ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ನಡೆದ ಡ್ರೋನ್ ಪ್ರತಾಪ್ ! BBK 10

ಮಿಡ್  ವೀಕ್  ಎಲಿಮಿನೇಷನ್ ನಲ್ಲಿ  ಪ್ರತಾಪ್ ಎಲಿಮಿನೇಟ್?  ಬಿಗ್ ಬಾಸ್ ಮೇಲೆ ಕೋಪಗೊಂಡ  ವೀಕ್ಷಕರು. 

ಎಲ್ಲರಿಗೂ ನಮಸ್ಕಾರ,  ಬಿಗ್ ಬಾಸ್ ಸೀಸನ್ 10 ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು,  ಈ ಬಾರಿಯ ಸೀಸನ್ ವಿಭಿನ್ನವಾದ ಮನರಂಜನೆಯನ್ನು ವೀಕ್ಷಕರಿಗೆ ನೀಡುತ್ತಾ ಬಂದಿದೆ.  ಇದರ ಜೊತೆಗೆ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರಗಬಹುದೆಂದು ಸಹ ಉಳಿಸಲಾಗದಷ್ಟು ಕಠಿಣ ಸ್ಪರ್ಧಿಗಳನ್ನು ಈ ಸೀಸನ್ ನಲ್ಲಿ ಕಾಣಬಹುದಾಗಿದೆ.  ಅದಲ್ಲದೆ ಬಿಗ್ ಬಾಸ್ ಸೀಸನ್ 10ರಲ್ಲಿ ಅತಿ ಹೆಚ್ಚು ಮನರಂಜನೆಗಿಂತ ಜಗಳ,ವಾದ,ತಂಟೆ,ತಕರಾರು, ಹೊಡೆದಾಟಗಳಲ್ಲೇ ತುಂಬಿ  ತುಳುಕುತ್ತಿದೆ.  ಆದರೂ ಸಹ  ಕಳೆದ ಬಾರಿಯ ಬಿಗ್ ಬಾಸ್ ಕಿಂತ ಈ ಬಾರಿ ಅತಿ ಹೆಚ್ಚು ವೀಕ್ಷಣೆಯನ್ನು ಪಡೆದು ಎಲ್ಲಾ ವಾಹಿನಿಗಳನ್ನು ಹಿಂದುಕುವುದರ ಜೊತೆಗೆ ಅತಿ ಹೆಚ್ಚು TRP  ಎನ್ನು ಪಡೆದಿದೆ.  ಅದರ ಜೊತೆಗೆ ಪ್ರತಿ ವಾರವ ಬಿಗ್ ಬಾಸ್ ವಿಧವಿಧವಾದ ಟಾಸ್ಕ್ ಗಳನ್ನು ನೀಡುತ್ತಾ ಸ್ಪರ್ಧಿಗಳ ನಡುವೆ ಭಿನ್ನಾಭಿಪ್ರಾಯ ಮೂಡುವಂತೆ ಮಾಡಿದೆ. ಅದೇ ರೀತಿ ವಿಭಿನ್ನವಾದ ಟಾಸ್ಕ್ ನೀಡುವುದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಕಲಹವನ್ನು ಉಂಟು ಮಾಡಿದೆ. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದು ಕೇವಲ ಆರು ಸ್ಪರ್ಧೆಗಳು ಮಾತ್ರ ಬಿಗ್ ಬಾಸ್ ಮನೆಯಲ್ಲಿ ಕಾಣಬಹುದು.  ಆದರೆ ಬಿಗ್ ಬಾಸ್ ಈ ಆರು ಜನರಲ್ಲಿ, ಒಬ್ಬ ಸ್ಪರ್ಧಿಯನ್ನು ಎಲಿಮಿನೇಷನ್ ಮಾಡುವ ಮೂಲಕ ಮನೆಯಿಂದ ಹೊರಹಾಕಲಾಗಿದೆ.  ಬಿಗ್ ಬಾಸ್ ಲೈವ್ ನಲ್ಲಿ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಕಾಣಿಸುತ್ತಿಲ್ಲ.  ಹಾಗಾಗಿ ಬಿಗ್ ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ ಅವರನ್ನು ಹೊರಹಾಕಲಾಗಿದೆ. ಕಾರಣ ಏನು?  ಎಂದು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ. 

WhatsApp Group Join Now
Telegram Group Join Now

ಬಿಗ್ ಬಾಸ್ ಸೀಸನ್ 10 ಕನ್ನಡ

ಬಿಗ್ ಬಾಸ್  ಮೊದಲ ಬಾರಿ ಹಿಂದಿಯಲ್ಲಿ ಶುರುವಾಗಿದ್ದು,  ನಂತರದ ದಿನಗಳಲ್ಲಿ ವಿವಿಧ ಭಾಷೆಗಳಲ್ಲಿ ಪ್ರಸಾರವಾಗಲು ಶುರುವಾಯಿತು.  ಅದೇ ರೀತಿ ನಮ್ಮ ಮಾತೃ ಭಾಷೆಯಾದ ಕನ್ನಡದಲ್ಲಿ ಸಹ ಬಿಗ್ ಬಾಸ್ ಶುರುವಾಯಿತು.  ಈಗ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ ಹತ್ತಕ್ಕೆ ಕಾಲಿಟ್ಟಿದ್ದು,  ಎರಡು ಓಟಿಟಿ ಸೀಸನ್ ಮತ್ತು 10 ಪ್ರಮುಖ ಸೀಸನ್ ಗಳಾಗಿವೆ.  ಪ್ರತೀ ಸೀಸನ್ನಲ್ಲೂ ವಿವಿಧ ರೀತಿಯ ವ್ಯಕ್ತಿ, ವ್ಯಕ್ತಿತ್ವ, ಜೀವನ ಶೈಲಿ ಎಲ್ಲವನ್ನು ಸಹ ನಮಗೆ ಯಾವುದೇ ರೀತಿಯ ಮುಚ್ಚುಮರೆಗಳಿಲ್ಲದೆ  ಬಿಗ್ ಬಾಸ್ ತಿಳಿಸಿಕೊಂಡು ಬಂದಿದೆ.  ಏಕೆಂದರೆ ಹಲವಾರು ಜನ ಬಿಗ್ ಬಾಸ್ ಬರುವ ಮೊದಲು ಅವರ ವ್ಯಕ್ತಿತ್ವ ನಮಗೆ ವಿಭಿನ್ನವಾಗಿ ಕಾಣಿಸುತ್ತಿರುತ್ತದೆ.  ಆದರೆ ಬಿಗ್ ಬಾಸ್ ಮನೆಯಲ್ಲಿ ಅವರ ನಿಜವಾದ ಮುಖ ನಾವು ನೋಡಬಹುದಾಗಿದೆ.  ಹಾಗಾಗಿ ಅತಿ ಹೆಚ್ಚು ಯುವಕ ಯುವತಿಯರು ಈ ಬಿಗ್ ಬಾಸ್ ಅನ್ನು ನೋಡಲು ತುಂಬಾ ಇಷ್ಟಪಡುತ್ತಾರೆ.  ಅದರಲ್ಲೂ ಈ ಬಾರಿಯ ಸೀಸನ್ ಬಹಳ ವಿಭಿನ್ನವಾಗಿತ್ತು ನಾವು ಸೀರಿಯಲ್ ಅಥವಾ ಸಿನಿಮಾಗಳಲ್ಲಿ ನೋಡುವ ಅವರ ವ್ಯಕ್ತಿತ್ವ ಬಿಗ್ ಬಾಸ್ ಮನೆಯಲ್ಲಿ ಬಹಳ ತದ್ವಿರುದ್ಧವಾಗಿದ್ದು,  ನಾವು ಇಷ್ಟ ಪಡುವ ವ್ಯಕ್ತಿಗಳ ಮೇಲೆ ದ್ವೇಷ ಬರುವಂತೆ,  ಹಾಗೂ ನಾವು ದ್ವೇಷಿಸುವ ವ್ಯಕ್ತಿ ನಮಗೆ ಬಹಳ ಇಷ್ಟವಾಗುವಂತೆ,  ನಮ್ಮ ಮನಸ್ಥಿತಿಯನ್ನು ಬದಲಾಯಿಸಿದೆ.  ಅದೇ ರೀತಿ ಸಂಗೀತ, ಪ್ರತಾಪ್, ವಿನಯ್, ಕಾರ್ತಿಕ್, ತನುಷ, ತುಕಾಲಿ ಸಂತು, ನಮೃತ, ಸಿರಿ, ಭಾಗ್ಯಶ್ರೀ,ಮೈಕಲ್, ಸ್ನೇಕ್ ಶಾಮ್,  ಸ್ನೇಹಿತ, ನೀತು ವನಜಾಕ್ಷಿ,  ತನಿಷ, ವರ್ತೂರ್ ಸಂತೋಷ್, ರಕ್ಷಕ, ಗೌರಿಶ  ಅಕ್ಕಿ ಈ ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ  ಕಾಲಿಟ್ಟಿ ದು,  ಈಗಾಗಲೇ ಬಿಗ್ ಬಾಸ್ ಮನೆಯಿಂದ 7 ಸ್ಪರ್ಧೆಗಳು ಮನೆಯಿಂದ ಹೊರ ನಡೆದಿದ್ದಾರೆ ಅದರ ಜೊತೆಗೆ ವೈಲ್ಡ್ ಕಾರ್ಡ್ ಎಂಟ್ರಿ ಯಲ್ಲಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ ಅವಿನಾಶ್ ಮತ್ತು ಪವಿ ಪೂವಪ್ಪ ಅವರು ಸಹ ಮನೆಯಿಂದ ಹೊರ ನಡೆದಿದ್ದಾರೆ. 

 ಮಿಡ್  ವೀಕ್  ಎಲಿಮಿನೇಷನ್ ನಲ್ಲಿ ಪ್ರತಾಪ್  ಎಲಿಮಿನೇಟ್! 

 ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಸಂಗೀತ ಕಾರ್ತಿಕ್, ವಿನಯ್, ಪ್ರತಾಪ್, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಅವರು ಮಾತ್ರ ಫಿನಾಲೆ ವಾರಕ್ಕೆ ಕಾಲಿಡುತ್ತಿದ್ದಾರೆ.  ಆದರೆ ಈ ಹಿಂದೆ ಬಿಗ್ ಬಾಸ್ ಪಿನಾಲೆ ವಾರಕ್ಕೆ ಕೇವಲ ಐದು ಜನ ಸ್ಪರ್ಧಿಗಳು ಮಾತ್ರ  ಕಾಲಿಡುತ್ತಿದ್ದಾರೆ. ಎಂದು ತಿಳಿಸಿದ್ದು, ಆದರೆ ಈಗ ಮನೆಯಲ್ಲಿ ಆರು ಜನ ಸ್ಪರ್ಧಿಗಳು ಇರುವುದರಿಂದ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯನ್ನು ಕೈಗೊಂಡಿತ್ತು,  ಈ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ಮನೆಯಿಂದ ಪ್ರತಾಪ್ ಅವರನ್ನು ಹೊರಹಾಕಲಾಗಿದೆ.  ಇದರಿಂದ ವೀಕ್ಷಕರು ಬೇಸರಗೊಂಡಿದ್ದರು.  ಏಕೆಂದರೆ ಪ್ರತಾಪ್ ಅವರು ಅತಿ ಹೆಚ್ಚು ವೋಟ್ಗಳನ್ನು ಪಡೆದು ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರಕ್ಕೆ ಕಾಲಿಡುತ್ತಾರೆ ಎನ್ನುವ  ಭರವಸೆಯಲ್ಲಿದ್ದ  ವೀಕ್ಷಕರಿಗೆ ಬೇಸರವನ್ನುಂಟು ಮಾಡಿದೆ.  ಇದಾದ ನಂತರ ಬಿಗ್ ಬಾಸ್ ಮನೆಯಲ್ಲಿ ಕೇವಲ ಐದು ಜನ ಸ್ಪರ್ಧಿಗಳು ಮಾತ್ರ ಫಿನಾಲೆ ವಾರಕ್ಕೆ ಕಾಲಿಡುತ್ತಾ ಇದ್ದಾರೆ ಎನ್ನುವಷ್ಟರಲ್ಲಿ, ಬಿಗ್ ಬಾಸ್ ಮತ್ತೊಂದು  ಆದೇಶವನ್ನು ಹೊರಡಿಸಿದೆ,  ಅದುವೇ ಫೇಕ್ ಮಿಡ್  ವೀಕ್ ಎಲಿಮಿನೇಷನ್! ಅಂದರೆ ಪ್ರತಾಪ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿಲ್ಲ,  ಅವರು ಸಹ ಫಿನಾಲೆ  ವಾರಕ್ಕೆ ಕಾಲಿಟ್ಟಿದ್ದಾರೆ.  ಹೌದು ಈ ಹಿಂದೆ ಬಿಗ್ ಬಾಸ್ ಕೇವಲ ಐದು ಸ್ಪರ್ಧಿಗಳು ಮಾತ್ರ ಪಿನಾಲೆ ವಾರಕ್ಕೆ ಕಾಲಿಡುತ್ತಿದ್ದಾರೆ ಎಂದು ತಿಳಿಸಿದ್ದು ಆದರೆ ಇದೀಗ  ಆರು ಜನ ಸ್ಪರ್ಧಿಗಳು ಕಾಲಿಡುತ್ತಿದ್ದಾರೆ ಎಂದು ತಿಳಿಸಿದೆ.  ಏಕೆಂದರೆ ತೆಲಗು ಬಿಗ್ ಬಾಸ್ ನಲ್ಲಿ ಇದೇ ರೀತಿ ಆರು ಜನ ಫಿನಾಲೆ ವಾರದಲ್ಲಿ ಭಾಗವಹಿಸಿದ್ದರು,  ಅದೇ ರೀತಿ ಕನ್ನಡದಲ್ಲೂ ಸಹ ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಆರು ಜನ ಫಿನಾಲೆಗೆ ತಲುಪಲಿದ್ದಾರೆ.  ಸಂಗೀತ, ಡ್ರೋನ್ ಪ್ರತಾಪ್, ಕಾರ್ತಿಕ್, ವಿನಯ್, ವರ್ತುರ್ ಸಂತೋಷ್ ಹಾಗೂ ತುಕಾಲಿ ಸಂತೋಷ್. ಕೇವಲ ತಮಾಷೆಗಾಗಿ ಈ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯನ್ನು ಕೈಗೊಂಡಿದ್ದು,  ಪ್ರತಾಪ್ ಅವರು ನಂತರ ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾರೆ.  ಅದರ ಜೊತೆಗೆ ನೇರವಾಗಿ ಫಿನಾಲೆ ವರಕ್ಕೆ ಕಾಲಿಟ್ಟಿದ್ದಾರೆ.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.  ಶುಭದಿನ.

Leave a Comment