4.65 ಲಕ್ಷ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿದ ಸರ್ಕಾರ ಹೊಸ ಲಿಸ್ಟ್ ಬಿಡುಗಡೆ! ಲಿಸ್ಟ್ ಅಲ್ಲಿ ಹೆಸರು ಇದ್ದರೆ ರೇಷನ್ ಕಾರ್ಡ್ ಬಂದ್!

ರಾಜ್ಯ ಸರ್ಕಾರವು 4.65 ಲಕ್ಷ ಜನರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿದ್ದು ಇದೀಗ ಅಕ್ಟೋಬರ್ ತಿಂಗಳ ಹೊಸ ಲಿಸ್ಟನ್ನು ಬಿಡುಗಡೆ ಮಾಡಿದೆ.  ಈ ಲಿಸ್ಟಿನಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ ಹಾಗೂ ನಿಮಗೆ ಇನ್ನು ಮುಂದೆ ಸರ್ಕಾರದ ಕಡೆಯಿಂದ ಬರುವ ಯಾವುದೇ ಫಲವೂ ಕೂಡ ಸಿಗುವುದಿಲ್ಲ ಈ ಕುರಿತು ಲಿಸ್ಟ್ ಅನ್ನು ನೀವು ಮೊಬೈಲ್ ನ ಮೂಲಕವೇ ಚೆಕ್ ಮಾಡಿಕೊಳ್ಳಬಹುದು. ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡಲಿದ್ದೇವೆ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

ಹೌದು ಯಾರೆಲ್ಲಾ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದೀರಿ ನಿಮಗೆಲ್ಲರಿಗೂ ಕೂಡ ಇದುವೇ ಸಂಕಷ್ಟದ ಸುದ್ದಿಯಾಗಿದೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಹಾಗೂ ಉಚಿತ ಅಕ್ಕಿ ಯೋಜನೆಯನ್ನು ಜಾರಿಗೆ ತಂದ ಬಳಿಕ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲು ನಿರ್ಧರಿಸಿತು. ಬಹುತೇಕ ಜನರು ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಾರೆ ಹಾಗೂ ಸರ್ಕಾರದ ಕಡೆಯಿಂದ ಬರುವ ಬಹಳಷ್ಟು ಯೋಜನೆಗಳ ಫಲವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. 

WhatsApp Group Join Now
Telegram Group Join Now

ಆದ ಕಾರಣ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ  ಬಹುತೇಕ ಜನರ ಅನರ್ಹ ಬಿಬಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ.  ಇದೀಗ ಹೊಸ ಲಿಸ್ಟ್ ಅನ್ನು ಸರ್ಕಾರವು ಬಿಡುಗಡೆ ಮಾಡಿದ್ದು ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ಬಿಪಿಎಲ್ ಪಡಿತರ ಚೀಟಿಯು ಕೂಡ ರದ್ದಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಸರ್ಕಾರವು ಇದೀಗ ಅಕ್ಟೋಬರ್ ತಿಂಗಳ ಹೊಸ ಲಿಸ್ಟನ್ನು ಬಿಡುಗಡೆ ಮಾಡಿದ್ದು ಈ ಲಿಸ್ಟ್ ನಲ್ಲಿ ನಿಮ್ಮ ರೇಷನ್ ಕಾರ್ಡಿನ ಆರ್ಸಿ ನಂಬರ್ ಸೇರಿದಂತೆ ಮನೆ ಸದಸ್ಯರ ವಿವರ ಹಾಗೂ ಮನೆಯ ಯಜಮಾನನ ವಿವರಗಳು ಕೂಡ ಬರೆಲಿದೆ ಒಂದು ವೇಳೆ ಲಿಸ್ಟಿನಲ್ಲಿ ನಿಮ್ಮ ಹೆಸರು ಬಂದಲ್ಲಿ ನಿಮ್ಮ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ ಎಂದರ್ಥ ಹಾಗೂ ನಿಮಗೆ ಸರ್ಕಾರದ ಕಡೆಯಿಂದ ಬರುತ್ತಿರುವ ಎಲ್ಲಾ ಸವಲತ್ತುಗಳನ್ನು ಕೂಡ ನಿಲ್ಲಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಬಿಪಿಎಲ್ ಪಡಿತರ ಚೀಟಿ ರದ್ದಾದಲ್ಲಿ ಸರ್ಕಾರದ ಸವಲತ್ತುಗಳು ಸ್ಟಾಪ್!

ಹೌದು ನೀವೇನಾದರೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದು ಸರ್ಕಾರದ ಅಡಿಯಲ್ಲಿ ಉಚಿತ ಅಕ್ಕಿ ಹಾಗೂ ಗೃಹ ಜ್ಯೋತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಬಹುತೇಕ ಯೋಜನೆಯ ಅಡಿಯಲ್ಲಿ ಫಲಾನುಭವಿ ಆಗಿದ್ದಾರೆ.  ಬಿಪಿಎಲ್ ಪಡಿತರ ಚೀಟಿಗಳನ್ನು ಗುರುತಿಸಿದ್ದು ಅಂತಹವರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಮುಂದಾಗಿದೆ ಅಕ್ಟೋಬರ್ ತಿಂಗಳಿನಲ್ಲಿ 4.65 ಲಕ್ಷ ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಿ ಹೊಸ ಲಿಸ್ಟನ್ನು ಬಿಡುಗಡೆ ಮಾಡಿದೆ.

ಮೊಬೈಲ್ನ ಮೂಲಕವೇ ಅನರ್ಹ ಬಿಪಿಎಲ್ ಪಡಿತರ ಚೀಟಿ ಲಿಸ್ಟ್ ಚೆಕ್ ಮಾಡಿ!

ನೀವು ಕೂಡ ಮೊಬೈಲ್ ನ ಮೂಲಕವೇ ಅನರ್ಹ ಬಿಪಿಎಲ್ ಪಡಿತರ ಚೀಟಿಯ ಹೊಸ ಲಿಸ್ಟನ್ನು ಪರಿಶೀಲಿಸಿಕೊಳ್ಳಬಹುದು ಇದಕ್ಕೆ ನೀವು ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ನೇರವಾದ ಲಿಂಕನ್ನು ಕೆಳಗೆ ನೀಡಲಾಗಿದೆ.

ಲಿಂಕ್ : https://ahara.kar.nic.in/Home/EServices

ಲಿಂಕ್ ಕ್ಲಿಕ್ ಮಾಡಿದ ಬಳಿಕ ನೀವು ಅಲ್ಲಿ ಈ ರೇಷನ್ ಕಾರ್ಡ್ ಎಂದು ಎಲ್ಲಿದೆ ಇದನ್ನು ಕ್ಲಿಕ್ ಮಾಡಿ ನಂತರ Canceled or suspended Ration card list ಎಂದು ಇರಲಿದೆ ಅದು ನೀವು ಕ್ಲಿಕ್ ಮಾಡಿ.

ಕ್ಲಿಕ್ ಮಾಡಿದ ಬಳಿಕ ನಂತರ ನೀವು ನಿಮ್ಮ ಊರು ಹಾಗೂ ಜಿಲ್ಲೆ ಹಾಗೂ ತಾಲೂಕು ಹೋಬಳಿಯನ್ನು ಸೆಟ್ ಮಾಡಿ ಗೋ ಬಟನ ಮೇಲೆ ಕ್ಲಿಕ್ ಮಾಡಬೇಕು ಮಾಡಿದ ಬಳಿಕ ನಿಮ್ಮ ಊರಿನಲ್ಲಿರುವ ಸಂಪೂರ್ಣ ಅನರ್ಹ ಬಿಪಿಎಲ್ ಪಡಿತರ ಚೀಟಿಗಳ ಲಿಸ್ಟ್ ತೆರೆಯಲಿದೆ ಸಂಪೂರ್ಣವಾಗಿ ನಿಮ್ಮ ರೇಷನ್ ಕಾರ್ಡಿನ ಆರ್ಸಿ ನಂಬರ್ ಹೆಸರು ಮನೆಯ ಸದಸ್ಯರ ಹೆಸರನ್ನು ಕೂಡ ನಮೂದಿಸಲಾಗಿರುತ್ತದೆ ಅಲ್ಲಿ ನಿಮಗೆ ನಿಮ್ಮ ರೇಷನ್ ಕಾರ್ಡಿನ ಆರ್ಸಿ ನಂಬರ್ ಇದೆಯಾ ಇಲ್ಲವಾ ಎಂದು ಪರಿಶೀಲಿಸಿಕೊಳ್ಳಿ.

ಒಂದು ವೇಳೆ ಇಲ್ಲಿ ನಿಮ್ಮ ರೇಷನ್ ಕಾರ್ಡಿನ ಆರ್ಸಿ ನಂಬರ್ ಇದ್ದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಗೆ ಸೇರಿದಂತೆ ಸರ್ಕಾರದ ಅಡಿಯಲ್ಲಿ ನೀವು ಯಾವುದಾದರೂ ಯೋಜನೆಗೆ ಫಲಾನುಭವಿ ಆಗಿದ್ದಲ್ಲಿ ಅದನ್ನು ತೆಗೆದು ಹಾಕಲಾಗುತ್ತದೆ ಹಾಗೂ ನೀವು ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಲು ಅರ್ಹರಲ್ಲ ಎಂದು ಸರ್ಕಾರ ಪರಿಗಣಿಸುತ್ತದೆ.

 ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment