ಬೆಸ್ಕಾಂನಲ್ಲಿ 400 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಲೇಖನದ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಿರಿ.

ಎಲ್ಲರಿಗೂ ನಮಸ್ಕಾರ…

ಬೆಸ್ಕಾಂ ಇಲಾಖೆಯಲ್ಲಿ ಕೆಲಸವನ್ನು ಮಾಡಬೇಕೆಂದು ಅಂದುಕೊಂಡಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ, ಇಲಾಖೆಯಿಂದ 400ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಿರಿ, ನಂತರ ಬೆಸ್ಕಾಂನಲ್ಲಿ ಒಂದೊಳ್ಳೆ ಉದ್ಯೋಗವನ್ನು ಪಡೆಯಿರಿ. ಈ ಬೆಸ್ಕಾಂ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಡಿಪ್ಲೋಮೋ ಹಾಗೂ ಇನ್ನಿತರ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದನ್ನು ಮುಗಿಸಿರಬೇಕು ಅಂತಹ ಅರ್ಹ ಅಭ್ಯರ್ಥಿಗಳು ಮಾತ್ರ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯ. ಬೆಸ್ಕಾಂ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಮತ್ತು ಯಾರು ಈ ಒಂದು ಹುದ್ದೆಗೆ ಅರ್ಹರು ಎಂಬುದನ್ನು ಈ ಕೆಳಕಂಡ ಲೇಖನದಲ್ಲಿ ಓದಿರಿ.

WhatsApp Group Join Now
Telegram Group Join Now

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ( ಬೆಸ್ಕಾಂ ) ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಡಿಸೆಂಬರ್ 31ನೇ ದಿನಾಂಕದವರೆಗೂ ಅರ್ಜಿಯನ್ನು ಪೂರೈಸಬಹುದು. ಅದಕ್ಕಾಗಿ ನೀವು ಈ ಕೂಡಲೇ ಅರ್ಜಿ ಪ್ರಕ್ರಿಯೆಯನ್ನು ಸಲ್ಲಿಸಿದರೆ ನೀವು ಈ ಉದ್ಯೋಗಕ್ಕೆ ಆಯ್ಕೆಯಾಗಿಯೇ ಹುದ್ದೆಯನ್ನು ಪಡೆಯುತ್ತೀರಿ. ಆಯ್ಕೆ ಮಾಡಿಕೊಂಡ ಅರ್ಜಿದಾರರ ಹೆಸರನ್ನು ಜನವರಿ 8ರಂದು ಬಿಡುಗಡೆ ಮಾಡಲಾಗುತ್ತದೆ, ಹಾಗೂ ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ದಾಖಲಾತಿಗಳನ್ನು ಜನವರಿ 22 ರಿಂದ 24ನೇ ತಾರೀಖಿನವರೆಗೂ ಕೂಡ ದಾಖಲಾತಿ ಪರೀಕ್ಷೆ ಮಾಡಲಾಗುತ್ತದೆ.

ಬೆಸ್ಕಾಂ ನೇಮಕಾತಿ – 2023

ನೀವು ಕೂಡ ಬೆಸ್ಕಾಂ ಕೆಲಸವನ್ನು ಪಡೆದುಕೊಳ್ಳಬೇಕೆಂಬ ಉದ್ದೇಶ ನಿಮಗಿದ್ದರೆ ಈ ಕೆಳಕಂಡಂತೆ ನೀವು ಅರ್ಜಿಯನ್ನು ಪೂರೈಸಿ ಬೆಸ್ಕಾಂ ಹುದ್ದೆಯನ್ನು ಪಡೆದುಕೊಳ್ಳಬಹುದು, 400 ಹುದ್ದೆಗೆ ಅರ್ಜಿ ಆಹ್ವಾನಿಸಿದೆ ಬೆಸ್ಕಾಂ ಸಂಸ್ಥೆ. ಇಂತಹ ಒಂದು ಅವಕಾಶದ ಕೆಲಸವನ್ನು ಪಡೆಯಲು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿರಿ ಏಕೆಂದರೆ ಡಿಸೆಂಬರ್ 31ನೇ ತಾರೀಖಿನವರೆಗೂ ಮಾತ್ರ ಈ ಅರ್ಜಿಯ ಪ್ರಕ್ರಿಯೆ ನಡೆಯಲಿದೆ ನಂತರ ನೀವು ಅರ್ಜಿ ಸಲ್ಲಿಸಬೇಕೆಂದರೂ ಕೂಡ ಆಗುವುದಿಲ್ಲ ಹಾಗಾಗಿ ನೀವು ಈ ದಿನದಂದೇ ಅರ್ಜಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ಅಪ್ರೆಂಟಿಸ್ ಹುದ್ದೆಗೆ ಕೆಲವು ಶಿಕ್ಷಣ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ. ಈ ಶಿಕ್ಷಣಗಳನ್ನು ಪಡೆದಿದ್ದರೆ ಮಾತ್ರ ನಿಮಗೆ ಬೆಸ್ಕಾಂ ಇಲಾಖೆಯಲ್ಲಿ ಉದ್ಯೋಗ ದೊರೆಯುತ್ತದೆ. ಬ್ಯಾಚುಲರ್ ಆಫ್ ಇಂಜಿನಿಯರಿಂಗ್, ಟೆಕ್ನಾಲಜಿ ಬಿಇ ಅಥವಾ ಬಿಟೆಕ್ ಓದಿರಬೇಕು, ಮತ್ತು ಡಿಪ್ಲೋಮಾ ಶಿಕ್ಷಣವನ್ನಾದರೂ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪಡೆದಿರಬೇಕು ಈ ವಿದ್ಯಾರ್ಹತೆಯಲ್ಲಿ ಒಂದನ್ನಾದರೂ ಓದಿರಬೇಕು.

ಈ ಎಲ್ಲಾ ಶಿಕ್ಷಣವನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಶಿಕ್ಷಣವನ್ನು ಪಡೆದಿರಬೇಕು. ಡಿಪ್ಲೋಮಾ ಶಿಕ್ಷಣದಾರರು ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಮೂರು ವರ್ಷದ ಶಿಕ್ಷಣವನ್ನು ಪಡೆದಿರಬೇಕು. ಇಂತಹ ಅಭ್ಯರ್ಥಿಗಳು ಮಾತ್ರ ಬೆಸ್ಕಾಂ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು ಮತ್ತು ಕನ್ನಡ ಭಾಷೆಯನ್ನು ಓದಲು ಬರೆಯಲು ಬರಲೇಬೇಕು ಇದು ಎಲ್ಲಾ ಅಭ್ಯರ್ಥಿಗಳಿಗೆ ಕಡ್ಡಾಯ ಸೂಚನೆಯಾಗಿದೆ. ಅಭ್ಯರ್ಥಿಗಳ ಶಿಕ್ಷಣದ ಅಂಕಗಳ ಮೇಲೆ ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಮತ್ತು ಶಾರ್ಟ್ಲಿಸ್ಟ್ ತೆಗೆಯುವುದು ಅಂಕಗಳ ಆಧಾರದ ಮೇಲೆ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ – 143, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ – 116, ಕಂಪ್ಯೂಟರ್ ಸೈನ್ಸ್ – 36, ಮಾಹಿತಿ ವಿಜ್ಞಾನ – 20, ಸಿವಿಲ್ – 5 ಮತ್ತು, ಇನ್ಸ್ಟ್ರುಮೆಂಶನ್ ಟೆಕ್ನಾಲಜಿ – 5 ಈ ವಿಭಾಗದವರು ಅರ್ಜಿಯನ್ನು ಈ ಹುದ್ದೆಗೆ ಸಲ್ಲಿಸಬಹುದು.

ಡಿಪ್ಲೋಮಾ ವಿದ್ಯಾರ್ಹತೆಗೆ ಅರ್ಜಿ ಸಲ್ಲಿಸುವರು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ – 55, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ – 10, ಕಂಪ್ಯೂಟರ್ ಸೈನ್ಸ್ – 10, ವಿಭಾಗಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ನೀವು ಕೂಡ ಅರ್ಜಿ ಸಲ್ಲಿಸಿದ್ದೀರಿ ಎಂದು ಭಾವಿಸೋಣ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನೆಲ್ಲ ಪರಿಶೀಲಿಸಿಯೇ ಇಲಾಖೆಯು ನಿಮ್ಮ ಅಂಕದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳುತ್ತದೆ. ನಂತರ ನಿಮಗೆ ತಿಂಗಳ ವೇತನವನ್ನು ನೀಡಲಾಗುತ್ತದೆ, ಪ್ರತಿ ತಿಂಗಳು ಕೂಡ ಗ್ರಾಜುಯೇಷನ್ ಅಪ್ರೆಂಟಿಸ್ ಹುದ್ದೆಗೆ – 9008 ರೂ ಹಣವನ್ನು ನೀಡಲಾಗುತ್ತದೆ.

ಈ ಒಂದು ತಿಂಗಳ ವೇತನವು ಮುಂದಿನ ದಿನಗಳಲ್ಲಿ ಹೆಚ್ಚಿನ ಹಣ ಆಗಬಹುದು ಅಭ್ಯರ್ಥಿಯ ಕೆಲಸಗಳ ಆಧಾರದ ಮೇಲೆ ಹೆಚ್ಚಿನ ಪ್ರಮಾಣದ ಹಣ ಜಾಸ್ತಿಯಾಗುತ್ತಿರುತ್ತದೆ. ಟೆಕ್ನಿಷಿಯನ್ ಡಿಪ್ಲೋಮ ಅಪ್ರೆಂಟಿಸ್ ಹುದ್ದೆಗೆ – 8000 ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಈ ವೇತನವು ಕೂಡ ಮುಂದಿನ ದಿನಗಳಲ್ಲಿ ಇಲಾಖೆಯು ಹೆಚ್ಚಿಸುತ್ತದೆ.

ನೀವು ಕೂಡ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕೆಂದು ಬಯಸುತ್ತೀರಾ ಹಾಗಾದ್ರೆ ಈ ಕೂಡಲೇ ಅರ್ಜಿ ಸಲ್ಲಿಸಿ ಬೆಸ್ಕಾಂ ಇಲಾಖೆಯಲ್ಲಿ ಕೆಲಸವನ್ನು ಪಡೆದುಕೊಳ್ಳಿ. ನಿಮ್ಮ ಸ್ನೇಹಿತರು ಕೂಡ ಒಂದೊಳ್ಳೆ ಉತ್ತಮವಾದ ಕೆಲಸವನ್ನು ಹುಡುಕುತ್ತಿದ್ದಾರಾ ? ಹಾಗಾದ್ರೆ ಬೆಸ್ಕಾಂ ಸಂಸ್ಥೆಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಈ ಲೇಖನವನ್ನು ಶೇರ್ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಈ ಹುದ್ದೆಯ ಬಗ್ಗೆ ತಿಳಿಸಿರಿ.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment