ತಿಂಗಳು ಕಳೆದರೂ ಗೃಹಲಕ್ಷ್ಮಿ ಹಣ ಬಂದಿಲ್ಲವೇ ! ಹಾಗಿದ್ದರೆ ಸರ್ಕಾರದ ಈ ಸಹಾಯವಾಣಿ ಸಂಖ್ಯೆಗೆ SMS ಮಾಡಿ ಸಮಸ್ಯೆ ತಿಳಿಸಿ, ಹಣ ಪಡೆದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಸರ್ಕಾರದ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಯೋಜನೆಯ ಪ್ರಕಾರ ಪ್ರತಿ ಮನೆಯ ಯಜಮಾನಿಗೆ 2000 ರೂಪಾಯಿಯನ್ನು ಪ್ರತಿ ತಿಂಗಳು ಕೊಡಲಾಗುವುದೆಂದು ತಿಳಿಸಿತ್ತು. ಕೇಂದ್ರ ಸರ್ಕಾರವು ನುಡಿದಂತೆ ನಡೆಯುತ್ತಿದೆ ಆದರೆ ಕೆಲವರಿಗೆ ಗೃಹಲಕ್ಷ್ಮಿಯ ಹಣ ಬಂದಿದೆ ಆದರೆ ಇನ್ನೂ ಕೆಲವರಿಗೆ ಗೃಹಲಕ್ಷ್ಮಿ ಹಣ ಯಾವುದೇ ಕಂತಿನ ಹಣವು ಕೂಡ ಬಂದಿಲ್ಲ. ಸಿದ್ದರಾಮಯ್ಯನವರು ಈಗಾಗಲೇ ಒಂದು ಸಭೆಯನ್ನು ನಡೆಸಿ ಅದಾಲತ್ ಯೋಜನೆ ನಡೆಸುವುದಾಗಿ ತಿಳಿಸಿದರು.

WhatsApp Group Join Now
Telegram Group Join Now

ಆ ಯೋಜನೆಯ ಪ್ರಕಾರ ಯಾವ ಮನೆಯ ಒಡತಿಯರಿಗೆ ಇನ್ನೂ ಕೂಡ 2000 ಗೃಹಲಕ್ಷ್ಮಿಯ ಹಣ ಬಂದಿಲ್ಲವೆಂದರೆ,ನೀವುಗಳು ನಿಮ್ಮ ಊರಿನ ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿ ನೀಡಿ ಅವರ ಸಹಾಯವನ್ನು ಪಡೆದುಕೊಳ್ಳಿ ಜೊತೆಗೆ ಅವರೊಂದಿಗೆ ಬ್ಯಾಂಕ್ ಗೆ ಭೇಟಿ ನೀಡಿ ನಿಮ್ಮ ಖಾತೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಈ ರೀತಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದರೆ ನಿಮ್ಮ ಬ್ಯಾಂಕಿಗೆ ಡಿಸೆಂಬರ್ ತಿಂಗಳಿನ ಒಳಗೆ ನಿಮ್ಮ ಖಾತೆಗೆ 2,000 ಗೃಹಲಕ್ಷ್ಮಿ ಹಣ ಜಮಾ ಆಗುತ್ತದೆ ಎಂದು ತಿಳಿಸಿದ್ದರು. ಯಾರಿಗೆ ಮೂರು ಮತ್ತು ನಾಲ್ಕನೇ ಕಂತಿನ ಹಣ ಬಂದಿಲ್ಲವೋ ಅಂತವರಿಗೆ ಮತ್ತು ಒಂದು ಕಂತಿನ ಹಣ ಪಡೆಯದೇ ಇರುವವರಿಗೂ ಸಹ ಒಟ್ಟಾರೆ ಎಲ್ಲಾ ಕಂತಿನ ಹಣವನ್ನು ಒಮ್ಮೆಲೆ ಹಾಕಲಾಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಹಣ ಬರದೆ ಇರಲು ಮುಖ್ಯವಾಗಿ ಬ್ಯಾಂಕೇ ಕಾರಣವಾಗಿದೆ ಏಕೆಂದರೆ ಒಮ್ಮೆಲೇ ಎಲ್ಲಾ ಜಿಲ್ಲೆಗೂ ಸಹ ಒಂದೇ ಬಾರಿ ಹಣ ವರ್ಗಾವಣೆ ಆಗುವುದಿಲ್ಲ ವೆಂದು ಆರ್‌ ಬಿ ಐ ನ ಬ್ಯಾಂಕ್ ಮೂಲಕ ತಿಳಿದುಕೊಂಡು ತಿಳಿಸಿದ್ದಾರೆ. ಆದ್ದರಿಂದ ಹಣ ಬಂದಿಲ್ಲ ಎಂದು ದಯವಿಟ್ಟು ನೀವು ಟೆನ್ಶನ್ ಮಾಡಿಕೊಳ್ಳಬೇಡಿ ಅದಾಲತ್ ಯೋಜನೆಯ ಹಡೆಯ ಸಹಾಯವನ್ನು ಕೂಡ ಪಡೆದುಕೊಳ್ಳಿ ನಿಮ್ಮ ಸಮಸ್ಯೆಯನ್ನು ನಿಮ್ಮ ಊರಿನ ಕಾರ್ಯಕರ್ತೆಯರಿಗೆ ತಿಳಿಸಿ ಬ್ಯಾಂಕ್ ಗೆ ಹೋಗಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಆಗ ನಿಮ್ಮ ಖಾತೆಗೆ ಹಣ ಜಮವಾಗಬಹುದು ಎಂದು ಹೇಳಿಕೆ ನೀಡಿದರು. ಒಟ್ಟಾರೆ ಸರ್ಕಾರವು ಗೃಹಲಕ್ಷ್ಮಿ ಹಣವನ್ನು ಡಿಸೆಂಬರ್ ತಿಂಗಳ ಅಂತ್ಯದ ಒಳಗೆ ಒಮ್ಮೆಲೇ ಎಲ್ಲರ ಖಾತೆಗೆ ಎಷ್ಟು ಕಂತಿನ ಹಣ ಬಂದಿಲ್ಲವೋ ಅಷ್ಟು ಕಂತಿನ ಹಣವನ್ನು ಒಮ್ಮೆಲೇ ನೀಡಲಾಗುತ್ತದೆ ಎಂದು ಮಾಹಿತಿ ದೊರಕಿದೆ.

ಗೃಹಲಕ್ಷ್ಮಿ ಹಣ ಬಂದಿಲ್ಲವೆಂದರೆ ನೀವು ಸರ್ಕಾರದ ಸಹಾಯವಾಣಿ ಈ ನಂಬರ್ ಗೆ SMS ಮಾಡಿ !

ಗೃಹಲಕ್ಷ್ಮಿ ಹಣ ಬಂದಿಲ್ಲ ವೆಂದು ಟೆನ್ಶನ್ ಅನ್ನು ಮಾಡಿಕೊಳ್ಳದೆ ನಿಮ್ಮ ಸಮಸ್ಯೆಯನ್ನು ಈ ಸಹಾಯವಾಣಿ ನಂಬರ್ ಗೆ ಎಸ್ಎಂಎಸ್ ಮಾಡಿ ಆಗ ಅವರು ನಿಮಗೆ ಏಕೆ ಹಣ ಬಂದಿಲ್ಲವೆಂದು ಸಂಕ್ಷಿಪ್ತವಾಗಿ ಪರಿಶೀಲಿಸಿ ತಿಳಿಸುತ್ತಾರೆ. ಆಗ ನಿಮಗೆ ಏಕೆ ಹಣ ಬಂದಿಲ್ಲ ಎಂದು ಸಮಸ್ಯೆ ತಿಳಿಯುತ್ತದೆ ಆ ಸಮಸ್ಯೆಯನ್ನು ಬಗೆಹರಿಸಿಕೊಂಡರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ 2000 ರೂಪಾಯಿ ಹಣ ಜಮಾ ಆಗುತ್ತದೆ.

ಹಾಗಿದ್ದರೆ ಸರ್ಕಾರ ಹೊರಡಿಸಿರುವ ಆ ಸಹಾಯವಾಣಿಯ ಸಂಖ್ಯೆ ಏನು ಎಂದರೆ 8147500500 ಈ ನಂಬರ್ಗೆ ನಿಮ್ಮ ಮೊಬೈಲ್ ನ ಮುಖಾಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಎಸ್ಎಂಎಸ್ ಮಾಡಿ ಆಗ ಅವರು ನಿಮಗೆ ಗೃಹಲಕ್ಷ್ಮಿ ಹಣ ಹೇಗೆ ಬಂದಿಲ್ಲವೆಂದು ನಿಮಗೆ ತಿಳಿಸುತ್ತಾರೆ. ನಿಮಗೆ ಗೃಹಲಕ್ಷ್ಮಿ ಹಣ ಬರಲು ಸಹಾಯ ಕೂಡ ಮಾಡುತ್ತಾರೆ. ಸರ್ಕಾರದ ಮುಖ್ಯ ಉದ್ದೇಶ ಎಲ್ಲರಿಗು ಕೂಡ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ದೊರಕಬೇಕು ಎಂಬುದು.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment