ಮಹಿಳೆಯರಿಗೆ ಗುಡ್ ನ್ಯೂಸ್ ! ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ. ಅರ್ಹ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ…

ಮಹಿಳೆಯರು ಸ್ವಯಂ ಉದ್ಯೋಗ ಮಾಡಲು ಪ್ರೋತ್ಸಾಹ ಧನವನ್ನು ನೀಡಲಿದೆ ಸರ್ಕಾರ. ಮಹಿಳೆಯರು ಜೀವನವನ್ನು ಸಾಗಿಸಲು ಹಲವಾರು ಕಠಿಣವಾದ ಕೆಲಸವನ್ನು ಮಾಡುತ್ತಿರುತ್ತಾರೆ. ಅಂಥಹ ಕೆಲಸ ಮಾಡಿ ಬೇಸತ್ತು ಹೋಗಿರುತ್ತಾರೆ. ಇನ್ನೂ ಕೆಲ ಮಹಿಳೆಯರು ನಿರುದ್ಯೋಗ ದಿಂದ ಬಳಲುತ್ತಿರುತ್ತಾರೆ. ಯಾವ ಕೆಲಸವು ಇಲ್ಲದೆ ಗೃಹಿಣಿಯಾಗಿ ಜೀವನವನ್ನು ವೃದ್ಧಿಸಿಕೊಂಡಿರುತ್ತಾರೆ. ಇಂಥಹ ಮಹಿಳೆಯರಿಗೆ ಸರ್ಕಾರದಿಂದ ಸ್ವಯಂ ಉದ್ಯೋಗ ಮಾಡಲು ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಸಿ, ನೀವು ಕೂಡ ಪ್ರೋತ್ಸಾಹ ಧನವನ್ನು ಪಡೆಯಿರಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಲೇಖನವನ್ನು ಕೊನೆವರೆಗೂ ಓದಿ.

WhatsApp Group Join Now
Telegram Group Join Now

ಮಹಿಳೆಯರು ತಮ್ಮ ಜೀವನವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಸರ್ಕಾರವು ಸಹಾಯಧನವಾಗಿ ಹಣವನ್ನು ನೀಡಲಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೂ ಕೂಡ ಈ ಒಂದು ಯೋಜನೆ ಅನ್ವಯವಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಪ್ರೋತ್ಸಾಹ ಧನವನ್ನು ಪಡೆಯಬಹುದು. ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಈ ಒಂದು ಪ್ರಕಟಣೆಗೆ ಮನ್ನಣೆ ಮಾಡಿದೆ.

ಈ ಯೋಜನೆಯ ಅಡಿಯಲ್ಲಿ ನಾಲ್ಕು ಯೋಜನೆಗಳು ಜೊತೆಯಾಗಿವೆ. 

ಉದ್ಯೋಗಿನಿ ಯೋಜನೆ

ಮಹಿಳೆಯರಿಗೆ ಅನುಕೂಲವಾಗುವಂಥಹ ಕೆಲಸವನ್ನು ವೃದ್ಧಿಸಿ ಹಾಗೂ ಆದಾಯವು ಕೂಡ ಬರುವಂಥಹ ಚಟುವಟಿಕೆಯಲ್ಲಿ ತೊಡಗಬೇಕು. ಈ ಉದ್ಯೋಗವನ್ನು ಪ್ರಾರಂಭ ಮಾಡಲು ಹಣದ ಸಮಸ್ಯೆಯೂ ಕೂಡ ಉಂಟಾಗಬಾರದು ಎಂದು ಬ್ಯಾಂಕಿನ ಮೂಲಕ ಸಾಲವನ್ನಾಗಿ ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಸಾಲವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಯೋಜನೆಗೆ ಅರ್ಜಿಯನ್ನು ಸಲ್ಲಿಸಲು 18 ರಿಂದ 55 ವರ್ಷದೊಳಗಿನ ಮಹಿಳೆಯರು ಈ ವಯಸ್ಸಿನ ವಯೋಮಿತಿಯನ್ನು ಹೊಂದಿರಬೇಕು. ಈ ಒಂದು ಯೋಜನೆಯು ಅನ್ವಯವಾಗುವುದು ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದ ಮಹಿಳೆಯರಿಗೆ ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ ಬೇರೆ ಬೇರೆ ರೀತಿಯ ಸಹಾಯಧನಗಳು ಅನ್ವಯಿಸುತ್ತವೆ ಅವುಗಳೆಂದರೆ :-

SC-ST ವರ್ಗದ ಫಲಾನುಭವಿಗಳಿಗೆ

ವರಮಾನದ ಮಿತಿ :- ಎರಡು ಲಕ್ಷ ಹಣ

ಘಟಕ ವೆಚ್ಚದ ಹಣ :- ಕನಿಷ್ಠ ವಾರು ಒಂದು ಲಕ್ಷದಿಂದ ಗರಿಷ್ಠವಾರು 3 ಲಕ್ಷದವರೆಗೆ ಹಣ ಸಿಗುತ್ತದೆ.

ಸಾಮಾನ್ಯ ವರ್ಗದ ಮಹಿಳೆಯರಿಗೆ

ವರಮಾನದ ಮಿತಿ :- 1.50 ಲಕ್ಷ ಹಣ

ಘಟಕ ವೆಚ್ಚದ ಹಣ :- 3 ಲಕ್ಷದ ಹಣ

ಮೀಸಲಿಟ್ಟ ಸಹಾಯಧನ :- 30ರಷ್ಟು ಹಣವನ್ನು ಮಹಿಳೆಯರಿಗೆ ಸಾಲದ ರೂಪದಲ್ಲಿ ನೀಡುತ್ತದೆ ಸರ್ಕಾರ.

ಚೇತನ ಯೋಜನೆ

ಈ ಒಂದು ಚೇತನ ಯೋಜನೆ ಅಡಿಯಲ್ಲಿ ಮಹಿಳೆಯರ ಚಟುವಟಿಕೆಯಲ್ಲಿ ಬಳಸುವಂಥಹ ವಸ್ತುವನ್ನು ಖರೀದಿಸಲು 30,000 ದವರೆಗೆ ಹಣವನ್ನು ನೀಡಲಾಗುತ್ತದೆ ಈ ಯೋಜನೆ ಅಡಿಯಲ್ಲಿ. ಈ ಒಂದು ಯೋಜನೆಯಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ 18 ವರ್ಷ ವಯೋಮಿತಿ ಮೇಲ್ಪಟ್ಟಿರಬೇಕು.

ಧನಶ್ರೀ ಯೋಜನೆ

ಈ ಒಂದು ಯೋಜನೆಯು ಮೂರನೇ ಯೋಜನೆಯಾಗಿ ಕಾಣಿಸುತ್ತದೆ ಆದರೆ ಈ ಒಂದು ಯೋಜನೆಯನ್ನು ಕೂಡ ಮಹಿಳೆಯರಿಗೆ ಆರ್ಥಿಕ ನೆರವಿಗಾಗಿ 30,000 ಪ್ರೋತ್ಸಾಹ ಧನವನ್ನು ಸರ್ಕಾರದ ಯೋಜನೆಯ ಕಡೆಯಿಂದ ನೀಡಲಾಗುತ್ತದೆ. ಈ ಒಂದು ಯೋಜನೆಯನ್ನು ಅರ್ಹ ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟ ಹಾಗೂ 60 ವರ್ಷ ಒಳಗಿನ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ.

ಪುನರ್ವಸತಿ ಯೋಜನೆ

ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಅಡಿಯಲ್ಲಿ ಆದಾಯವನ್ನು ವೃದ್ಧಿಸುವಂತಹ ಚಟುವಟಿಕೆಗಳನ್ನು ಮಾಡಲು 30,000 ಹಣವನ್ನು ಮಹಿಳೆಯರ ಆರ್ಥಿಕ ಸಮಸ್ಯೆಗಾಗಿ ಸಾಲದ ರೂಪದಲ್ಲಿ ಖಾತೆಗೆ ವರ್ಗಾಯಿಸಲಿದೆ ಸರ್ಕಾರ. ಈ ಯೋಜನೆಗೂ ಕೂಡ ವಯೋಮಿತಿ ಕಡ್ಡಾಯ ಅಂದರೆ 18 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ 60 ವರ್ಷ ಒಳಗಿನ ಮಹಿಳೆಯರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

ಎಲ್ಲಾ ಮೇಲ್ಕಂಡ ಯೋಜನೆಗೆ ಅರ್ಜಿ ಆಹ್ವಾನಿಸಿದ ದಿನಾಂಕ :- 22-11-2023 ( ನವೆಂಬರ್ 22, 2023 ರಂದು ಆರಂಭವಾಗಿದೆ )

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದಾಗಿದೆ :- 22-12-2023 ( ಡಿಸೆಂಬರ್ 22, 2023 ) ರಂದು ಅರ್ಜಿ ಸಲ್ಲಿಕೆಗೆ ಕೊನೆಗೊಳ್ಳಲಿದೆ.

ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಮಹಿಳೆಯರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಪೂರೈಸಬಹುದು. ಹಾಗೂ ನಿಮ್ಮ ಗ್ರಾಮದ ಬಾಪೂಜಿ ಕೇಂದ್ರಗಳಲ್ಲಿ ಹಾಗೂ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಲೇಖನವನ್ನು ಇಲ್ಲಿವರೆಗೂ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment