ನಾಳೆಯಿಂದಲೇ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ ! ಯಾವ ದಾಖಲಾತಿಗಳು ಬೇಕು ಅರ್ಜಿ ಸಲ್ಲಿಸಲು ಎಂದು ಈ ಲೇಖನದಲ್ಲಿ ತಿಳಿಯಿರಿ.

ಎಲ್ಲರಿಗೂ ನಮಸ್ಕಾರ…ಯುವನಿಧಿ ಯೋಜನೆಯ ಬಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ರವರು ಮಾಹಿತಿ ನೀಡಿದ್ದಾರೆ. ನಾಳೆಯಿಂದಲೇ ಯುವನಿಧಿ ಯೋಜನೆಯ ಅರ್ಜಿ ಸಲ್ಲಿಕೆ ಆರಂಭವಾಗುತ್ತದೆ. ನೀವು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಪೂರೈಕೆ ಮಾಡಬಹುದು, ಯಾವ ವಿದ್ಯಾರ್ಥಿಗಳು ಅರ್ಹರು ಅಂಥಹ ವಿದ್ಯಾರ್ಥಿಗಳಿಗೆ ಮಾತ್ರ 3000 ಹಣ ಅಥವಾ 1500 ಹಣ ದೊರೆಯಲಿದೆ.

ನೀವೇನಾದರು ನಾಳೆಯಿಂದಲೇ ಫೋನಿನ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಿದರೆ ನಿಮಗೆ ಮೊದಲ ಆದ್ಯತೆಯಾಗಿ ಯೋಜನೆ ಸಲ್ಲಿಕೆಯಾಗುತ್ತದೆ. ಈ ಯೋಜನೆ ಅಡಿಯಲ್ಲಿ ಯಾರು ಅರ್ಜಿ ಸಲ್ಲಿಸುತ್ತಾರೆ ಅಂತ ಅಭ್ಯರ್ಥಿಗಳಿಗೆ ಮಾತ್ರ ಮೀಸಲಿಟ್ಟ ಹಣ ದೊರೆಯುತ್ತದೆ. ಯಾರಿಗೆ ಈ ಯೋಜನೆ ಸಲ್ಲುತ್ತದೆ ಹಾಗೂ ಯಾವ ದಾಖಲಾತಿಗಳು ಬೇಕು ಎಂಬ ಎಲ್ಲ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಯಿರಿ.

WhatsApp Group Join Now
Telegram Group Join Now

2023 ನೇ ಸಾಲಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ತೇರ್ಗಡೆಯಾದ ವಿದ್ಯಾರ್ಥಿಗಳು 180 ದಿನಗಳ ಕಾಲ ಆದರೂ ಕೂಡ ಕೆಲಸ ಸಿಗದೇ ನಿರುದ್ಯೋಗಿಗಳಾಗಿದ್ದರೆ ಅಂತಹ ಡಿಗ್ರಿ ಪದವೀಧರರು ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಹಣ ದೊರೆಯಲಿದೆ. ಈ ಹಿಂದೆ ಈ ಯೋಜನೆಯ ಬಗ್ಗೆ ಹಲವಾರು ಮಾಹಿತಿಗಳು ಕಂಡು ಬರುತ್ತಿತ್ತು ಆದರೆ ನಾಳೆಯಿಂದಲೇ ಈ ಯೋಜನೆಯು ಆರಂಭವಾಗಿ ಅರ್ಜಿ ಸಲ್ಲಿಕೆ ಪೂರೈಸುತ್ತದೆ ಹಾಗಾಗಿ ನೀವು ನಾಳೆಯಿಂದಲೇ ಅರ್ಜಿಯನ್ನು ಸಲ್ಲಿಸಿರಿ.

ಕಾಂಗ್ರೆಸ್ ಸರ್ಕಾರದ ಯುವನಿಧಿ ಯೋಜನೆ ಎಂದರೇನು ?

ಯುವನಿಧಿ ಯೋಜನೆ ಎಂದರೆ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಜಯಗೊಳಿಸಿ ಜಾರಿಗೊಳಿಸಿದ ಯೋಜನೆಯೇ ಯುವನಿಧಿ ಯೋಜನೆ. ಈ ಯೋಜನೆಯನ್ನು ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿಡಲಾಗಿದೆ. ಈ ಯೋಜನೆ ಅಡಿಯಲ್ಲಿ ಹಣ ಪಡೆಯುವ ವಿದ್ಯಾರ್ಥಿಗಳು 2022-23ನೇ ಸಾಲಿನಲ್ಲಿ ತಮ್ಮ ಓದಿನ ಶಿಕ್ಷಣವನ್ನು ಮುಗಿಸಿರಬೇಕು ಅಂತಹ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯ ಹಾಗೂ ಡಿಗ್ರಿ ಪದವೀದಾರರು ಮತ್ತು ಡಿಪ್ಲೋಮೋ ವಿದ್ಯಾರ್ಥಿಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯ.

ನೀವು ಕೂಡ 2022-23ನೇ ಸಾಲಿನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಆದರೆ ನಾಳೆಯಿಂದಲೇ ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಸಲ್ಲಿಸಿರಿ. 2023ರಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಕೆಲಸವನ್ನು ಹುಡುಕಲು ಪ್ರಯತ್ನ ಪಟ್ಟಿದ್ದ ಮೇಲೆ ಈ ಒಂದು ಯೋಜನೆಯ ಹಣ ದೊರೆಯುತ್ತದೆ ಅಂದರೆ ಎರಡು ವರ್ಷಗಳ ಕಾಲ ಈ ಯೋಜನೆಯ ಹಣ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ದೊರೆಯಲಿದೆ. ಈ ಹಣದಿಂದ ವಿದ್ಯಾರ್ಥಿಗಳು ತಮ್ಮ ಖರ್ಚನ್ನು ತಾವೇ ನೋಡಿಕೊಂಡು ಉತ್ತಮವಾದ ಉದ್ಯೋಗವನ್ನು ಹುಡುಕಬಹುದು.

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಈ ಲಿಂಕನ್ನು https://sevasindhugs.karnataka.gov.in/ ಕ್ಲಿಕ್ಕಿಸುವ ಮೂಲಕ ಅರ್ಜಿಯನ್ನು ಪೂರೈಸಿರಿ ನಾಳೆಯಿಂದಲೇ ಈ ಯೋಜನೆಯ ಅರ್ಜಿ ಸಲ್ಲಿಕೆ ಆರಂಭವಾಗುತ್ತದೆ ಆರಂಭವಾದ ಬಳಿಕ ಜನವರಿಯಲ್ಲಿ ನಿಮಗೆ ಹಣ ಜಮಾ ಆಗಲಿದೆ ಯಾವ ವಿದ್ಯಾರ್ಥಿಗಳಿಗೆ ಎಷ್ಟು ಹಣ ತಲುಪಿಸಬೇಕು ಎಂಬ ಎಲ್ಲಾ ಮಾಹಿತಿಯು ಕೂಡ ಸರ್ಕಾರಕ್ಕೆ ತಿಳಿದಿರುತ್ತದೆ ಆ ಸರ್ಕಾರದ ಲಿಸ್ಟ್ ಮೂಲಕ ನಿಮಗೆ ಹಣ ದೊರೆಯಲಿದೆ 1500 ಹಣ ಜಮಾ ಆಗಬೇಕೆಂದರೆ ಅಷ್ಟೇ ಹಣ ಜಮಾ ಆಗುತ್ತದೆ ಅಥವಾ 3000 ಹಣ ಜಮಾ ಆಗಬೇಕು ಎಂದು ನಿಮ್ಮ ಅರ್ಜಿಯಲ್ಲಿ ಸಲ್ಲಿಕೆಯಾಗಿದ್ದರೆ ಹಾಗೆ ಜಮಾ ಆಗುತ್ತದೆ.

ಯುವನಿಧಿ ಯೋಜನೆ ಅಡಿಯಲ್ಲಿ ನೀವು ಕೂಡ ಹಣವನ್ನು ಪಡೆಯಬೇಕೆಂದರೆ ನೀವು ಸಹ ಕರ್ನಾಟಕದಲ್ಲಿ ಯಾರು ವರ್ಷಗಳ ಕಾಲ ಓದನ್ನು ಮುಗಿಸಿರಬೇಕು ಅಂತಹ ವಿದ್ಯಾರ್ಥಿಗಳು ಮಾತ್ರ ಕರ್ನಾಟಕದ ಯೋಜನೆಗಳ ಸೌಲಭ್ಯವನ್ನು ಪಡೆಯಲು ಸಾಧ್ಯ ನೀವೇನಾದರೂ ಆರು ವರ್ಷಗಳ ಹೆಚ್ಚಿನ ಕಾಲ ಕರ್ನಾಟಕದಲ್ಲಿ ಓದಿದ್ದೀರಿ ಎಂದರೆ ನೀವು ಈ ಒಂದು ಯೋಜನೆಗೆ ಅರ್ಹರು ಎಂದರ್ಥ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment