ಎಲ್ಲರಿಗೂ ನಮಸ್ಕಾರ… ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ ಆಸೆಯಂತೆಯೇ ಮಾಡಲು ಹೋದರೆ ಹಣದ ಕೊರತೆಯೂ ಕೂಡ ಎದುರಾಗಬಹುದು, ಆದ್ದರಿಂದ ಎಲ್ಲಾ ವ್ಯಕ್ತಿಗಳು ಸ್ವಂತ ಉದ್ಯೋಗವನ್ನು ಮಾಡಲು ಹಿಂಜರಿಯುತ್ತಾರೆ ಆದರೆ ನೀವು ಕೂಡ ಈ ರೀತಿಯ ಒಂದು ಕನಸನ್ನು ಇಟ್ಟುಕೊಂಡಿದ್ದರೆ ನೀವು ಸರ್ಕಾರದಿಂದ ಸಿಗುವ ಸಾಲವನ್ನು ಪಡೆದುಕೊಂಡು ನಿಮ್ಮ ಉದ್ಯಮವನ್ನು ಪ್ರಾರಂಭಿಸಬಹುದು. ಆ ಉದ್ಯಮದಲ್ಲಿ ಬಂದ ಆದಾಯದಲ್ಲಿ ನೀವು ಅನಂತರ ದಿನಗಳಲ್ಲಿ ನಿಮ್ಮ ಸಾಲವನ್ನು ಮರುಪಾವತಿಸಬಹುದು.
ಈ ಒಂದು ಯೋಜನೆ ಅಡಿಯಲ್ಲಿ ನಿಮ್ಮ ದಾಖಲಾತಿಗಳನ್ನೆಲ್ಲ ಪೂರೈಸಿದ ಬಳಿಕವೇ ನಿಮಗೆ ಸರ್ಕಾರವು ಸಾಲ ನೀಡಲು ಮುಂದಾಗುತ್ತದೆ, ಆದ್ದರಿಂದ ನೀವು ದಾಖಲಾತಿಗಳನ್ನು ಪೂರೈಸಬೇಕು ಹಾಗೂ ಕೆಲವೊಂದು ಅರ್ಹತೆಗಳನ್ನು ಕೂಡ ಹೊಂದಿರಬೇಕು ಅಂತಹ ವ್ಯಕ್ತಿಗೆ ಮಾತ್ರ ಈ ಒಂದು ಯೋಜನೆ ಅಡಿಯಲ್ಲಿ ಸಾಲ ದೊರೆಯಲು ಸಾಧ್ಯ. ಸಾಲ ಎಂದರೆ ಒಂದು ಲಕ್ಷ ಎರಡು ಲಕ್ಷ ಅಲ್ಲ ಬರೋಬ್ಬರಿ 50 ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ.
ನಿಮಗೆ ಎಷ್ಟು ಹಣದ ಸಾಲ ಬೇಕು ಅಷ್ಟು ಹಣದ ಸಾಲವನ್ನು ನೀವು ಅರ್ಜಿ ಸಲ್ಲಿಸುವಾಗ ಭರ್ತಿ ಮಾಡಿದ್ದರೆ ಆ ಹಣವೇ ಸಾಲವಾಗಿ ದೊರೆಯುತ್ತದೆ. 50 ಲಕ್ಷ ಸಾಲ ಪಡೆಯಲು ಯಾವ ದಾಖಲಾತಿಗಳು ಬೇಕು ಹಾಗು ಯಾವ ರೀತಿಯ ಅರ್ಜಿಯನ್ನು ಸಲ್ಲಿಸಬೇಕು ಎಂಬ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಲೇಖನವನ್ನು ಓದಿರಿ.
PMEGP ಯೋಜನೆ ಅಡಿಯಲ್ಲಿ 50 ಲಕ್ಷ ಸಾಲ ದೊರೆಯಲಿದೆ.
ಹೌದು ಇದೊಂದು ಕೇಂದ್ರ ಸರ್ಕಾರದ ಯೋಜನೆ ಇದಾಗಿದೆ ಆದ್ದರಿಂದ ಯುವಕರೇ ಆಗಲಿ ಯುವತಿಯರೇ ಆಗಲಿ ಅರ್ಜಿ ಸಲ್ಲಿಸಿ 50 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಈ ಹಿಂದೆ ನಿರುದ್ಯೋಗಿಗಳಾಗಿ ನೀವು ಸಮಯವನ್ನು ಕಳೆಯುತ್ತಿದ್ದರೆ ಸ್ವಂತ ವ್ಯಾಪಾರವನ್ನು ಶುರು ಮಾಡಲು ಅಥವಾ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಈ ಒಂದು ಹಣ ನಿಮಗೆ ಸಹಾಯಕವಾಗುತ್ತದೆ ಆದ್ದರಿಂದ ನೀವು ಸಾಲವನ್ನು ಪಡೆದುಕೊಂಡು ಉದ್ಯಮವನ್ನು ಪ್ರಾರಂಭಿಸಿದ ಬಳಿಕ ಆ ಕೆಲಸದಲ್ಲಿ ಬಂದ ಆದಾಯವನ್ನು ನೀವು ಈ ಯೋಜನೆಯ ಸಾಲಕ್ಕೆ ಮರುಪಾವತಿಸಬಹುದು. 2024ನೇ ಸಾಲಿನಲ್ಲಿ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು.
PMEGP ಯೋಜನೆಗೆ ಈ ಕೆಳಕಂಡ ದಾಖಲಾತಿಗಳು ಕಡ್ಡಾಯ.
- ಅರ್ಜಿದಾರನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ,
- ಉತ್ತಮವಾದ ಶೈಕ್ಷಣಿಕ ಅಂಕಪಟ್ಟಿ,
- ಅಭ್ಯರ್ಥಿ ಆಧಾರ್ ಕಾರ್ಡ್,
- ಗ್ರಾಮೀಣ ಪ್ರದೇಶದ ಪ್ರಮಾಣ ಪತ್ರ,
ಇನ್ನು ಮುಂತಾದ ದಾಖಲಾತಿಗಳು ಈ ಯೋಜನೆಗೆ ಬೇಕಾಗುತ್ತದೆ ಪ್ರಮುಖವಾದ ದಾಖಲಾತಿಗಳನ್ನು ಮಾತ್ರ ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ ಹಾಗಾಗಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ನೀವು ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಬಹುದು.
PMEGP ಯೋಜನೆಗೆ ಈ ರೀತಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಸರ್ಕಾರದ ಈ ಒಂದು ಯೋಜನೆಗೆ ಆನ್ಲೈನ್ ಮೂಲಕವೇ ಅರ್ಜಿಯನ್ನು ಪೂರೈಸಬಹುದು ಅರ್ಜಿ ಪೂರೈಸಿದ ಬಳಿಕ ನಿಮಗೆ 50 ಲಕ್ಷದವರೆಗೆ ಸಾಲವನ್ನು ಸರ್ಕಾರ ನಿಮಗೆ ನೀಡತ್ತದೆ ಆದ್ದರಿಂದ ನೀವು ಎಚ್ಚರಿಕೆಯಿಂದ ಸಾಲವನ್ನು ಪಡೆದುಕೊಳ್ಳಿ ಶರತ್ತು ನಿಯಮಗಳನ್ನೆಲ್ಲ ಕೂಡ ಓದಿದ ಬಳಿಕವೇ ನೀವು ಸಾಲ ಪಡೆದುಕೊಳ್ಳಲು ಮುಂದಾಗಿರಿ. PMEGP ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅನಂತರ ನಿಮಗೆ ಮುಖಪುಟ ತೆರೆಯುತ್ತದೆ ಆ ಮುಖಪುಟದಲ್ಲಿ ವಸಾ ಘಟಕಕ್ಕಾಗಿ ಅರ್ಜಿ ಅನ್ವಯಿಸಿ ಎಂಬುದನ್ನು ಕ್ಲಿಕ್ಕಿಸಿರಿ ಕ್ಲಿಕ್ಕಿಸಿದ ಬಳಿಕ ಅರ್ಜಿ ನಮೂನೆ ತೆರೆಯುತ್ತದೆ.
ನೋಂದಣಿ ಫಾರ್ಮ್ ಅನ್ನು ಕೂಡ ನೀವು ನಿಮ್ಮ ಮೊಬೈಲ್ ಸಂಕೇತ ಇ-ಮೇಲ್ ಐಡಿಯನ್ನು ಕೊಟ್ಟು ನೋಂದಣಿ ಯಾಗಬೇಕಾಗುತ್ತದೆ ನೀವು ಈ ವೆಬ್ಸೈಟ್ ಗೆ ಭೇಟಿ ನೀಡುವಾಗ ಈ ಒಂದು ಲಾಗಿನ್ ಪಾಸ್ವರ್ಡ್ ಅನ್ನು ನಮೂದಿಸಿಯೇ ಲಾಗಿನ್ ಆಗಬೇಕಾಗುತ್ತದೆ ಆದ್ದರಿಂದ ಈ ಒಂದು ಪಾಸ್ವರ್ಡ್ ಗಳನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಆಗಿರಿ ಲಾಗಿನ್ ಆದ ಬಳಿಕ ಅರ್ಜಿ ನಮೂನೆಯು ಕಾಣತೊಡಗುತ್ತದೆ ನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ಪೂರೈಸಬೇಕು ಪೂರೈಸಿದ ಬಳಿಕವೇ ನೀವು ಅರ್ಜಿ ಪ್ರಕ್ರಿಯೆಯನ್ನು ಸಲ್ಲಿಸಬೇಕಾಗುತ್ತದೆ.
ದಾಖಲಾತಿಗಳನ್ನು ಸಬ್ಮಿಟ್ ಮಾಡುವ ಮೂಲಕ ಸ್ಕ್ಯಾನ್ ಮಾಡಿರಿ. ಈ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ಎಲ್ಲಾ ಮಾಹಿತಿಯು ಕೂಡ ಈ ಒಂದು ಅಪ್ಲಿಕೇಶನ್ ನ ದೃಢೀಕರಣ ಪತ್ರದಲ್ಲಿ ನಮೂದಿಸಿರಲಾಗುತ್ತದೆ ಆ ಒಂದು ಪ್ರತಿಯನ್ನು ಕೂಡ ತೆಗೆದುಕೊಳ್ಳಿರಿ. ಈ ಒಂದು ಯೋಜನೆಯ ಮೂಲಕ ಆನ್ಲೈನ್ನಲ್ಲಿಯೇ ಅರ್ಜಿ ಸಲ್ಲಿಸಿ 50 ಲಕ್ಷದವರೆಗೆ ಸಾಲವನ್ನು ಈ ರೀತಿಯಾಗಿ ಪಡೆಯಬಹುದು.
ಲೇಖನವನ್ನು ಇಲ್ಲಿಯವರೆಗೂ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ…