2.5 ಲಕ್ಷ ಹಣ ಈ ವಿದ್ಯಾರ್ಥಿ ವೇತನದಲ್ಲಿ ಸಿಗಲಿದೆ. ಪಿಯುಸಿ ಪಾಸಾದ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಹಾಕುವ ಮುಖಾಂತರ ಲಕ್ಷ ಹಣವನ್ನು ಪಡೆದುಕೊಳ್ಳಿ.

ಎಲ್ಲರಿಗೂ ನಮಸ್ಕಾರ…

ಪಿಯುಸಿ ಪಾಸಾದ ನಂತರ ವಿಜ್ಞಾನ ಹಾಗೂ ತಂತ್ರಜ್ಞಾನದ ಶಿಕ್ಷಣವನ್ನು ಪಡೆಯಬೇಕೆಂದುಕೊಂಡಿದ್ದೀರಾ ? ಹಾಗಾದ್ರೆ ಇವತ್ತಿನ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮುಖಾಂತರ 2.5 ಲಕ್ಷ ಹಣವನ್ನು ಪಡೆದುಕೊಳ್ಳಬಹುದು. L’Oreal India ಫಾರ್ ಎಂಗ್ ವುಮೆನ್ ಇನ್ ಸೈನ್ಸ್ ಸ್ಕಾಲರ್ ಶಿಪ್ 2023 ವಿದ್ಯಾರ್ಥಿ ವೇತನಕ್ಕೆ ಈ ಕೂಡಲೇ ವಿಜ್ಞಾನ ಭಾಗದ ಯುವತಿಯರು ಅರ್ಜಿಯನ್ನು ಸಲ್ಲಿಸಬಹುದು. ಲೋರಿಯಲ್ ಇಂಡಿಯಾ ಕಡೆಯಿಂದ ಈ ಸ್ಕಾಲರ್ ಶಿಪ್ ನ ಕಾರ್ಯಕ್ರಮವನ್ನು ಹಮ್ಮಿಕೊಂಡು ಎಲ್ಲಾ ಫಲಾನುಭವಿಗಳ ಅರ್ಹ ಯುವತಿಯರಿಗೆ ಬ್ಯಾಂಕ್ ಖಾತೆಗಳ ಮೂಲಕ ಲಕ್ಷಗಟ್ಟಲೆ ಹಣವನ್ನು ಜಮಾ ಮಾಡಲಾಗುತ್ತದೆ.

WhatsApp Group Join Now
Telegram Group Join Now

ಯುವತಿಯರೇ ವಿಜ್ಞಾನ ಭಾಗವನ್ನು ತೆಗೆದುಕೊಂಡು ಶಿಕ್ಷಣವನ್ನು ಮುಂದುವರಿಸುತ್ತಿದ್ದೀರಾ ? ಹಾಗಾದ್ರೆ ನೀವು ಈ ಒಂದು ಸ್ಕಾಲರ್ಶಿಪ್‌ಗೆ ಅರ್ಹರು ಎಂದರ್ಥ, ಹಾಗಾಗಿ ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮುಖಾಂತರ ಈ ವಿದ್ಯಾರ್ಥಿ ವೇತನದ ಫಲಾನುಭವಿಗಳಾಗಿರಿ, ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಯಾವ ಯಾವ ಶಿಕ್ಷಣಕ್ಕೆ ಎಷ್ಟೆಷ್ಟು ಹಣ ಸಿಗುತ್ತದೆ ಎಂದು ಈ ಕೆಳಕಂಡ ಲೇಖನದಲ್ಲಿ ತಿಳಿದುಕೊಳ್ಳಿರಿ.

L’Oreal India ಫಾರ್ ಎಂಗ್ ವುಮೆನ್ ಇನ್ ಸೈನ್ಸ್ ಸ್ಕಾಲರ್ ಶಿಪ್ 2023 !

ಯುವತಿಯರು ವಿಜ್ಞಾನ ಭಾಗವನ್ನು ಪಿಯುಸಿಯಲ್ಲಿ ತೆಗೆದುಕೊಂಡು ನಂತರ ವೃತ್ತಿಪರ ವಿಜ್ಞಾನದ ಶಿಕ್ಷಣವನ್ನು ಮುಂದುವರಿಸಲು ಈ ಸ್ಕಾಲರ್ಶಿಪ್ ನಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಯುವತಿಯರು ಮಾತ್ರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹರು ಅವರಿಗೆ ಮಾತ್ರ ಸಂಸ್ಥೆ ಕಡೆಯಿಂದ 2.5 ಲಕ್ಷ ಹಣ ಅರ್ಜಿ ಸಲ್ಲಿಸಿದ ನಂತರ ಖಾತೆಗೆ ಹಂತ ಹಂತವಾಗಿ ವರ್ಗಾವಣೆ ಆಗುತ್ತದೆ. ಈ ಒಂದು ಸಂಸ್ಥೆಯ ಗುರಿ ಏನೆಂದರೆ 12ನೇ ತರಗತಿಯಲ್ಲಿ ಉತ್ತೀರ್ಣವಾದ ಅಂಕವನ್ನು ಗಳಿಸಿ ಯುವತಿಯರು ಮುಂದಿನ ವಿಜ್ಞಾನದ ವೃತ್ತಿಪರ ಜೀವನವನ್ನು ನಡೆಸಲು ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ, ಮತ್ತು ಆ ವಿದ್ಯಾರ್ಥಿ ವೇತನದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಶಿಕ್ಷಣಕ್ಕೆ ಬಳಸಿಕೊಂಡು ಹೆಚ್ಚಿನ ಅಭಿವೃದ್ಧಿಯನ್ನು ಓದಿನಲ್ಲಿ ಕಾಣಬಹುದು. ಯುವತಿಯರು ಇಂಜಿನಿಯರಿಂಗ್ ಅಥವಾ ಡಾಕ್ಟರ್ ಮತ್ತು ಮುಂತಾದ ಶಿಕ್ಷಣಕ್ಕೆ ಕಾಲೇಜಿನ ಶುಲ್ಕವನ್ನು ಈ ವಿದ್ಯಾರ್ಥಿ ವೇತನದಲ್ಲಿ ಬರುವ ಹಣವನ್ನು ಬಳಸಿಕೊಂಡು ನೀವು ಪಾವತಿಸಬಹುದು.

ಆ ಹಣದಿಂದಲೇ ನಿಮ್ಮ ವೃತ್ತಿಪರ ಜೀವನ ಮುಂದುವರೆಯಬೇಕೆಂಬ ಕಾರಣದಿಂದ ಸಂಸ್ಥೆಯು ಯುವತಿಯರಿಗೆ ಮಾತ್ರ ಸ್ಕಾಲರ್ಶಿಪ್ ಅನ್ನು 2.5 ಲಕ್ಷದವರೆಗೆ ಕೊಡಲು ಮುಂದಾಗಿದೆ. ದ್ವಿತೀಯ ಪಿಯುಸಿ ಆದ ನಂತರ ವಿಜ್ಞಾನ ಶಿಕ್ಷಣವನ್ನು ಮುಂದುವರಿಸಲು ಈ ವಿದ್ಯಾರ್ಥಿ ವೇತನವು ಸಹಾಯ ಮಾಡಲಿದೆ ಆ ಸಹಾಯದಿಂದಲೇ ನೀವು ಮುಂದಿನ ಶಿಕ್ಷಣವನ್ನು ಪಡೆಯುತ್ತಾ ಹೋಗಬಹುದು. ಅದೇಗೆಂದರೆ ಕಾಲೇಜಿನ ಶುಲ್ಕಗಳು ಲಕ್ಷಗಟ್ಟಲೆ ಇರುತ್ತದೆ ಒಂದೊಳ್ಳೆ ಉತ್ತಮವಾದ ಕಾಲೇಜುಗಳಿಗೆ ಸೇರಬೇಕೆಂದರೆ, ಹಾಗಾಗಿ ಈ ವಿದ್ಯಾರ್ಥಿ ವೇತನವನ್ನೇ ಲಕ್ಷಗಟ್ಟಲೆ ಹಣವನ್ನು ಶುಲ್ಕವಾಗಿ ಪಾವತಿಸಿ ನಿಮ್ಮ ಮುಂದಿನ ಶಿಕ್ಷಣವನ್ನು ಪಡೆಯಬಹುದು.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಈ ವಿದ್ಯಾರ್ಥಿ ವೇತನವು ಆರಂಭವಾದ ದಿನಾಂಕ ಈ ಹಿಂದೆಯೇ ಪ್ರಾರಂಭವಾಗಿದೆ. ಮತ್ತು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೆಂದರೆ ಜನವರಿ 7, 2024ರಂದು ಕೊನೆಗೊಳ್ಳಲಿದೆ. ನೀವೇನಾದರೂ ವಿಜ್ಞಾನ ಶಿಕ್ಷಣವನ್ನು ಪಡೆಯುತ್ತಿದ್ದೀರಾ ಹಾಗಾದ್ರೆ ಈ ವಿದ್ಯಾರ್ಥಿ ವೇತನವು ನಿಮಗೆ ಸಲ್ಲುತ್ತದೆ. ಮುಂದಿನ ಶಿಕ್ಷಣಕ್ಕೆ ಈ ಹಣವನ್ನು ಬಳಸಿಕೊಳ್ಳಿರಿ ಒಂದೊಳ್ಳೆ ಶಿಕ್ಷಣವನ್ನು ಪಡೆದು ಉತ್ತಮವಾದ ಉದ್ಯೋಗವನ್ನು ಪಡೆಯಿರಿ.

ಈ ಕೆಳಕಂಡ ಅರ್ಹತೆಯನ್ನು ಮಹಿಳಾ ಅಭ್ಯರ್ಥಿಯು ಹೊಂದಿರಬೇಕು.

 • ನೀವು 2022-23ನೇ ಸಾಲಿನಲ್ಲಿ 12ನೇ ತರಗತಿಯನ್ನು ವಿಜ್ಞಾನ ವಿಭಾಗದಲ್ಲಿ ಓದಿ 85% ಅಂಕಣವನ್ನು ಗಳಿಸಿರಬೇಕು ನಂತರ ಮುಂದಿನ ವಿಜ್ಞಾನ ಶಿಕ್ಷಣಕ್ಕೆ ಮಾತ್ರ ಈ ಹಣ ಸಿಗುತ್ತದೆ.
 • 12ನೇ ತರಗತಿಯಲ್ಲಿ PCM/ PCB/ PCMB ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ಓದಿರಬೇಕು, ಅಂತಹ ಅರ್ಹ ಮಹಿಳಾ ವಿದ್ಯಾರ್ಥಿಗಳಿಗೂ ಮಾತ್ರ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.
 • ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಯ ಕುಟುಂಬದ ಆದಾಯವು 6 ಲಕ್ಷಕ್ಕಿಂತ ಕಡಿಮೆ ಇರಬೇಕು.
 • 2023-24 ನೇ ಸಾಲಿನಲ್ಲಿ ವಿಜ್ಞಾನ ಶೈಕ್ಷಣಿಕದಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಮಾಡಲು ಸ್ನಾತಕೋತ್ತರ ಪದವಿ ಪೂರ್ವ ಕಾರ್ಯಕ್ರಮಗಳೊಂದಿಗೆ ಪ್ರವೇಶವನ್ನು ಪಡೆದಿರಬೇಕು.
 • ಈ ಒಂದು ವಿದ್ಯಾರ್ಥಿ ವೇತನದಲ್ಲಿ ಯುವತಿಯರಿಗೆ 2,50,000 ಹಣವನ್ನು ನೀಡಲಾಗುತ್ತದೆ.
 • ಲೋರಿಯಲ್ ವಿದ್ಯಾರ್ಥಿ ವೇತನಕ್ಕೆ ಯುವತಿಯರು ಯಾವುದೇ ರೀತಿಯ ಶುಲ್ಕವನ್ನು ಪಾವತಿಸುವಂತಿಲ್ಲ ಇದನ್ನು ಕೂಡ ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಪೂರೈಸಿರಿ ಯಾರಿಗೂ ಕೂಡ ಶುಲ್ಕ ಕಟ್ಟುವ ಅವಶ್ಯಕತೆ ಈ ವಿದ್ಯಾರ್ಥಿ ವೇತನದಲ್ಲಿ ಇಲ್ಲ.

ಈ ಕೆಳಕಂಡ ದಾಖಲಾತಿಗಳನ್ನು ವಿದ್ಯಾರ್ಥಿಯು ಹೊಂದಿರಬೇಕು.

 1. ವಿದ್ಯಾರ್ಥಿಯ ಆಧಾರ್ ಕಾರ್ಡ್,
 2. ಜನನ ಪ್ರಮಾಣ ಪತ್ರ,
 3. ಮತದಾರರ ಚೀಟಿ,
 4. ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಭಾವಚಿತ್ರ,
 5. ಪೋಷಕರ ಆಧಾರ್ ಕಾರ್ಡ್,
 6. ಆದಾಯ ಪ್ರಮಾಣ ಪತ್ರ,
 7. ಆದಾಯ ತೆರಿಗೆ ರಿಟರ್ನ್ಸ್ ಫಾರ್ಮ್,
 8. 10 ಹಾಗೂ 12ನೇ ತರಗತಿಯ ಅಂಕಪಟ್ಟಿ,

ಈ ಎಲ್ಲಾ ಮೇಲ್ಕಂಡ ದಾಖಲಾತಿಗಳನ್ನು ನೀವು ಕೂಡ ಹೊಂದಿದ್ದೀರಾ ? ಹಾಗಾದ್ರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಎರಡುವರೆ ಲಕ್ಷ ಹಣವನ್ನು ಪಡೆದುಕೊಳ್ಳಬಹುದು. ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಿರಿ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ.

 • ಈ ಲಿಂಕ್ ಅನ್ನು ಕ್ಲಿಕ್ Apply Online    ಮಾಡುವ ಮುಖಾಂತರ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿರಿ.
 • ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಡ್ಯಾಶ್ ಬೋರ್ಡ್ ಕಾಣಿಸ ತೊಡಗುತ್ತದೆ, ಅನಂತರ ಬಲಭಾಗದಲ್ಲಿ ರಿಜಿಸ್ಟರ್ ಎಂಬುದನ್ನು ಕ್ಲಿಕ್ಕಿಸಿರಿ, ಕ್ಲಿಕ್ಕಿಸಿದ ನಂತರ ನಿಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ರಿಜಿಸ್ಟರ್ ಆಗಿರಿ ಇದನ್ನು ಗಮನಿಸಿ :- ಈಗಾಗಲೇ ಮೊದಲೇ ರಿಜಿಸ್ಟರ್ ಆಗಿದ್ದೀರಿ ಎಂದರೆ ನೀವು ಪಾಸ್ವರ್ಡ್ ಹಾಗೂ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಬೇಕಾಗುತ್ತದೆ.
 • ಡ್ಯಾಶ್ ಬೋರ್ಡ್ ನ ಮೇಲ್ಭಾಗದಲ್ಲಿ ಅಧಿಕೃತ ಲಾಗಿನ್ ನಂತರದ ಆಯ್ಕೆಯ ಕೆಳಗೆ ಸ್ಕೂಲ್ ಅಥಾರಿಟಿ ಎಂಬುದನ್ನು ಕ್ಲಿಕ್ಕಿಸಿರಿ.
 • ಈಗ ಹೊಸ ನೋಂದಣಿಯಾಗಲು ನ್ಯಾವಿಗೇಟ್ ಅಥಾರಿಟಿ ಎಂಬುದನ್ನು ಕ್ಲಿಕ್ಕಿಸಿರಿ.
 • ನೀವೇನಾದರೂ ಮೊದಲಿಗೆ ಲಾಗಿನ್ ಆದರೆ ನಿಮ್ಮ ಶಾಲೆಯ ನೋಂದಣಿ ಸಂಖ್ಯೆಗಳನ್ನು ನಮೂದಿಸ ಲಾಗಿನ್ ಆಗಿರಿ.
 • ನೋಂದಣಿ ಪ್ರಕ್ರಿಯೆ ಮುಗಿದ ನಂತರ, ಅಗತ್ಯತೆಗೆ ಒಳಗೊಂಡ ಎಲ್ಲಾ ವಿವರಗಳನ್ನು ಕೂಡ ಭರ್ತಿ ಮಾಡಬೇಕು ಭರ್ತಿ ಮಾಡಿದ ನಂತರ,
 • Student Nomination ಎಂಬುದನ್ನು ಆಯ್ಕೆ ಮಾಡಿಕೊಳ್ಳಿರಿ
 • ಆಯ್ಕೆ ಮಾಡಿಕೊಂಡ ನಂತರ ವಿದ್ಯಾರ್ಥಿಯ ಎಲ್ಲಾ ದಾಖಲಾತಿಗಳನ್ನು ಕೂಡ ನಮೂದಿಸಬೇಕು. ನಂತರ ಕೇಳಲಾಗುವ ಭಾವಚಿತ್ರವನ್ನೆಲ್ಲ ಸಬ್ಮಿಟ್ ಮಾಡುವ ಮುಖಾಂತರ ಅರ್ಜಿಯ ಪ್ರಕ್ರಿಯೆಯನ್ನು ಮುಗಿಸಬೇಕು. ಈ ರೀತಿ ಸುಲಭವಾಗಿ ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು.

ನೀವು ಕೂಡ 12ನೇ ತರಗತಿಯನ್ನು ಉತ್ತೀರ್ಣ ಅಂಕದಲ್ಲಿ ಮುಗಿಸಿದ ನಂತರ ಮುಂದಿನ ವಿಜ್ಞಾನ ಶಿಕ್ಷಣ ವನ್ನು ಪಡೆದುಕೊಳ್ಳಬೇಕೆಂದು ಅಂದುಕೊಂಡಿದ್ದೀರಾ ಹಾಗಾದ್ರೆ ಈ ವಿದ್ಯಾರ್ಥಿ ವೇತನವನ್ನು ಬಳಸಿಕೊಂಡು ಎರಡುವರೆ ಲಕ್ಷದವರೆಗೆ ಹಣವನ್ನು ಪಡೆಯಿರಿ ಅನಂತರ ಉತ್ತಮವಾದ ಕಾಲೇಜಿನಲ್ಲಿ ಶುಲ್ಕವನ್ನು ಕೂಡ ಈ ಹಣದಲ್ಲೇ ನೀಡಿರಿ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರೆಸಿರಿ ಅನಂತರ ಉತ್ತಮವಾದ ಉದ್ಯೋಗವನ್ನು ಪಡೆದುಕೊಳ್ಳಿರಿ. ನಿಮ್ಮ ಸ್ನೇಹಿತರು ಕೂಡ 12ನೇ ತರಗತಿಯಲ್ಲಿ ಉತ್ತೀರ್ಣ ಅಂಕಗಳನ್ನು ಗಳಿಸಿದ್ದಾರೆ ಮತ್ತು ಮುಂದಿನ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರ ಹಾಗಾದ್ರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ವಿದ್ಯಾರ್ಥಿ ವೇತನದ ಬಗ್ಗೆ ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment