಸಿದಂತೆ ತುಂಬಾ ಜನ ಸರ್ಕಾರಕ್ಕೆ ಕೇಳುತ್ತಿದ್ದ ಒಂದೇ ಪ್ರಶ್ನೆ ಯಾವಾಗ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸರ್ಕಾರವು ಕೆಲವೊಂದಷ್ಟು ಮಾರ್ಗಸೂಚಿಗಳನ್ನು ಮತ್ತು ಶರತ್ತುಗಳನ್ನು ಬಿಡುಗಡೆ ಮಾಡಿದ್ದು ಶರತ್ತುಗಳು ಹಾಗೂ ಮಾರ್ಗ ಸೂಚಿಗಳು ಹೀಗಿವೆ.

WhatsApp Group Join Now
Telegram Group Join Now

 ಸರ್ಕಾರ ಬಿಡುಗಡೆ ಮಾಡಿದ್ದ ಗೃಹಲಕ್ಷ್ಮಿ ಯೋಜನೆಯ ಶರತ್ತುಗಳು!

  1.  ಆಧಾರ್ ಕಾರ್ಡ್ ಗೆ ಕಡ್ಡಾಯವಾಗಿ ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು
  2.  ನಿಮ್ಮ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಒಂದೇ ಹೆಸರು ಇರಬೇಕು
  3.  ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು
  4.  ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್  15ರ ಒಳಗಾಗಿ ನೀವು ಅರ್ಜಿ ಸಲ್ಲಿಸಿದ್ದಲ್ಲಿ ಮಾತ್ರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ  ಹಣ ಬರಲಿದೆ.  ಒಂದುವೇಳೆ ಆಗಸ್ಟ್ 15 ರ ನಂತರ ನೀವು ಅರ್ಜಿ ಸಲ್ಲಿಸಿದ್ದಲ್ಲಿ ನಿಮಗೆ ಗೃಹಲಕ್ಷ್ಮಿಯ ಮೊದಲ ಕಂತಿಯನ್ನು ಹಣದ ಬದಲಾಗಿ ಎರಡನೇ ಕಂತಿನ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು.

ಈ ಕುರಿತು ನೀವು ಯಾವಾಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಿ ಮತ್ತು ಮೇಲೆ ತಿಳಿಸಿರುವ ಎಲ್ಲಾ ಷರತ್ತುಗಳು ಮತ್ತು ಎಲ್ಲಾ ದಾಖಲಾತಿಗಳು ಸರಿಯಾಗಿವೆಯ ಎಂಬುದನ್ನು ನೀವು ಪರಿಶೀಲಿಸಿಕೊಳ್ಳಬೇಕಾಗುತ್ತದೆ.

ಒಂದು ವೇಳೆ ಎಲ್ಲವೂ ಕೂಡ ಸರಿಯಿದ್ದು ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದಿಲ್ಲವೆಂದಲ್ಲಿ ನಿಮಗೆ ಇಲ್ಲಿದೆ ಗುಡ್ ನ್ಯೂಸ್, ಗೃಹಲಕ್ಷ್ಮಿ ಯೋಜನೆಯ ಹಣದ ಕುರಿತು ಸ್ವತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ತಾಂತ್ರಿಕ ಕಾರಣಗಳಿಂದ ಎಲ್ಲಾ ಹಣವನ್ನು ಒಮ್ಮೆಯೇ ಗೃಹಿಣಿಯರ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಆದ ಕಾರಣ ಹಣವನ್ನು ಬಿಡುಗಡೆ ಮಾಡುವ ಕುರಿತು ನಾವು ಈಗಾಗಲೇ ಆರ್‌ಬಿಐಗೆ ಮನವಿ ಮಾಡಿದ್ದೇವೆ ಹಾಗೂ ಎಲ್ಲಾ ಹಣವನ್ನು ಕೂಡ ಗೃಹಿಣಿಯರ ಬ್ಯಾಂಕ್ ಖಾತೆಗೆ ನಾವು ವರ್ಗಾವಣೆಗೊಳಿಸುತ್ತೇವೆ ಎಂದು ಸ್ಪಷ್ಟೀಕರಣ ನೀಡಿದ್ದು ಈಗಾಗಲೇ ಹಣವರ್ಗಾವಣೆಯ ಪ್ರಕ್ರಿಯೆ ಶುರುವಾಗಿದೆ  ಪ್ರತಿ ಜಿಲ್ಲೆಯ ಅನುಸಾರವಾಗಿ ಗೃಹಿಣಿಯರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದು ದಸರಾ ಪ್ರಯುಕ್ತವಾಗಿ ಗೃಹಿಣಿಯರಿಗೆ ಹಣವನ್ನು ನೇರ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ನಿಮ್ಮ ಎಲ್ಲಾ ದಾಖಲಾತಿಗಳು ಸರಿಯಾಗಿದ್ದು ನಿಮಗೆ ಗೃಹಲಕ್ಷ್ಮಿ ಯೋಜನೆಯ ಮೊದಲ ಹಾಗೂ ಎರಡನೇ   ಕಂತಿನ ಹಣ ಇಲ್ಲಿಯವರೆಗೆ ಬಂದಿಲ್ಲವೆಂದರೆ ನಿಮಗೆ ದಸರಾ ಪ್ರಯುಕ್ತವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ.

ದಯವಿಟ್ಟು ಗಮನಿಸಿ :   ಗೃಹಲಕ್ಷ್ಮಿ ಯೋಜನೆಯ ಹಣವು ನೇರವಾಗಿ ಡಿಬಿಟಿ ಮೂಲಕ ತಲುಪುವುದರಿಂದ ಕೆಲವೊಮ್ಮೆ ಒಂದಷ್ಟು ತಾಂತ್ರಿಕ ಕಾರಣಗಳಿಂದ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿದ್ದರೂ ಕೂಡ ಎಸ್ಎಂಎಸ್ ಬರುವುದಿಲ್ಲ ಆದ ಕಾರಣ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿಕೊಳ್ಳಿ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment