ಹೌದು ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತವಾಗಿ 25000 ಹಣವನ್ನು ನೀಡುತ್ತಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ 50,000 ಸಾಲ ಸೇರಿದಂತೆ 25,000 ಹಣವನ್ನು ಸಂಪೂರ್ಣ ಉಚಿತವಾಗಿ ಸಬ್ಸಿಡಿಯ ಮುಖಾಂತರ ಪಡೆಯಬಹುದು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲಾತಿಗಳೇನು ಹಾಗೂ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಎಂಬ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ!
ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ Shrama Shakti Yojana Karnataka 2023
ಈಗಾಗಲೇ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ, ಗೃಹಜೋತಿ ಯೋಜನೆ ಹಾಗೂ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿಯಲ್ಲಿ ರಾಜ್ಯದ ಮಹಿಳೆಯರು ಈಗಾಗಲೇ ಹಣವನ್ನು ಪಡೆಯುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಹಾಗೂ ಆರ್ಥಿಕವಾಗಿ ಮುನ್ನುಗ್ಗಲು ರಾಜ್ಯ ಸರ್ಕಾರವು ಸಹಾಯ ಮಾಡುತ್ತಿದ್ದು ಇದೀಗ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯನ್ನು ಜಾರಿಗೆ ತಂದಿದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
Read This : 93 ಲಕ್ಷ ಗೃಹಲಕ್ಷ್ಮಿಯರಿಗೆ 2 ಮತ್ತು 3ನೇ ಹಣ ಖಾತೆಗೆ ಜಮಾ ಆಗುವುದಿಲ್ಲ. ಸರ್ಕಾರ ಮತ್ತೊಂದು ಹೊಸ ಆದೇಶ ಹೊರಡಿಸಿದೆ.
ನೀವೇನಾದರೂ ಸ್ವಂತ ಬಿಜಿನೆಸ್ ಮಾಡಲು ಹೊರಟಿದ್ದಲ್ಲಿ ಈ ಯೋಜನೆಯ ಅಡಿಯಲ್ಲಿ ನಿಮಗೆ ವಿಶೇಷವಾಗಿ 50,000 ಸಾಲವನ್ನು ನೀಡಲಾಗುತ್ತದೆ ಹಾಗೂ 25000 ಹಣವನ್ನು ಸಬ್ಸಿಡಿ ಮುಖಾಂತರ ನೀಡಲಾಗುವುದು ಉಳಿದ ರೂ.50,000 ಸಾಲವನ್ನು ನೀವು ಅತಿ ಕಡಿಮೆ ಬಡ್ಡಿ ದರದಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಬಡ್ಡಿದರವು ಕೇವಲ 4% ಇದ್ದು 50,000 ಸಾಲದಲ್ಲಿ ಕೇವಲ 25000 ಸಾಲವನ್ನು ಮಾತ್ರವಷ್ಟೇ ನೀವು ನಾಲ್ಕು ಪರ್ಸೆಂಟ್ ಬಡ್ಡಿ ಯೊಂದಿಗೆ ಮರುಪಾವತಿ ಮಾಡಬೇಕು ಉಳಿದ 25,000 ಸಾಲವನ್ನು ರಾಜ್ಯ ಸರ್ಕಾರ ನಿಮಗೆ ಸಬ್ಸಿಡಿ ಯ ಮುಖಾಂತರ ನೀಡುತ್ತದೆ.
ಯಾವೆಲ್ಲ ಬಿಜಿನೆಸ್ ಗಳಿಗೆ ಸಾಲವನ್ನು ನೀಡಲಾಗುತ್ತದೆ!
ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯಡಿಯಲ್ಲಿ ಮಹಿಳೆಯರು ಸಣ್ಣ ಪುಟ್ಟ ಬಿಸಿನೆಸ್ ಶುರು ಮಾಡಲು ಅಂದರೆ ಚಿಲ್ಲರೆ ಅಂಗಡಿ ಟೈಲರಿಂಗ್ ಹೂವಿನ ವ್ಯಾಪಾರ ಚಹಾದ ಅಂಗಡಿ, ಹಾಲಿನ ವ್ಯಾಪಾರ ಹಣ್ಣಿನ ವ್ಯಾಪಾರ ಮೀನಿನ ವ್ಯಾಪಾರ ಇನ್ನಿತರೆ ಚಿಕ್ಕ ಪುಟ್ಟ ಬಿಸಿನೆಸ್ ಗಳನ್ನು ಶುರು ಮಾಡಲು ಈ ಯೋಜನೆ ಅಡಿಯಲ್ಲಿ 50,000 ವರೆಗಿನ ಸಾಲವನ್ನು ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ!
ಶ್ರಮಶಕ್ತಿ ಮಹಿಳಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ನೀವು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವವರಾಗಿರಬೇಕು ಆಗ ಮಾತ್ರ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆಯುತ್ತೀರಿ ಹಾಗೂ ನಿಮ್ಮ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಹಾಗೂ 55 ವರ್ಷಕ್ಕಿಂತ ಒಳಗಿರಬೇಕು ಎಲ್ಲಾ ಮೂಲಗಳಿಂದ ನಿಮ್ಮ ಕುಟುಂಬದ ಆದಾಯವು ನಾಲ್ಕು ಲಕ್ಷ ಮೀರಿರಬಾರದು. ಅರ್ಜಿ ಸಲ್ಲಿಸುತ್ತಿರುವ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಕೆಲಸದಲ್ಲಿ ಇರಬಾರದು ಹಾಗೂ ಕುಟುಂಬಸ್ಥರು ಕಳೆದ ಐದು ವರ್ಷಗಳಿಂದ ಯಾವುದೇ ನಿಗಮದ ಯೋಜನೆ ಅಡಿಯಲ್ಲಿ ಫಲಾನುಭವಿ ಆಗಿರಬಾರದು ಇದೇ ಮೊದಲ ಬಾರಿ ಅರ್ಜಿ ಸಲ್ಲಿಸುತ್ತಿರುವವರಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ ಲಾಭ ಸಿಗಲಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲಾತಿಗಳು!
- ಯೋಜನಾ ವರದಿ ಅಂದರೆ ಬಿಸಿನೆಸ್ ಮಾಡುತ್ತಿರುವ ಕುರಿತು ಯಾವುದಾದರೂ ಯೋಜನಾ ವರದಿಯನ್ನು ಹೊಂದಿರಬೇಕು
- ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್ ಹೊಂದಿರಬೇಕು
- ಬ್ಯಾಂಕ್ ಪಾಸ್ ಬುಕ್ ವಿವರಗಳು
- ನಿವಾಸ ಪ್ರಮಾಣ ಪತ್ರ
- ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿಯನ್ನು ಸಲ್ಲಿಸುವ ವಿಧಾನ!
ಯೋಜನೆಗೆ ನೀವು ಮೇಲೆ ತಿಳಿಸಿದ ಎಲ್ಲಾ ಅರ್ಹತೆಗಳನ್ನು ಹಾಗೂ ದಾಖಲಾತಿಗಳನ್ನು ಹೊಂದಿದ್ದಲ್ಲಿ ಇಲ್ಲಿ ಕಾಣುವ ಲಿಂಕನ್ನು ಕ್ಲಿಕ್https://kmdconline.karnataka.gov.in/Portal/home ಮಾಡುವ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನೀವು ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡುವ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಮೇಲೆ ನೀಡಿರುವ ಲಿಂಕ್ ನ ಮೂಲಕ ಮಾತ್ರ ಅಷ್ಟೇ ನೀವು ಅರ್ಜಿ ಸಲ್ಲಿಸಬಹುದಾಗಿದ್ದು ಸಂಪೂರ್ಣ ಆನ್ಲೈನ್ ಮೂಲಕವೇ ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 25
ಹೆಚ್ಚಿನ ಮಾಹಿತಿಗೆ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ರೀತಿಯಾಗಿ ಮಹಿಳೆಯರು ಈ ಯೋಚನೆ ಅಡಿಯಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸುವ ಮೂಲಕ 50,000 ಸಾಲ ಹಾಗೂ 25000 ಸಹಾಯಧನವನ್ನು ಪಡೆಯಬಹುದು!
ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ