ಕೇಂದ್ರ ಸರ್ಕಾರದಿಂದ ಎಲ್‌ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್ ! ಇಂದಿನಿಂದಲೇ ಇಳಿಕೆಯ ದರದಲ್ಲಿ ಸಿಗಲಿದೆ LPG ಸಿಲಿಂಡರ್.

ಎಲ್ಲರಿಗೂ ನಮಸ್ಕಾರ…

ಎಲ್ಲರ ಮನೆಯಲ್ಲೂ ಕೂಡ ಗೃಹಬಳಕೆಗೆ LPG ಗ್ಯಾಸ್ ಬಹಳ ಮುಖ್ಯ. LPG ಗ್ಯಾಸ್ ಅನ್ನು ಕೊಂಡುಕೊಳ್ಳುವುದು ಕೂಡ ಕಷ್ಟದ ಮಾತು. ಏಕೆಂದರೆ ಈಗಾಗಲೇ ಹಲವಾರು ತಿಂಗಳಿನಿಂದ ಹೆಚ್ಚಿನ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ಸಿಗುತ್ತಿದೆ. ಈ ಕಾರಣದಿಂದ ಹಲವಾರು ಕುಟುಂಬಗಳಿಗೆ ಹೊರೆಯ ಮೊತ್ತ ಬೀಳಲಿದೆ. ಅದರಲ್ಲೂ ಮಧ್ಯಮ ವರ್ಗದ ಜೀವನವನ್ನು ಸಾಗಿಸುವ ಗ್ರಾಹಕರಿಗೆ ದೊಡ್ಡ ಹೊರೆ ಎಂದೇ ಹೇಳಬಹುದು. ಇದನ್ನೆಲ್ಲಾ ಗಮನಿಸಿದ ಕೇಂದ್ರ ಸರ್ಕಾರವು ಆಗಸ್ಟ್ ತಿಂಗಳಿನಲ್ಲಿ ಗ್ಯಾಸ್ ಬೆಲೆಯನ್ನು 200 ಹಣವನ್ನು ಕಡಿತಗೊಳಿಸಿ ಗ್ರಾಹಕರಿಗೆ ಸಂತಸವನ್ನು ಮೂಡಿಸಿತು. ಈ ಸಂತೋಷವು ಇನ್ನೂ ಹೆಚ್ಚಿನ ಕಾಲ ಉಳಿಯಲಿ ಎಂದು ಎಲ್ಪಿಜಿ ಗ್ಯಾಸ್ ಸಬ್ಸಿಡಿಯ ಹಣವನ್ನು ಕೂಡ 100 ರೂ ಮೊತ್ತವನ್ನು ಹೆಚ್ಚಳ ಮಾಡಲಾಯಿತು. ಈ ಸಬ್ಸಿಡಿ ಹೆಚ್ಚಳದಿಂದ ಗ್ರಾಹಕರು ತುಂಬಾ ಸಂತೋಷಕೊಳಗಾದರೂ.

WhatsApp Group Join Now
Telegram Group Join Now

ಈ ಸಂತೋಷವೂ ಈ ದಿನದವರೆಗೂ ಕೂಡ ಇದೆ. ಇನ್ನೂ ಸರ್ಕಾರವು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಂದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉಡುಗೊರೆಯನ್ನು ಗ್ರಾಹಕರಿಗೆ ನೀಡಬೇಕೆಂಬ ನಿಟ್ಟಿನಲ್ಲಿ ತನ್ನ ಕಾರ್ಯಗಳನ್ನು ಮುಂದುವರೆಸುತ್ತಿದೆ. ಇಂಥಹ ಸಂದರ್ಭದಲ್ಲಿ ಕೂಡ ಎಲ್ಪಿಜಿ ಗ್ಯಾಸ್ ಬೆಲೆಯನ್ನು ಇನ್ನು ಕಡಿಮೆ ಮೊತ್ತವನ್ನು ಮಾಡಬೇಕೆಂಬ ಉದ್ದೇಶದಲ್ಲಿ ಮುಂದಿನ ಕೆಲಸವನ್ನು ನಡೆಸುತ್ತಿದೆ. ಯಾವ ಪ್ರದೇಶದಲ್ಲಿ ಎಲ್ಪಿಜಿ ಗ್ಯಾಸ್ ಕಡಿತಗೊಂಡಿದೆ ಎಂದು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ, ನಿಮ್ಮ ಜಿಲ್ಲೆಯಲ್ಲಿ ಕೂಡ ಎಲ್‌ಪಿಜಿ ಬೆಲೆಯೂ ಕಡಿಮೆಯಾಗಿದೆಯಾ ಎಂದು ಲೇಖನದ ಮೂಲಕ ತಿಳಿಯಿರಿ.

ನರೇಂದ್ರ ಮೋದಿಯವರ ನೇತೃತ್ವದಲ್ಲಿ ಜಾರಿಯಾದ ಯೋಜನೆ ಎಂದರೆ ಅದುವೇ ಪ್ರಧಾನಮಂತ್ರಿ ಉಜ್ವಲ ಯೋಜನೆ. ಈ ಯೋಜನೆ ಅಡಿಯಲ್ಲಿ ಕೋಟ್ಯಾಂತರ ಜನರು ಎಲ್‌ಪಿಜಿ ಗ್ಯಾಸ್ ಗಳನ್ನು ಪಡೆಯುತ್ತಿದ್ದಾರೆ. ಈ ಯೋಜನೆಯಲ್ಲಿ ಕೋಟ್ಯಂತರ ಜನರು ನೋಂದಣಿಯಾಗಿ ಯೋಜನೆಯ ಸೌಲಭ್ಯವನ್ನು ತನ್ನ ಗೃಹಬಳಕೆಯ ದಿನನಿತ್ಯದ ಜೀವನವನ್ನು ಸಾಗಿಸಲು ಎಲ್ಪಿಜಿ ಗ್ಯಾಸ್ ಅನ್ನು ಕೊಳ್ಳುತ್ತಿದ್ದಾರೆ. ಕೆಲವರು ಪ್ರತಿ ತಿಂಗಳು ಕೂಡ ಎಲ್ಪಿಜಿ ಗ್ಯಾಸ್ ಅನ್ನು ಖರೀದಿಸಬೇಕಾಗುತ್ತದೆ. ಈ ಖರೀದಿಯಲ್ಲಿ ಎಲ್‍ಪಿಜಿ ಗ್ಯಾಸ್ ಬೆಲೆಯ ಹೆಚ್ಚಳದಿಂದ ಹಲವಾರು ಕುಟುಂಬಗಳು ಮೂರು ತಿಂಗಳಿಗೊಮ್ಮೆ ಗ್ಯಾಸ್ ಅನ್ನು ಕೊಳ್ಳುತ್ತಿದ್ದಾರೆ.

ಆದರೆ ಈ ಯೋಜನೆಯ ಪ್ರಯೋಜನವೇನೆಂದರೆ ವರ್ಷಕ್ಕೆ 12 ಗ್ಯಾಸ್ ಗಳನ್ನು ನಿರ್ದಿಷ್ಟವಾಗಿ ಮೀಸಲಿಡಲಾಗಿದೆ. ಆದರೆ ಕೆಲವು ಅಭ್ಯರ್ಥಿಗಳು ಗ್ಯಾಸ್ ನ ಬೆಲೆ ಹೆಚ್ಚಳದಿಂದ ವರ್ಷಕ್ಕೆ ಮೂರು ಅಥವಾ ನಾಲ್ಕು ಗ್ಯಾಸ್ ಕೊಂಡುಕೊಳ್ಳುವುದೇ ಕಷ್ಟವಾಗಿದೆ. ಇಂತಹ ಎಲ್ಲಾ ಕಾರಣದಿಂದ ಕುಗ್ಗಿ ಹೋಗಿರುವ ಮಧ್ಯಮವರ್ಗದ ಕುಟುಂಬಗಳು ಇನ್ನು ಮುಂದೆ ಈ ರೀತಿಯ ಸಂಕಷ್ಟ ಕೊಳಗಾಗದ ಸಿಹಿ ಸುದ್ದಿಯನ್ನು ಕೇಂದ್ರ ಸರ್ಕಾರವು ತಂದಿದೆ. ನೀವು ಕೂಡ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಗಳನ್ನು ಖರೀದಿಸುತ್ತಿದ್ದೀರ, ಹಾಗಾದ್ರೆ ನಿಮ್ಮ ಜಿಲ್ಲೆಯಲ್ಲೂ ಕೂಡ ಗ್ಯಾಸ್ ನ ಬೆಲೆ ಕಡಿತಗೊಂಡಿದೆ. ಎಷ್ಟು ಹಣ ಕಡಿತಗೊಂಡಿದೆ ಎಂದು ಈ ಕೆಳಕಂಡ ಮಾಹಿತಿಯಲ್ಲಿ ತಿಳಿದುಕೊಳ್ಳಿರಿ.

ಆಗಸ್ಟ್ ತಿಂಗಳಿನಲ್ಲೇ ಹಲವಾರು ಸೌಲಭ್ಯಗಳು ಈ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸಿಕ್ಕಿದೆ. ಈ ಒಂದು ಪ್ರಯೋಜನಗಳಲ್ಲಿ ಮೊದಲನೆಯದಾಗಿ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ 200 ರೂ ಹಣವನ್ನು ಕಡಿಮೆ ಮಾಡಲಾಗಿತ್ತು. ಕಡಿಮೆಯಾದ ಹಣವನ್ನು ಹೊರತುಪಡಿಸಿ 903 ಮೊತ್ತದಲ್ಲಿ ಎಲ್‌ಪಿಜಿ ಗ್ಯಾಸ್ ಗಳು ಲಭ್ಯವಿದೆ. ಹಾಗೂ ಎಲ್ಪಿಜಿ ಗ್ಯಾಸ್ ಗಳ ಸಬ್ಸಿಡಿ ಹಣವನ್ನು ಕೂಡ 300 ಮೊತ್ತಕ್ಕೆ ಏರಿಕೆ ಮಾಡಿದ್ದರಿಂದ ಗ್ರಾಹಕರು 600 ಹಣವನ್ನು ನೀಡಿ ತಮಗೆ ಸಲ್ಲಬೇಕಾದ ಎಲ್ಪಿಜಿ ಗ್ಯಾಸ್ ಗಳನ್ನು ಪಡೆಯಬಹುದು.

ಈ ಒಂದು ಸಬ್ಸಿಡಿ ಹಾಗೂ 200 ಹಣ ಕಡಿತವಾದ ಕಾರಣದಿಂದ 603 ಹಣಕ್ಕೆ ಎಲ್ಪಿಜಿ ಗ್ಯಾಸ್ ಇನ್ಮುಂದೆ ಸಿಗುತ್ತದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಯಾ ಸಿಬ್ಬಂದಿಗಳು ಕೆಲವೊಂದು ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಹೆಸರನ್ನು ಪಟ್ಟಿ ಮಾಡಿಕೊಂಡು ನಂತರ ಅವರಿಗೆ ಈ ಪ್ರಯೋಜನವನ್ನು ದೊರಕಿಸುತ್ತಾರೆ. ನೀವು ಕೂಡ ಈ ಪ್ರಯೋಜನಕ್ಕೆ ಅರ್ಹರ ? ಹಾಗಾದ್ರೆ ನಿಮಗೂ ಕೂಡ ಈ ತಿಂಗಳಿನಿಂದ ಗ್ಯಾಸ್ ಬೆಲೆಯೂ ಕಡಿಮೆ ಮೊತ್ತದಲ್ಲಿ ದೊರೆಯುತ್ತದೆ. ಈ ರೀತಿಯಾದ ಹೊಸ ನಿಯಮದಿಂದ ಗ್ರಾಹಕರಿಗೆ ಒಂದೊಳ್ಳೆ ಸಿಹಿ ಸುದ್ದಿಯನ್ನು ಉಂಟು ಮಾಡಿದೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಗ್ಯಾಸ್ ಸಂಪರ್ಕವನ್ನು ಹಿಂದಿನಿಂದಲೇ ವಿತರಿಸುತ್ತಾ ಬಂದಿದೆ. ಹಾಗೂ ಈ ಸಿಲಿಂಡರ್ ಬೆಲೆಯೂ ಕೂಡ ಮುಂದಿನ ವರ್ಷದಲ್ಲಿ ಅಂದರೆ 2024ನೇ ಸಾಲಿನಲ್ಲಿ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ನಡೆಯುವ ಲೋಕಸಭಾ ಚುನಾವಣೆ ಮುನ್ನವೇ ಸಿಲಿಂಡರ್ ನ ಬೆಲೆ ಕಡಿತಗೊಳಿಸಬಹುದು. ಎಂಬ ವರದಿಯು ಕೇಳಿ ಬಂದಿದೆ. ಈ ವರದಿಗಳಿಂದ ತಿಳಿದುಕೊಳ್ಳುವುದೇನೆಂದರೆ 2024ನೇ ಜನವರಿ ಅಥವಾ ಫೆಬ್ರವರಿಯಲ್ಲಿಯೇ ಸಿಲಿಂಡರ್ ನ ಬೆಲೆ ಇನ್ನೂ ಕಡಿಮೆಯಾಗಬಹುದು ಎಂದು ನಿರೀಕ್ಷೆಯನ್ನಿಟ್ಟುಕೊಳ್ಳಬಹುದು.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment