ಹೊಸ ಮೊಬೈಲ್ ಸಂಖ್ಯೆಯನ್ನು ರೇಷನ್ ಕಾರ್ಡ್ ಗೆ ಅಪ್ಡೇಟ್ ಮಾಡುವುದು ಹೇಗೆ ? ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಎಲ್ಲರಿಗೂ ನಮಸ್ಕಾರ…

ಪಡಿತರ ಚೀಟಿ ಹೊಂದಿರುವ ಅಭ್ಯರ್ಥಿಗಳು ಈ ಹಿಂದೆ ಹಳೆಯ ಮೊಬೈಲ್ ಸಂಖ್ಯೆಯನ್ನು ರೇಷನ್ ಕಾರ್ಡ್ ಗೆ ಅಪ್ಡೇಟ್ ಮಾಡಿದ್ದರು. ಆದರೆ ಹಳೆಯ ಮೊಬೈಲ್ ಸಂಖ್ಯೆಯನ್ನು ಬಳಸದಿಲ್ಲದ ಕಾರಣಕ್ಕಾಗಿ ಹೊಸ ಸಿಮ್ ಕಾರ್ಡ್ ಅನ್ನು ಖರೀದಿಸಿ ಹೊಸ ಸಂಖ್ಯೆಯನ್ನು ಪಡೆದುಕೊಂಡಿರುತ್ತಾರೆ. ಹಾಗಾಗಿ ಹೊಸ ಮೊಬೈಲ್ ಸಂಖ್ಯೆಯನ್ನು ಯಾವ ರೀತಿ ರೇಷನ್ ಕಾರ್ಡ್ ಗೆ ಅಪ್ಡೇಟ್ ಮಾಡಬೇಕೆಂಬ ಮಾಹಿತಿ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ರಾಜ್ಯ ಸರ್ಕಾರವು ಈ ರೀತಿಯ ರೇಷನ್ ಕಾರ್ಡ್ ಅಪ್ಡೇಟ್ ಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ ನೀವು ಕೂಡ ಮೊಬೈಲ್ ಸಂಖ್ಯೆಯನ್ನು ರೇಷನ್ ಕಾರ್ಡ್ ಅಪ್ಡೇಟ್ ಮಾಡ್ಬೇಕಾ ಹಾಗಾದ್ರೆ ಈ ಕೆಳಕಂಡ ಸೂಚನೆಯನ್ನು ಪಾಲಿಸಿ. ಕೆಲವು ಜನರು ರೇಷನ್ ಕಾರ್ಡನ್ನು ಹೊಂದಿರುತ್ತಾರೆ ಆದರೆ ಆ ರೇಷನ್ ಕಾರ್ಡ್ ನಲ್ಲಿ ವಿಳಾಸ ಮತ್ತು ಮೊಬೈಲ್ ಸಂಖ್ಯೆ ತಪ್ಪಾಗಿ ಪ್ರಿಂಟ್ ಆಗಿರುತ್ತದೆ.

ಇಂಥಹ ತಪ್ಪನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂಬುವ ಆಲೋಚನೆಯಲ್ಲಿರುತ್ತಾರೆ ಅಂಥವರು ಈ ಸಮಯದಲ್ಲಿ ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ಅಪ್ಡೇಟ್ ಗೆ ಕೊಡಬಹುದು. ಹಳೆಯ ಮೊಬೈಲ್ ಸಂಖ್ಯೆಯನ್ನು ತೆಗೆದು ಹಾಕಿ ಹೊಸ ಮೊಬೈಲ್ ಸಂಖ್ಯೆಯನ್ನು ಹಾಕಬೇಕಾ ಮತ್ತು ಮೊಬೈಲ್ ಸಂಖ್ಯೆ ತಪ್ಪಾಗಿದೆ ಇಂತಹ ಹಲವಾರು ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದೆ ಕೇಂದ್ರ ಸರ್ಕಾರ.

ಹೊಸ ಮೊಬೈಲ್ ಸಂಖ್ಯೆಯನ್ನು ರೇಷನ್ ಕಾರ್ಡ್ ಗೆ ಅಪ್ಡೇಟ್ ಮಾಡಿ ! 

ನೀವೇನಾದ್ರೂ ಸರ್ಕಾರದ ಯೋಜನೆಗಳಲ್ಲಿ ಪಾಲ್ಗೊಂಡಿದ್ದೀರಾ ಅಂದರೆ ಫಲಾನುಭವಿಗಳಾಗಿದ್ದೀರಾ ಹಾಗಾದ್ರೆ ರೇಷನ್ ಕಾರ್ಡ್ ಕೂಡ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಕಳೆದ 6 ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳನ್ನು ಪಡೆಯಲು ರೇಷನ್ ಕಾರ್ಡ್ ಬಹಳ ಮುಖ್ಯ. ಅದರಲ್ಲೂ ಗೃಹಲಕ್ಷ್ಮಿ ಯೋಜನೆ, ಹಾಗೂ ಅನ್ನಭಾಗ್ಯ ಯೋಜನೆ, ಗೆ ಕಡ್ಡಾಯವಾಗಿದೆ ಈ ರೇಷನ್ ಕಾರ್ಡ್. ರೇಷನ್ ಕಾರ್ಡ್ ಇಲ್ಲದ ಅಭ್ಯರ್ಥಿಗಳಿಗೆ ಈ ಯೋಜನೆಗಳು ಅನ್ವಯಿಸುವುದಿಲ್ಲ ಅವರಿಗೆ ಯಾವುದೇ ರೀತಿಯ ಹಣವು ಕೂಡ ವರ್ಗಾವಣೆ ಆಗಿಲ್ಲ ಅಥವಾ ಈ ಯೋಜನೆಯ ಸೌಲಭ್ಯವು ದೊರೆತಿಲ್ಲ.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ರೇಷನ್ ಕಾರ್ಡ್ ನಲ್ಲಿರುವ ವಿವರಗಳು ಕೂಡ ಬಹಳ ಮುಖ್ಯ ಏಕೆಂದರೆ ಒಂದು ತಪ್ಪಾದರು ಕೂಡ ಹಲವಾರು ಸಮಸ್ಯೆಗಳನ್ನು ಎದುರಿಸುತ್ತೀರಾ. ಉದಾ:- ರೇಷನ್ ಕಾರ್ಡಿನಲ್ಲಿ ಮೊಬೈಲ್ ಸಂಖ್ಯೆಯ ತಪ್ಪಾಗಿ ಇರುತ್ತದೆ. ರೇಷನ್ ಕಾರ್ಡ್ ಕೂಡ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆ ಹಾಗೂ ಸರ್ಕಾರದ ಯೋಜನೆಗಳ ಸೌಲಭ್ಯವನ್ನು ಪಡೆಯಲು ಬ್ಯಾಂಕ್ ಖಾತೆ ಲಿಂಕ್ ಆಗಿರಲೇಬೇಕು ಹಾಗೂ ಮೊಬೈಲ್ ಸಂಖ್ಯೆಯು ಕೂಡ ಎಲ್ಲಾ ದಾಖಲಾತಿಗಳಿಗೆ ಅಪ್ಡೇಟ್ ಆಗಿರಬೇಕು. ಅಪ್ಡೇಟ್ ಆದ ನಂತರವೇ ಗೃಹಲಕ್ಷ್ಮಿ ಹಣವಾಗಲಿ ಬೇರೊಂದು ಯೋಜನೆಯ ಹಣವಾಗಲಿ ಸಿಗುವುದು.

ರೇಷನ್ ಕಾರ್ಡ್ ಗೆ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡುವ ವಿಧಾನವನ್ನು ತಿಳಿಯಿರಿ.

  • ಮೊದಲು ನೀವು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ಈ ಕೆಳಕಂಡ ಲಿಂಕನ್ನು ಕ್ಲಿಕ್ ಮಾಡಿ.
  • https://nfs.delhi.gov.in/Citizen/UpdateMobile 
  • ಈ ಮೇಲ್ಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಹೊಸ ಮೊಬೈಲ್ ಸಂಖ್ಯೆ ಹಾಕಲು ಹೊಸದಾದ ಪುಟ ತೆರೆಯುತ್ತದೆ.
  • ಪಡಿತರ ಅಭ್ಯರ್ಥಿಯ ಕೆಲವು ಮಾಹಿತಿಯನ್ನು ಈ ಪೇಜ್ ನಲ್ಲಿ ಹಾಕಬೇಕು.
  • ಮೊದಲ ಕಾಲಂ ಕಾಣುತ್ತಿದೆ ಆ ಮೊದಲ ಕಾಲಂನಲ್ಲಿ ನೀವು ನಿಮ್ಮ ಪಡಿತರ ಚೀಟಿಯ ಮುಖ್ಯಸ್ಥರ ಆದರ್ಶ ಸಂಖ್ಯೆಯನ್ನು ಟೈಪಿಸಬೇಕು.
  • ಎರಡನೇ ಕಾಲಂನಲ್ಲಿ ನಿಮ್ಮ ರೇಷನ್ ಕಾರ್ಡ್ ನ ಸಂಖ್ಯೆಯನ್ನು ನಮೂದಿಸಬೇಕು. ಅಂದರೆ RC ನಂಬರ್ ಅನ್ನು ನಮೂದಿಸಬೇಕು.
  • ಮೂರನೇ ಕಾಲದಲ್ಲಿ ರೇಷನ್ ಕಾರ್ಡ್ ಹೊಂದಿರುವ ಮುಖ್ಯಸ್ಥರ ಹೆಸರನ್ನು ಟೈಪಿಸಬೇಕು.
  • ನಂತರ ನೀವು ಹೊಸ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಬೇಕೆಂದು ಅಂದುಕೊಂಡಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಯಾವುದೇ ತಪ್ಪಿಲ್ಲದೆ ಒಂದು ಬಾರಿ ಸರಿಯಾಗಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಂತರ ಆ ಮೊಬೈಲ್ ಸಂಖ್ಯೆಯು ನಿಮ್ಮ ಪಡಿತರ ಚೀಟಿಗೆ ಅಪ್ಡೇಟ್ ಆಗುತ್ತದೆ. ಅಪ್ಡೇಟ್ ಆದ ಬಳಿಕ ರೇಷನ್ ಕಾರ್ಡ್ ಯಾವುದೇ ಅಪ್ಡೇಟ್ ಕೂಡ ನಿಮ್ಮ ಫೋನಿನ SMS ಮೂಲಕ ಬರುತ್ತದೆ.

ಮೇಲಿನ ವಿಧಾನಗಳಲ್ಲಿ ರೇಷನ್ ಕಾರ್ಡ್ ಗೆ ಹೊಸ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಬಹುದು ಯಾವುದೇ ರೀತಿಯ ಅಪ್ಡೇಟ್ ಆದರೂ ಕೂಡ ನಿಮ್ಮ ಮೊಬೈಲ್ ಸಂಖ್ಯೆಗೆ ಮೊದಲು ರವಾನೆ ಆಗುತ್ತದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment