ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಾಕು, 2.67 ಲಕ್ಷ ನಿಮ್ಮ ಕನಸಿನ ಮನೆಯನ್ನು ನಿರ್ಮಿಸಲು ಸಬ್ಸಿಡಿ ಸಾಲ ಸಿಗುತ್ತದೆ.

ಎಲ್ಲರಿಗೂ ನಮಸ್ಕಾರ…

ಎಲ್ಲರಿಗೂ ಕೂಡ ತಮ್ಮ ಕನಸಿನ ಮನೆಯನ್ನು ನಿರ್ಮಿಸಬೇಕೆಂಬ ಕನಸು ಇದ್ದೇ ಇರುತ್ತದೆ. ಆ ಕನಸನ್ನು ನನಸು ಮಾಡಿಕೊಳ್ಳಲು ಹಣದ ಅವಶ್ಯಕತೆಯು ಬಹಳ ಮುಖ್ಯ. ದಿನನಿತ್ಯ ಜೀವನವನ್ನು ಸಾಗಿಸಲು ಕೂಡ ಹಣವು ಬೇಕೇ ಬೇಕು. ಆ ಹಣದಲ್ಲೂ ಕೂಡ ಉಳಿತಾಯ ಮಾಡಬೇಕಾಗುತ್ತದೆ ಏಕೆಂದರೆ ಮನೆಯನ್ನು ನಿರ್ಮಿಸಲು ಹಣವು ಇರಲೇಬೇಕು. ಮನೆಗಳನ್ನು ನಿರ್ಮಿಸಲು ಹಣವನ್ನು ಹೊಂದಿಸುವುದು ಸಾಮಾನ್ಯ ವರ್ಗದ ಜನರಿಗೆ ಕಷ್ಟಕರ ಕೆಲಸ ವಾಗುತ್ತದೆ. ಬ್ಯಾಂಕ್ ಗಳ ಮೂಲಕ ಸಾಲವನ್ನು ಪಡೆಯಬೇಕೆಂಬ ಉದ್ದೇಶದಲ್ಲಿ ಹೆಚ್ಚಿನ ಬಡ್ಡಿ ದರದಲ್ಲಿ ಬ್ಯಾಂಕಲ್ಲಿ ಸಾಲವನ್ನು ಪಡೆಯುತ್ತಾರೆ.

WhatsApp Group Join Now
Telegram Group Join Now

ಈ ರೀತಿಯ ತಪ್ಪು ನಿರ್ಧಾರವನ್ನು ತೆಗೆದುಕೊಂಡು ಇನ್ಮುಂದೆ ಸಾಲವನ್ನು ಪಡೆಯುವಂತಿಲ್ಲ. ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಸಾಕು ನಿಮಗೆ ಸಬ್ಸಿಡಿ ಮೂಲಕ ಹಣವು ಪ್ರತಿ ತಿಂಗಳು ಸಿಗುತ್ತದೆ. ಮಧ್ಯಮ ವರ್ಗದ ಕುಟುಂಬಗಳಿಗೆ ಈ ಯೋಜನೆಯು ಸಲ್ಲುತ್ತದೆ ಹಾಗೂ ಬಡ ಕುಟುಂಬಗಳಿಗೂ ಕೂಡ ಮನೆ ನಿರ್ಮಿಸಲು 2.67 ಲಕ್ಷ ಸಬ್ಸಿಡಿ ಅನ್ನು ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ. ಯಾವ ರೀತಿಯ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಸಬ್ಸಿಡಿ ಮೂಲಕ ಪ್ರತಿ ತಿಂಗಳು ಎಷ್ಟು ಹಣ ಖಾತೆಗೆ ವರ್ಗಾವಣೆ ಆಗುತ್ತದೆ ಎಂದು ಎಲ್ಲಾ ಮಾಹಿತಿಯನ್ನು ಕೂಡ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿ.

ಪ್ರಧಾನಮಂತ್ರಿ ಆವಾಸ್ ಯೋಜನೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯು 2015ರಲ್ಲಿ ಜಾರಿಯಾಗಿದೆ. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗುವ ಅಭ್ಯರ್ಥಿಗಳಿಗೆ ಮನೆಯನ್ನು ನಿರ್ಮಿಸಲು ಈ ಹಿಂದೆ 6.50% ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬೇಕು. ಆದರೆ ಈ ನಿಯಮವನ್ನು ಹೊರತುಪಡಿಸಿ ಹೊಸ ನಿಯಮವನ್ನು ಜಾರಿಗೊಳಿಸಿದೆ ಕೇಂದ್ರ ಸರ್ಕಾರ. ಅದೇನೆಂದರೆ ಮನೆಯನ್ನು ನಿರ್ಮಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ 2.67 ಲಕ್ಷ ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ.. ಇದು ಕಂತಿನ ಮೂಲಕ ಮೊದಲನೇ ತಿಂಗಳಿನ ಕಂತು ಹಾಗೂ ಇದೇ ರೀತಿ ಮುಂದಿನ ಕಂತಿನ ಹಣಗಳನ್ನು ಅರ್ಹ ಅಭ್ಯರ್ಥಿಗಳ ಖಾತೆಗೆ ಸಬ್ಸಿಡಿ ಆಗಿ ಸಿಗಲಿದೆ. ಇದೇ ಮೊದಲ ಬಾರಿಗೆ ಹೊಸ ನಿಯಮವನ್ನು ಜಾರಿಗೊಳಿಸಿ 2.67 ಲಕ್ಷದವರೆಗೆ ಸಾಲವನ್ನು ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ.

ಈ ಯೋಜನೆಯ ಗೃಹ ಸಾಲವು ಡಿಸೆಂಬರ್ 2024ನೇ ಸಾಲಿನವರೆಗೂ ಕೂಡ ಅರ್ಜಿಯನ್ನು ಪೂರೈಸ ಬಹುದು. ಅರ್ಹ ಅಭ್ಯರ್ಥಿಗಳಿಗೆ ಮನೆ ನಿರ್ಮಿಸಲು ಸಾಲವನ್ನು ನೀಡಲಿದೆ. ನೀವು ಕೂಡ ಈ ಯೋಜನೆ ಅಡಿಯಲ್ಲಿ ಮನೆಯನ್ನು ನಿರ್ಮಿಸಲು ಸಾಲವನ್ನು ಪಡೆದರೆ ನಿಮಗೆ ಯಾವುದೇ ರೀತಿಯ ಬಡ್ಡಿ ದರವನ್ನು ಪಡೆದುಕೊಳ್ಳದೆ ಸಾಲ ಸಿಗಲಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಎಂಬ ಹೆಸರು 2015ರಲ್ಲಿ ಮರು ನಾಮಕರಣವಾಗಿ ಹೊಸ ಯೋಜನೆಯಾಗಿ ಬದಲಾಗಿದೆ. ಆದರೆ 2015 ನೇ ವರ್ಷಕ್ಕಿಂತ ಹಿಂದೆ ಇಂದಿರಾಗಾಂಧಿ ಅವಾಸ್ ಯೋಜನೆ ಎಂಬ ಹೆಸರಿನಲ್ಲಿತ್ತು. ಆದರೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆದ ಬಳಿಕ ನೇತೃತ್ವ ವಹಿಸಿದ ಕಾರಣದಿಂದ ಈ ಯೋಜನೆಯ ಹೆಸರನ್ನು ಬದಲಾವಣೆ ಮಾಡಲಾಯಿತು. ಹಾಗೂ ಹೊಸ ನಿಯಮಗಳನ್ನು ಕೂಡ ಈ ಯೋಜನೆ ಅಡಿಯಲ್ಲಿ ಜಾರಿಗೊಳಿಸಿ, ಅರ್ಹ ಫಲಾನುಭವಿಗಳಿಗೆ ಹೆಚ್ಚಿನ ಸಾಲದ ಹಣವನ್ನು ನೀಡಲು ಮುಂದಾಗಿದೆ ಕೇಂದ್ರ ಸರ್ಕಾರ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಈ ಯೋಜನೆಯನ್ನು ಎರಡು ಭಾಗಗಳಾಗಿ ವಿಭಾಗ ಮಾಡಲಾಗಿದೆ. ಮೊದಲನೆಯದು ಗ್ರಾಮೀಣ ಪ್ರದೇಶದಲ್ಲಿರುವ ಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯ ಮಾಡುವುದು. ಹಾಗೂ ಎರಡನೆಯದು ನಗರ ಪ್ರದೇಶಗಳಲ್ಲಿ ವಾಸಿಸುವ ಮಧ್ಯಮ ವರ್ಗದ ಕುಟುಂಬಗಳಿಗೆ ಸಹಾಯಧನವನ್ನು ನೀಡಲು ಯೋಜನೆಯು ಕೈಗೊಂಡಿದೆ. ಈ ಯೋಜನೆಯ ಸಹಾಯಧನದಿಂದ ಎರಡು ವಿಭಾಗಗಳಿಗೂ ಕೂಡ ಅತಿ ಹೆಚ್ಚಿನ ಪ್ರಯೋಜನಗಳು ಆಗುತ್ತದೆ. ಒಂದೇ ರೀತಿಯ ಹಣವನ್ನು ನಿರ್ದಿಷ್ಟವಾಗಿ ಈ ಯೋಜನೆ ಅಡಿಯಲ್ಲಿ ಮೀಸಲಿಡಲಾಗುತ್ತದೆ. ಈ ವಿಭಾಗಕ್ಕೆ ಬೇರೆ ಆ ವಿಭಾಗಕ್ಕೆ ಬೇರೆ ಎನ್ನುವ ಭೇದಭಾವವಿಲ್ಲ ಎರಡು ವಿಭಾಗಗಳಿಗೂ ಕೂಡ ಒಂದೇ ರೀತಿ ಹಣವನ್ನು ನೀಡಲಾಗುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಯಾವ ಅಭ್ಯರ್ಥಿಯು ಅರ್ಜಿ ಸಲ್ಲಿಸಿ ಯೋಜನೆಯ ಫಲಾನುಭವಿಗಳಾಗಬಹುದು.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಬಡ ಕುಟುಂಬದಿಂದ ಬಂದಿರಬೇಕು, ಹಾಗೂ ಮಧ್ಯಮ ವರ್ಗದ ಕುಟುಂಬಗಳನ್ನು ಹೊಂದಿರಬೇಕು. ನಂತರ ಅರ್ಜಿ ಸಲ್ಲಿಸಲು ಅರ್ಹರು ಎಂದರ್ಥ ಹಾಗೂ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವ ಅಭ್ಯರ್ಥಿಗಳು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮುಖಾಂತರ ಸಬ್ಸಿಡಿ ಸಾಲವನ್ನು ಪಡೆಯಬಹುದು. ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು ಇಂಥಹ ವರ್ಗಕ್ಕೆ ಸೇರಿದ ಜನರಿಗೆ ಈ ಯೋಜನೆಯ ಪ್ರಯೋಜನಗಳು ದೊರೆಯಲಿದೆ.

ನೀವು ಕೂಡ ನಿಮ್ಮ ಕನಸಿನ ಮನೆಗೆ ಸಾಲವನ್ನು ಪಡೆಯಬೇಕೆಂಬ ಉದ್ದೇಶದಲ್ಲಿದ್ದರೆ ಈ ಯೋಜನೆಯ ಮೂಲಕ ಸಾಲವನ್ನು ಪಡೆಯಬಹುದು. 20 ವರ್ಷಗಳವರೆಗೂ ಕೂಡ ಈ ಯೋಜನೆಯ ಸಾಲ ಕಾರ್ಯ ನಿರ್ವಹಿಸುತ್ತದೆ. ಅಂದರೆ ಸಬ್ಸಿಡಿ ಮುಖಾಂತರ ಹಣವನ್ನು ತಲುಪಿಸುವ ಕೆಲಸ ಈ ಯೋಜನೆಯದು 20 ವರ್ಷಗಳವರೆಗೂ ಕೂಡ ಕಾಲಾವಕಾಶವನ್ನು ನೀಡಿರುತ್ತದೆ. ಬ್ಯಾಂಕಳಲ್ಲಿ ಸಾಲ ಮಾಡುವ ಬದಲು ಈ ಯೋಜನೆಯ ಮೂಲಕ ಸಾಲ ಮಾಡಿದರೆ ಅತ್ಯುತ್ತಮ. ಏಕೆಂದರೆ 20 ವರ್ಷಗಳ ಕಾಲ ಕೂಡ ಈ ಯೋಜನೆಯಲ್ಲಿ ನಿಮ್ಮ ಸಾಲದ ಹಣವನ್ನು ಇಂಪಡೆಯಲು ಕಾಲಾವಕಾಶವನ್ನು ನೀಡಿರುತ್ತದೆ. ಈ ರೀತಿ ಬ್ಯಾಂಕಗಳಲ್ಲಿ ಕಾಲಾವಕಾಶವನ್ನು ನೀಡುತ್ತಿರುವುದಿಲ್ಲ. ಹಲವಾರು ದಾಖಲಾತಿಗಳನ್ನು ಕೂಡ ಬ್ಯಾಂಕ್ ಗಳಲ್ಲಿ ಕೇಳಲಾಗುತ್ತದೆ ಆದರೆ ಇಲ್ಲಿ ಬೇಕಾಗಿರುವ ದಾಖಲಾತಿಗಳನ್ನ ಮಾತ್ರ ಪ್ರಮುಖ ದಾಖಲಾತಿಗಳನ್ನು ಮಾತ್ರ ಕೇಳಲಾಗುತ್ತದೆ. ಆನ್ಲೈನ್ ಮೂಲಕವೇ ಅರ್ಜಿಯನ್ನು ಈ ಕೆಳಕಂಡ ರೀತಿ ಸಲ್ಲಿಸಿರಿ.

ಪ್ರಧಾನಮಂತ್ರಿ ಆವಾಸ್ ಯೋಜನೆ ಗೆ ಈ ರೀತಿ ಅರ್ಜಿ ಸಲ್ಲಿಸಿರಿ.

ನೀವು ಕೂಡ ಪ್ರಧಾನ ಮಂತ್ರಿ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಲು ಸಹಾಯಧನವನ್ನು ಪಡೆಯಬೇಕಾ ಹಾಗಾದ್ರೆ ಈ ಕೆಳಕಂಡ ಮನೆ ನಿರ್ಮಾಣದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ ಈ ಕೆಳಕಂಡ ಲಿಂಕನ್ನು ಕ್ಲಿಕ್ ಮಾಡಿ.

https://pmaymis.gov.in/open/Check_Aadhar_Existence.aspx?comp=b

ಕ್ಲಿಕ್ ಮಾಡಿದ ನಂತರ ನಿಮಗೆ ಮುಖಪುಟ ತೆರೆಯುತ್ತದೆ. ನಂತರ ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಕೂಡ ನೀವು ಪೂರೈಸಬೇಕು ಪೂರೈಸಿದ ನಂತರ ಅರ್ಜಿಯನ್ನು ಸಲ್ಲಿಸಿರಿ. ಆ ಅರ್ಜಿ ಸಲ್ಲಿಕೆ ಆದರೆ ನೀವು ಈ ಯೋಜನೆಗೆ ಅರ್ಹರು ಎಂದರ್ಥ. ಅಥವಾ ಸಲ್ಲಿಕೆಯಾಗದಿದ್ದರೆ ನೀವು ಈ ಯೋಜನೆಗೆ ಅರ್ಹರಲ್ಲ ಎಂದರ್ಥ. ಈ ಎರಡರಲ್ಲಿ ಒಂದಾದರೂ ಖಚಿತಪಡಿಸಿಕೊಳ್ಳಿ ಅರ್ಹರು ಅಥವಾ ಅರ್ಹರಲ್ಲವೋ ಎಂದು. ನಿಮ್ಮ ಸ್ನೇಹಿತರು ಕೂಡ ಮನೆ ನಿರ್ಮಿಸಲು ಕೆಲವೊಂದು ಬ್ಯಾಂಕ್ ಗಳಲ್ಲಿ ಸಾಲವನ್ನು ಪಡೆಯುತ್ತಿದ್ದಾರ ಹಾಗಾದರೆ ಅವರಿಗೆ ಈ ಲೇಖನವನ್ನು ಶೇರ್ ಮಾಡುವ ಮೂಲಕ ಯೋಜನೆ ಬಗ್ಗೆ ತಿಳಿಸಿರಿ ಯೋಜನೆಯಲ್ಲಿ 2.67 ಲಕ್ಷ ಸಹಾಯಧನವಾಗಿ ಸಬ್ಸಿಡಿ ಮೂಲಕ ದೊರೆಯುತ್ತದೆ ಎಂದು ಕೂಡ ಹೇಳಿರಿ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು, ಮತ್ತು ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment