SSLC ಹಾಗೂ PUC ವಿದ್ಯಾರ್ಥಿಗಳಿಗೆ ಇನ್ಮುಂದೆ 3 ಪಬ್ಲಿಕ್ ಪರೀಕ್ಷೆ ಇರುತ್ತೆ ಎಂದು ಸಚಿವರಾದ ಮಧು ಬಂಗಾರಪ್ಪನವರು ಮಾಹಿತಿ ನೀಡಿದ್ದಾರೆ.

ಎಲ್ಲರಿಗೂ ನಮಸ್ಕಾರ…

ಈಗಾಗಲೇ SSLC ಹಾಗೂ PUC ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು ಬಾರಿ ಪರೀಕ್ಷೆಯನ್ನು ನಡೆಸುತ್ತೇವೆ ಎಂದು ನಿರ್ಧಾರ ಮಾಡಿ ಹೊಸ ನಿಯಮವನ್ನು ಜಾರಿಗೊಳಿಸಿದ್ದು, ಅದೇ ರೀತಿ ಶಿಕ್ಷಣದ ಪರೀಕ್ಷೆಗಳನ್ನು ಮುನ್ನಡೆಸಲಿದೆ ಸರ್ಕಾರ. ಇಂತಹ ಸಂದರ್ಭದಲ್ಲು ಕೂಡ ಮೂರು ಪಬ್ಲಿಕ್ ಪರೀಕ್ಷೆಯನ್ನು ಎಲ್ಲಾ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇರುತ್ತದೆ, ಎಂದು ಸಚಿವರು ಬೆಳಗಾವಿ ಸುವರ್ಣಸೌಧದಲ್ಲಿ ಮಾಹಿತಿ ನೀಡಿದ್ದಾರೆ. ಈ ಒಂದು ಹೊಸ ಪರೀಕ್ಷೆಯ ನಿಯಮವನ್ನು ಮುಂದಿನ ವರ್ಷದಂದು ಎಲ್ಲಾ ವಿದ್ಯಾರ್ಥಿಗಳಿಗೆ ನೀಡಲಿದ್ದಾರೆ.

WhatsApp Group Join Now
Telegram Group Join Now

ಆ ನಿಯಮದಂತೆಯೇ ವಿದ್ಯಾರ್ಥಿಗಳು ಮೂರು ಬಾರಿ ಪಬ್ಲಿಕ್ ಪರೀಕ್ಷೆಯನ್ನು ಬರೆಯಲೇಬೇಕು, ಇದು ಎಲ್ಲಾ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿದೆ. ಈ ಹೊಸ ಪರೀಕ್ಷೆಯ ನಿರ್ಧಾರವನ್ನು ಏಕೆ ಸಚಿವರು ತೆಗೆದುಕೊಂಡಿದ್ದಾರೆ ಎಂದು ಈ ಕೆಳಕಂಡ ಲೇಖನದಲ್ಲಿ ಮಾಹಿತಿಯನ್ನು ತಿಳಿಯಿರಿ. ಸಚಿವರು ಬೆಳಗಾವಿಯಲ್ಲಿ ನಡೆದ ಸುವರ್ಣಸೌಧದ ನೇತೃತ್ವದ ಕಲಾಪದಲ್ಲಿ ಬಿಜೆಪಿ ಶಾಸಕರು ಒಬ್ಬರು ಸಚಿವರನ್ನು ಪ್ರಶ್ನೆ ಮಾಡುತ್ತಾರೆ ಆ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಮಧು ಬಂಗಾರಪ್ಪನವರು ಈಗಾಗಲೇ ಈ ಹಿಂದೆ ಮಾತು ಕೊಟ್ಟಂತೆ ಎನ್ಇಪಿ ರದ್ದು ಮಾಡಿದ್ದೇವೆ, ಅದೇ ರೀತಿ ಈ ಎನ್ಈಪಿ ಯಲ್ಲಿ ಇಲ್ಲದ ಅನುಕೂಲಗಳನ್ನು ಇನ್ಮುಂದೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಹಾಗೂ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯನ್ನು ಮುಂದಿನ ವರ್ಷದಲ್ಲಿ ಓದುವ ವಿದ್ಯಾರ್ಥಿಗಳಿಗೆ ಮೂರು ಬಾರಿ ಪಬ್ಲಿಕ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆ ಪಬ್ಲಿಕ್ ಪರೀಕ್ಷೆಯನ್ನು ಎಲ್ಲ ವಿದ್ಯಾರ್ಥಿಗಳು ತೆಗೆದುಕೊಂಡು ಬರೆಯಲೇಬೇಕು, ಈ ಒಂದು ಪಬ್ಲಿಕ್ ಪರೀಕ್ಷೆಯನ್ನು ಏಕೆ ಮಾಡಿದ್ದೇವೆ ಎಂದರೆ ವಿದ್ಯಾರ್ಥಿಗಳು ಮತ್ತಷ್ಟು ವಿದ್ಯಾಭ್ಯಾಸದ ಶಿಕ್ಷಣದಲ್ಲಿಯೇ ಮುಂದೆ ಬರಬೇಕು ಹಾಗೆ ಮಕ್ಕಳು ಮೂರು ಬಾರಿ ಪಬ್ಲಿಕ್ ಪರೀಕ್ಷೆಯ ಬರೆದ ನಂತರ ಇನ್ನು ಹೆಚ್ಚಿನ ಪಠ್ಯಪುಸ್ತಕಗಳ ಮಾಹಿತಿಯನ್ನು ತಿಳಿದುಕೊಂಡಿರುತ್ತಾರೆ,

ಹಾಗಾಗಿ ಮಕ್ಕಳಿಗೆ ಅನುಕೂಲವಾಗುವಂತಹ ಮೂರು ಪಬ್ಲಿಕ್ ಪರೀಕ್ಷೆಗಳು ಒಳಗೊಂಡಿರುತ್ತದೆ. ಒಟ್ಟಾರೆ ಹೇಳುವುದಾದರೆ ಈ ಮೂರು ಪಬ್ಲಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪಠ್ಯಪುಸ್ತಕಗಳ ವಿಷಯಗಳನ್ನು ತಿಳಿದುಕೊಳ್ಳುತ್ತಾ ಮುಂದಿನ ಪೂರ್ವ ಪರೀಕ್ಷೆಗೆ ತಯಾರಾಗಿರುತ್ತಾರೆ ಹಾಗಾಗಿ ಈ ಮೂರು ಪಬ್ಲಿಕ್ ಪರೀಕ್ಷೆಯನ್ನು ಕೈಗೊಳ್ಳುತ್ತೇವೆ ಮುಂದಿನ ವರ್ಷದಂದು ಎಂದು ಮಧು ಬಂಗಾರಪ್ಪನವರು ಹೇಳಿದ್ದಾರೆ.

ಸಚಿವರ ನಿರ್ಧಾರದಿಂದ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೂ ಕೂಡ ಅನುಕೂಲವಾಗುತ್ತದೆ. ಮತ್ತು ಪಠ್ಯಕ್ರಮಗಳನ್ನು ಕೂಡ ಜಾರಿಗೊಳಿಸಿದ್ದಾರೆ. ಈಗಾಗಲೇ ಹಲವಾರು ದಿನಗಳ ಹಿಂದೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಸುತ್ತಿನ ಪರೀಕ್ಷೆಯನ್ನು ನಡೆಸುತ್ತೇವೆ ಎಂದು ಕೂಡ ಶಿಕ್ಷಣ ಇಲಾಖೆಯು ಮಾಹಿತಿಯನ್ನು ನೀಡಿತ್ತು ಅದೇ ರೀತಿ ಮಾರ್ಚ್ ತಿಂಗಳಿನಿಂದ ಪರೀಕ್ಷೆಯನ್ನು ನಡೆಸಲಿದೆ. ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಯನ್ನು ಈ ಹಿಂದೆ ಸ್ಥಗಿತಗೊಳಿಸಲಾಗಿತ್ತು, ಆದರೆ ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ ಈ ನಿರ್ಧಾರವೂ ಬದಲಾಗಲಿದೆ ಮುಂದಿನ ವರ್ಷದಂದೆ ಎಲ್ಲಾ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಆಗುತ್ತದೆ, ಎಂದು ಹೇಳಿದ್ದಾರೆ.

ಈ ವರ್ಷ ಏಕೆ ಆಗುವುದಿಲ್ಲ ಎಂದರೆ ಲಕ್ಷಾಂತರ ಬೈಸಿಕಲ್ ಗಳನ್ನು ಒಂದೇ ಬಾರಿಯೆ ಹೊಂದಿಸಲು ಆಗುವುದಿಲ್ಲ ಮತ್ತು ಅಷ್ಟು ಸೈಕಲ್ ಗಳು ಕೂಡ ಈ ಬಾರಿ ತಯಾರಾಗುವುದಿಲ್ಲ ಹಾಗಾಗಿ ಮುಂದಿನ ವರ್ಷದಂದು ಈ ಯೋಜನೆ ಜಾರಿಯಾಗಿ ಎಲ್ಲಾ ಅರ್ಹ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೈಸಿಕಲ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ ಈ ವರ್ಷದೊಂದು ಸೈಕಲ್ ಬದಲಿಗೆ ಎಲ್ಲ ಶಾಲಾ ಮಕ್ಕಳಿಗೆ ಮೊಟ್ಟೆಯನ್ನು ದಿನನಿತ್ಯ ನೀಡಲಾಗುತ್ತಿದೆ ಎಂದು ಕೂಡ ಮಾಹಿತಿಯನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ಹೇಳಿದ್ದಾರೆ. ಈ ವರ್ಷದಂದು ಹೆಚ್ಚಿನ ಹೊಸ ಹೊಸ ರೀತಿಯ ನಿಯಮಗಳು ಜಾರಿಯಾಗಿವೇ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಈ ನಿಯಮದಿಂದ ಅನುಕೂಲಗಳೇ ಹೆಚ್ಚಿದೆ ಹಾಗಾಗಿ ಸರ್ಕಾರವು ಒಂದೊಳ್ಳೆ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ.

ಲೇಖನವನ್ನು ಇಲ್ಲಿಯವರೆಗೂ ಓದಿದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment