ನಾಳೆಯಿಂದ ರಾಜ್ಯಾದ್ಯಂತ ಉಚಿತ 200 ಯೂನಿಟ್ ಕರೆಂಟ್ ಜಾರಿ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಬಿಡುಗಡೆ ಮಾಡಿದ  ರಾಜ್ಯ ಸರ್ಕಾರ!

ಹೌದು ಈಗಾಗಲೇ ಕಾಂಗ್ರೆಸ್ ಸರ್ಕಾರವು ತಾವು ನೀಡಿದ್ದ ಐದು ಭರವಸೆಗಳಲ್ಲಿ  ಒಂದು ಭರವಸೆಯನ್ನು ಅಂದರೆ ಉಚಿತ ಕರೆಂಟ್  ಯೋಜನೆಯನ್ನು ಜುಲೈ 1 ರಿಂದ ಅಂದರೆ ನಾಳೆಯಿಂದಲೇ ಜಾರಿಗೆ ತರಲು ಮುಂದಾಗಿದ್ದು. ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೂಡ ನಾಳೆಯಿಂದ ಉಚಿತ ಕರೆಂಟ್ ಸಿಗಲಿದೆ. ಹಾಗೂ ಇನ್ನು ಕೂಡ ಯಾರೆಲ್ಲ ಅರ್ಜಿ ಸಲ್ಲಿಸಿಲ್ಲ ಎಲ್ಲರಿಗೂ ಕೂಡ ೫ರಾಜ್ಯ ಸರ್ಕಾರವು ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ಬಿಡುಗಡೆ ಮಾಡಿದೆ ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಯೋಣ.

WhatsApp Group Join Now
Telegram Group Join Now

ನಾಳೆಯಿಂದ ರಾಜ್ಯದ್ಯಂತ ಉಚಿತ ವಿದ್ಯುತ್!

ಹೌದು ಈಗಾಗಲೇ ಯಾರೆಲ್ಲಾ ಸೇವಾ ಸಿಂಧು ಅಧಿಕೃತ ಪೋರ್ಟಲ್ಲಿ ಉಚಿತ  ಇನ್ನೂರು ಯೂನಿಟ್ ಕರೆಂಟ್ ಪಡೆಯಲು ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೂಡ ಉಚಿತವಾಗಿ ವಿದ್ಯುತ್ ಸಿಗಲಿದೆ ಈ ಯೋಜನೆಯು ಜುಲೈ ಒಂದರಿಂದ  ಪ್ರಾರಂಭವಾಗುತ್ತಿದ್ದು ಜುಲೈ ಒಂದರಿಂದ ಆಗಸ್ಟ್ ಒಂದರವರೆಗೆ ತಾವು ಬಳಸಿದ ಸಂಪೂರ್ಣ ವಿದ್ಯುತ್ ಯೂನಿಟ್ ಪರಿಶೀಲಿಸಿ ಉಚಿತ ವಿದ್ಯುತ್ ನೀಡಲಾಗುತ್ತದೆ.

ಒಂದು ವೇಳೆ ನೀವೇನಾದರೂ 200 ಯೂನಿಟ್ ಕರೆಂಟ್ ಉಚಿತವಾಗಿ ಸಿಗುತ್ತದೆ ಎಂದು ಅತಿ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದಲ್ಲಿ ಸಂಪೂರ್ಣ ವಿದ್ಯುತ್ ಬಿಲ್ಲನ್ನು ನೀವೇ ಕಟ್ಟಬೇಕಾಗುತ್ತದೆ ಕಳೆದ ವರ್ಷ ನೀವು ಬಳಸಿದ ವಿದ್ಯುತ್ತನ್ನು ಪರಿಶೀಲಿಸಿ ಅದರ ಜೊತೆಗೆ 10% ಹೆಚ್ಚುವರಿ ವಿದ್ಯುತ್ ಅನ್ನು ಮಾತ್ರವಷ್ಟೇ ಉಚಿತವಾಗಿ ನೀಡಬೇಕೆಂದು ಸರ್ಕಾರ ನಿರ್ಧರಿಸಿದ್ದು ಸಂಪೂರ್ಣ  ಉಚಿತವಾಗಿ 200 ಯೂನಿಟ್ ಕರೆಂಟ್ ನೀಡುತ್ತಿಲ್ಲ.

ಉದಾಹರಣೆಯಾಗಿ :  2022 ರಲ್ಲಿ ಜನವರಿ ಒಂದರಿಂದ ಡಿಸೆಂಬರ್ 31ರವರೆಗೆ ನೀವು ಪ್ರತಿ ತಿಂಗಳು ನೂರು ಯೂನಿಟ್ ಕರೆಂಟನ್ನು ಬಳಕೆ ಮಾಡುತ್ತಿದ್ದರೆ ನಿಮ್ಮ ವಾರ್ಷಿಕ ಪ್ರತಿ ತಿಂಗಳ ವಿದ್ಯುತ್ ಬಳಕೆಯು 100 ಯೂನಿಟ್ ಆಗಿರಲಿದೆ ಹಾಗೂ ರಾಜ್ಯ ಸರ್ಕಾರವು ಇದಕ್ಕೆ 10% ಹೆಚ್ಚು ವಿದ್ಯುತ್ ನೀಡುತ್ತಿದ್ದು ನಿಮಗೆ ಕೇವಲ ಪ್ರತಿ ತಿಂಗಳು 110  ಯೂನಿಟ್ ಮಾತ್ರ ಉಚಿತವಾಗಿ ಸಿಗಲಿದೆ. ಇದೇ ರೀತಿಯಲ್ಲಿ ನೀವು ಕೂಡ ಕಳೆದ ವರ್ಷ ಬಳಸಿರುವ ಸಂಪೂರ್ಣ ವಿದ್ಯುತ್ ಬಿಲ್ ಗಳನ್ನು ಆಧರಿಸಿ ಸರ್ಕಾರವು ಅದರಲ್ಲಿ ಸರಾಸರಿಯನ್ನು ತೆಗೆದು ಅದಕ್ಕೆ 10% ಹೆಚ್ಚಿಗೆ ನೀಡುವ ಮೂಲಕ ಉಚಿತ ಕರೆಂಟನ್ನು ನೀಡುತ್ತಿದೆ, ಇದರಿಂದ ಅನಗತ್ಯವಾಗಿ ಕರೆಂಟ್ ಅನ್ನು ದುರುಪಯೋಗಪಡಿಸಿಕೊಳ್ಳುವುದು  ತಪ್ಪುತ್ತದೆ ಎಂದು ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ!

ಹೌದು ಈಗಾಗಲೇ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಹಾಗೂ ಗೃಹಜೋತಿ ಯೋಜನೆಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಗಳನ್ನು ಬಿಡುಗಡೆ ಮಾಡಿದ್ದು ಸರ್ವರ್ ಕಾರಣಗಳಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಈ ನಡುವೆ ಈಗಾಗಲೇ  ಗೃಹಜೋತಿ ಯೋಜನೆಗೆ 9 ಲಕ್ಷಕ್ಕಿಂತ ಹೆಚ್ಚಿನ ಅರ್ಜಿಗಳು ಸರ್ಕಾರಕ್ಕೆ  ಸಲ್ಲಿಕೆಯಾಗಿದ್ದು ಇನ್ನೂ ಕೂಡ ಒಂದು ಕೋಟಿಗಿಂತ ಹೆಚ್ಚಿನ ಜನ ಅರ್ಜಿ ಸಲ್ಲಿಸುವುದು ಬಾಕಿ ಇದೆ. 

ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸಲು ಜನರು ಪ್ರತಿನಿತ್ಯವೂ ಕೂಡ ಸೇವಾ ಸಿಂಧು ವೆಬ್ಸೈಟ್ಗೆ ಭೇಟಿ ನೀಡಿರುವ ಕಾರಣ ಸರ್ಕಾರವು ಇನ್ನೂ ಕೂಡ ಈ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಲ್ಲ ಸರ್ಕಾರದ ಅಂದಾಜಿನ ಪ್ರಕಾರ ದಿನಕ್ಕೆ 9 ಲಕ್ಷ ಜನ ಅರ್ಜಿ ಸಲ್ಲಿಸಲು ಬರಬಹುದೆಂದು  ಅಂದಾಜಿಸಿದ್ದರು ಆದರೆ ಅರ್ಜಿ  ಸಲ್ಲಿಕೆ ಬಿಡುಗಡೆಯಾದ ಬಳಿಕ ಅತಿ ಹೆಚ್ಚು ಜನ ಸೇವಾಸಿಂದ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಮುಂದಾದ ಕಾರಣ ವೆಬ್ಸೈಟ್ ತಾಂತ್ರಿಕ ಕಾರಣಗಳಿಂದ ಸರ್ವರ್ ಸಮಸ್ಯೆಯನ್ನು ಎದುರಿಸಲಾಯಿತು. ಈ ಸಮಸ್ಯೆ ಇನ್ನೂ ಕೂಡ ಬಗೆಹರಿಯದೆಯೇ ಸಾಗುತ್ತಿದೆ.

ಆದರೂ ಕೂಡ ಈಗಾಗಲೇ ರಾಜ್ಯದಿಂದ 9 ಲಕ್ಷಕ್ಕಿಂತ ಹೆಚ್ಚಿನ ಜನರು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದು ಸರ್ಕಾರದ ಪ್ರಕಾರ ಇನ್ನೂ ಒಂದು ಕೋಟಿ ಜನ ಅರ್ಜಿ ಸಲ್ಲಿಸಿಲ್ಲ ಆದ ಕಾರಣ  ಆಗಸ್ಟ್ ತಿಂಗಳವರೆಗೂ ಕೂಡ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರವು ದಿನಾಂಕವನ್ನು ಮುಂದೊಡಿದೆ.

ಅಗಸ್ಟ್ ತಿಂಗಳವರೆಗೂ ಕೂಡ ಅರ್ಜಿ ಸಲ್ಲಿಸಬಹುದು!

ಹೌದು ವೆಬ್ಸೈಟ್ ತಾಂತ್ರಿಕ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವ ಕಾರಣ  ರಾಜ್ಯ ಸರ್ಕಾರವು ಅರ್ಜಿ ಸಲ್ಲಿಕೆ  ಮಾಡುವ ದಿನಾಂಕವನ್ನು ಮುಂದೊಡಿದೆ. ಹಾಗಾಗಿ ರಾಜ್ಯದ ಸಾರ್ವಜನಿಕರು ಆಗಸ್ಟ್ ತಿಂಗಳವರೆಗೂ ಕೂಡ ಸೇವಾ ಸಿಂಧು ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು ಶುಭದಿನ!

Leave a Comment