ಎಲ್ಲರಿಗೂ ನಮಸ್ಕಾರ
ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆಲ್ಲ ಬಂದಿಲ್ಲ, ಅವರಿಗೆಲ್ಲ ಒಂದು ಸಿಹಿ ಸುದ್ದಿ. ಗ್ರಹಲಕ್ಷ್ಮಿ ಯೋಜನೆಗೆ ಈಗಾಗಲೇ 1 ಕೋಟಿ 15 ಲಕ್ಷ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳಲ್ಲಿ ಅಗಸ್ಟ್ 30 ರಿಂದ ಇಲ್ಲಿಯವರೆಗೆ 65 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ವರ್ಗಾವಣೆಯಾಗಿದೆ. ಇನ್ನು 48 ಲಕ್ಷ ಮಹಿಳೆಯರಿಗೆ ಹಣ ವರ್ಗಾವಣೆ ಆಗಿಲ್ಲ. ಗ್ರಹಲಕ್ಷ್ಮಿ ಯೋಜನೆಯ ಹಣ ಬರೆದೆ ಇರುವ ಮಹಿಳೆಯರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್ . ನಿಮಗೆಲ್ಲಾ ತಿಳಿದಿರುವ ಹಾಗೆ ರಾಜ್ಯ ಸರ್ಕಾರ ನೀಡಿರುವ 5 ಗ್ಯಾರಂಟಿಗಳಲ್ಲಿ ಈಗಾಗಲೇ 4 ಗ್ಯಾರಂಟಿಗಳನ್ನು ಪೂರೈಸಿದ್ದು, ಇದರಲ್ಲಿ 4 ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆ ಯಾಗಿದೆ. ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಚಾಲನೆ ನೀಡಿದ್ದು, ಈ ಯೋಜನೆಯ ಅಡಿಯಲ್ಲಿ 2000 ಹಣವನ್ನು ಗ್ರಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ 1 ಕೋಟಿ 15 ಲಕ್ಷ ಮಹಿಳೆಯರಲ್ಲಿ ಈಗಾಗಲೇ 60ರಷ್ಟು ಮಹಿಳೆಯರಿಗೆ ಹಣ ಜಮಾ ಆಗಿದ್ದು ಇನ್ನುಳಿದ 40ರಷ್ಟು ಮಹಿಳೆಯರಿಗೆ ಹಣ ಜಮಾ ಮಾಡುವ ಬಗ್ಗೆ ಸರ್ಕಾರ ಇದೀಗ ಒಂದು ಹೊಸ ಆದೇಶವನ್ನು ಹೊರಡಿಸಿದೆ. ಇನ್ನುಳಿದ 40ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಬರುವ 2000 ಹಣವನ್ನು ಅವರ ಖಾತೆಗೆ ಜಮಾ ಮಾಡಲು ಈಗಾಗಲೇ ಸರ್ಕಾರವು ಕೆಲವು ಕ್ರಮವನ್ನು ಕೈಗೊಂಡಿದೆ. ಈ ಚಿಕ್ಕ ಕೆಲಸವನ್ನು ನೀವು ಮಾಡುವ ಮೂಲಕ ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣವನ್ನು ಅಂದರೆ 4000 ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ .
ಗ್ರಹಲಕ್ಷ್ಮಿ ಯೋಜನೆಯ ಹಣ ಇನ್ನು ನಿಮ್ಮ ಖಾತೆಗೆ ಬಂದಿಲ್ಲವೆಂದರೆ ಏನು ಮಾಡಬೇಕು?
ಈಗಾಗಲೇ ರಾಜ್ಯ ಸರ್ಕಾರವು ನುಡಿದಂತೆ ನಡೆದಿದ್ದೇವೆ. ಎಂದು ಹೇಳುತ್ತಾ ಗೃಹಲಕ್ಷ್ಮಿಯರಿಗೆ ಆರ್ಥಿಕ ಬೆಂಬಲವನ್ನು ನೀಡಲು, ರಾಜ್ಯ ಸರ್ಕಾರವು ಪ್ರತಿ ತಿಂಗಳು ಮನೆಯ ಗ್ರಹಲಕ್ಷ್ಮಿಯರಿಗೆ 2000 ಹಣವನ್ನು ನೀಡುವುದಾಗಿ ತಿಳಿಸಿತ್ತು. ಅದರಂತೆಯೇ ರಾಜ್ಯ ಸರ್ಕಾರವು ಈಗಾಗಲೇ 1 ಕೋಟಿ 15 ಲಕ್ಷ ಅರ್ಜಿ ಸಲ್ಲಿಸಿರುವ ಮಹಿಳೆಯರಲ್ಲಿ ಈಗಾಗಲೇ 65 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣವನ್ನು ಖಾತೆಗೆ ಜಮಾ ಮಾಡಿದೆ. ಆದರೆ ಇನ್ನುಳಿದ 48 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ. ಅಂತಹ ಗೃಹಲಕ್ಷ್ಮಿಯರು ಸಹ ಈ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಲು ಹೊಸ ಲಿಸ್ಟ್ ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಈ ಫಲಾನುಭವಿಗಳ ಲಿಸ್ಟ್ ನಲ್ಲಿ ಇರುವಂತಹ ಮಹಿಳೆಯರಿಗೂ ಸಹ 2000 ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು, ಇದರಲ್ಲಿ ಕೆಲವರಿಗೆ ಈ ಹಣ ತಲುಪಿಲ್ಲ ಇಂತಹ ಮಹಿಳೆಯರಿಗೆ ಒಂದು ಹೊಸ ಆದೇಶವನ್ನು ಹೊರಡಿಸಿದ್ದು, ಇದನ್ನು ಮಾಡುವ ಮುಖಾಂತರ ಬ್ಯಾಂಕ್ ಖಾತೆಗೆ ಕಳೆದ ಎರಡು ತಿಂಗಳ 4000 ಹಣವನ್ನು ನೇರವಾಗಿ ಪಡೆಯಬಹುದಾಗಿದೆ .
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣವನ್ನು ನೆರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹೇಗೆ ಜಮಾ ಮಾಡಿಕೊಳ್ಳಬೇಕು?
ನಿಮಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ, ನಿಮ್ಮ ಖಾತೆಗೆ ಬಂದಿಲ್ಲವೆಂದರೆ ಚಿಂತಿಸುವ ಅವಶ್ಯಕತೆ ಇಲ್ಲ. ಒಂದು ವೇಳೆ ಈಗಾಗಲೇ ಜಯಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದ್ದರೆ, ಪ್ರತಿ ತಿಂಗಳು ಸಹ ಅದೇ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಆದರೆ ನೀವು ಅರ್ಜಿಯನ್ನು ಸಲ್ಲಿಸಿದ್ದು, ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸಹ ಇದ್ದು, ಇನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ ಎಂದರೆ ನೀವು ಈ ಚಿಕ್ಕ ಕೆಲಸವನ್ನು ಮಾಡುವ ಮೂಲಕ ಒಂದೇ ಬಾರಿ ಎರಡು ತಿಂಗಳ ಹಣವನ್ನು ಪಡೆಯಬಹುದಾಗಿದೆ. ಈಗಾಗಲೇ ಈ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮದಲ್ಲಿ ತಿಳಿಸಿರುವ ಹಾಗೆ ಕೆಲವು ಸಣ್ಣ ಕೆಲಸಗಳನ್ನು ನೀವು ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಈ ಕೆಲಸವನ್ನು ನೀವು ಶೀಘ್ರದಲ್ಲಿ ಮಾಡಿ ಮುಗಿಸಿದರೆ ನಿಮಗೆ ಸೆಪ್ಟೆಂಬರ್ ಕೊನೆಯಲ್ಲಿ ಆಗಸ್ಟ್ ತಿಂಗಳ ಮತ್ತು ಸೆಪ್ಟೆಂಬರ್ ತಿಂಗಳ ಹಣ ಒಟ್ಟಾಗಿ 4000 ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ನಿಮ್ಮ ರೇಷನ್ ಕಾರ್ಡ್ ನಲ್ಲಿ ಅರ್ಜಿ ಸಲ್ಲಿಸಿರುವ ಮನೆಯ ಯಜಮಾನಿಯಾ ಹೆಸರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎಂದು ತಿಳಿದುಕೊಳ್ಳಿ. ಒಂದು ವೇಳೆ ಇದರ ಬಗ್ಗೆ ನಿಮಗೆ ತಿಳಿದಿಲ್ಲವೆಂದರೆ 8147500500 ಈ ನಂಬರ್ಗೆ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಮೆಸೇಜ್ ಮಾಡಿ, ನಂತರ ಕೆಲವೇ ನಿಮಿಷಗಳಲ್ಲಿ ನಿಮಗೆ ಅದೇ ನಂಬರ್ ನಿಂದ ಮೆಸೇಜ್ ಬರುತ್ತದೆ. ಇದರಲ್ಲಿ ಅಭಿನಂದನೆಗಳು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ ಅನ್ನು ಅನುಮೋದಿಸಲಾಗಿದೆ. ಮತ್ತು2000 ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮೆಸೇಜ್ ಬರುತ್ತದೆ. ಈ ರೀತಿಯಾಗಿ ಮೆಸೇಜ್ ಬಂದರೆ ನೀವು ಫಲಾನುಭವಿಗಳ ಲಿಸ್ಟ್ ನಲ್ಲಿ ಇದ್ದು ,ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ ಎಂದು ಅರ್ಥ.
ಒಂದು ವೇಳೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದು ಸಹ ನಿಮ್ಮ ಖಾತೆಗೆ ಹಣ ಬಂದಿಲ್ಲವೆಂದರೆ ನೀವು ಈ ಕೂಡಲೇ ಈ ಕೆಲಸವನ್ನು ಮಾಡುವ ಮೂಲಕ ಹಣವನ್ನು ಪಡೆಯಬಹುದಾಗಿದೆ.
ನಿಮಗೆಲ್ಲಾ ತಿಳಿದಿರುವ ಹಾಗೆ ಸರ್ಕಾರದಿಂದ ಯಾವುದೇ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಪಡೆಯಬೇಕು ಎಂದರೆ ಡಿ ಬಿ ಟಿ ಲಿಂಕ್ ಆಗಿರುವುದು ಕಡ್ಡಾಯವಾಗಿರುತ್ತದೆ. ಏಕೆಂದರೆ ಸರ್ಕಾರದ ಎಲ್ಲಾ ಹಣವು ಆಧಾರ್ ಕಾರ್ಡ್ ಮೂಲಕವೇ ಹಣ ಜಮಾ ಮಾಡುತ್ತಿದ್ದು ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಆಗಿದ್ದರೆ ಮಾತ್ರ ಯೋಜನೆಯ ಹಣ ನಿಮಗೆ ಸಿಗುತ್ತದೆ. ಆದ್ದರಿಂದ ಡಿ ಬಿ ಟಿ ಲಿಂಕ್ ಆಗಿದೆಯೋ? ಇಲ್ಲವೋ? ಎಂದು ಚೆಕ್ ಮಾಡಿಕೊಳ್ಳಿ. ಡಿ ಬಿ ಟಿ ಲಿಂಕ್ ಆಗಿದ್ದು ಸಹ, ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದರೆ ಇನ್ನೊಂದು ಕೆಲಸವನ್ನು ನೀವು ಮಾಡಬೇಕಾಗುತ್ತದೆ.
ನಿಮ್ಮ ಬಿಪಿಎಲ್ ಕಾರ್ಡಿಗೆ ಮನೆಯಲ್ಲಾ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ಚೆಕ್ ಮಾಡಿ. ಮತ್ತು ನಿಮ್ಮ ಬಿಪಿಎಲ್ ಕಾರ್ಡ್ ನಲ್ಲಿ ಮನೆಯ ಯಜಮಾನ ಸ್ಥಳದಲ್ಲಿ ಮನೆಯ ಗ್ರಹಿಣಿಯ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿ. ಒಂದು ವೇಳೆ ಮನೆಯ ಯಜಮಾನನ ಸ್ಥಳದಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಈ ಹಣ ಪಡೆಯಲಾಗುವುದಿಲ್ಲ. ಇದನ್ನು ಸರಿಪಡಿಸಿಕೊಳ್ಳಲು ಸಂಬಂಧಪಟ್ಟ ಇಲಾಖೆಗೆ ಭೇಟಿ ನೀಡಿ ಮನೆಯ ಯಜಮಾನನ ಸ್ಥಳದಲ್ಲಿ ಮನೆಯ ಗ್ರಹಣಿಯ ಹೆಸರನ್ನು ಬದಲಾಯಿಸಿಕೊಳ್ಳಬೇಕು. ಆಗ ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ಪಡೆಯಬಹುದಾಗಿದೆ. ಈ ಮೂರು ಕೆಲಸಗಳನ್ನು ನೀವು ಮಾಡಿಲ್ಲದಿದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಯಾವುದೇ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಹಾಗಾಗಿ ಈ ಕೂಡಲೇ ಈ ಮೂರು ಕೆಲಸಗಳನ್ನು ಮಾಡಿಕೊಂಡು ಯೋಜನೆ ಜಾರಿಗೊಳಿಸಿದ ದಿನಾಂಕದಿಂದ ಇಲ್ಲಿಯವರೆಗೆ ನೀವು ಎಲ್ಲಾ ಕಂತಿನ ಹಣವನ್ನು ಪಡೆಯಬಹುದಾಗಿದೆ. ಇದನ್ನು ಸರಿಪಡಿಸಿಕೊಳ್ಳಲು ನಿಗದಿತ ಸಮಯವನ್ನು ನೀಡಿದ್ದು, ಇಷ್ಟರೊಳಗಾಗಿ ನೀವು ಈ ಕೆಲಸವನ್ನು ಮಾಡಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಬಹುದಾಗಿದೆ. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. ಶುಭದಿನ…