ಎಲ್ಲರಿಗೂ ನಮಸ್ಕಾರ
ಕರ್ನಾಟಕದ ಎಲ್ಲಾ ಯುವಕರಿಗೆ ಇದೀಗ ಸಿಹಿ ಸುದ್ದಿ ಯಾರೆಲ್ಲಾ ಸ್ವಂತ ಬಿಜಿನೆಸ್ ಅನ್ನು ಶುರು ಮಾಡಬೇಕೆಂಬ ಹಂಬಲ ಹೊಂದಿದ್ದೀರಿ ನಿಮಗೆಲ್ಲರಿಗೂ ಕೂಡ ಇದೀಗ ರಾಜ್ಯ ಸರ್ಕಾರ ಒಂದು ಲಕ್ಷ ರೂಪಾಯಿ ಸಾಲ ಹಾಗೂ 50,000 ಸಬ್ಸಿಡಿ ನೀಡುವ ಹೊಸ ಯೋಜನೆಗೆ ಇದೀಗ ಚಾಲ್ತಿ ನೀಡಿದೆ ಈ ಯೋಜನೆಯಡಿಯಲ್ಲಿ ನೀವು ಸ್ವಂತ ಬಿಜಿನೆಸ್ ಅನ್ನು ಪ್ರಾರಂಭಿಸಲು ಈ ಯೋಜನೆಯ ಅಡಿಯಲ್ಲಿ ಸಾಲ ಹಾಗೂ ಸಬ್ಸಿಡಿಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ಬಳಿಕ ನಿಮಗೆ ಒಂದು ಲಕ್ಷ ರೂಪಾಯಿ ಸಾಲ ಸಿಗಲಿದೆ ಹಾಗೂ 50,000 ಇದರಲ್ಲಿ ಸಬ್ಸಿಡಿ ಕೂಡ ನಿಮಗೆ ಸಿಗಲಿದೆ ಉಳಿದ ರೂ.50,000ವನ್ನು ಮಾತ್ರವಷ್ಟೇ ನೀವು ಸರ್ಕಾರಕ್ಕೆ ಅತಿ ಕಡಿಮೆ ದರದಲ್ಲಿ ಹಿಂದಿರುಗಿಸಬಹುದಾಗಿದ್ದು ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ರಾಜ್ಯ ಸರ್ಕಾರ!
ಹೌದು ರಾಜ್ಯ ಸರ್ಕಾರವು ರಾಜ್ಯದ್ಯಂತ ಯುವಕರಿಗೆ ಸ್ವಯಂ ಉದ್ಯೋಗವನ್ನು ಶುರು ಮಾಡಲು ನೇರ ಸಾಲ ಯೋಜನೆಯನ್ನು ಶುರುಮಾಡಿದೆ ಈ ಯೋಜನೆಯ ಅಡಿಯಲ್ಲಿ ಮೇಲೆ ತಿಳಿಸಿದ ಹಾಗೆ ಸ್ವಂತ ಬಿಜಿನೆಸ್ ಅನ್ನು ಶುರು ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದ್ದು ಇದರ ಅಡಿಯಲ್ಲಿ ಯುವಕರಿಗೆ ಒಂದು ಲಕ್ಷ ರೂಪಾಯಿ ಅವರಿಗೆ ಸಾಲ ವಿತರಣೆ ಮಾಡಲಾಗುತ್ತದೆ ಫಲಾನುಭವಿಯು 50,000 ಹಣವನ್ನು ಸಬ್ಸಿಡಿಯ ಮುಖಾಂತರ ಪಡೆಯಲಿದ್ದು ಉಳಿದ 50000 ಹಣವನ್ನು ಮಾತ್ರವಷ್ಟೇ ಸರ್ಕಾರಕ್ಕೆ ನಾಲ್ಕು ಪರ್ಸೆಂಟ್ ಬಡ್ಡಿ ಯೊಂದಿಗೆ 30ಸಾಮಾನ್ಯ ಕಂತುಗಳ ಮುಖಾಂತರ ನೀವು ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಯ ಮುಖ್ಯ ಉದ್ದೇಶ ರಾಜ್ಯದ ಯುವಕರಿಗೆ ಹೊಸ ಬಿಜಿನೆಸ್ ಶುರು ಮಾಡವ ಉದ್ದೇಶದಿಂದ ಯುವಕರನ್ನು ಪ್ರೇರೇಪಿಸುವ ಸಲುವಾಗಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯನ್ನು ರಾಜ್ಯ ಸರ್ಕಾರ ಇದೀಗ ಚಾಲ್ತಿಗೋಳಿಸಿದ್ದು ಅರ್ಜಿಯನ್ನು ಕೂಡ ಆಹ್ವಾನ ಮಾಡಿದೆ
ಇದನ್ನು ಓದಿ : ಶಕ್ತಿ ಯೋಜನೆಯನ್ನು 10 ವರ್ಷಗಳ ಕಾಲ ಮುನ್ನಡೆಸಲಿದೆ ಕಾಂಗ್ರೆಸ್ ಸರ್ಕಾರ ! ಬಸ್ ಟಿಕೆಟ್ ಗಾಗಿ 2021 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ
ಅರ್ಜಿ ಸಲ್ಲಿಸಲು ಯಾರು ಅರ್ಹರಾಗಿರುತ್ತಾರೆ!
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ ಹಾಗೂ ಮಾದಿಗ ಸಮುದಾಯದ ಯುವಕರು ಈ ಯೋಜನೆಗೆ ಆನ್ಲೈನ್ ಮೂಲಕವೇ ಅರ್ಜಿಯನ್ನು ನೋಂದಾಯಿಸಿಕೊಳ್ಳುವ ಮೂಲಕ ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ಬಳಿಕ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಯೋಜನೆಯ ಅಡಿಯಲ್ಲಿ ಒಂದು ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಬಳಿಕ ಇದರಲ್ಲಿ 50,000 ನಿಮಗೆ ಸಬ್ಸಿಡಿ ಸಿಗಲಿದೆ
ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ
ಕರ್ನಾಟಕ ಆದಿಜಂಬವ ಅಭಿವೃದ್ಧಿ ನಿಗಮ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ
ಅಭಿವೃದ್ಧಿ ನಿಗಮ
ಈ ಮೇಲಿನ ಸಮುದಾಯಕ್ಕೆ ಸೇರಿದವರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಲು ನೇರವಾಗಿ ಅರ್ಹರಾಗಿರುತ್ತಾರೆ
ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲಾತಿಗಳು!
- ಅರ್ಜಿ ಸಲ್ಲಿಸುವ ಅಪ್ಲಿಕೇಶನ್ ಫಾರಂ
- ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
- ಬ್ಯಾಂಕಿನ ಪಾಸ್ ಬುಕ್ ಜೆರಾಕ್ಸ್
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಗಾತ್ರದ ಫೋಟೋಸ್
- ರೇಷನ್ ಕಾರ್ಡ್
- ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಬಳಿ ಈ ದಾಖಲಾತಿಗಳು ಇದ್ದಲ್ಲಿ ನೀವು ಅರ್ಜಿಯನ್ನು ಆನ್ಲೈನ್ ಮೂಲಕವೇ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ಅರ್ಹದಮಾನದಂಡಗಳು!
- ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಮುಂಚೆ ಈ ಯೋಚನೆಗೆ ಅರ್ಜಿ ಸಲ್ಲಿಸಿರಬಾರದು. ಅಥವಾ ಕುಟುಂಬದಲ್ಲಿ ಬೇರಾವಧಿ ಸದಸ್ಯ ಯೋಜನೆಗೆ ಫಲಾನುಭವಿ ಆಗಿರಬಾರದು
- ಅಭ್ಯರ್ಥಿಯು 18ರಿಂದ 55 ವರ್ಷದ ಒಳಗಿರಬೇಕು
- ಕುಟುಂಬದ ಆದಾಯವು ವಾರ್ಷಿಕ ಒಂದುವರೆ ಲಕ್ಷ ಮೀರಿರಬಾರದು
ಇದನ್ನು ಓದಿ : ಮಹಿಳೆಯರು ಉಚಿತವಾಗಿ 25000 ಹಣ ಪಡೆಯಲು ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ ಮಾಡಲಾಗಿದೆ!
ಆನ್ಲೈನ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅಭ್ಯರ್ಥಿಯು ಮೇಲೆ ತಿಳಿಸಿದ ಎಲ್ಲಾ ದಾಖಲಾತಿಗಳು ಹಾಗೂ ಅರ್ಹತಾ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಿದ ಬಳಿಕ ಆನ್ಲೈನ್ ಮೂಲಕವೇ ಅರ್ಜಿ ನೊಂದಣಿ ಮಾಡಬಹುದು ಇದೀಗ ಈ ಯೋಜನೆಗೆ ಆನ್ಲೈನ್ ಮೂಲಕವೇ ಅರ್ಜಿ ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು ನೀವು ನಿಮ್ಮ ಹತ್ತಿರದ ಯಾವುದೇ ಬೆಂಗಳೂರು ಒನ್ ಅಥವಾ ಗ್ರಾಮವನ್ ಕೇಂದ್ರದಲ್ಲಿ ಅಗತ್ಯ ದಾಖಲಾತಿಗಳನ್ನು ಕೊಂಡಯುವ ಮೂಲಕ ಅರ್ಜಿನೊಂದಣಿ ಮಾಡಿಕೊಳ್ಳಬಹುದು.
ದಯವಿಟ್ಟು ಗಮನಿಸಿ; ಈ ಯೋಜನೆಗೆ ನೀವು ಆನ್ಲೈನ್ ನ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ನೀವು ಅರ್ಹರಾಗಿದ್ದಲ್ಲಿ ಮಾತ್ರವಷ್ಟೇ ಸರ್ಕಾರ ನಿಮಗೆ ಈ ಯೋಜನೆಯ ಅಡಿಯಲ್ಲಿ ಹಣವನ್ನು ವರ್ಗಾವಣೆ ಮಾಡುತ್ತದೆ ಒಂದು ವೇಳೆ ನೀವು ಈ ಯೋಜನೆಗೆ ಅರ್ಹರಾಗಿಲ್ಲದಿದ್ದಲ್ಲಿ ನಿಮ್ಮ ಅರ್ಜಿಯನ್ನು ಸರಕಾರ ಯಾವುದೇ ಸಂದರ್ಭದಲ್ಲಿ ವಜಾ ಗೊಳಿಸಬಹುದು.
ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!