ಡಿಪ್ಲೋಮಾ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ 20,000 ಹಣವನ್ನು ಈ ವಿದ್ಯಾರ್ಥಿ ವೇತನದಲ್ಲಿ ನೀಡಲಾಗುತ್ತದೆ, ಈ ಕೂಡಲೇ ಈ ಮಾಹಿತಿಯಂತೆ ಅರ್ಜಿಯನ್ನು ಸಲ್ಲಿಸಿರಿ.

ಎಲ್ಲರಿಗೂ ನಮಸ್ಕಾರ…

ಯಾವುದೇ ಸೆಮಿಸ್ಟರ್ ಗಳಲ್ಲಿ ಐಟಿಐ ಹಾಗೂ ಡಿಪ್ಲೋಮಾ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿಯನ್ನು ತಪ್ಪದೇ. ಸಲ್ಲಿಸಿರಿ ಏಕೆಂದರೆ ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ 20,000 ಹಣವನ್ನು ಪ್ರೋತ್ಸಾಹಧನವಾಗಿ ನೀಡಲಾಗುತ್ತದೆ. ನೀವು ಕೂಡ ಐಟಿಐ ಹಾಗೂ ಡಿಪ್ಲೋಮಾ ಶಿಕ್ಷಣವನ್ನು ಪಡೆಯುತ್ತಿದ್ದೀರಾ ಹಾಗಾದ್ರೆ ಈ ಒಂದು ವಿದ್ಯಾರ್ಥಿ ವೇತನಕ್ಕೆ ಈ ಕೂಡಲೇ ಅರ್ಜಿ ಸಲ್ಲಿಸಿರಿ 20,000 ಹಣವನ್ನು ಪ್ರೋತ್ಸಾಹ ಧನವಾಗಿ ಪಡೆದುಕೊಳ್ಳಿರಿ.

WhatsApp Group Join Now
Telegram Group Join Now

ಈ ವಿದ್ಯಾರ್ಥಿ ವೇತನದ ಹೆಸರು ವರ್ಧಮಾನ್ ಫೌಂಡೇಶನ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಪೂರೈಸಿರಿ. ವಿದ್ಯಾರ್ಥಿಗಳು ಅರ್ಹತೆಗಳನ್ನು ಕೂಡ ಹೊಂದಿರಬೇಕಾ ಮತ್ತು ದಾಖಲಾತಿಗಳು ಯಾವುದೆಲ್ಲ ಅವಶ್ಯಕತೆ ಇದೆ ಎಂಬ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿರಿ.

ವಿದ್ಯಾರ್ಥಿಗಳು ಈಗಾಗಲೇ 10ನೇ ತರಗತಿ ಅಥವಾ 12ನೇ ತರಗತಿ ಮುಗಿಸಿದ ನಂತರ ಡಿಪ್ಲೋಮೋ ಅಥವಾ ಐಟಿಐ ಶಿಕ್ಷಣವನ್ನು ಪಡೆಯುತ್ತಿರುತ್ತಾರೆ ಅಂತಹ ಅರ್ಹ ವಿದ್ಯಾರ್ಥಿಗಳು ವರ್ಧಮಾನ್ ಫೌಂಡೇಶನ್ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಿ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಬಹುದು. ನೀವು ಕೂಡ ಈ ವಿದ್ಯಾರ್ಹತೆಯನ್ನೇ ಓದುತ್ತಿದ್ದರೆ ನಿಮಗೂ ಕೂಡ ಈ ವಿದ್ಯಾರ್ಥಿ ವೇತನದಲ್ಲಿ 20,000 ಹಣ ದೊರೆಯಲಿದೆ ಅರ್ಜಿ ಸಲ್ಲಿಸುವ ಮುಖಾಂತರ 20,000 ಹಣವನ್ನು ಪಡೆದುಕೊಳ್ಳಿರಿ.

ಈ ವಿದ್ಯಾರ್ಥಿ ವೇತನವು ಐಟಿಐ ಹಾಗೂ ಡಿಪ್ಲೋಮಾ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗಷ್ಟೇ, ಇನ್ನಿತರ ಶಿಕ್ಷಣಕ್ಕೆ ಬೇರೆ ರೀತಿಯ ವಿವಿಧವಾದ ವಿದ್ಯಾರ್ಥಿ ವೇತನಗಳು ಲಭ್ಯವಿದೆ, ಈ ಹಿಂದೆ ನಮ್ಮ ಲೇಖನದಲ್ಲಿ ವರದಿಯಾಗಿದೆ ಆ ಲೇಖನಗಳನ್ನು ಕೂಡ ಓದಿ ವಿದ್ಯಾರ್ಥಿ ವೇತನಗಳನ್ನು ಪಡೆದುಕೊಳ್ಳಿರಿ. ವರ್ಧಮಾನ್ ಫೌಂಡೇಶನ್ ಸ್ಕಾಲರ್ಷಿಪ್ನ ಉದ್ದೇಶವೇನೆಂದರೆ, ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಲ್ಲಿ ಬಳಲುತ್ತಿದ್ದರೆ

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಅಂತಹ ವಿದ್ಯಾರ್ಥಿಗಳಿಗೆ ಹಣದ ಪ್ರೋತ್ಸಾಹ ಧನವನ್ನು ನೀಡಿ ತಮ್ಮ ಖರ್ಚು ವೆಚ್ಚಗಳನ್ನು ಹಾಗೂ ಕಾಲೇಜಿನ ಶುಲ್ಕಕ್ಕಾಗಿ ವಿದ್ಯಾರ್ಥಿ ವೇತನವು ಉಪಯೋಗ ಆಗಬೇಕೆಂಬ ಉದ್ದೇಶದಲ್ಲಿ ಈ ಒಂದು ಸ್ಕಾಲರ್ಶಿಪ್ ಜಾರಿಯಾಗಿದೆ. ವರ್ಧಮಾನ್ ಟೆಕ್ಸ್ಟೈಲ್ ಲಿಮಿಟೆಡ್ ಕಡೆಯಿಂದ ವರ್ಧಮಾನ್ ಫೌಂಡೇಶನ್ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತದೆ. ವಿದ್ಯಾಭ್ಯಾಸಕ್ಕೇ ಯಾವುದೇ ರೀತಿಯ ಹಣದ ತೊಂದರೆ ಆಗಬಾರದೆಂಬ ಮುಂದಾಲೋಚನೆಯಿಂದ ಈ ಒಂದು ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ದೊರೆಯಲಿದೆ.

ಈ ಕೆಳಕಂಡ ಅರ್ಹತೆಯನ್ನು ವಿದ್ಯಾರ್ಥಿಗಳು ಹೊಂದಿರಬೇಕು.

 • ಐಟಿಐ ಹಾಗೂ ಡಿಪ್ಲೋಮೋ ಶಿಕ್ಷಣವನ್ನು ಯಾವುದೇ ವರ್ಷದಲ್ಲಾದರೂ ಹಾಗೂ ಯಾವುದೇ ಸೆಮಿಸ್ಟರ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಬಹುದು.
 • ಹತ್ತನೇ ತರಗತಿಯಲ್ಲಿ ಕನಿಷ್ಠ 50% ಅಂಕವನ್ನು ಗಳಿಸಿದ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹರು ಮತ್ತು 12ನೇ ತರಗತಿಯನ್ನು ಓದಿದ್ದರೆ ಅಲ್ಲಿನ ಅಂಕಗಳನ್ನು ಕೂಡ ಪರಿಗಣಿಸಲಾಗುತ್ತದೆ ಅಲ್ಲಿನ ಶಿಕ್ಷಣದಲ್ಲಿ 50% ಅಂಕವನ್ನು ವಿದ್ಯಾರ್ಥಿಯು ಗಳಿಸಿರಬೇಕು ಈ ಎರಡು ಅಂಕಗಳ ಮೇಲೆ ನಿಮಗೆ ಪ್ರೋತ್ಸಾಹ ಧನದ ವಿದ್ಯಾರ್ಥಿ ವೇತನ ಸಿಗುತ್ತದೆ.
 • ವಿದ್ಯಾರ್ಥಿಗಳ ಕುಟುಂಬದ ಆದಾಯವು 6 ಲಕ್ಷಕ್ಕಿಂತ ಒಳಗಿರಬೇಕು.
 • ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಮಧ್ಯಪ್ರದೇಶ ಗಳಲ್ಲಿ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇಸ್ಕಾಲರ್ಶಿಪ್ ನಲ್ಲಿ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
 • ವರ್ಧಮಾನ್ ಟೆಕ್ಸ್ಟೈಲ್ ಲಿಮಿಟೆಡ್ ಸಿಬ್ಬಂದಿಗಳ ಮಕ್ಕಳು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸುವಂತಿಲ್ಲ.

ಈ ದಾಖಲಾತಿಗಳು ಅರ್ಹ ಅಭ್ಯರ್ಥಿಗಳು ಹೊಂದಿರಬೇಕು.

 1. ವಿದ್ಯಾರ್ಥಿಯ ಆಧಾರ್ ಕಾರ್ಡ್
 2. ಪಾಸ್ ಬುಕ್
 3. ಪಾಸ್ಪೋರ್ಟ್ ಸೈಜ್ ಭಾವಚಿತ್ರ
 4. ಆದಾಯ ಪ್ರಮಾಣ ಪತ್ರ
 5. 10 ಅಥವಾ 12 ನೇ ತರಗತಿಯ ಅಂಕಪಟ್ಟಿ
 6. ಪ್ರಸ್ತುತ ಶಿಕ್ಷಣ ಪಡೆಯುತ್ತಿರುವ ದಾಖಲಾತಿ

ಅರ್ಜಿ ಸಲ್ಲಿಸುವ ಪ್ರಕ್ರಿಯೆ !

ಈ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮೊದಲಿಗೆ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅದಕ್ಕಾಗಿ ಈ ಕೆಳಕಂಡ ಲಿಂಕನ್ನು ಕ್ಲಿಕ್ಕಿಸಿರಿ.

Apply Online

ಲಿಂಕನ್ನು ಕ್ಲಿಕ್ಕಿಸಿದ ನಂತರ ನಿಮಗೆ ಈ ವಿದ್ಯಾರ್ಥಿ ವೇತನದ ಹೆಚ್ಚಿನ ಮಾಹಿತಿಯು ಇರುತ್ತದೆ ಅದನ್ನು ಕೂಡ ಒಂದು ಬಾರಿ ಓದಿರಿ ಅನಂತರ ಸ್ಕ್ರೋಲ್ ಡೌನ್ ಮಾಡುವ ಮೂಲಕ Apply Online ಎಂಬುದನ್ನು ಕ್ಲಿಕ್ಕಿಸಿರಿ ನಂತರ ಇ-ಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ರಿಜಿಸ್ಟರ್ ಆಗಿ ಲಾಗಿನ್ ಆಗಿ ನಂತರ ಅರ್ಜಿಯ ಪ್ರಕ್ರಿಯೆಯನ್ನು ಎಲ್ಲಾ ದಾಖಲಾತಿಗಳನ್ನೆಲ್ಲ ನೀಡಿ ಮುಗಿಸಿರಿ. ಅನಂತರ ನಿಮ್ಮ ಅರ್ಜಿಯ ಪ್ರಕ್ರಿಯೆ ಮುಗಿಯುತ್ತದೆ. ಈ ರೀತಿಯಾಗಿ ವರ್ಧಮಾನ್ ಫೌಂಡೇಶನ್ ಸ್ಕಾಲರ್ಶಿಪ್‌ಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ನಿಮ್ಮ ಸ್ನೇಹಿತರು ಕೂಡ ಐಟಿಐ ಹಾಗೂ ಡಿಪ್ಲೋಮೋ ಶಿಕ್ಷಣವನ್ನು ಪಡೆಯುತ್ತಿದ್ದಾರ ? ಹಾಗಾದ್ರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ವಿದ್ಯಾರ್ಥಿ ವೇತನದ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ ಅವರು ಕೂಡ 20 ಸಾವಿರ ಹಣವನ್ನು ಪಡೆದುಕೊಳ್ಳಲಿ.

ಈ ವಿದ್ಯಾರ್ಥಿ ವೇತನಕ್ಕೆ ಡಿಸೆಂಬರ್ 15ನೇ ದಿನಾಂಕದಂದು ಅರ್ಜಿಯ ಪ್ರಕ್ರಿಯೆ ಕೊನೆಗೊಳ್ಳಲಿದೆ. ಹಾಗಾಗಿ ಈ ಕೂಡಲೇ ಅರ್ಜಿಯನ್ನು ಸಲ್ಲಿಸುವ ಮೂಲಕ 20,000 ಹಣದ ವಿದ್ಯಾರ್ಥಿ ವೇತನವನ್ನು ಪಡೆಯಬಹುದು.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment