ಗೃಹಲಕ್ಷ್ಮಿ ಯೋಜನೆಯ  ಎಲ್ಲಾ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯೇ! ಇಲ್ಲಿ ಸ್ಟೇಟಸ್ ಚೆಕ್ ಮಾಡಿ / Graha lakshmi yojana status how to check

ಎಲ್ಲರಿಗೂ ನಮಸ್ಕಾರ, 

ಗೃಹಲಕ್ಷ್ಮಿ ಯೋಜನೆಯ  ಎಲ್ಲಾ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯೇ! ಎಂದು ಸುಲಭವಾಗಿ ಮೊಬೈಲ್ನ ಮೂಲಕ ತಿಳಿದುಕೊಳ್ಳಬಹುದು.  ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ 5  ಹೊಸ  ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು,  ಇದರಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು  ನೀಡಿತ್ತು ಹಾಗೂ ಆರ್ಥಿಕ ಬೆಂಬಲವನ್ನು ನೀಡಲು ಪ್ರತಿ ತಿಂಗಳು ಮನೆಯ ಗೃಹಲಕ್ಷ್ಮಿಗೆ 2000 ಹಣವನ್ನು ಜಮಾ ಮಾಡುವುದಾಗಿ  ತಿಳಿಸಿತ್ತು.  ಅದೇ ರೀತಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಉಚಿತ ಬಸ್,  ಪ್ರತಿ ತಿಂಗಳು  ಮನೆಯ ಮಹಿಳೆಗೆ 2000 ಹಣ ಹಾಗೂ  5 ಕೆಜಿ ಉಚಿತ ಅಕ್ಕಿ ಈ ಎಲ್ಲಾ ಗ್ಯಾರೆಂಟಿಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಿತ್ತು.  ಆದರೆ ಇದರಲ್ಲಿ ಹಲವಾರು ಮಹಿಳೆಯರಿಗೆ ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿಲ್ಲ.  ಇದರ ಜೊತೆಗೆ ಹಲವು ಜನ ಮಹಿಳೆಯರಿಗೆ ಮೊದಲ ಕಂತಿನ ಹಾಗೂ ಎರಡನೇ ಕಂತಿನ ಹಣ ಜಮೆಯಾಗಿದ್ದು ಇನ್ನುಳಿದ ಕಂತಿನ ಹಣ ಕ್ಷಮೆಯಾಗಿಲ್ಲ.  ಹಾಗಾಗಿ ಅಂತಹ ಮಹಿಳೆಯರು ಮೊಬೈಲ್ ನ ಮುಖಾಂತರ ಸುಲಭವಾಗಿ ನಿಮ್ಮ ಖಾತೆಗೆ ಯಾವ ಯಾವ ತಿಂಗಳಿನ ಹಣ ಜಮೆ ಆಗಿದೆಯೋ? ಇಲ್ಲವೋ?  ಎಂದು ಸುಲಭವಾಗಿ ತಿಳಿದುಕೊಳ್ಳಬಹುದು. ಇದನ್ನು ತಿಳಿದುಕೊಳ್ಳಲು ನೀವು ಯಾವ ಯಾವ ಕ್ರಮವನ್ನು ಕೈಗೊಳ್ಳಬೇಕು ಹಾಗೂ  ಹೇಗೆ ತಿಳಿದುಕೊಳ್ಳಬೇಕು ಎನ್ನುವುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗುವುದು.  ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. 

WhatsApp Group Join Now
Telegram Group Join Now

 ಗೃಹಲಕ್ಷ್ಮಿ ಯೋಜನೆಯ ಏಳನೇ ಕಂತಿನ ಹಣ ಇನ್ನು ನಿಮ್ಮ  ಖಾತೆಗೆ ಜಮಾ ಆಗಿಲ್ಲವೇ?

ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡಲು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದರು.  ಇದರ ಉಪಯೋಗವನ್ನು ಹಲವಾರು ಮಹಿಳೆಯರು ಇಲ್ಲಿಯವರೆಗೂ ಕೂಡ ಪಡೆದುಕೊಂಡಿಲ್ಲ. ಇದರ ಜೊತೆಗೆ ಹಲವಾರು ಜನ ಮಹಿಳೆಯರು ಈಗಲೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ.  ಈಗಾಗಲೇ ಒಂದು ಕೋಟಿಗಿಂತಲೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಇದರಲ್ಲಿ ಹಲವಾರು ಮಹಿಳೆಯರ ಕೆಲವು ಸಂಬಂಧ ಪಟ್ಟ ದಾಖಲೆಗಳು ಸರಿ ಇಲ್ಲದಿರುವುದರಿಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣವನ್ನು ಪಡೆಯಲು ಆಗುತ್ತಿಲ್ಲ.  ಅದಲ್ಲದೆ ಗ್ರಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣವನ್ನು ಈಗ ಹಲವಾರು ಮಹಿಳೆಯರು ಪಡೆದಿದ್ದು ಇನ್ನು ಕೆಲವು ಮಹಿಳೆಯರು 7ನೇ ಕಂತಿನ ಹಣವನ್ನು ಇನ್ನೂ ಸಹ ಪಡೆದಿಲ್ಲ.  ಏಕೆಂದರೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣವು ನಿಮ್ಮ ಖಾತೆಗೆ ಈಗಾಗಲೇ ಜಮಾ ಆಗಿದ್ದರೆ,  ಏಳನೇ ಕಂತಿನ ಹಣವು ಸಹ ನಿಮ್ಮ ಖಾತೆಗೆ ಆದಷ್ಟು ಬೇಗ ಜಮೆ ಆಗುತ್ತದೆ.  ನೀವು ಹೆದರುವ ಅವಶ್ಯಕತೆ ಇಲ್ಲ ಏಕೆಂದರೆ ಈಗಾಗಲೇ ಹಲವಾರು ಮಹಿಳೆಯರಿಗೆ ಏಳು ಮತ್ತು ಎಂಟನೇ ಕಂತಿನ ಹಣ ಜಮೆಯಾಗಿದೆ ರಾಜ್ಯದಲ್ಲಿ ಒಂದು ಕೋಟಿಗಿಂತಲೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದು ಅದರ ಫಲಾನುಭವಿಗಳು ಅಧಿಕ ಪ್ರಮಾಣದಲ್ಲಿ ಇರುವುದರಿಂದ ಪ್ರತಿದಿನ ಇಷ್ಟ ಸಂಖ್ಯೆಯ ಮಹಿಳೆಯರಿಗೆ ಮಾತ್ರ ಹಣವನ್ನು ಜಮಾ ಮಾಡಲು ಸರ್ಕಾರವು ಆದೇಶವನ್ನು ನೀಡಿದ್ದು,  ಇನ್ನುಳಿದ ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ಎರಡು ಸಾವಿರ ರೂಪಾಯಿ ಹಣವನ್ನು ಜಮಾ ಮಾಡಲು ತಿಳಿಸಿದೆ.  ಇದರಿಂದ ನಿಧಾನವಾಗಿ ನಿಮಗೂ ಸಹ ಏಳನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ. 

ಗ್ರಹಲಕ್ಷ್ಮಿ ಯೋಜನೆಯ ಹಣ ಇನ್ನೂ ಕೂಡ ನಿಮಗೆ  ಬಂದಿಲ್ಲವೇ?

ಕರ್ನಾಟಕ ಸರ್ಕಾರವು ರಾಜ್ಯದಲ್ಲಿರುವ ಬಡತನವನ್ನು ಹೋಗಲಾಡಿಸಲು ಐದು ಯೋಜನೆಗಳನ್ನು ಜಾರಿಗೊಳಿಸಿತ್ತು.  ಆದರೆ ಇದನ್ನು ಕೆಲವರು ಈಗಾಗಲೇ ಅವಶ್ಯಕತೆಗಿಂತ ಹೆಚ್ಚಾಗಿ ಬಳಸುತ್ತಿದ್ದಾರೆ. ಹೀಗಾಗಿ ಧೃವಲಕ್ಷ್ಮಿ ಯೋಜನೆಯನ್ನು ಕೇವಲ ಬಡವರ್ಗದ ಮಹಿಳೆಯರಿಗೆ ಮಾತ್ರ ತಲುಪಿಸಲು ಹಲವು ಶರತ್ತುಗಳನ್ನು ವಿಧಿಸಿತ್ತು.  ಅದಲ್ಲದೆ ಈಗಾಗಲೇ ಮೇಲ್ವರ್ಗದ ಮಹಿಳೆಯರು ಸಹ ಗ್ರಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದಿದ್ದು ಇದರಿಂದ ಸರ್ಕಾರಕ್ಕೆ ಈಗಾಗಲೇ ಅಧಿಕ ಪ್ರಮಾಣದ ನಷ್ಟವಾಗಿದ್ದು ಇದರಿಂದ ಕರ್ನಾಟಕ ಸರ್ಕಾರವು ಕಟ್ಟುನಿಟ್ಟಾದ ಹಲವು ನಿಬಂಧನೆಗಳನ್ನು ತಿಳಿಸಿತ್ತು. ಅದೇ ರೀತಿ ಧೃವಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ರೇಷನ್ ಕಾರ್ಡ್ ಬಿಪಿಎಲ್ ಕಾರ್ಡಾಗಿದ್ದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯನ್ನು ನೀಡಬೇಕು ಎಂದು ತಿಳಿಸಿತ್ತು. ಇದರ ಜೊತೆಗೆ ಐದು ಎಕರೆಗೂ ಮೀರಿದ ಒಣ ಭೂಮಿ ಹೊಂದಿರುವವರಿಗೆ ಕೊಡುವಂತಿಲ್ಲ. ಯಾವುದೇ ಸರ್ಕಾರಿ ಹುದ್ದೆ ಅಥವಾ ಪಿಂಚಣಿಯನ್ನು ಪಡೆಯುವವರಿಗೆ ಅಥವಾ ಆದಾಯ ತೆರಿಗೆ ಪಾವತಿಸುವವರಿಗೆ  ಈ ಯೋಜನೆ ಅನ್ವಯಿಸುವುದಿಲ್ಲ.  ಅದೇ ರೀತಿ  ನಾಲ್ಕು ಚಕ್ರದ ವಾಹನವನ್ನು ಹೊಂದಿದ್ದರೆ ಅವರಿಗೂ ಸಹ ಈ ಯೋಜನೆ ಅನ್ವಯಿಸುವುದಿಲ್ಲ.  ಅದೇ ರೀತಿ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರಿಗೆ ಈ ಯೋಜನೆಯ ಅವಕಾಶವನ್ನು ಪಡೆದುಕೊಳ್ಳಬಹುದು,  ಇದರ ಜೊತೆಗೆ ಮನೆಯ  ಪಡಿತರ ಚೀಟಿ ಮನೆಯ ಮಹಿಳೆಯ ಹೆಸರಿಗೆ ಇರತಕ್ಕದ್ದು,  ಅದೇ ರೀತಿ ಮಹಿಳೆಯ ಖಾತೆಗೆ ಈಕೆ ಬಾಯಿಸಿ ಹಾಗೂ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.  ಇದರಲ್ಲಿ  ಯಾವುದೇ ಒಂದು ಆಗಿಲ್ಲವೆಂದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಹಾಗಾಗಿ ಸರ್ಕಾರವು ವಿಧಿಸಿದ ಎಲ್ಲಾ ಶರತ್ತು ಮತ್ತು ನಿಬಂಧನೆಗಳನ್ನು ನೀವು ಪಾಲಿಸಿದ್ದರೆ ನಿಮ್ಮ ಖಾತೆಗೆ ಆದಷ್ಟು ಬೇಗ ಹಣ ಬರುತ್ತದೆ.  ಇಲ್ಲವಾದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ.  ಏಕೆಂದರೆ ವರಲಕ್ಷ್ಮಿ ಯೋಜನೆಯನ್ನು ಕೇವಲ ಬಡವರ್ಗದ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡಲು ಮಾತ್ರ ಜಾರಿಗೆ ಬಳಸಲಾಗಿರುವುದರಿಂದ ಇದನ್ನು ಮೇಲ್ವರ್ಗದ ಅಥವಾ ಆರ್ಥಿಕವಾಗಿ ಮುಂದುವರಿದ ಕುಟುಂಬಗಳು ಪಡೆಯುವಂತಿಲ್ಲ.  ಒಂದು ವೇಳೆ ನೀವು ಪಡೆಯುತ್ತಿದ್ದರೆ ಮುಂದೆ ನಿಮಗೆ ಯಾವುದೇ ರೀತಿಯಾದಂತಹ ಹಣ ಬರುವುದಿಲ್ಲ ಈಗಾಗಲೇ ರಾಜ್ಯ ಸರ್ಕಾರವು ಹಲವಾರು ಮಹಿಳೆಯರಿಗೆ ಹಣವನ್ನು ನೀಡಿತು ರಾಜ್ಯದಲ್ಲಿನ ಬೊಕ್ಕಸ ಖಾಲಿಯಾಗಿದೆ ಹಾಗಾಗಿ ಈಗ ಲಕ್ಷ್ಮಿ ಯೋಜನೆಯನ್ನು ಕೇವಲ ಒಂದು ವರ್ಷ ಮಾತ್ರ ಜಾರಿಯಲ್ಲಿರುತ್ತದ  ಮುಂದೆ ಬರುವ ನಾಲ್ಕು ವರ್ಷ ಯಾವುದೇ ರೀತಿಯಾದಂತಹ ಗುಣಲಕ್ಷ್ಮೀ ಯೋಜನೆಯ ಹಣ ಬರುವುದಿಲ್ಲ.  ಇದರ ಜೊತೆಗೆ ಈಗಾಗಲೇ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ನೀಡಿರುವುದರಿಂದ ಸಾರಿಗೆ ಇಲಾಖೆಗೆ ಸಾವಿರ ಕೋಟಿ ನಷ್ಟ ಆಗಿದೆ.  ಇದರಿಂದ ಹಣಕಾಸು ಇಲಾಖೆಯಲ್ಲಿ ಮಹಿಳೆಯರಿಗೆ ಮುಂದಿನ ನಾಲ್ಕು ವರ್ಷ ಹಣವನ್ನು ವಿತರಿಸಲು  ಹಣ   ಇಲ್ಲದೆ ಇರುವುದರಿಂದ ಮುಂದಿನ ನಾಲ್ಕು ವರ್ಷ ಗೃಹಲಕ್ಷ್ಮಿ ಯೋಜನೆಯ  2000 ಹಣ ಕೊಡುವ ಸಾಧ್ಯತೆ ಬಹಳ ಕಡಿಮೆ ಇದೆ.  ಈಗಾಗಲೇ ಒಂದು ಕೋಟಿಗೂ ಅಧಿಕ ಮಹಿಳೆಯರಿಗೆ ಪ್ರತಿ ತಿಂಗಳ ಅಂದರೆ ಇಲ್ಲಿಯವರೆಗಿನ ಏಳು ಕಂತಿನ ಹಣ ಜಮೆಯಾಗಿದ್ದು.  ಇದರ ಜೊತೆಗೆ ಕೆಲವು ಮಹಿಳೆಯರಿಗೆ 7ನೇ ಕಂತಿನ ಹಣ ಇನ್ನು  ಜಮಾ ಆಗಿಲ್ಲ ಅಂತಹ ಮಹಿಳೆಯರಿಗೆ ಏಪ್ರಿಲ್ ತಿಂಗಳ ಒಳಗೆ ಖಾತೆಗೆ ಎರಡು ಸಾವಿರ ರೂಪಾಯಿ ಹಣ ಜಮಾ ಆಗುತ್ತದೆ. 

ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣ ಬಿಡುಗಡೆ ದಿನಾಂಕ 

ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿಯಾಗಿದೆ.  ಈಗಾಗಲೇ ಹಲವಾರು ಮಹಿಳೆಯರಿಗೆ 7ನೇ ಕಂತಿನ ಹಣ ಇನ್ನೂ ಸಹ  ಜಮಾ ಆಗಿಲ್ಲ.  ಅಂತಹ ಮಹಿಳೆಯರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. , 7ನೇ ಕಂತಿನ ಹಣ ಮತ್ತು ಎಂಟನೇ ಕಂತಿನ ಹಣ ಎರಡು ಸಹ ಏಪ್ರಿಲ್ ತಿಂಗಳ  ಒಳಗೆ ನಿಮ್ಮ ಖಾತೆಗೆ ಬಂದು ಜಮಾ ಆಗುತ್ತದೆ.  ಅದಲ್ಲದೆ ಎಪ್ರಿಲ್ ತಿಂಗಳ ಗ್ರಹಲಕ್ಷ್ಮಿ ಯೋಜನೆಯ ಹಣವನ್ನು ಮಾರ್ಚ್ 28 ರಿಂದ ಜಮಾ ಮಾಡಲು ಸರ್ಕಾರವು ಆದೇಶ ಮಾಡಿದ್ದು ಇದರಿಂದ ಹಲವಾರು ಗ್ರಹಲಕ್ಷ್ಮಿಯರಿಗೆ ಈಗಾಗಲೇ ಹಣ ಅವರ ಖಾತೆಗೆ ಜಮಾ ಆಗಿದೆ.  ಏಕೆಂದರೆ ಏಪ್ರಿಲ್ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಇರುವುದರಿಂದ  ಎಂಟನೇ ಕಂತಿನ ಹಣವನ್ನು ಮಾರ್ಚ್ 28ರಿಂದ ಬಿಡುಗಡೆ ಮಾಡಿದ್ದು ಏಪ್ರಿಲ್  10  ರ ಒಳಗೆ ಎಲ್ಲಾ  ಗೃಹಲಕ್ಷ್ಮಿಯರಿಗೆ ಅವರ ಖಾತೆಗೆ  ಹಣ ಜಮಾ ಆಗುತ್ತದೆ.   7ನೇ ಕಂತಿನ ಹಣ ಇನ್ನೂ ಸಹ ಜಮಾ ಆಗದೇ ಇರುವ ಗ್ರಹಲಕ್ಷ್ಮಿಯರಿಗೆ ಏಳು ಮತ್ತು ಎಂಟನೇ ಕಂತಿನ ಹಣ ಅಂದರೆ 4000 ಹಣ  ಒಂದೇ ಬಾರಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಇದರ ಜೊತೆಗೆ 9ನೇ ಕಂತಿನ ಹಣವನ್ನು ರಾಜ್ಯ ಸರ್ಕಾರವು ಮೇ ತಿಂಗಳಿನಲ್ಲಿ ನಿಮ್ಮ ಖಾತೆಗೆ ಜಮಾ ಮಾಡುತ್ತದೆ.   9ನೇ ಕಂತಿನ ಹಣ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ,  ಅಂದರೆ ನಿಧಾನವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. 

ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯೇ ಎಂದು ಮೊಬೈಲ್ ನ ಮೂಲಕ ತಿಳಿದುಕೊಳ್ಳಿ

ಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯೇ ಎಂದು ಮೊಬೈಲ್ ನ ಮೂಲಕ ನೀವು ಸುಲಭವಾಗಿ ತಿಳಿದುಕೊಳ್ಳಬಹುದು.  ಇದನ್ನು ತಿಳಿದುಕೊಳ್ಳಲು ನೀವು ಯಾವುದೇ  ಬ್ಯಾಂಕಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ,  ಮನೆಯಲ್ಲಿ ಕುಳಿತು ಸುಲಭವಾಗಿ ನಿಮ್ಮ ಮೊಬೈಲ್ ನ ಮೂಲಕ ನೀವು ನಿಮ್ಮ ಖಾತೆಗೆ ಯಾವ ಯಾವ ತಿಂಗಳಿನ ಹಣ ಬಂದಿದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. 

  •  ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಅನ್ನು ಓಪನ್ ಮಾಡಿ  ಸರ್ಚ್ ಬಾರ್ ಮೇಲೆ ಕ್ಲಿಕ್ ಮಾಡಿ gruhalakshmi mahitikanaja  ಎಂದು ಟೈಪ್ ಮಾಡಿ ಸರ್ಚ್ ಮಾಡಿ 
  • ಮಾಹಿತಿ ಕಣಜವನ್ನು ಕ್ಲಿಕ್ ಮಾಡಿ ನಂತರ ರೇಷನ್ ಕಾರ್ಡ್ ನಂಬರ್ ಅನ್ನು ಎಂಟರ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ .
  •  ನೀವು ಯಾವ ಕಂತಿನ ಹಣವನ್ನು ಪಡೆದಿದ್ದೀರಿ ಎನ್ನುವ ಎಲ್ಲಾ ಮಾಹಿತಿಯನ್ನು  ನೀವು ನೋಡಬಹುದಾಗಿದೆ ಮತ್ತು ನೀವು ಯಾವಾಗ ಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ. 

 ಇದರಿಂದ ನಿಮಗೆ ಯಾವ ಯಾವ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಎಂದು ತಿಳಿದುಕೊಳ್ಳಬಹುದು.  ಹಾಗೂ ಮುಂಬರುವ ಕಂತಿನ ಹಣವನ್ನು ಇದೇ ರೀತಿ ನೀವು ಬಂದಿದೆಯೋ? ಇಲ್ಲವೋ?  ಎಂದು ತಿಳಿದುಕೊಳ್ಳಬಹುದಾಗಿದೆ.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು. ಶುಭದಿನ…

Leave a Comment