ಎಲ್ಲರಿಗೂ ನಮಸ್ಕಾರ…
ಬಿಪಿಎಲ್ ರೇಷನ್ ಕಾರ್ಡ್ ತಿದ್ದುಪಡಿಗೆ ಇದೀಗ ರಾಜ್ಯ ಸರ್ಕಾರದಿಂದ ಮತ್ತೊಂದು ಕಾಲಾವಕಾಶವನ್ನು ನೀಡಲಾಗಿದೆ, ಹೌದು ಸದ್ಯ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಗೆ ಸರ್ಕಾರದಿಂದ ಚಾಲನೆ ನೀಡಿದ್ದು ಈ ಬಾರಿ ಸರ್ಕಾರವು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರ ಮೇಲೆ ಕೆಲವು ಕ್ರಮಗಳನ್ನು ಕೈಗೊಂಡಿದ್ದು ಸರ್ಕಾರ ಈಗಾಗಲೇ ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿರುವ ಒಂದು ಕೋಟಿ 30 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳಲ್ಲಿ ಈಗಾಗಲೇ ಸುಮಾರು 8 ರಿಂದ 10 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿದ್ದು ಆ ರೇಷನ್ ಕಾರ್ಡ್ ಗಳು ಅಕ್ರಮವಾಗಿ ಪಡೆದುಕೊಂಡ ರೇಷನ್ ಕಾರ್ಡ್ ಗಳು ಎಂದು ತೀರ್ಮಾನಿಸಿದೆ ಆದರೆ ಆ ರೇಷನ್ ಕಾರ್ಡ್ ಗಳಿಗೆ ನಿಕ್ಕರ ದಾಖಲೆಗಳನ್ನು ನೀಡಿ ಮರು ಸೇರ್ಪಡೆ ಮಾಡಿಸಿಕೊಳ್ಳಲು ಕೂಡ ಸರ್ಕಾರದಿಂದ ಅವಕಾಶ ನೀಡಲಾಗಿದೆ ಆದ್ದರಿಂದ ಇದೀಗ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೊಂದು ಅವಕಾಶ ನೀಡಿದ್ದು ಈ ಬಾರಿ ಏನೆಲ್ಲ ತಿದ್ದುಪಡಿಗಳನ್ನು ರೇಷನ್ ಕಾರ್ಡ್ ನಲ್ಲಿ ಮಾಡಿಸಿಕೊಳ್ಳಬಹುದು ಅಥವಾ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದಾ ಎಂಬ ಪ್ರಶ್ನೆಗೆ ಉತ್ತರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಲೇಖನವನ್ನು ಪೂರ್ತಿಯಾಗಿ ಓದಿ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ..
ರೇಷನ್ ಕಾರ್ಡ್ ತಿದ್ದುಪಡಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಅವಕಾಶ.!
ಕರ್ನಾಟಕ ರಾಜ್ಯ ಸರ್ಕಾರದಿಂದ ಈಗಾಗಲೇ ತಿಳಿಸಿದ ಹಾಗೆ ರಾಜ್ಯದಲ್ಲಿ ಕೆಲವು ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿತ್ತು. ಕಾರಣ ರಾಜ್ಯದಲ್ಲಿ ಕೆಲವು ಬಿಪಿಎಲ್ ಕಾರ್ಡ್ಗಳನ್ನು ಅಕ್ರಮವಾಗಿ ಜನರು ಪಡೆದುಕೊಂಡಿದ್ದು ಆ ರೇಷನ್ ಕಾರ್ಡ್ಗಳಿಂದ ಬಡವರ ಯೋಜನೆಗಳನ್ನು ಆ ಕ್ರಮ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗಳು ಪಡೆದುಕೊಳ್ಳುತ್ತಿದ್ದರಿಂದ ಅಂತಹ ಬಿಪಿಎಲ್ ಕಾರ್ಡ್ಗಳನ್ನು ಸರ್ಕಾರದಿಂದ ರದ್ದು ಮಾಡಿದೆ ಸುಮಾರು 8 ರಿಂದ 10 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ಈ ಬಾರಿ ರದ್ದು ಮಾಡಿದ್ದು ಆ ಬಿಪಿಎಲ್ ಕಾರ್ಡ್ಗಳನ್ನು ಒಂದು ವೇಳೆ ಮರು ಸೇರ್ಪಡೆ ಮಾಡಿಸಿಕೊಳ್ಳಬೇಕು ಎಂದರೆ ನಿಖರ ಮಾಹಿತಿಗಳನ್ನು ನೀಡಿ ಮರು ಸೇರ್ಪಡೆ ಮಾಡಿಕೊಳ್ಳಬಹುದು ಎಂದು ಸರ್ಕಾರದಿಂದ ತಿಳಿಸಲಾಗಿದೆ ಆ ಕಾರಣದಿಂದ ಇದೀಗ ಮತ್ತೆ ಇದರ ಜೊತೆಗೆ ಕೆಲವು ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಸರ್ಕಾರದಿಂದ ಮತ್ತೊಂದು ಅವಕಾಶವನ್ನ ನೀಡಲಾಗಿದೆ.
ಸದ್ಯ ಈಗಾಗಲೇ ರಾಜ್ಯ ಸರ್ಕಾರವು ಅಧಿಕಾರಕ್ಕೆ ಬಂದ ಬೆನ್ನೆಲೆ ಹಳೆಯ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಮತ್ತು ಹೊಸ ಬಿಪಿಎಲ್ ಮತ್ತು ಎಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಎರಡು ಬಾರಿ ಅವಕಾಶವನ್ನು ಕಲ್ಪಿಸಿತ್ತು ಆದರೆ ಎರಡು ಬಾರಿ ಕೂಡ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅರ್ಜಿ ಸಲ್ಲಿಕೆ ಸಮಯ ಆದ ಕಾರಣ ಕೆಲವು ತಾಂತ್ರಿಕ ದೋಷಗಳು ಅರ್ಜಿ ಸಲ್ಲಿಕೆಯಲ್ಲಿ ಉಂಟಾದ ಕಾರಣ ಎಂದರೆ ಸರ್ವರ್ ಸಮಸ್ಯೆ ಉಂಟಾದ ಕಾರಣ ಕೆಲವು ಬಿಪಿಎಲ್ ತಿದ್ದುಪಡಿ ಎಲ್ಲಿ ಸಮಸ್ಯೆ ಉಂಟಾಗಿದೆ ಆದ್ದರಿಂದ ಸರ್ಕಾರ ಇವುಗಳನ್ನೆಲ್ಲ ಯೋಚಿಸಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳುವವರಿಗೆ ಮತ್ತೊಂದು ಕಾಲಾವಕಾಶವನ್ನು ನೀಡಿದೆ
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ಈ ಕೊನೆಯ ಅವಕಾಶದಲ್ಲಿ ರೇಷನ್ ಕಾರ್ಡ್ ನ ಏನೆಲ್ಲಾ ತಿದ್ದುಪಡಿ ಮಾಡಿಸಿಕೊಳ್ಳಬಹುದು.?
ಸದ್ಯ ಈ ಬಗ್ಗೆ ಈಗಾಗಲೇ ಕೆಲವು ದಿನಾಂಕಗಳು ಕೇಳಿ ಬಂದಿದವು ಅಂದರೆ ಇದೆ ಆಗಸ್ಟ್ ನ ಒಂದನೇ ದಿನಾಂಕದಿಂದ ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್ ಕಾರ್ಡಿಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಮತ್ತು ಹಳೆಯ ಎಪಿಎಲ್ ಕಾರ್ಡ್ ಮತ್ತು ಬಿಪಿಎಲ್ ಕಾರ್ಡಿನ ತಿದ್ದುಪಡಿ ಮಾಡಿಸುವವರಿಗೆ ಅವಕಾಶ ನೀಡಲಾಗುತ್ತದೆ ಎಂದು ಇಲಾಖೆಯಿಂದ ತಿಳಿಸಲಾಗಿತ್ತು ಆದರೆ ಸರ್ಕಾರ ನಾಲ್ಕು ದಿನಗಳ ನಂತರ ಅಂದರೆ ಇದೇ ಅಕ್ಟೋಬರ್ ಐದನೇ ದಿನಾಂಕದಿಂದ ಅಕ್ಟೋಬರ್ 14ನೇ ದಿನಾಂಕದವರೆಗೆ ರಾಜ್ಯದ ರೇಷನ್ ಕಾರ್ಡ್ದಾರರಿಗೆ ತಿದ್ದುಪಡಿ ಮಾಡಿಸಿಕೊಳ್ಳಲು ಮತ್ತೊಂದು ಅವಕಾಶವನ್ನ ನೀಡಿದೆ.
ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನ ತಿದ್ದುಪಡಿ ಮಾಡಿಸಬೇಕು ಎಂದುಕೊಂಡಿದ್ದಾರೆ ಇದೇ ನಿಮಗೆ ಕೊನೆಯ ಅವಕಾಶ ಸದ್ಯ ಈಗಾಗಲೇ ಅಕ್ಟೋಬರ್ ಐದನೇ ದಿನಾಂಕದಿಂದ ಅಕ್ಟೋಬರ್ 14ನೇ ದಿನಾಂಕದವರೆಗೆ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರದಿಂದ ಕೊನೆಯ ಕಾಲಾವಕಾಶ ನೀಡಿದ್ದು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು.
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ರೇಷನ್ ಕಾರ್ಡ್ ನಲ್ಲಿ ಏನೇನು ತಿದ್ದುಪಡಿ ಮಾಡಿಸಬಹುದು.?
ಈಗಾಗಲೇ ತಿಳಿಸಿದ ಹಾಗೆ ಸರ್ಕಾರದಿಂದ ಒಂದಲ್ಲ ಎರಡು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದೆ ಆದರೆ ಸರ್ವರ್ ಸಮಸ್ಯೆಗಳಿಂದ ರಾಜ್ಯದಲ್ಲಿ ಕೆಲವರು ಅರ್ಜಿ ಸಲ್ಲಿಸಲು ಸಾಧ್ಯವಾಗದ ಕರಣ ಸರ್ಕಾರ ಇದೀಗ 23ನೇ ಸಾಲಿನ ಕೊನೆಯ ಅವಕಾಶವನ್ನು ನೀಡಿದ್ದು ಅಕ್ಟೋಬರ್ ಐದನೇ ದಿನಾಂಕದಿಂದ ಅಕ್ಟೋಬರ್ 14ರ ಒಳಗಾಗಿ.
- ಫಲಾನುಭವಿ ಹೆಸರು ಬದಲಾವಣೆಯನ್ನು ಮಾಡಿಸಿಕೊಳ್ಳಬಹುದು.
- ನಿಮ್ಮ ರೇಷನ್ ಕಾರ್ಡ್ ನ ಪಡಿತರ ಕೇಂದ್ರ ಬದಲಾವಣೆ ಮಾಡಿಸಿಕೊಳ್ಳಬಹುದು
- ರೇಷನ್ ಕಾರ್ಡ್ ಸದಸ್ಯರ ಹೆಸರು ಡಿಲೀಟ್ ಅಥವಾ ಸೇರ್ಪಡೆ ಮಾಡಿಸಿಕೊಳ್ಳಬಹುದು
- ರೇಷನ್ ಕಾರ್ಡ್ ಮುಖ್ಯಸ್ಥರ ಹೆಸರು ಬದಲಾವಣೆ ಮಾಡಿಸಿಕೊಳ್ಳಬಹುದು
- ಮಹಿಳೆಯನ್ನು ಮನೆಯ ಯಜಮಾನ ಎಂದು ಇಲ್ಲಿ ಹೆಸರು ಬದಲಾವಣೆ ಮಾಡಿಸಿಕೊಳ್ಳಬಹುದು ಹಾಗೂ ಈಗಾಗಲೇ ಮನೆಯ ಸದಸ್ಯರಲ್ಲಿ ಬೇರೆ ಮಹಿಳೆಯ ಹೆಸರಿದ್ದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯ ಹೆಸರನ್ನು ಈಗ ಬದಲಾವಣೆ ಮಾಡಿಸಿಕೊಳ್ಳಬಹುದು.
ಸರ್ಕಾರದಿಂದ ಈ ಅವಕಾಶವನ್ನು ಗ್ಯಾರೆಂಟಿ ಯೋಜನೆಗೆ ಸಂಬಂಧಪಟ್ಟ ಹಾಗೆ ತಿದ್ದುಪಡಿಗೆ ಮತ್ತೊಂದು ಅವಕಾಶವನ್ನು ನೀಡಿದೆ ಎಂದು ಹೇಳಬಹುದು ಏಕೆಂದರೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರಿಗೆ ಹಣ ಜಮಾ ಆಗದೆ ಇರುವುದು ಸಮಸ್ಯೆ ಉಂಟುಮಾಡಿದೆ ಹಾಗೂ ಬಿಪಿಎಲ್ ಕಾರ್ಡ್ ಮತ್ತು ಅರ್ಜಿಯಲ್ಲಿ ಕೆಲವು ಸಮಸ್ಯೆಗಳು ಇರುವುದರಿಂದ ಆ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಈ ರೇಷನ್ ಕಾರ್ಡ್ ತಿದ್ದುಪಡಿಯ ಅವಕಾಶವನ್ನು ನೀಡಲಾಗಿದೆ ಈ ಮೇಲ್ಕಂಡ ಸಮಸ್ಯೆಗಳು ನಿಮ್ಮ ರೇಷನ್ ಕಾರ್ಡ್ ನಲ್ಲಿ ಇದ್ದರೆ ಅಕ್ಟೋಬರ್ 14ನೇ ದಿನಾಂಕದ ಒಳಗಾಗಿ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಿ ಧನ್ಯವಾದಗಳು….
ಇದೆ ರೀತಿಯ ಹೊಸ ಮಾಹಿತಿ ಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ. ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ