5,8,9 ನೇ ತರಗತಿ ಪಬ್ಲಿಕ್ ಪರೀಕ್ಷಾ ವೇಳಾಪಟ್ಟಿ ಪ್ರಕಟ ! ಯಾವ ದಿನಾಂಕದಲ್ಲಿ ಪಬ್ಲಿಕ್ ಪರೀಕ್ಷೆ ನಡೆಯಲಿದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಎಲ್ಲರಿಗೂ ನಮಸ್ಕಾರ… ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 5,8,9 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟಣೆಯಾಗಿದೆ. ಮಂಡಳಿಯೂ ನೆನ್ನೆ ಎಷ್ಟೇ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಯಾವ ದಿನಾಂಕದಿಂದ ಪರೀಕ್ಷೆಯು ಶುರುವಾಗುತ್ತದೆ ಹಾಗೂ ಯಾವ ಯಾವ ತರಗತಿಗಳಿಗೆ ಯಾವ ಯಾವ ದಿನಾಂಕದಲ್ಲಿ ಪರೀಕ್ಷೆ ಇರುತ್ತದೆ ಎಂಬ ಎಲ್ಲಾ ಮಾಹಿತಿಯನ್ನು ಕೂಡ ನೀವು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು, ಹಾಗಾಗಿ ನೀವು ಲೇಖನವನ್ನು ಕೊನೆವರೆಗೂ ಓದಿರಿ.

2023-24 ನೇ ಸಾಲಿನಲ್ಲಿ 5,8,9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿದೆ ಮಂಡಳಿ ಹೇಳಿದ ದಿನಾಂಕದಲ್ಲೇ ಎಲ್ಲಾ ಸರಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ನಿಗದಿಪಡಿಸಿದ ದಿನಾಂಕದಲ್ಲೇ ಎಲ್ಲರೂ ಕೂಡ ಪರೀಕ್ಷೆಯನ್ನು ನಡೆಸಿ, ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆಯಲೇಬೇಕು, ಆದ್ದರಿಂದ ಯಾವ ದಿನಾಂಕದಿಂದ ಸಂಕಲಾತ್ಮಕ ಮೌಲ್ಯಾಂಕನ SA-2 ಪರೀಕ್ಷೆ ನಡೆಯಲಿದೆ ಎಂಬುದನ್ನು ತಿಳಿದುಕೊಳ್ಳಿರಿ. ಮಾರ್ಚ್ 11ನೇ ತಾರೀಖಿನಿಂದ ಮಾರ್ಚ್ 19 ರ ವರೆಗೂ ಕೂಡ ಪರೀಕ್ಷೆಗಳು ನಡೆಯಲಿದೆ ನೀವು ಯಾವ ತರಗತಿಯಲ್ಲಿ ಓದುತ್ತಿದ್ದೀರಿ ಎಂದು ಖಚಿತಪಡಿಸಿಕೊಂಡು ಆನಂತರ ನಿಮ್ಮ ನಿಮ್ಮ ವೇಳಾಪಟ್ಟಿಗಳನ್ನು ಗಮನದಲ್ಲಿಟ್ಟುಕೊಂಡು ನೋಡಿರಿ.

WhatsApp Group Join Now
Telegram Group Join Now

5ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳ ಪಟ್ಟಿ ಪ್ರಕಟ !

 • ಮಾರ್ಚ್ 11 – ಪ್ರಥಮ ಭಾಷೆ ಕನ್ನಡ,
 • ಮಾರ್ಚ್ 12 – ದ್ವಿತೀಯ ಭಾಷೆ ಇಂಗ್ಲಿಷ್,
 • ಮಾರ್ಚ್ 13 – ಪರಿಸರ ಅಧ್ಯಯನ,
 • ಮಾರ್ಚ್ 14 – ಗಣಿತ,

ಈ ಎಲ್ಲಾ ಮೇಲ್ಕಂಡ ಪರೀಕ್ಷೆಗಳ ನಿಗದಿ ದಿನಾಂಕದಂತೆ ಎಲ್ಲಾ ಸರ್ಕಾರಿ ಶಾಲೆ ಆಗುವ ಅನುದಾನಿತ ಶಾಲೆಗಳನ್ನು ಕೂಡ ಈ ದಿನಾಂಕಗಳಲ್ಲೇ ಪರೀಕ್ಷೆಗಳು ನಡೆಯಲಿದೆ ಮತ್ತು ಮಧ್ಯಾಹ್ನದ ವೇಳೆ ಈ ಒಂದು ಪರೀಕ್ಷೆಗಳನ್ನು ಹಮ್ಮಿಕೊಂಡಿರಲಾಗುತ್ತದೆ, 2:30 ಯಿಂದ 4:30 ವರೆಗೂ ಕೂಡ ನೀವು ಪರೀಕ್ಷೆಗಳನ್ನು ಬರೆಯಬಹುದು. ನೀವು ಕೂಡ ಐದನೇ ತರಗತಿಯಲ್ಲಿ ಓದುತ್ತಿದ್ದರೆ ನಿಮಗೆ ಈ ವೇಳಾಪಟ್ಟಿ ಉಪಯೋಗವಾಗುತ್ತದೆ. ನಿಮ್ಮ ಸ್ನೇಹಿತರು ಕೂಡ 5ನೇ ತರಗತಿಯಲ್ಲಿ ಓದುತ್ತಿದ್ದರೆ, ಲೇಖನವನ್ನು ಶೇರ್ ಮಾಡಿ ವೇಳಾಪಟ್ಟಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ.

8 ಮತ್ತು 9ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ !

 • ಮಾರ್ಚ್ 11 – ಪ್ರಥಮ ಭಾಷೆ ಕನ್ನಡ,
 • ಮಾರ್ಚ್ 12 – ದ್ವಿತೀಯ ಭಾಷೆ ಇಂಗ್ಲಿಷ್,
 • ಮಾರ್ಚ್ 13 – ತೃತಿಯ ಭಾಷೆ ಹಿಂದಿ,
 • ಮಾರ್ಚ್ 14 – ಗಣಿತ,
 • ಮಾರ್ಚ್ 15 – ವಿಜ್ಞಾನ,
 • ಮಾರ್ಚ್ 16 – ಸಮಾಜ ವಿಜ್ಞಾನ,
 • ಮಾರ್ಚ್ 18 – ದೈಹಿಕ ಶಿಕ್ಷಣ,

ಈ ಮೇಲ್ಕಂಡ ಪರೀಕ್ಷೆಗಳ ನಿಗದಿ ದಿನಾಂಕದಂದು ಎಲ್ಲಾ ಜಿಲ್ಲೆಗಳಲ್ಲೂ ಕೂಡ ಪರೀಕ್ಷೆಗಳು ನಡೆಯಲಿವೆ ಪರೀಕ್ಷೆಗಳ ಸಮಯ ಮಧ್ಯಾಹ್ನ 2:30 ಯಿಂದ ಸಂಜೆ 5 ರವರೆಗೆ ನಡೆಯಲಿದೆ. ಎಂದು ಮಂಡಳಿಯೂ ಪರೀಕ್ಷಾ ವೇಳಾಪಟ್ಟಿ ಎಂದು ಪ್ರಕಟಣೆ ಮಾಡಿದೆ ಆ ದಿನಾಂಕಗಳಲ್ಲೇ ಎಲ್ಲ ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. ನೀವು ಕೂಡ ಎಂಟನೇ ತರಗತಿಯಲ್ಲಿ ಹಾಗೂ ಒಂಬತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರೆ ನೀವು ಈ ಪರೀಕ್ಷೆ ವೇಳಾಪಟ್ಟಿಯ ವೇಳೆಯಲ್ಲಿ ನೀವು ಪರೀಕ್ಷೆಗಳನ್ನು ಬರೆಯಬೇಕು. ಈ ವೇಳಾಪಟ್ಟಿಯನ್ನು ನೋಡಿಕೊಂಡು ಈಗಿನಿಂದಲೇ ಪರೀಕ್ಷೆಗೆ ತಯಾರಾಗಿರಿ ಹೆಚ್ಚಿನ ಆಸಕ್ತಿಯನ್ನು ವಿದ್ಯಾಭ್ಯಾಸದಲ್ಲಿ ಗಮನವನ್ನು ಕೊಟ್ಟು ಓದಿರಿ.

ಎಲ್ಲಾ ವಿದ್ಯಾರ್ಥಿಗಳು ಕೂಡ ಪಬ್ಲಿಕ್ ಪರೀಕ್ಷೆ ಎಂದು ಭಯಪಡುವ ಅವಶ್ಯಕತೆ ಇಲ್ಲ ಏಕೆಂದರೆ ನಿಮ್ಮ ಶಾಲಾ ವ್ಯಾಪ್ತಿಯಲ್ಲೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಆದ್ದರಿಂದ ನೀವು ಇಂದಿನಿಂದಲೇ ಪರೀಕ್ಷೆಗೆ ತಯಾರಾಗಿ ಮುಂದಿನ ದಿನದಲ್ಲಿ ಪರೀಕ್ಷೆಯಲ್ಲಿ ಪಾಸ್ ಆಗಿರಿ. ಅತ್ಯುತ್ತಮವಾದ ಅಂಕಗಳನ್ನು ಗಳಿಸಿರಿ. ನಿಮ್ಮ ಸ್ನೇಹಿತರು ಕೂಡ ಎಂಟನೇ ತರಗತಿಯಲ್ಲಿ ಅಥವಾ 9ನೇ ತರಗತಿಯಲ್ಲಿ ಓದುತ್ತಿದ್ದರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಪರೀಕ್ಷಾ ವೇಳಾಪಟ್ಟಿಯನ್ನು ತಿಳಿಸಿರಿ ಅವರು ಕೂಡ ಇಂದಿನಿಂದಲೇ ಪರೀಕ್ಷೆಗಳಿಗೆ ತಯಾರಾಗಲಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ…

Leave a Comment