ಎಲ್ಲರಿಗೂ ನಮಸ್ಕಾರ…
ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವಂತಹ ರಿಯಾಲಿಟಿ ಶೋ ಮತ್ತು ಅತಿ ಹೆಚ್ಚು ದಿನಗಳು ನಡೆಯುವಂತಹ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಎಂದೇ ಹೇಳಬಹುದು, ಈಗಗಳೇ ಸತತ ಒಂಬತ್ತು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್ ಬಾಸ್ ರಿಯಾಲಿಟಿ ಶೋ ಇದೀಗ 10ನೇ ಸೀಸನ್ಗೆ ಕಾಲು ಇಡಲಿದ್ದು ದಿನಾಂಕ ಕೂಡ ನಿಗದಿಯಾಗಿದೆ, ಈಗಾಗಲೇ ಬಿಗ್ ಬಾಸ್ ನ ವೀಕ್ಷಕರು ಕುತೂಹಲದಿಂದ ಬಿಗ್ ಬಾಸ್ ಸೀಸನ್ ಹತ್ತರ ಆರಂಭದ ದಿನಾಂಕ ಮತ್ತು ಬರಲಿರುವ ಸ್ಪರ್ಧಿಗಳ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದು ಇದೀಗ ಬಿಗ್ ಬಾಸ್ ತಂಡದಿಂದ ಒಂದು ಹೊಸ ಅಪ್ಡೇಟ್ ಬಂದಿದೆ.
ಬಿಗ್ ಬಾಸ್ ಸೀಸನ್ 10ರ ಆರಂಭಕ್ಕೆ ಡೇಟ್ ಫಿಕ್ಸ್.!
ಬಿಗ್ ಬಾಸ್ ರಿಯಾಲಿಟಿ ಶೋ ಸದ್ಯಕ್ಕೆ 9 ಸೀಸನ್ ಗಳನ್ನು ಕಂಪ್ಲೀಟ್ ಮಾಡಿದ್ದು ಅದರಲ್ಲೂ ಒಂದು ಓಟಿಪಿ ಸೀಸನ್ ಕಂಪ್ಲೀಟ್ ಮಾಡಿದ್ದು ಇದೀಗ ಹತ್ತನೇ ಸೀಸನ್ಗೆ ಕಾಲಿಡಲಿದೆ ಸದ್ಯ ಈಗಾಗಲೇ ಬಿಗ್ ಬಾಸ್ ಗೆ ಸಂಬಂಧಪಟ್ಟ ಹಾಗೆ ಎರಡು ಪ್ರೊಮೋಗಳನ್ನು ಬಿಡುಗಡೆ ಮಾಡಿದ್ದು ಮೊದಲನೇ ಪ್ರೋಮೊದಲ್ಲಿ ಯಾವುದೇ ರೀತಿಯ ಬಿಗ್ ಬಾಸ್ ಮನೆಗೆ ಸಂಬಂಧಪಟ್ಟ ಹಾಗೆ ವಿಷಯ ಇರುವುದಿಲ್ಲ ನಂತರ ಕೆಲವು ದಿನಗಳ ಬಳಿಕ ಬಿಡುಗಡೆ ಮಾಡಿದ ಎರಡನೇ ಪ್ರಮೋದಲ್ಲಿ ಕಿಚ್ಚ ಸುದೀಪ್ ಅವರ ಬಗ್ಗೆ ಒಂದು ಸಣ್ಣ ಪರಿಚಯ ನೀಡಿದ್ದು ಬಿಗ್ ಬಾಸ್ 100 ದಿನಗಳು ನಡೆಯುವ ಹಬ್ಬ ಎಂದು ಪ್ರಮೋದಲ್ಲಿ ಸೀಸನ್ 10 ರ ಮಾಡಲಾಗಿದೆ. ಇದರಲ್ಲಿಯೂ ಬಿಗ್ ಬಾಸ್ ಮನೆಮದ್ದು ಬಿಗ್ ಬಾಸ್ ನ ಸ್ಪರ್ಧಿಗಳ ಬಗ್ಗೆ ಯಾವುದೇ ಪರಿಚಯ ನೀಡದ ಬಿಗ್ ಬಾಸ್ ತಂಡ ಇದೀಗ ಕೆಲವೇ ದಿನಗಳಲ್ಲಿ ಮೂರನೇ ಪ್ರೋಮೋ ಬಿಡುಗಡೆ ಮಾಡಲಿದ್ದು ಇದೀಗ ಈ ಮೊದಲೇ ಆರಂಭಕ್ಕೆ ಡೇಟ್ ಫಿಕ್ಸ್ ಆಗಿದೆ.
ಹೌದು ಇದೆ ಅಕ್ಟೋಬರ್ 8 ನೇ ದಿನಾಂಕದಿಂದ ಬಿಗ್ ಬಾಸ್ ಸೀಸನ್ 10 ಆರಂಭವಾಗಲಿದ್ದು ಈ ಬಾರಿ ಮನೆಗೆ ಎಲ್ಲಾ ಸ್ಪರ್ಧಿಗಳು ಸಹ ಹೊಸ ಸ್ಪರ್ಧಿಗಳೇ ಬರುತ್ತಿದ್ದು ಯಾವ ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ ಹತ್ತಕ್ಕೆ ಬರಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.
100 ದಿನಗಳ ಹಬ್ಬದ ಆರಂಭಕ್ಕೆ ಶುರುವಾಯಿತು ಕ್ಷಣಗಣನೆ,
ಬಿಗ್ ಬಾಸ್ ಸೀಸನ್ ಹತ್ತರ ಆರಂಭಕ್ಕೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು ಅಕ್ಟೋಬರ್ 8 ನೇ ದಿನಾಂಕದಿಂದ ಸೀಸನ್ 10 ಆರಂಭವಾಗಲಿದೆ ಇನ್ನು ಸ್ಪರ್ಧಿಗಳ ವಿಚಾರಕ್ಕೆ ಬಂದರೆ ಬಿಗ್ ಬಾಸ್ ತಂಡದಿಂದ ಈವರೆಗೂ ಯಾವುದೇ ಸ್ಪರ್ಧಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವುದಿಲ್ಲ ಆದರೆ ಕಳೆದ ವಾರ ನಡೆದ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ ನಲ್ಲಿ ನಿರೂಪಕಿ ಅನುಪಮಾ ಅಧಿಕೃತ ಪ್ರಕಟಣೆಯ ಪ್ರಕಾರ ಹೆಸರಾಂತ ಸಿನಿಮದಲ್ಲಿ ಮುಖ್ಯ ಪಾತ್ರಧಾರಿ ಆಗಿರುವ ಚಾರ್ಲಿ 777 ಬಿಗ್ ಬಾಸ್ ಮನೆಯ ಮೊದಲ ಸ್ಪರ್ಧಿಯಾಗಿ ಬರಲಿದೆ.
ಇನ್ನು ಬಿಗ್ ಬಾಸ್ ವೀಕ್ಷಕರಿಗೆ ಮೂಡಿರುವ ಪ್ರಶ್ನೆ ಏನೆಂದರೆ, ಚಾರ್ಲಿ ಬಿಗ್ ಬಾಸ್ ಮನೆಗೆ ಬರುತಿದೆ ಸರಿ ಆದರೆ ನೂರು ದಿನಗಳ ಶೋನಲ್ಲೂ ಸಹ ಚಾರ್ಲಿ ಬಿಗ್ ಬಾಸ್ ಮನೆಯಲ್ಲಿ ಇರಲಿದೆ ಎಂಬ ಪ್ರಶ್ನೆ ಮೂಡಿದೆ ಈಗಾಗಲೇ ತಿಳಿಸಿದಾಗೆ ಚಾರ್ಲಿ ಕೇವಲ ಬಿಗ್ ಬಾಸ್ ಸೀಸನ್ ಹತ್ತರ ಟಿ ಆರ್ ಪಿ ಗಾಗಿ ಮಾತ್ರ ಚಾರ್ಲಿಯನ್ನು ಕೇವಲ ಒಂದು ವಾರದ ವರೆಗೆ ಮಾತ್ರ ಬಿಗ್ ಬಾಸ್ ಮನೆಯಲ್ಲಿ ಇರಿಸಲಾಗುತ್ತದೆ ನಂತರ ಬಿಗ್ ಬಾಸ್ ಮನೆಯಿಂದ ಚಾರ್ಲಿಗೆ ಬೀಳ್ಕೊಡುಗೆ ನೀಡಲಾಗುತ್ತದೆ.
ಬಿಗ್ ಬಾಸ್ ಮನೆಗೆ ಈ ಬಾರಿ ಯಾರೆಲ್ಲಾ ಬರಲಿದ್ದಾರೆ.?
ಈ ಮೇಲೆ ಈಗಾಗಲೇ ತಿಳಿಸಿದ ಹಾಗೆ ಬಿಗ್ ಬಾಸ್ ಸೀಸನ್ ಹತ್ತಕ್ಕೆ ಸದ್ಯಕ್ಕೆ ಬಿಗ್ ಬಾಸ್ ತಂಡದಿಂದ ಕೇವಲ ಒಬ್ಬ ಸ್ಪರ್ಧೆಯನ್ನು ಮಾತ್ರ ಅಧಿಕೃತವಾಗಿ ಹೆಸರನ್ನು ತಿಳಿಸಿದ್ದು ಇನ್ನು ಉಳಿದ ಸ್ಪರ್ಧಿಗಳು ಎಲ್ಲಾ ಹೊಸ ಸ್ಪರ್ಧಿಗಳೇ ಆಗಿದ್ದು ಯಾವ ಸ್ಪರ್ಧೆಗಳು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂದು ಕಾದು ನೋಡಬೇಕಾಗಿದೆ ಈಗಾಗಲೇ ಬಹಳಷ್ಟು ಹೆಸರುಗಳು ಸೋಶಿಯಲ್ ಮೀಡಿಯಾ ಗಳಲ್ಲಿ ಕೇಳಿ ಬರುತ್ತಿದ್ದು ಯಾವ ಸ್ಪರ್ಧಿಗಳು ಈ ಬಾರಿ ಬರಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ ಆದರೆ ಅಕ್ಟೋಬರ್ 8ನೇ ದಿನಾಂಕ ಬಿಗ್ ಬಾಸ್ ಸೀಸನ್ 10 ಆರಂಭವಾಗಲಿದ್ದು ಇದರ ಒಳಗಾಗಿ ಬಿಗ್ ಬಾಸ್ ಕನ್ನಡದಿಂದ ಮತ್ತೊಂದು ಪ್ರೊಮೋ ಬಿಡುಗಡೆ ಮಾಡಲಿದ್ದು ಈ ಪ್ರೊಮೋದಲ್ಲಿ ಹೊಸ ಸ್ಪರ್ಧಿಗಳ ಸಣ್ಣ ಪರಿಚಯ ಮಾಡಿಕೊಡುವ ಸಾಧ್ಯತೆ ಇದೆ ಅಲ್ಲಿಯವರೆಗೂ ಎಲ್ಲರೂ ಸಹ ಬಿಗ್ ಬಾಸ್ ಸ್ಪರ್ಧಿಗಳ ಪರಿಚಯಕ್ಕಾಗಿ ಕಾಯಬೇಕಾಗಿದೆ ನಿಮ್ಮ ಪ್ರಕಾರ ಯಾವ ಸ್ಪರ್ಧಿ ಈ ಬಾರಿ ಬಿಗ್ ಬಾಸ್ ಸೀಸನ್ ಹತ್ತಕ್ಕೆ ಬರಬಹುದು ಎಂಬುದನ್ನು ತಿಳಿಸಿ ಧನ್ಯವಾದಗಳು…