2023-24 ರ SSLC ವಾರ್ಷಿಕ ಪರೀಕ್ಷೆಯ ನೋಂದಣಿ ಪ್ರಾರಂಭ! 2024ರ SSLC ಪರೀಕ್ಷೆ ಈಗ ಇನ್ನಷ್ಟು ಕಠಿಣ! 

2023-24 ರ SSLC  ವಾರ್ಷಿಕ ಪರೀಕ್ಷೆಯ ನೋಂದಣಿ ಪ್ರಾರಂಭ!

ಎಲ್ಲರಿಗೂ ನಮಸ್ಕಾರ 2023-24ರ SSLC  ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ನೋಂದಣಿ ಪ್ರಾರಂಭವಾಗಿದೆ. SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ರಾಜ್ಯ ಸರ್ಕಾರ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಶುಲ್ಕವನ್ನು ಪಾವತಿಸಿ SSLC  ವಾರ್ಷಿಕ ಪರೀಕ್ಷೆಯನ್ನು ಬರೆಯಬಹುದಾಗಿದೆ.  ಖಾಸಗಿ,  ಸರ್ಕಾರಿ ಅಥವಾ ಕಳೆದ ವರ್ಷ SSLC  ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಈ ದಿನಾಂಕದೊಳಗೆ ಶುಲ್ಕವನ್ನು ಪಾವತಿಸಿ SSLC  ಪರೀಕ್ಷೆಗೆ ನೋಂದಣಿಯನ್ನು ಮಾಡಿಕೊಳ್ಳಬೇಕೆಂದು ರಾಜ್ಯ ಸರ್ಕಾರ ತಿಳಿಸಿದೆ. ಯಾವ ದಿನಾಂಕದೊಳಗೆ  ಅರ್ಜಿ ಶುಲ್ಕವನ್ನು ಪಾವತಿಸಬೇಕು ಮತ್ತು  ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು? ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು.  ಹಾಗಾಗಿ ಲೇಖನವನ್ನು ಪೂರ್ತಿಯಾಗಿ ಓದಿ. 

WhatsApp Group Join Now
Telegram Group Join Now

2024ರ SSLC ಪರೀಕ್ಷೆ ಈಗ ಇನ್ನಷ್ಟು ಕಠಿಣ! 

ನಿಮಗೆಲ್ಲ ತಿಳಿದಿರುವ ಹಾಗೆ ಪ್ರತಿ ವರ್ಷವೂ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತಿತ್ತು ಅದೇ ರೀತಿ ಈ ವರ್ಷವೂ ಸಹ ಯಾವುದೇ ರೀತಿಯ ತೊಂದರೆಯಾಗದಂತೆ ವಿದ್ಯಾರ್ಥಿಗಳು ಚಿಂತೆ ಇಲ್ಲದೆ ಪರೀಕ್ಷೆಯನ್ನು ಬರೆಯಬಹುದಾಗಿದೆ.   ಸಿ ಸಿ ಕ್ಯಾಮೆರಾ ಅಳವಡಿಕೆ : ಮುಖ್ಯವಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.  ಮೊದಲು ಸಹ  ಸಿಸಿಟಿವಿ  ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿತ್ತು ಆದರೆ ಈ ಬಾರಿ ಶಾಲೆಯ ಸುತ್ತಮುತ್ತ, ಹಾಗೂ ಕೊಠಡಿ ಎಲ್ಲಾ ಕಡೆಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ  ಮಾಡಲು ನಿಯಮವನ್ನು ಜಾರಿಗೆ ತಂದಿದೆ, ಮತ್ತು 24 ಗಂಟೆಗಳಲ್ಲೂ ಸಿಸಿಟಿವಿ ಕ್ಯಾಮೆರಾ ಕಾರ್ಯ ನಿರ್ವಹಿಸುವಂತೆ,  ಎಲ್ಲಾ  ಮೂಲ ಸೌಕರ್ಯಗಳು ಇರುವಂತೆ ರಾಜ್ಯ ಸರ್ಕಾರ ತಿಳಿಸಿದೆ.

ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಮಾತ್ರ :  ಈ ಹಿಂದೆ  ಪರೀಕ್ಷೆ ಬರೆಯುವ ಕೊಠಡಿಗಳಲ್ಲಿ 30 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಬಹುದಾಗಿತ್ತು.  ಆದರೆ ಈ ಬಾರಿ ಪರೀಕ್ಷೆ ಬರೆಯುವ ಕೊಠಡಿಗಳಲ್ಲಿ ಕೇವಲ 24 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಯನ್ನು ಬರೆಯಬೇಕು.

ಪರೀಕ್ಷೆ ಬರೆಯುವ ಕೇಂದ್ರದಲ್ಲಿ ಈ ಬಾರಿ ಕೇವಲ 400 ವಿದ್ಯಾರ್ಥಿಗಳು ಮಾತ್ರ :  ಈ ಹಿಂದೆ 1000 ಕಿಂತ  ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಬರೆಯಲಾಗುತ್ತಿತ್ತು ಆದರೆ ಈ ಬಾರಿ ಕೇವಲ 400 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಯನ್ನು ಬರೆಯಬೇಕು. ಹೀಗಾಗಿ ಪರೀಕ್ಷಾ ಕೇಂದ್ರಗಳನ್ನಾಗಿ ಪಿಯುಸಿ, ಎಸ್ ಎಸ್ ಎಲ್ ಸಿ  ಶಾಲೆಗಳಲ್ಲಿ  ಇನ್ನುಳಿದ ವಿದ್ಯಾರ್ಥಿಗಳು ಬರೆಯಲು ಅನುವು ಮಾಡಿಕೊಟ್ಟಿದೆ. 

2023-24 ರ SSLC  ಪರೀಕ್ಷೆಯ ನೊಂದಣಿ ಮತ್ತು ಪಾವತಿ ಶುಲ್ಕ.

2023-24ರ SSLC  ಪರೀಕ್ಷೆಯ ನೊಂದಣಿ ಈಗಾಗಲೇ ಪ್ರಾರಂಭವಾಗಿದೆ.  ಹಾಗಾಗಿ ಖಾಸಗಿ ಮತ್ತು 2023ರ  ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಈ ಕೂಡಲೇ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.  ಈಗಾಗಲೇ  10 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ವಿದ್ಯಾರ್ಥಿಗಳು ನೊಂದಣಿಯನ್ನು ಮಾಡಿಕೊಂಡಿದ್ದಾರೆ.  ಜನವರಿ 2 ರಿಂದ11 ವರೆಗೆ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.  ನಿಮ್ಮ ಹತ್ತಿರದ ಸೈಬರ್ ಸೆಂಟರ್ಗಳಿಗೆ ಹೋಗಿ ನೊಂದಣಿಯನ್ನು ಮಾಡಿಕೊಳ್ಳಬಹುದು. ಅಥವಾ ಆನ್ಲೈನ್ ನ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ 2023-24 ರ ಸಾಲಿನ SSLC  ಪರೀಕ್ಷೆಯ  ನೋಂದಣಿಯನ್ನು ಮಾಡಿಕೊಳ್ಳಬಹುದು. 

Official website : sslc.karnataka.gov.in 

ಮೇಲೆ ನೀಡಿರುವ  ಅಫೀಶಿಯಲ್ ವೆಬ್ಸೈಟ್ಗೆ ಭೇಟಿ ನೀಡಿ ಸಂಬಂಧ ಪಟ್ಟ ದಾಖಲೆಗಳನ್ನು ಮತ್ತು ಅಭ್ಯರ್ಥಿಯ ವಿಳಾಸ , ಅರ್ಜಿ ಶುಲ್ಕವನ್ನು  ಪಾವತಿಸಿ ನೋಂದಣಿಯನ್ನು  ಮಾಡಿಕೊಂಡು,  ನೊಂದಣಿ ಪತ್ರವನ್ನು ಪಡೆದುಕೊಳ್ಳಬಹುದು. ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು ಶುಭದಿನ.

Leave a Comment