ಹೊಸ ಯೋಜನೆಗೆ ಸಜ್ಜಾಯಿತು ಸರ್ಕಾರ ! ಸಣ್ಣ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ರೂ. 50 ಸಾವಿರದವರೆಗೆ ಸಾಲವನ್ನು ನೀಡಲು ಮುಂದಾಗಿದೆ.

ಎಲ್ಲರಿಗೂ ನಮಸ್ಕಾರ…

ಕೇಂದ್ರ ಸರ್ಕಾರವು ಬಡ ಕುಟುಂಬಗಳಿಗೆ ಮತ್ತು ಕಾರ್ಮಿಕರಿಗೆ ಹಲವಾರು ಯೋಜನೆಗಳನ್ನು ಇಂದಿನ ದಿನಗಳಿಂದಲೇ ಜಾರಿಗೊಳಿಸಲಿದೆ ಆದರೆ ಇತ್ತೀಚಿನ ದಿನಗಳಲ್ಲಿ ಜಾರಿಯಾದ ಹೊಸ ಯೋಜನೆ ಎಂದರೆ ಪ್ರಧಾನಮಂತ್ರಿ ಸ್ವಾನಿಧಿ ಯೋಜನೆ. ಈ ಒಂದು ಯೋಜನೆ ಅಡಿಯಲ್ಲಿ ಸಣ್ಣ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ 50 ಸಾವಿರದವರೆಗೆ ಬಡ್ಡಿ ಇಲ್ಲದ ಸಾಲವನ್ನು ನೀಡಲಾಗುತ್ತದೆ.

WhatsApp Group Join Now
Telegram Group Join Now

ಈ ಯೋಜನೆಯು ಉತ್ತಮವಾದ ಉದ್ದೇಶವನ್ನು ಹೊಂದಿದೆ ಅದೇನೆಂದರೆ, ಸಣ್ಣ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ತನ್ನ ವ್ಯಾಪಾರದಲ್ಲಿ ಹೆಚ್ಚಿನ ಆದಾಯವನ್ನು ನೋಡಲು ಹಣದ ಕೊರತೆ ಉಂಟಾಗಬಹುದು. ಆ ಹಣದ ಕೊರತೆಯನ್ನು ಸರ್ಕಾರ ನಿರ್ವಹಿಸಲಿದೆ 50 ಸಾವಿರದವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಈ ಯೋಜನೆ ಅಡಿಯಲ್ಲಿ ಸಿಗಲಿದೆ. ನೀವು ಕೂಡ ಈ ಯೋಜನೆ ಅಡಿಯಲ್ಲಿ ಸಾಲವನ್ನು ತೆಗೆದುಕೊಳ್ಳಬೇಕಾ ? ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬ ಎಲ್ಲಾ ಮಾಹಿತಿಯೂ ಕೂಡ ಈ ಕೆಳಕಂಡ ಲೇಖನದಲ್ಲಿ ಇದೆ ಲೇಖನವನ್ನು ಕೊನೆವರೆಗೂ ಓದಿ.

ಬಡ್ಡಿ ರಹಿತ ಸಾಲ ಯೋಜನೆ !

ಈ ಒಂದು ಯೋಜನೆ ಅಡಿಯಲ್ಲಿ ಸಣ್ಣ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ 10,000 ದಿಂದ 50,000ದವರೆಗೆ ಸಾಲವನ್ನು ನೀಡಲಾಗುತ್ತದೆ. ಸಣ್ಣ ವ್ಯಾಪಾರ ಎಂದರೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ತರಕಾರಿ ಹಾಗೂ ಇನ್ನಿತರ ವ್ಯಾಪಾರಗಳಿಗೆ ಸಣ್ಣ ವ್ಯಾಪಾರ ಎಂದು ಕರೆಯಲಾಗುತ್ತದೆ. ಆ ಒಂದು ಸಣ್ಣ ವ್ಯಾಪಾರವನ್ನು ನೀವು ಕೂಡ ಮಾಡುತ್ತಿದ್ದೀರಾ ? ಪ್ರತಿನಿತ್ಯ ಜೀವನದಲ್ಲಿ ಈ ಕೆಲಸವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಸರ್ಕಾರ ಸಾಲದ ಸೌಲಭ್ಯವನ್ನು ನೀಡಲಿದೆ. ಆ ಸಾಲದ ಸೌಲಭ್ಯಕ್ಕೆ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ಏಕೆಂದರೆ ಈ ಯೋಜನೆಯ ಉದ್ದೇಶ ಸಣ್ಣ ವ್ಯಾಪಾರಿಗಳಿಗೆ ಮತ್ತಷ್ಟು ಆದಾಯವನ್ನು ಹೆಚ್ಚಿಸುವುದು. ಪ್ರಧಾನಮಂತ್ರಿ ಸ್ವಾನಿದಿ ಯೋಜನೆ ಅಡಿಯಲ್ಲಿ ನೀವು ಕೂಡ ಲೋನನ್ನು ಪಡೆದುಕೊಳ್ಳಬೇಕ ಹಾಗಾದ್ರೆ ಯಾವ ರೀತಿ ಅರ್ಜಿ ಸಲ್ಲಿಸಿ 50 ಸಾವಿರದವರೆಗೆ ಸಾಲವನ್ನು ಪಡೆಯಬೇಕೆಂಬ ಮಾಹಿತಿ ಈ ಕೆಳಕಂಡಂತಿದೆ.

ಪ್ರಧಾನಮಂತ್ರಿ ಸ್ವನಿಧಿ ಯೋಜನೆ ! 

ಈ ಒಂದು ಯೋಜನೆಯನ್ನು ಕೋವಿಡ್ 19 ಸಂದರ್ಭದಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯ ಸೌಲಭ್ಯವು ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಸಲ್ಲುತ್ತದೆ. ನೀವು ಕೂಡ ಇಂತಹ ವ್ಯಾಪಾರವನ್ನು ಪ್ರಾರಂಭಿಸಬೇಕೆಂದು ಅಂದುಕೊಂಡಿದ್ದರೆ ಸರ್ಕಾರದಿಂದ ನಿಮಗೆ ಸಾಲ ಸೌಲಭ್ಯ ಸಿಗುತ್ತದೆ. ಈ ಸಾಲವನ್ನು ಎಲ್ಲ ಭಾರತ ದೇಶದ ಪ್ರಜೆಗಳಿಗೆ ನೀಡಲಾಗುತ್ತದೆ. ನೀವು ಕೂಡ ಭಾರತದಲ್ಲಿನ ನಿವಾಸಿಯಾಗಿದ್ದರೆ ನಿಮಗೆ ಈ ಹಣ ಸಲ್ಲುತ್ತದೆ. ಕಡಿಮೆ ಬಡ್ಡಿ ಯಲ್ಲಿ 50 ಸಾವಿರದವರೆಗೆ ಲೋನ್ ಸಿಗಲಿದೆ.

ನಿಮಗೆ 50,000 ಹಣ ಬೇಡ ಎಂದು ಅನಿಸಿದರೆ ನೀವು 10,000 ಹಣವನ್ನು ಕೂಡ ಸಾಲದ ರೂಪದಲ್ಲಿ ಪಡೆಯಬಹುದು ಒಟ್ಟಾರೆ ಹೇಳುವುದಾದರೆ 10,000 ದಿಂದ ಶುರುವಾಗಿ 50,000 ದವರೆಗೆ ಸಿಗುತ್ತದೆ. ನೀವು ಕೂಡ ಇಂತಹ ವ್ಯಾಪಾರವನ್ನು ಶುರು ಮಾಡಬೇಕೆಂದು ಅಂದುಕೊಂಡಿದ್ದರೆ ಈ ಕೂಡಲೇ ಈ ಕೆಳಕಂಡಂತೆ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಿ. ನಂತರ ನಿಮಗೆ 50,000 ದವರೆಗೆ ಸಾಲ ದೊರೆಯಲಿದೆ ಅನಂತರ ನೀವು ನಿಮ್ಮ ನೆಚ್ಚಿನ ವ್ಯಾಪಾರವನ್ನು ಶುರು ಮಾಡಿ ವೃದ್ಧಿಸಿಕೊಂಡು ಹೆಚ್ಚಿನ ಆದಾಯವನ್ನು ಗಳಿಸಬಹುದು.

ಇಂಥಹ ವ್ಯಾಪಾರಿಗಳಿಗೆ ಸಾಲದ ಸೌಲಭ್ಯ ದೊರೆಯಲಿದೆ.

ರಸ್ತೆ ಬದಿಗಳಲ್ಲಿ ಹಣ್ಣಿನ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ, ಹಾಗೂ ಹೂ ಅಂಗಡಿಗಳು, ಮತ್ತು ತರಕಾರಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ, ಬಟ್ಟೆ ವ್ಯಾಪಾರಿಗಳಿಗೆ, ರಸ್ತೆ ಬದಿಯಲ್ಲಿ ಆಹಾರ ಮಾರುವ ವ್ಯಾಪಾರಿಗಳಿಗೆ, ಪಕೋಡ ಹಾಗೂ ಮೊಟ್ಟೆಗಳನ್ನು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ, ಹಾಗೂ ಚಮ್ಮಾರರಿಗೆ, ಪುಸ್ತಕಗಳನ್ನು ಮಾರುವವರಿಗೆ, ಟೀ ಸ್ಟಾಲ್ ಗಳನ್ನು ಹೊಂದಿರುವವರಿಗೆ 50,000 ದವರೆಗೆ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ. ಇಂತಹ ವ್ಯಾಪಾರಿಗಳು ಮಾತ್ರ ಈ ಯೋಜನೆಯ ಫಲಾನುಭವಿಗಳಾಗುತ್ತಾರೆ.

ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು.

ಪ್ರಧಾನಮಂತ್ರಿ ಸ್ವಾನಿಧಿ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯುವ ಅಭ್ಯರ್ಥಿಯು ಮಾರ್ಚ್- 24-2020 ರಿಂದ ವ್ಯಾಪಾರವನ್ನು ಶುರು ಮಾಡಿದ ಅರ್ಹ ವ್ಯಾಪಾರಿಗೆ ಸಾಲದ ಸೌಲಭ್ಯ ಸಿಗಲಿದೆ. ಮತ್ತು ಈ ಯೋಜನೆಯ ಸೌಲಭ್ಯವನ್ನು ಒದಗಿಸಿಕೊಂಡು ನಂತರ ನೀವು ಹೊಸದಾಗಿ ಸಣ್ಣ ವ್ಯಾಪಾರವನ್ನು ಶುರು ಮಾಡುತ್ತೀರಿ ಎಂದರು ಕೂಡ ನಿಮಗೆ 50,000 ದವರೆಗೆ ಸಾಲ ಸಿಗಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಾರ್ಚ್ 2024 ವರೆಗೆ ಕಾಲಾವಕಾಶ ನೀಡಿದೆ ಕೇಂದ್ರ ಸರ್ಕಾರ.

ನೀವು ಕೂಡ ಸ್ವನಿಧಿ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಳ್ಳಬೇಕಾ ಹಾಗಾದ್ರೆ ನೀವು ಬ್ಯಾಂಕ್ ಖಾತೆಯೊಂದನ್ನು ಹೊಂದಿರಬೇಕು ಹಾಗೂ ಆ ಬ್ಯಾಂಕ್ ಖಾತೆಯೂ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು. ಅಂತಹ ಅರ್ಹ ವ್ಯಾಪಾರಿಗಳಿಗೆ ಮಾತ್ರ ಈ ಸಾಲ ಸಲ್ಲುತ್ತದೆ. ಮತ್ತು ನೀವು ಬೀದಿ ಬದಿಯಲ್ಲಿ ವ್ಯಾಪಾರವನ್ನು ಆರಂಭ ಮಾಡಬೇಕು ಅಥವಾ ಈಗಾಗಲೇ ಆರಂಭಿಸಿ ಮತ್ತಷ್ಟು ವೃದ್ಧಿಸಿಕೊಳ್ಳಬೇಕೆಂದು ಬಯಸಿದ್ದರೆ ಅಂತಹ ಕಾರಣಗಳಿಗೂ ಕೂಡ ಈ ಯೋಜನೆಯ ಹಣ ಸಿಗಲಿದೆ.

ಈ ಕೆಳಕಂಡ ದಾಖಲಾತಿಯನ್ನು ಹೊಂದಿರಬೇಕು.

  1. ಆಧಾರ್ ಕಾರ್ಡ್
  2. ಪಾನ್ ಕಾರ್ಡ್
  3. ವಿಳಾಸ
  4. ಅಭ್ಯರ್ಥಿಯ ಪಾಸ್ಪೋರ್ಟ್ ಸೈಜ್ ಭಾವಚಿತ್ರ
  5. ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು. ಹಾಗಾಗಿ ಮೊಬೈಲ್ ಸಂಖ್ಯೆಯು ಕೂಡ ಅರ್ಜಿ ಸಲ್ಲಿಸಲು ಬೇಕೇ ಬೇಕು.

ಅರ್ಜಿಯ ಪ್ರಕ್ರಿಯೆ ಹೀಗಿದೆ.

  • ಅರ್ಜಿದಾರನು ಮೊದಲಿಗೆ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರೆ ಆನ್ಲೈನ್ ಮೂಲಕ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಅದಕ್ಕಾಗಿ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ಕಿಸಿ ನಂತರ ಮುಖಪುಟವನ್ನು ನೋಡುತ್ತೀರಿ.
  • https://pmsvanidhi.mohua.gov.in/
  • ಸಾಲಕ್ಕಾಗಿ ಅರ್ಜಿ ಸಲ್ಲಿಸಿರಿ ಎಂಬ ಕನ್ನಡದ ಪದಗಳು ಕಾಣುತ್ತವೆ ಕಾಣುವ ಅಕ್ಷರಗಳ ಮೇಲೆ ಕ್ಲಿಕ್ ಮಾಡಿ.
  • ಅನಂತರ ಇನ್ನಷ್ಟು ನೋಡಿ ಎಂಬುದನ್ನು ಒತ್ತಿರಿ.
  • ನಂತರ ಮುಂದಿನ ಪುಟವು ತೆರೆಯುತ್ತದೆ ಆ ಪುಟದಲ್ಲಿ ಡೌನ್ಲೋಡ್ ಎಂಬ ಆಯ್ಕೆ ಇದೆ ಅದನ್ನು ಕ್ಲಿಕ್ಕಿಸಿರಿ.
  • ಕ್ಲಿಕ್ಕಿಸಿದ ನಂತರ ಸ್ವನಿಧಿ ಯೋಜನೆಗೆ ಅರ್ಜಿ ಪ್ರಕ್ರಿಯೆ ತೆರೆಯುತ್ತದೆ.
  • ನಂತರ ನೀವು ಈ ಸನ್ನಿಧಿ ಯೋಜನೆಯ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಕೂಡ ನಮೂದಿಸಬೇಕಾಗುತ್ತದೆ. ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಭರ್ತಿ ಮಾಡಿದ ನಂತರ ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು.
  • ಆ ಬ್ಯಾಂಕ್ ನ ಅಧಿಕಾರಿಗಳು ನಿಮ್ಮ ಫಾರ್ಮನ್ನು ಪರಿಶೀಲಿಸುತ್ತಾರೆ.
  • ನೀವು ಎಲ್ಲಾ ನಿಯಮಗಳನ್ನು ಹಾಗೂ ಷರತ್ತುಗಳನ್ನು ಹೊಂದಿದ್ದರೆ ಮಾತ್ರ ಈ ಯೋಜನೆ ಸಲ್ಲುತ್ತದೆ ಹಾಗೂ ಫಾರ್ಮನ್ನು ಕೂಡ ಅನುಮೋದಿಸಿ ನಂತರ ನಿಮ್ಮ ಖಾತೆಗೆ ಸಾಲವನ್ನು ವರ್ಗಾಯಿಸಲಾಗುತ್ತದೆ ಈ ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಖಾತೆಗೆ ಹಣ ಬಂದು ತಲುಪುತ್ತದೆ.

ನಿಮ್ಮ ಅಕ್ಕ ಪಕ್ಕದ ಸ್ನೇಹಿತರಿಗೂ ಕೂಡ ಈ ಸನ್ನಿಧಿ ಯೋಜನೆಯ ಬಗ್ಗೆ ತಿಳಿಸಿರಿ ಹಾಗು ಈ ಲೇಖನವನ್ನು ಶೇರ್ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment