ಕ್ರೆಡಿಟ್ ಸ್ಕೋರ್ ಹೆಚ್ಚಳದಲ್ಲಿದ್ದರೆ, ಬ್ಯಾಂಕುಗಳಲ್ಲಿ ಸಾಲವು ತಕ್ಷಣವೇ ಸಿಗುತ್ತದೆ. ಯಾವ ರೀತಿ ಕ್ರೆಡಿಟ್ ಸ್ಕೋರನ್ನು ಹೆಚ್ಚಿಸುವುದು ಎಂದು ಈ ರೀತಿ ತಿಳಿಯಿರಿ.

ಎಲ್ಲರಿಗೂ ನಮಸ್ಕಾರ…

ಎಲ್ಲಾ ಬ್ಯಾಂಕುಗಳಲ್ಲೂ ಕೂಡ ಲೋನ್ ಗಳನ್ನು ನೀಡುತ್ತವೆ. ಆ ಲೋನ್ ಗಳನ್ನು ನೀಡಲು ಕೆಲವು ಶರತ್ತುಗಳನ್ನೆಲ್ಲ ಅನ್ವಯಿಸಿ, ಈ ವ್ಯಕ್ತಿ ಗೆ ಲೋನನ್ನು ಕೊಡಬಹುದು ಎಂದು ಪರಿಶೀಲಿಸಿಕೊಂಡು ನಂತರ ಲೋನನ್ನು ನೀಡಲು ಮುಂದಾಗುತ್ತವೆ. ಲೋನ್ ನೀಡಲು ಕೂಡ ಅಭ್ಯರ್ಥಿಯ ಕ್ರೆಡಿಟ್ ಸ್ಕೋರ್ ಬಹಳ ಪಾತ್ರವನ್ನು ವಹಿಸುತ್ತದೆ. ಈ ಕ್ರೆಡಿಟ್ ಸ್ಕೋರನ್ನು ನೋಡಿಯೇ ಬ್ಯಾಂಕ್ ನ ಗ್ರಾಹಕರಿಗೆ ಸಾಲವನ್ನು ನೀಡುವುದು. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ನಿಮಗೆ ಲೋನ್ ಸಿಗುವುದು ಸಂಶಯದ ಮಾತು. ಹಾಗಾಗಿ ಕ್ರೆಡಿಟ್ ಸ್ಕೋರನ್ನು ಹೆಚ್ಚು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ. ನೀವು ಕೂಡ ಕ್ರೆಡಿಟ್ ಸ್ಕೋರನ್ನು ಹೆಚ್ಚಳ ಮಾಡ್ಕೋಬೇಕು ಎಂಬ ಉದ್ದೇಶವಿದ್ದರೆ ಈ ಲೇಖನವನ್ನು ಕೊನೆವರೆಗೂ ಓದಿರಿ.

WhatsApp Group Join Now
Telegram Group Join Now

ಕ್ರೆಡಿಟ್ ಸ್ಕೋರ್ ಮೊದಲಿಗೆ ಹೆಚ್ಚಳದಲ್ಲಿಯೇ ಇರುತ್ತದೆ ಆದರೆ ನೀವು ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತಾ ಬರುತ್ತದೆ ಆ ತಪ್ಪುಗಳು ಏನೆಂದರೆ, ಪಡೆದುಕೊಂಡ ಸಾಲವನ್ನು ನಿಗದಿತ ದಿನದೊಳಗೆ ಪಾವತಿಸದಿರುವುದು ಹಾಗೂ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಕೂಡ ಪಾವತಿಸದಿರುವುದು, ಇಂತಹ ತಪ್ಪುಗಳನ್ನು ಮಾಡುವುದರಿಂದ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ ಬರುತ್ತದೆ. ಕ್ರೆಡಿಟ್ ಸ್ಕೋರ್ ಹೆಚ್ಚಳವಾಗಲು ಈ ರೀತಿ ಮಾಡಬೇಕಾಗುತ್ತದೆ.

ಯಾವ ರೀತಿ ಎಂದರೆ ನಿಗದಿತ ದಿನಗಳಲ್ಲಿ ಕಂತಿನ ಹಣವನ್ನು ವರ್ಗಾಯಿಸುವಂತಹ ಕೆಲಸ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಳವಾಗುತ್ತದೆ. ಮತ್ತೆ ನೀವು ಇಂದಿನ ತಪ್ಪುಗಳನ್ನೆಲ್ಲ ಮುಂದಿನ ದಿನಗಳಲ್ಲಿ ಮಾಡುವುದರಿಂದ ಕ್ರೆಡಿಟ್ ಸ್ಕೋರ್ ಕಡಿಮೆ ಆದರೂ ಆಗಬಹುದು. ಈ ಕ್ರೆಡಿಟ್ ಸ್ಕೋರ್ ಇದೇ ರೀತಿ ಇರುತ್ತದೆ ಎಂದು ಹೇಳಲಾಗುವುದಿಲ್ಲ. ನೀವು ನಡೆಸುವ ವಹಿವಾಟುಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರಿ ಯಾವ ದಿನಾಂಕದೊಳಗೆ ಯಾವ ಕಂತಿನ ಹಣವನ್ನು ಪಾವತಿಸಬೇಕು ಎಂಬುದನ್ನು ಕೂಡ ಖಚಿತಪಡಿಸಿಕೊಂಡು ಪಾವತಿಸಿರಿ. ನಿಗದಿತ ದಿನದಲ್ಲಿ ಹಣವನ್ನು ಪಾವತಿಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಕಡಿಮೆಯೂ ಆಗುವುದಿಲ್ಲ, ಹೆಚ್ಚಳವೂ ಆಗುವುದಿಲ್ಲ. ಒಂದು ನಿರ್ದಿಷ್ಟ ಅಂಕದಲ್ಲಿ ಇರುತ್ತದೆ.

ಕ್ರೆಡಿಟ್ ಸ್ಕೋರ್ ಹೆಚ್ಚಳ ಮಾಡುವ ಮಾರ್ಗ.

ಬ್ಯಾಂಕಿನ ಕ್ರೆಡಿಟ್ ಸ್ಕೋರ್ ಗಳು ನಿರ್ದಿಷ್ಟದಲ್ಲೇ ಈ ರೀತಿ ಇರುತ್ತದೆ ಎಂದು ಹೇಳಲಾಗುವುದಿಲ್ಲ ದಿನದಿಂದ ದಿನಕ್ಕೆ ಕಡಿಮೆಯಾದರೂ ಆಗುತ್ತದೆ ಅಥವಾ ಜಾಸ್ತಿಯಾದರೂ ಆಗುತ್ತದೆ. ಹೆಚ್ಚಳವಾಗಬೇಕೆಂದರೆ ನಿಮ್ಮ ಸಾಲದ ಕಂತಿನ ಹಣಗಳನ್ನು ನೀವು ನಿರ್ದಿಷ್ಟ ದಿನಗಳಲ್ಲಿ ಪಾವತಿಸಬೇಕು. ಹಾಗೂ ಕ್ರೆಡಿಟ್ ಕಾರ್ಡ್ಗಳ ಹಣವನ್ನು ಕೂಡ ಪಾವತಿಸಬೇಕು ನಂತರ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಾಗುತ್ತಾ ಹೋಗುತ್ತದೆ. ಮತ್ತು ಸಾಲದ ಕಂತಿನ ಹಣವು ಕಡಿಮೆಯಾದಂತೆ ಕ್ರೆಡಿಟ್ ಸ್ಕೋರ್ ಕೂಡ ಹೆಚ್ಚಳವಾಗುತ್ತದೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಕಂತುಗಳ ಹಣವನ್ನು ನಿರ್ದಿಷ್ಟ ದಿನಾಂಕದೊಳಗೆ ಪಾವತಿಸಿರಿ. ನಿಮ್ಮ ಆದಾಯವು ಕೂಡ ಈ ಸಾಲಕ್ಕೆ ಹೊಣೆಯಾಗುತ್ತದೆ. ಆದಾಯವು 30 ಪ್ರತಿ ಶತವನ್ನು ಮೀರಬಾರದು ಅಂಥಹ ಸಂದರ್ಭದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಳವಾಗುತ್ತದೆ. ಹಾಗೂ ಕಂತುಗಳನ್ನು ನಿಗದಿತ ದಿನಾಂಕದೊಳಗೆ ಕಟ್ಟಿರಿ. ಕೆಲವರಿಗೆ ಹಣದ ಅವಶ್ಯಕತೆ ಇಲ್ಲದಿದ್ದರೂ ಕೂಡ ಸಾಲವನ್ನು ಪಡೆದುಕೊಂಡು ಕ್ರೆಡಿಟ್ ಕಾರ್ಡ್ ಬಳಸಲು ಮುಂದಾಗುತ್ತಾರೆ ಆ ರೀತಿ ಮಾಡುವುದು ಅಪಾಯಕಾರಿಯ ಕೆಲಸ. ಹಾಗೂ ಕ್ರೆಡಿಟ್ ಸ್ಕೋರ್ ಗಳಿಗೂ ಕೂಡ ನಕರಾತ್ಮಕ ಪರಿಣಾಮಗಳು ಬೀರುತ್ತವೆ.

ಏಕೆಂದರೆ ಕೆಲವರು ಫೋನ್ ಕರೆಗಳ ಮೂಲಕ ಸಾಲವನ್ನು ನೀಡುತ್ತೇವೆ ಎಂದು ಹೇಳುತ್ತಾರೆ ಇಂತಹ ಫ್ರಾಡ್ಸ್ ಕೆಲಸಗಳನ್ನು ನಂಬಿಕೊಂಡ ಗ್ರಾಹಕರು ಸಾಲವನ್ನು ಪಡೆಯಲು ಮುಂದಾಗುತ್ತಾರೆ ಇಂತಹ ನಕರಾತ್ಮಕ ಕೆಲಸಗಳಿಂದ ಕೂಡ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.

ಬ್ಯಾಂಕುಗಳಲ್ಲಿ ಸಾಲಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಯಾವ ಕಾರಣಕ್ಕೆ ಸಾಲವನ್ನು ತೆಗೆದುಕೊಳ್ಳುತ್ತಿದ್ದೇವೆ ಹಾಗೂ ಯಾವ ಸಾಲವನ್ನು ತೆಗೆದುಕೊಂಡು ಮುಂದಿನ ದಿನಗಳಲ್ಲಿ ಹಣವನ್ನು ಹಣವನ್ನು ಎಂದು ತಿಳಿದುಕೊಳ್ಳಿ. ಅಂದರೆ ವೈಯಕ್ತಿಕ ಸಾಲವೊ ಅಥವಾ ಚಿನ್ನದ ಮೇಲಿನ ಸಾಲವೊ ಎಂದು ಖಚಿತಪಡಿಸಿಕೊಳ್ಳಿ ನಂತರ ಬ್ಯಾಂಕಿನಲ್ಲಿ ಸಾಲವನ್ನು ಪಡೆಯಿರಿ ಈ ಎರಡು ಸಾಲವು ಹೆಚ್ಚಿನ ಹಣವನ್ನು ನೀಡುತ್ತದೆ. ಬ್ಯಾಂಕುಗಳಲ್ಲಿ ನೀವು ತೆಗೆದುಕೊಂಡ ಸಾಲಕ್ಕೆ ನೀವೇ ಹೊಣೆಯಾಗುವಿರಿ ಎಚ್ಚರ.

ಸಾಲವನ್ನು ಈಗಾಗಲೇ ಪಡೆದುಕೊಂಡಿದ್ದೀರಿ ಎಂದು ಭಾವಿಸಿರಿ ನಂತರ ಕಂತಿನ ಹಣಗಳನ್ನು ಪ್ರತಿ ತಿಂಗಳು ಬ್ಯಾಂಕ್ ನಲ್ಲಿ ಕಟ್ಟಬೇಕಾಗುತ್ತದೆ ಕೆಲವೊಂದು ಸಂದರ್ಭದಲ್ಲಿ ಹಣದ ಸಮಸ್ಯೆ ಉಂಟಾದಾಗ ಬ್ಯಾಂಕನ್ನು ಕಂತಿನ ಹಣವನ್ನು ಕಟ್ಟಲು ಮೂರು ತಿಂಗಳಾಗಬಹುದು ಆ ಮೂರು ತಿಂಗಳ ನಂತರ ಬ್ಯಾಂಕ್ ನಿಂದ ಪರಿಹಾರವನ್ನು ಕೇಳಲಾಗುತ್ತದೆ. ಆದ್ದರಿಂದ ಮುಂದಿನ ದಿನದ ಸಾಲವನ್ನು ಪಡೆಯಬೇಕೆಂದರೆ ನೀವು ಇಂದಿನ ದಿನಗಳ ಕಂತಿನ ಹಣಗಳನ್ನು ಪ್ರತಿ ತಿಂಗಳು ಕಟ್ಟಲೇ ಬೇಕಾಗುತ್ತದೆ. ಇದು ಎಲ್ಲಾ ಬ್ಯಾಂಕ್ ಗ್ರಾಹಕರಿಗೂ ಕೂಡ ಕಡ್ಡಾಯವಾಗಿದೆ.

ಈ ಎಲ್ಲಾ ತಪ್ಪುಗಳನ್ನು ಕೂಡ ಹೊರತುಪಡಿಸಿ ಯಾವ ತಪ್ಪನ್ನು ಮಾಡದಿದ್ದರೂ ಕೂಡ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ನೀವು ಯಾವುದೇ ರೀತಿಯ ಸಾಲವನ್ನು ಪಡೆಯದಿದ್ದರೂ ಕೂಡ ಕೆಲವೊಂದು ಸಂದರ್ಭದಲ್ಲಿ ಪಡೆದಿದ್ದೀರಿ ಎಂದು ಈ ಕ್ರೆಡಿಟ್ ಸ್ಕೋರ್ ಮೂಲಕ ಪರಿಗಣಿಕೆ ಆಗಿರುತ್ತದೆ. ಅಂತಹ ಸನ್ನಿವೇಶ ನಿಮಗೆ ಎದುರಾದರೆ ನೀವು ಬ್ಯಾಂಕ್ ಮತ್ತು ಕ್ರೆಡಿಟ್ ಬ್ಯುರೋಗಳಿಗೆ ದೂರು ನೀಡಿರಿ.

ನಿಮ್ಮ ಅಕ್ಕ ಪಕ್ಕದ ಸ್ನೇಹಿತರಿಗೂ ಕೂಡ ಕ್ರೆಡಿಟ್ ಸ್ಕೋರನ್ನು ಎಚ್ಚರ ಮಾಡಿಕೊಳ್ಳುವ ವಿಧಾನವನ್ನು ಈ ಲೇಖನವನ್ನು ಶೇರ್ ಮಾಡುವ ಮೂಲಕ ತಿಳಿಸಿರಿ ನೀವು ಕೂಡ ಈ ಎಲ್ಲಾ ತಪ್ಪುಗಳನ್ನು ತೊರೆದು ಹಾಕಿ ಕ್ರೆಡಿಟ್ ಸ್ಕೋರ್ ಗಳನ್ನು ಹೆಚ್ಚಳ ಮಾಡಿರಿ ಈ ಎಚ್ಚರ ಮಾಡುವುದರಿಂದ ನಿಮಗೆ ತಕ್ಷಣವೇ ಬ್ಯಾಂಕ್ ಗಳಿಂದ ಸಾಲವು ದೊರೆಯುತ್ತದೆ.

ಲೇಖನವನ್ನು ಇಲ್ಲಿಯವರೆಗೆ ಓದಿದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment