KSRTC ಯಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಒಂದು ಗುಡ್ ನ್ಯೂಸ್! 1 ಕೋಟಿ ವಿಮೆ.

ಎಲ್ಲರಿಗೂ ನಮಸ್ಕಾರ, 

KSRTC : ಕೆ ಎಸ್ ಆರ್ ಟಿ ಸಿ ಯಲ್ಲಿ  ಕೆಲಸವನ್ನು ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಒಂದು ಗುಡ್ ನ್ಯೂಸ್! 

WhatsApp Group Join Now
Telegram Group Join Now

ಸರ್ಕಾರಿ ದಿಂದ  ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ  ತಲಾ 1 ಕೋಟಿ ನೀಡಲಾಗುತ್ತದೆ. KSRTC   ಸಾರಿಗೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ತಲಾ ಒಂದು ಕೋಟಿ  ವಿಮೆ ಪರಿಹಾರವನ್ನು ವಿತರಿಸಿದ ಸಚಿವ ರಾಮಲಿಂಗಾರೆಡ್ಡಿ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಈಗಾಗಲೇ 70000 ಕಿಂತ ಅಧಿಕ ಸಿಬ್ಬಂದಿಗಳು ಕೆಲಸವನ್ನು ನಿರ್ವಹಿಸುತ್ತಿದ್ದು,  ಇದರಲ್ಲಿ ಪ್ರತಿ ವರ್ಷವೂ 200 ಕ್ಕಿಂತ ಅಧಿಕ ಜನ ರಸ್ತೆ ಅಪಘಾತದಲ್ಲಿ  ಮರಣವನ್ನು ಹೊಂದುತ್ತಿದ್ದು,ಮತ್ತು ಇನ್ನಿತರ ಕಾರಣದಿಂದ ವ್ರತವನ್ನು ಹೊಂದಿದ  ಸಿಬ್ಬಂದಿಗಳ ಕುಟುಂಬಗಳಿಗೆ ಈ ಹಿಂದೆ 3  ಲಕ್ಷ  ಪರಿಹಾರ ಸಿಗುತ್ತಿತ್ತು. ಆದರೆ ಇದೀಗ ಸಿಬ್ಬಂದಿಗಳ ಕುಟುಂಬಗಳಿಗೆ 1  ಕೋಟಿ ವಿಮೆ ಪರಿಹಾರವನ್ನು ನೀಡಲಾಗುತ್ತಿದೆ. ಈಗಾಗಲೇ ಮರಣ ಹೊಂದಿರುವ ಸಿಬ್ಬಂದಿಗಳ ಕುಟುಂಬದವರು ಹೇಗೆ ಈ ವಿಮೆಯನ್ನು ಪಡೆದುಕೊಳ್ಳಬೇಕು ಮತ್ತು ಇದರ ಬಗ್ಗೆ ತಿಳಿದುಕೊಳ್ಳಲು  ಈ ಲೇಖನವನ್ನು ಪೂರ್ತಿಯಾಗಿ ಓದಿ. 

ಪುರಾತನ ನಾಗರಿಕತೆಗಳ ಕಾಲದಿಂದಲೂ ಸಾರಿಗೆ ವ್ಯವಸ್ಥೆ ಕಂಡುಬಂದಿದೆ.  ಒಂದಲ್ಲ ಒಂದು ರೀತಿಯಲ್ಲಿ ಜನರ ಜೀವನದ ಭಾಗವಾಗಿದೆ.  ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸಲು ಮತ್ತು ಸರಕುಗಳನ್ನು  ರವಾನಿಸಲು ಸಾರಿಗೆ ವ್ಯವಸ್ಥೆ ಬೇಕೇ ಬೇಕು. . ಈ ಹಿಂದೆ ಜನರು ಹಲವು ರೀತಿಯ ಸಾರಿಗೆ ವ್ಯವಸ್ಥೆಯನ್ನು ಬಳಸುತ್ತಿದ್ದರು.  ಬದಲಾದ ಕಾಲಘಟ್ಟದಲ್ಲಿ, ತಂತ್ರಜ್ಞಾನ,  ಆವಿಷ್ಕಾರದ ಕಾರಣದಿಂದಾಗಿ  ಸುಧಾರಿತ, ವಿಭಿನ್ನವಾದ ಸಾರಿಗೆಗಳು ಅಸ್ತಿತ್ವಕ್ಕೆ ಬಂದಿತು.  ಎಲ್ಲಾ ದೇಶದಲ್ಲೂ ಇರುವಂತೆ ಭಾರತದಲ್ಲಿ ಸಹ ನಾಲ್ಕು ಮುಖ್ಯವಾದ ಸಾರಿಗೆ ವ್ಯವಸ್ಥೆಗಳಿವೆ.  ರಸ್ತೆ ಸಾರಿಗೆ, ವಾಯು ಸಾರಿಗೆ, ರೈಲು ಸಾರಿಗೆ  ಮತ್ತು ಜಲ ಸಾರಿಗೆ,  ಇದರಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ಬಳಸುವ ಸಾರಿಗೆ ರಸ್ತೆ ಸಾರಿಗೆಯಾಗಿದ್ದು, ಅತಿ ಹೆಚ್ಚು ಜನರು ರಸ್ತೆ ಸಾರಿಗೆಯ ಮೇಲೆ ಅವಲಂಬಿತ ರಾಗಿದ್ದಾರೆ.ಕರ್ನಾಟಕ ರಾಜ್ಯದಲ್ಲಿ ಪ್ರಮುಖವಾಗಿ 4  ನಿಗಮಗಳಾಗಿ ವಿಂಗಡಿಸಲಾಗಿದೆ.  KSRTC,NWRTC,BMTC,KKRTC . ಇದರಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಸಿಬ್ಬಂದಿಗಳು ಮರಣವನ್ನು ಹೊಂದಿದರೆ ಕೇವಲ ಮೂರು ಲಕ್ಷ ಪರಿಹಾರ ಸಿಗುತ್ತಿತ್ತು ಆದರೆ ಇದೀಗ ಒಂದು ಕೋಟಿ ವಿಮೆ ಪರಿಹಾರವನ್ನು ಸಿಬ್ಬಂದಿಯ ಕುಟುಂಬಕ್ಕೆ ನೀಡಲಾಗುತ್ತಿದೆ.  ಈಗಾಗಲೇ ಅಪಘಾತದಲ್ಲಿ ಮೃತಪಟ್ಟಿರುವ ಕೆಎಸ್ಆರ್ಟಿಸಿಯ ಮೂವರು ಸಿಬ್ಬಂದಿಯ ಕುಟುಂಬಗಳಿಗೆ ಸೋಮವಾರ ವಿಮೆ ಪರಿಹಾರವಾಗಿ ತಲವೊಂದು ಕೋಟಿ ವಿತರಣೆ ಮಾಡಲಾಯಿತು.  ಇದರ ಜೊತೆಗೆ ವಿಮೆ ಪರಿಹಾರ ವಿತರಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ,  ಅಪಘಾತ ಅಥವಾ ಇನ್ನಿತರ ಕಾರಣದಿಂದ ಮೃತಪಟ್ಟವರಿಗೆ ಈ ಹಿಂದೆ 3,00,000 ಪರಿಹಾರ ಸಿಗುತ್ತಿತ್ತು. ಇದರಿಂದ  ಮೃತಪಟ್ಟ ಸಿಬ್ಬಂದಿಗಳ ಕುಟುಂಬಕ್ಕೆಸಣ್ಣ ಪ್ರಮಾಣದಲ್ಲಿ ಆರ್ಥಿಕ ನೆರವನ್ನು ಸರ್ಕಾರ ನೀಡುತ್ತಿದ್ದು, ಆದರೆ ಇದೀಗ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯಿಂದ 50 ಲಕ್ಷ,  ಸ್‌ಬಿಐ ಕಾರ್ಪೊರೇಟರ್ ಸ್ಯಾಲರಿ ಪ್ಯಾಕೇಜ್ ವಿಮೆಯಿಂದ 50 ಲಕ್ಷ ಸೇರಿ ಒಟ್ಟು 1  ಕೋಟಿ  ಪರಿಹಾರ ನೀಡುವ ಯೋಜನೆಯನ್ನು ಕೈಗೊಂಡಿದ್ದು ಇದರಿಂದ ಮೃತಪಟ್ಟ ಸಿಬ್ಬಂದಿಗಳ ಕುಟುಂಬಕ್ಕೆ ಆರ್ಥಿಕವಾಗಿ ಸರ್ಕಾರವು ನೆರವಾಗುತ್ತಿದೆ. ಇದರಿಂದ ಸಾರಿಗೆ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಯಾವುದೇ ರೀತಿಯ ಭಯವಿಲ್ಲದೆ ಕೆಲಸವನ್ನು ನಿರ್ವಹಿಸಬಹುದು.  ಈ ಯೋಜನೆಯನ್ನು ವರ್ಷದ ಹಿಂದೆ ಜಾರಿಗೆ ತರಲಾಗಿತ್ತು.  ಅಲ್ಲಿಂದ ಇಲ್ಲಿಯವರೆಗೆ ಮೃತಪಟ್ಟ 15 ನೌಕರರ ಕುಟುಂಬಗಳಿಗೆ   ತಲಾ ಒಂದು ಕೋಟಿ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಹಾಗೂ ಇನ್ನುಳಿದ  ಮೃತಪಟ್ಟ ಸಿಬ್ಬಂದಿಗಳ ಕುಟುಂಬಗಳಿಗೆ ಮುಂದಿನ ದಿನಗಳಲ್ಲಿ ಒಂದು ಕೋಟಿ ವಿಮೆ ಪರಿಹಾರವನ್ನು ವಿತರಿಸಲಾಗುವುದು.  ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.  ಶುಭದಿನ…

Leave a Comment