ಕೊನೆಗೂ ರಾಮ್ ಸೀತಾ ಹತ್ರ ಪ್ರೀತಿ ಹೇಳಿಕೊಳ್ಳುವ ಸಮಯ  ಬಂದಾಗಿದೆ. ಭಾರ್ಗವಿಗೆ  ಬರೆ ಎಳೆದಂತಾಗಿದೆ.

ಕೊನೆಗೂ ರಾಮ್ ಸೀತಾ ಹತ್ರ ಪ್ರೀತಿ ಹೇಳಿಕೊಳ್ಳುವ ಸಮಯ  ಬಂದಾಗಿದೆ. ಭಾರ್ಗವಿಗೆ  ಬರೆ ಎಳೆದಂತಾಗಿದೆ. 

ಎಲ್ಲರಿಗೂ  ನಮಸ್ಕಾರ.  ಜೀ ಕನ್ನಡದಲ್ಲಿ ಅತಿ ಹೆಚ್ಚು  TRP  ಹೊಂದಿರುವ ಸೀತಾರಾಮ ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು,  ಈ ಧಾರಾವಾಹಿಯಲ್ಲಿ ನಟಿಸುವ ಸಿಹಿ( ರೀತು)  ಅವರ ಮುದ್ದು ಮುದ್ದಾದ ಮಾತುಗಳನ್ನು ಕೇಳಲು ಅತಿ ಹೆಚ್ಚು ವೀಕ್ಷಕರು ಸೀತಾರಾಮ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದಾರೆ.  ಇದರ ಜೊತೆಗೆ ಮಧ್ಯಮ ವರ್ಗದ ಸಾಧಾರಣ ಮಹಿಳೆಯಾಗಿ  ಸೀತಾ( ವೈಷ್ಣವಿ)  ಅವರು ನಟಿಸುತ್ತಿದ್ದು,  ರಾಮ್( ಗಗನ್)  ಅವರು ಆಗರ್ಭ ಶ್ರೀಮಂತರಾಗಿದ್ದು  ವಿದೇಶದಿಂದ ಭಾರತಕ್ಕೆ ವಾಪಸ್ ಆಗಿರುತ್ತಾರೆ.  ಈ ಸಂದರ್ಭದಲ್ಲಿ  ರಾಮ್  ಮತ್ತು  ಸಿಹಿಯ  ಭೇಟಿಯಾಗಿ ಇಬ್ಬರು ಸಹ ಬೆಸ್ಟ್ ಫ್ರೆಂಡ್ ಆಗಿರುತ್ತಾರೆ.  ಇದಾದ ನಂತರ ಕಂಪನಿಯಲ್ಲಿ ನಡೆಯುವ ಮೋಸವನ್ನು ತಿಳಿದುಕೊಳ್ಳಲು ರಾಮ್  ಸಾಧಾರಣ ಕೆಲಸಗಾರನಾಗಿ, ರಾಮನ  ಗೆಳೆಯ ಅಶೋಕ್ ಅವರು  ದೇಸಾಯಿ ಕಂಪೆನಿಯ  ಬಾಸ್ ಆಗಿ ನಾಟಕವನ್ನು ಮಾಡುತ್ತಿರುತ್ತಾರೆ.  ಈ ಸಂದರ್ಭದಲ್ಲಿ ರಾಮನಿಗೆ ಸೀತಾ ಮೇಲೆ ಪ್ರೀತಿ ಆಗಿರುತ್ತದೆ. ಆದರೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಧೈರ್ಯ ಸಾಕಾಗದೆ ರಾಮ್  ಮನಸ್ಸಿನಲ್ಲಿ ತನ್ನ ಪ್ರೀತಿಯನ್ನು ಬಚ್ಚಿಟ್ಟುಕೊಂಡಿರುತ್ತಾನೆ. . ಇದೇ ಸಂದರ್ಭದಲ್ಲಿ ಸೀತಾ ಅವರಿಗೆ ಮದುವೆ  ನಿಶ್ಚಯ ಆಗುತ್ತದೆ ಇದರಿಂದ ನಮಗೆ ಬೇಸರವಾಗಿ ಮತ್ತೆ ವಿದೇಶಕ್ಕೆ ಹೊರಡಲು ಸಿದ್ದನಾಗುತ್ತಾನೆ.  ಇದರಿಂದ ಭಾರ್ಗವಿಗೂ ಸಹ ಖುಷಿಯಾಗುತ್ತದೆ.  ಆದರೆ ಸೀರಿಯಲ್ ನಲ್ಲಿ ಮತ್ತೊಂದು ಹೊಸ ಟ್ರಸ್ಟ್ ಅನ್ನು ನೀಡಲಾಗುತ್ತದೆ.  ಅದೇನೆಂದರೆ ಸೀತಾ ಮದುವೆಯಾಗುತ್ತಿರುವ ರುದ್ರ ಪ್ರತಾಪ್ ಲಾಯರ್ ಆಗಿದ್ದು,  ಕೇವಲ ಸೀತಾ ಮೇಲಿನ ಆಸೆಯಿಂದ ಮತ್ತು ಅವಳ ಮನೆಯ ಮೇಲಿನ ಆಸೆಯಿಂದ ಸೀತಾ ಅವರನ್ನು ಮದುವೆಯಾಗಲು ಮುಂದಾಗಿರುತ್ತಾನೆ. . 

WhatsApp Group Join Now
Telegram Group Join Now

ಇದರ ಬಗ್ಗೆ ಅರಿವಿಲ್ಲದೆ ಸೀತಾ ಈ ಮದುವೆಗೆ ಒಪ್ಪಿಗೆಯನ್ನು ಸೂಚಿಸಿರುತ್ತಾಳೆ. . ಇದೇ ಸಂದರ್ಭದಲ್ಲಿ ಸೀತಾ ಮನೆಯನ್ನು ಖರೀದಿಸಲು ಬಂದ ಇಬ್ಬರು ವ್ಯಕ್ತಿಗಳು ಬಂದು ಇಲ್ಲಿ ಒಂದು ಮನೆ ಮಾರಾಟಕ್ಕಿದೆ ಎಂದು ಸಿಹಿ ಅವರ ತಾತನ ಹತ್ತಿರ ಕೇಳುತ್ತಾರೆ.  ಆಗ ತಾತ ಯಾವುದೇ ರೀತಿಯ ಮನೆ ಮಾರಾಟಕ್ಕೆ ಇಲ್ಲ ಎಂದು ಹೇಳುತ್ತಾನೆ ಇದನ್ನು ಗಮನಿಸಿದ ಸೀತಾವರ ಅತ್ತಿಗೆ ಒಂದು ಅವರ ಹತ್ತಿರ ಮಾತನಾಡುತ್ತಾರೆ. ಆಗ ಇವರು ರುದ್ರ ಪ್ರತಾಪ್ ಕಡೆಯವರು ಎಂದು,  ಆಗ ಸೀತಾಾವರ ಅತ್ತಿಗೆ ಹೇಳುತ್ತಾರೆ ಈಗ ಮದುವೆ ನಡೆಯುತ್ತದೆ ಮದುವೆಯಾದ ನಂತರ ಈ ಮನೆಯನ್ನು ನಿಮಗೆ ಮಾಡಲಾಗುತ್ತದೆ ಈಗ ನೀವು ಹೊರಡಿ ಎಂದು ಹೇಳುತ್ತಾರೆ. ಆದರೆ ಅವರು ಅಲ್ಲೇ ಯೋಚಿಸುತ್ತಾ ನಿಂತಿರುತ್ತಾರೆ ಇದನ್ನು  ರುದ್ರ ಪ್ರತಾಪ್ ಗಮನಕ್ಕೆ ಸೀತಾಾವರ  ಅತ್ತಿಗೆ ತರುತ್ತಾರೆ. . ಇದೇ ಸಮಯದಲ್ಲಿ  ಸಿಹಿ  ವಟಾರದ ಮಕ್ಕಳೊಂದಿಗೆ ಕಣ್ಣ ಮುಚ್ಚಾಲೆ ಆಡುತ್ತಿರುತ್ತಾಳೆ. ಈ ಸಂದರ್ಭದಲ್ಲಿ ಮನೆಯ ಒಂದು ರೂಮಿನಲ್ಲಿ ಬಚ್ಚಿಟ್ಟುಕೊಳ್ಳುತ್ತಾಳೆ. . ಅದೇ ಸಂದರ್ಭದಲ್ಲಿ ಸಿಹಿ ಬಚ್ಚಿಟ್ಟುಕೊಂಡಿದ್ದ ರೂಮಿನ ಬಾಗಿಲ ಬಳಿ ಬಂದು ರುದ್ರ ಪ್ರತಾಪ್ ಮನೆಯನ್ನು ಖರೀದಿಸಲು ಬಂದ ಜನರಿಗೆ ಹೇಳುತ್ತಾನೆ ಈಗ ಮದುವೆ ನಡೆಯುತ್ತದೆ ಮದುವೆ ಆದ ನಂತರ ಈ ಮನೆಯನ್ನು ನಾನು ನಿಮಗೆ ಮಾರುತ್ತೇನೆ ಈಗ ನೀವು ಹೊರಡಿ ಎಂದು  ಗದರುತ್ತನೆ.  ಹಾಗೆ ಸೀತಾಳ ಅತ್ತಿಗೆಗೆ ಈ ಮದುವೆಯಾದ ನಂತರ  ಸಿಹಿಯನ್ನು ಅನಾಥಾಶ್ರಮಕ್ಕೆ ಸೇರಿಸಬೇಕು ಎಂದು ಹೇಳುತ್ತಾನೆ.  ಇದನ್ನು ಕೇಳಿಸಿಕೊಂಡ ಸಿಹಿ ತುಂಬಾ ಅಳುತ್ತಾಳೆ.  ಇದನ್ನು ಹೇಳಲು ಸೀತಾ ಹತ್ತಿರ ಹೋಗುತ್ತಾಳೆ ಇದನ್ನು ಗಮನಿಸಿದ ರುದ್ರ ಪ್ರತಾಪ್ ಸಿಹಿಯನ್ನು ಒಂದು ರೂಮ್ನಲ್ಲಿ ಕೂಡಿ ಹಾಕುತ್ತಾನೆ.  ಈ ಕಡೆ ರಾಮ ಭಾರತವನ್ನು ಬಿಟ್ಟು ವಿದೇಶಕ್ಕೆ ಹೊರಡಲು ಸಿದ್ದನಾಗಿರುತ್ತಾನೆ.

 ಈ ಸಮಯದಲ್ಲಿ ರಾಮನಿಗೆ ರುದ್ರ ಪ್ರತಾಪ್ ಎಲ್ಲ ಸಂಚು ತಿಳಿದು ವಾಪಸ್ ವಟಾರಕ್ಕೆ ಹೊರಡಲು ಸಿದ್ದನಾಗುತ್ತಾನೆ. ಹಾಗೆ ಅಶೋಕ್ ಅವರಿಗೆ ರುದ್ರ ಪ್ರತಾಪ್ ಬಗ್ಗೆ ತಿಳಿದುಕೊಳ್ಳಲು ಹೇಳುತ್ತಾನೆ.  ವಟಾರದಲ್ಲಿ ಮುಹೂರ್ತ ಹತ್ತಿರ ಬಂದ ಕಾರಣ ಹಾರ ಬದಲಾಯಿಸಲು ಹೇಳುತ್ತಾರೆ.  ಆದರೆ  ಸಿಹಿ  ಇರದ ಕಾರಣ ನಾನು ಮದುವೆಯಾಗುವುದಿಲ್ಲ ಎಂದು ಸೀತ ಹಠ ಮಾಡುತ್ತಾಳೆ. , ಆದರೆ ಅಲ್ಲಿರುವವರೆಲ್ಲ  ಸೀತಾಳನ್ನು ಒಪ್ಪಿಸಿ ಹಾರ ಬದಲಾಯಿಸುತ್ತಾರೆ.  ಅದೇ ಸಮಯಕ್ಕೆ ರಾಮ್ ಬಂದು ಮದುವೆ ನಿಲ್ಲಿಸಲು ಹೇಳುತ್ತಾನೆ ಇದನ್ನು ನೋಡಿದ ರುದ್ರ ಪ್ರತಾಪ್ ತನ್ನ ಕಡಾಯ ಅವರನ್ನು ಕಳುಹಿಸಿ ರಾಮ್ ಗೆ ಹೊಡೆಸಲು ಮುಂದಾಗುತ್ತಾನೆ ಆದರೆ ರಾಮ ಅವರಿಗೆ ಹೊಡೆದು ಹೆಡೆಮುರಿ ಕಟ್ಟಿ ಬಿಸಾಕುತ್ತಾನೆ.  ನಂತರ ಸೀತಾ ಹತ್ತಿರ ಬಂದು ರುದ್ರಪ್ರತಾಪ್ ಮಾಡಿರುವ  ಸಂಚನ್ನು ಬಯಲಿ ಗೆಳೆಯುತ್ತಾನೆ ಇದನ್ನು ಕೇಳಿ ಸೀತಾಗೆ ಬಹಳ ನೋವಾಗುತ್ತದೆ ಹಾಗೆ ರುದ್ರ ಪ್ರತಾಪ್ ಕೆನ್ನೆಗೆ ಹೊಡೆಯುತ್ತಾಳೆ ಹಾಗೆ ರಾಮ್ ಪೊಲೀಸರಿಗೆ ಇವನನ್ನು ಹಿಡಿದು ಕೊಡುತ್ತಾನೆ.  ಇದಾದ ನಂತರ ರಾಮ್ ವಿದೇಶಕ್ಕೆ ಹೋಗದೆ ಇಂಡಿಯಾದಲ್ಲಿ ಇರಲು ಮನಸ್ಸು ಮಾಡುತ್ತಾನೆ. ಇದರಿಂದ ಅಶೋಕ್ ಹಾಗೂ ರಾಮನ ತಾತನಿಗೂ ಖುಷಿಯಾಗುತ್ತದೆ. 

 ಹಾಗೆ ರಾಮ ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಮುಂದಾಗುತ್ತಾನೆ, ಮತ್ತು ತಾನು ದೇಸಾಯಿ ಕುಟುಂಬದ ಮೊಮ್ಮಗ ಎಂದು ಸಹ ಹೇಳಲು ಮನಸ್ಸು ಮಾಡುತ್ತಾನೆ.  ಆದರೆ ಅಷ್ಟರಲ್ಲಿ ಕಂಪನಿಗೆ ಬಂದ ಭಾರ್ಗವಿಗೆ ಸೀತಾ ಗುಡ್ ಮಾರ್ನಿಂಗ್ ಎಂದು ವಿಶ್ ಮಾಡುತ್ತಾಳೆ. ಇದನ್ನು ಕೇಳಿದ ಭಾರ್ಗವಿಗೆ ಶಾಕ್ ಆಗುತ್ತದೆ ಮದುವೆಯಾದ ಮರುದಿನವೇ ಆಫೀಸ್ಗೆ ಬಂದಿದ್ದಾಳೆ ಸೀತಾ ಎಂದು.  ನಂತರ ಮ್ಯಾನೇಜರ್ ಅವರನ್ನು ಕೇಳಿದಾಗ ಭಾರ್ಗವಿಗೆ ತಿಳಿಯುತ್ತದೆ ಸೀತಾ ಮದುವೆ ನಿಂತು ಹೋಗಿದೆ ಎಂದು.  ಹಾಗೆ ಸೀತಾ ಬೇಜವಾಬ್ದಾರಿ ಎಂಪ್ಲಾಯಿ ಎಂದು ಬಯ್ಯುತ್ತಾನೆ ಮತ್ತು ಅವಳ ಫ್ರೆಂಡ್ ರಾಮ ಇನ್ನು ಅಯೋಗ್ಯ ಎಂದು ಭಯ್ಯುತ್ತಾನೆ, ಆಗ  ಭಾರ್ಗವಿ ನಮ್ಮ ಮನೆಯ ಮಗನನ್ನು ಈ ರೀತಿಯಾಗಿ ಹೇಳಲು ಹೇಗೆ ಮನಸ್ಸು ಬಂತು ಎಂದು ಹೇಳಿದಾಗ, ಮ್ಯಾನೇಜರ್ ಹೇಳುತ್ತಾನೆ ಅಶೋಕ್ ಸರ್ ಅಲ್ಲವೇ ರಾಮ್ ಹೇಗೆ ಆಗಲು ಸಾಧ್ಯ ಎಂದು ಕೇಳುತ್ತಾರೆ ಆಗ ಭಾರ್ಗವಿಗೆ ಸತ್ಯ ಏನೆಂದು ಅರ್ಥವಾಗುತ್ತದೆ.  ರಾಮ್  ಕಂಪನಿಯಲ್ಲಿ ಸಾಧಾರಣ ಎಂಪ್ಲಾಯಿ ಯಾಗೆ ಕೆಲಸವನ್ನು ಮಾಡುತ್ತಿದ್ದಾನೆ. ಅಶೋಕ್ ನನ್ನು ಬಾಸ್ ಎಂದು ಎಲ್ಲರಿಗೂ ಹೇಳಿದ್ದಾನೆ ಎಂದು ತಿಳಿಯುತ್ತದೆ ಇದರಿಂದ ಭಾರ್ಗವಿಗೆ ಎಲ್ಲ ಸತ್ಯವು ತಿಳಿಯುತ್ತದೆ.  ಸೀತಾ ಎಲ್ಲವನ್ನು ಮರೆತ ಕಂಪನಿಗೆ ಹೊರಡುತ್ತಾಳೆ ಹಾಗೆ ಸಿಹಿಯು ಸಹ ಶಾಲೆಗೆ ಹೋಗುತ್ತಾಳೆ.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು ಶುಭದಿನ.

Leave a Comment