LPG ಗ್ಯಾಸ್ ಸಬ್ಸಿಡಿ ಹಣ ಪಡೆಯಲು E-KYC ಕಡ್ಡಾಯ ! ಈ ನಿಯಮ ಯಾರಿಗೆಲ್ಲ ಅನ್ವಯವಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯಿರಿ.

ಎಲ್ಲರಿಗೂ ನಮಸ್ಕಾರ…

ಎಲ್ಲಾ ಭಾರತೀಯರು ಕೂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಈಗಾಗಲೇ ಎಲ್‍ಪಿಜಿ ಗ್ಯಾಸ್ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಎಲ್ಪಿಜಿ ಗ್ಯಾಸ್ ಸಬ್ಸಿಡಿ ಹಣವನ್ನು ಜನವರಿಯಿಂದ ಕಡ್ಡಾಯವಾಗಿ ಪಡೆದುಕೊಳ್ಳಲು E-KYC ಯನ್ನು ಮಾಡಿಸಬೇಕೆಂಬ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿದೆ. ಈ ಸುದ್ದಿಯು ನಿಜವೋ ಅಥವಾ ಸುಳ್ಳು ಎಂದು ಯಾರಿಗೂ ಕೂಡ ಈವರೆಗೂ ತಿಳಿದಿಲ್ಲ. ಆದರೆ ಉಜ್ವಲ ಯೋಜನೆಯ ಸಿಬ್ಬಂದಿಗಳು ಈ ಸುದ್ದಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಯಾರು ಗ್ಯಾಸ್ ಸಬ್ಸಿಡಿಯನ್ನು ಪಡೆಯುತ್ತಾರೋ ಅಂಥವರು ಮಾತ್ರ ಈ ಒಂದು ನಿಯಮವನ್ನು ಪಾಲಿಸತಕ್ಕದ್ದು.

WhatsApp Group Join Now
Telegram Group Join Now

ಬೇರೆ ಗ್ರಾಹಕರಿಗೆ ಇದು ಅನ್ವಯವಾಗುವುದಿಲ್ಲ. ಈ ಒಂದು ಸುದ್ದಿಯಿಂದಲೇ ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ಗ್ರಾಹಕರು ಈ ಕೆವೈಸಿಯನ್ನು ಮಾಡಿಸಬೇಕೆಂದು ಸಾಲುಗಟ್ಟಲೆ ನಿಲ್ಲುತ್ತಿದ್ದಾರೆ. ಈ ಒಂದು ಸುದ್ದಿಗೆ ಈಗಾಗಲೇ ಸ್ಪಷ್ಟನೆಯನ್ನು ಉಜ್ವಲ ಯೋಜನೆ ಅಡಿ ನೀಡಲಾಗಿದೆ. ನಗರ ಪ್ರದೇಶಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಕೂಡ ಈ ಒಂದು ಸುದ್ದಿಯನ್ನು ಕೇಳಿ ಎಲ್ಲಾ ಗ್ರಾಹಕರು ತಮ್ಮ ತಮ್ಮ ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ಈಕೆ ವೈ ಸಿ ಯನ್ನು ಮಾಡಿಸಲೇಬೇಕು, ಮಾಡಿಸದಿದ್ದರೆ ಸಬ್ಸಿಡಿ ಬರುವುದಿಲ್ಲ ಎಂದು ಅಂದುಕೊಂಡು ಈ ರೀತಿಯ ಒಂದು ಕೆಲಸವನ್ನು ಎಲ್ಲ ಜನರು ಕೂಡ ಮಾಡುತ್ತಿದ್ದಾರೆ.

ಆದರೆ ಕೆವೈಸಿ ನಿಯಮವು ಎಲ್ಲಾ ಗ್ರಾಹಕರಿಗೂ ಕೂಡ ಅನ್ವಯವಾಗುವುದಿಲ್ಲ. ಹಾಗಾಗಿ ನೀವು ಗ್ಯಾಸ್ ಏಜೆನ್ಸಿಗಳ ಬಳಿ ಹೋಗುವ ಅವಶ್ಯಕತೆಯೇ ಇಲ್ಲ. ಆದರೆ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ ಹಣವನ್ನು ಪಡೆದುಕೊಳ್ಳುವ ಫಲಾನುಭವಿಗಳು ಮಾತ್ರ ಈ ಒಂದು ಕೆವೈಸಿ ನಿಯಮವನ್ನು ಪಾಲಿಸಿ ತಮಗೆ ಸಲ್ಲಬೇಕಾದ ಹಣವನ್ನು ಪ್ರತಿ ತಿಂಗಳು ಪಡೆಯ ತಕ್ಕದ್ದು ಇದು ಅವರಿಗೆ ಮಾತ್ರ ಅನ್ವಯವಾಗುತ್ತದೆ. ನೀವು ಕೂಡ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ ಹಣವನ್ನು ಪ್ರತಿ ತಿಂಗಳು ಪಡೆಯುತ್ತಿದ್ದರೆ.

ಈ ಕೂಡಲೇ ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ಆಧಾರ್ ಕಾರ್ಡ್ ಪಡಿತರ ಚೀಟಿ ಹಾಗೂ ಗ್ಯಾಸ್ ಪುಸ್ತಕ ವನ್ನು ತೆಗೆದುಕೊಂಡು ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿರಿ ಅನಂತರ ಈ ವೈಸಿ ಯನ್ನು ಮಾಡಿಸಬೇಕು ಈಕೆ ವೈಸಿ ಮಾಡಿಸಲು ಡಿಸೆಂಬರ್ 31ನೇ ದಿನಾಂಕ ವಾಗಿದೆ ಆದ್ದರಿಂದ ನೀವು ಈ ಕೂಡಲೇ ಈ ಕೆವೈಸಿಯನ್ನು ಮಾಡಿಸಿರಿ. ಆಹಾರ ಇಲಾಖೆಯ ಉಪನಿರ್ದೇಶಕರು ಈ ಒಂದು ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ಯಾರು ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ ಹಣವನ್ನು ಪಡೆಯುತ್ತಾರೋ ಅಂತಹ ಫಲಾನುಭವಿಗಳು ಮಾತ್ರ ಈ ಕೆವೈಸಿಯನ್ನು ಮಾಡಿಸತಕ್ಕದ್ದು.

ಆದರೆ ಈವರೆಗೂ ಯಾವುದೇ ರೀತಿಯ ಸಬ್ಸಿಡಿ ಹಣವನ್ನು ಪಡೆಯಲಿಲ್ಲದ ಗ್ರಾಹಕರು ಯಾವುದೇ ರೀತಿಯ ಕೆವೈಸಿ ಯನ್ನು ಮಾಡಿಸಬಾರದು ಎಂದು ತಿಳಿಸಿದ್ದಾರೆ. ಈ ಒಂದು ಘೋಷಣೆಯಿಂದ ಎಲ್ಲರೂ ಕೂಡ ಜವಾಬ್ದಾರರಾಗಿರಿ. ನಿಮ್ಮ ದೈನಂದಿನದ ಕೆಲಸವನ್ನು ಬಿಟ್ಟು ಗ್ಯಾಸ್ ಏಜೆನ್ಸಿಗಳ ಬಳಿ ಹೋಗುವ ಅವಶ್ಯಕತೆ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಗಳಲ್ಲಿ ಎಲ್ಲಾ ಎಲ್‌ಪಿಜಿ ಗ್ಯಾಸ್ ಗ್ರಾಹಕರು ಈಕೆವೈಸಿಯನ್ನು ಮಾಡಿಸಬೇಕೆಂಬ ಸಂದೇಶ ಹರಿದಾಡುತ್ತಿದೆ ಆ ಸಂದೇಶವು ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ ಅನ್ವಯವಾಗುವುದಿಲ್ಲ.

ಯಾರು ಎಲ್ಪಿಜಿ ಗ್ಯಾಸ್ ಸಬ್ಸಿಡಿಯನ್ನು ಪಡೆಯುತ್ತಾರೋ ಅಂತಹ ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಒಂದು ನಿಯಮ ಕಡ್ಡಾಯವಾಗಿದೆ. ನೀವು ಕೂಡ ಗ್ಯಾಸ್ ಸಬ್ಸಿಡಿಯನ್ನು ಪಡೆಯುತ್ತಿದ್ದರೆ ನಿಮಗೂ ಕೂಡ ಅನ್ವಯವಾಗುತ್ತದೆ. ಹಾಗಾಗಿ ಗೊಂದಲಕರವಾದ ಸುದ್ದಿಯನ್ನು ಸ್ಪಷ್ಟನೆ ಮಾಡಿಕೊಂಡು ಆನಂತರ ನೀವು ಈ ಕೆವೈಸಿಯನ್ನು ಮಾಡಿಸಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment