3093 ಉತ್ತರ ರೈಲ್ವೆ ಹುದ್ದೆಗಳಿಗೆ ಅರ್ಜಿ ಆಹ್ವಾನ ! SSLC ಹಾಗೂ ITI ಪಾಸ್ ಆಗಿದ್ರೆ ಸಾಕು ಈ ಉದ್ಯೋಗ ನಿಮಗೆ ದೊರೆಯುತ್ತದೆ. ಈ ರೀತಿ ಅರ್ಜಿ ಸಲ್ಲಿಸಿರಿ.

ಎಲ್ಲರಿಗೂ ನಮಸ್ಕಾರ…

ಉತ್ತರ ರೈಲ್ವೆ ನೇಮಕಾತಿ ಮಂಡಳಿಯು ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶವನ್ನು ನೀಡಿದೆ. 3093 ಹುದ್ದೆಗಳ ನೇಮಕಾತಿಗೆ ಈಗಾಗಲೇ ಅರ್ಜಿಯನ್ನು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ. ನೀವು ಕೂಡ ಹತ್ತನೇ ತರಗತಿಯನ್ನು ಪಾಸ್ ಆಗಿದ್ದೀರಾ ? ಅಥವಾ ಐಟಿಐ ಶಿಕ್ಷಣದಲ್ಲಿ ಪಾಸಾಗಿದ್ರೆ ಈ ರೈಲ್ವೆ ಉದ್ಯೋಗವು ನಿಮ್ಮದಾಗುತ್ತದೆ. ಈ ರೈಲ್ವೆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಜನವರಿ 11 2024 ಕೊನೆಯ ದಿನವಾಗಿದೆ. ನೀವೇನಾದರೂ ರೈಲ್ವೆ ಉದ್ಯೋಗವನ್ನು ಪಡೆಯಬೇಕೆಂಬ ನಿರೀಕ್ಷೆಯಲ್ಲಿದ್ದರೆ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಪೂರೈಸಿರಿ ರೈಲ್ವೆ ಇಲಾಖೆಯ ಕೆಲಸವನ್ನು ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಓದಿರಿ.

WhatsApp Group Join Now
Telegram Group Join Now

ಅರ್ಹ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಮುಗಿಸಿದ ನಂತರ ಐಟಿಐ ಶಿಕ್ಷಣವನ್ನು ಮುಗಿಸಿ ನಂತರ ಒಂದೊಳ್ಳೆ ಉದ್ಯೋಗಕ್ಕಾಗಿ ತಮ್ಮ ಗ್ರಾಮೀಣ ಪ್ರದೇಶದಲ್ಲೇ ಹುಡುಕುತ್ತಿರುತ್ತೀರ ಆದರೆ ಎಲ್ಲಿಯೂ ಕೂಡ ಓದಿನ ಅರ್ಹತೆಗೆ ಸರ್ಕಾರಿ ಕೆಲಸಗಳು ಸಿಗುವುದಿಲ್ಲ. ಆದರೆ ಈ ಭಾರತೀಯ ರೈಲ್ವೆ ಇಲಾಖೆಯಲ್ಲಿ 3093 ಹುದ್ದೆಗಳು ಖಾಲಿ ಇರುವ ಕಾರಣದಿಂದ ರೈಲ್ವೆ ಮಂಡಳಿಯು ಈಗಾಗಲೇ ಅರ್ಜಿಯನ್ನು ಆಹ್ವಾನಿಸಿದೆ. ನೀವೇನಾದರೂ ಈ ಸರ್ಕಾರಿ ನೌಕರಿಗೆ ಆಸಕ್ತಿಯನ್ನು ತೋರಿಸಿ ಉದ್ಯೋಗವನ್ನು ಪಡೆದುಕೊಳ್ಳಲು ಅರ್ಜಿಯನ್ನು ಪೂರೈಸಬೇಕಾಗುತ್ತದೆ. ಅರ್ಜಿ ಪೂರೈಸಲು ದಾಖಲಾತಿಗಳು ಯಾವೆಲ್ಲ ಬೇಕು ಹಾಗೂ ವಿದ್ಯಾಹರ್ತೆಯನ್ನು ಎಷ್ಟು ಮುಗಿಸಿರಬೇಕು, ಐಟಿಐ ಓದಿದ್ರೆ ರೈಲ್ವೆ ಇಲಾಖೆಯಲ್ಲಿ ಕೆಲಸ ನೀಡುತ್ತಾರ ಇಂಥಹ ಎಲ್ಲಾ ಗೊಂದಲಕರವಾದ ಪ್ರಶ್ನೆಗಳಿಗೆ ಈ ಕೆಳಕಂಡ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

ಉತ್ತರ ರೈಲ್ವೆ ಹುದ್ದೆಗಳು !

ರೈಲ್ವೆ ಇಲಾಖೆಯಲ್ಲಿ ಯಾವ ಹುದ್ದೆಗಳು ಖಾಲಿ ಇದೆ ಎಂದು ತಿಳಿಯಿರಿ :- ಆಕ್ಟ್ ಅಪ್ರೆಂಟಿಸ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹಾಗೂ ಖಾಲಿ ಇರುವ ಹುದ್ದೆಗಳು 3093. ಈ ಹುದ್ದೆಗೆ ವಿದ್ಯಾರ್ಹತೆ ಏನೆಂದರೆ ಎಸ್‌ಎಸ್‌ಎಲ್‌ಸಿ ಜೊತೆಗೆ ಐಟಿಐ ಶಿಕ್ಷಣವನ್ನು ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಸರ್ಕಾರಿ ಉದ್ಯೋಗ. ಐಟಿಐ ಪಾಸಾದ ವಿದ್ಯಾರ್ಥಿಗಳು ಕೂಡ 50% ಫಲಿತಾಂಶದೊಂದಿಗೆ ಉತ್ತಮವಾದ ಅಂಕಗಳನ್ನು ಗಳಿಸಿರಬೇಕು.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಒಟ್ಟಾರೆ ಹೇಳುವುದಾದರೆ 50%ಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದರು ಪರವಾಗಿಲ್ಲ, ಮತ್ತು ಐಟಿಐ ನಲ್ಲಿ ಇಲಿಟ್ರಿಶಿಯನ್, ಕಾರ್ಪೆಂಟರ್, ವೆಲ್ದರ್ ಹಾಗೂ ಫಿಟ್ಟರ್, ಮಶಿನಿಸ್ಟ್ ಇನ್ನು ಮುಂತಾದ ಟ್ರೇಡ್ ಗಳಲ್ಲಿ ಪಾಸಾದ ವಿದ್ಯಾರ್ಥಿಗಳು ಈ ಒಂದು ಸರ್ಕಾರಿ ರೈಲ್ವೆ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ನೀವು ಕೂಡ ಈ ಮೇಲ್ಕಂಡ ಎಲ್ಲಾ ಟ್ರೇಡ್ ಗಳನ್ನು ಮುಗಿಸಿ ಪಾಸ್ ಆಗಿದ್ದೀರಾ ? ಹಾಗಾದ್ರೆ ನೀವು ಅರ್ಹರು ಎಂದರ್ಥ. ಏಕೆ ತಡ ಮಾಡುತ್ತಿದ್ದೀರಿ ಈ ಒಂದು ಸರ್ಕಾರ ಭಾರತೀಯ ಉದ್ಯೋಗವನ್ನು ಪಡೆಯಲು ಈ ಕೆಳಕಂಡ ರೀತಿ ಅರ್ಜಿಯನ್ನು ಪೂರೈಸಿರಿ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ವಯಸ್ಸು ಎಷ್ಟಿರಬೇಕು ?

ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳು ಮೊದಲು ಐಟಿಐ ಶಿಕ್ಷಣವನ್ನು ಪೂರ್ಣಗೊಳಿಸಿ ನಂತರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕು. ಹಾಗೂ ವಯಸ್ಸಿನ ಮಿತಿಯು ಕೂಡ ಈ ಉದ್ಯೋಗದಲ್ಲಿ ಮೀಸಲಿಡಲಾಗಿದೆ. ಅಂದರೆ 18 ವರ್ಷ ಮೇಲ್ಪಟ್ಟ ವಯಸ್ಸಿನವರು ಹಾಗೂ 24 ವರ್ಷದೊಳಗಿನ ವಯಸ್ಸುಗಳ ಯುವಕರು ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಪೂರೈಸಬಹುದು.

ಈ ಕೆಳಕಂಡ ದಿನಾಂಕಗಳನ್ನು ಗಮನಿಸಿರಿ.

  • ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಡಿಸೆಂಬರ್ 11ನೇ ತಾರೀಕಿನಲ್ಲಿ ಆರಂಭವಾಗಲಿದೆ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 2024 12ರಂದು ಅರ್ಜಿಯ ಪೂರೈಕೆ ಕೊನೆಗೊಳ್ಳಲಿದೆ.
  • ಅರ್ಜಿಯ ಶುಲ್ಕವನ್ನು ಎಸ್ಸಿ ಎಸ್ಟಿ ವರ್ಗದ ಯುವಕ ಯುವತಿಯರಿಗೆ ಹಾಗೂ ಮಹಿಳಾ ಅಭ್ಯರ್ಥಿಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೆ ಸಾಮಾನ್ಯ ವರ್ಗದ ವ್ಯಕ್ತಿಗಳಿಗೆ ಶುಲ್ಕವನ್ನು ವಿಧಿಸಲಾಗುತ್ತದೆ. ಅದಕ್ಕಾಗಿ ನೀವು ಆನ್ಲೈನ್ ಪೇಮೆಂಟ್ ಗಳ ಮೂಲಕ ಶುಲ್ಕವನ್ನು ಪಾವತಿಸಬೇಕು.

ಹುದ್ದೆಯ ಅಪ್ಲಿಕೇಶನ್ ಪ್ರಕ್ರಿಯೆ ಹೀಗಿದೆ.

  • ಉತ್ತರ ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕಾಗುತ್ತದೆ. ಅದಕ್ಕಾಗಿ ನೀವು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ಕಿಸಿ ನಂತರ ವೆಬ್ಸೈಟ್ ತೆರೆಯುತ್ತದೆ.
  • https://www.rrcnr.org/
  • ನಂತರ recruitment / career ಎಂಬುದು ಕಾಣಿಸುತ್ತದೆ ಅದನ್ನು ಕ್ಲಿಕ್ಕಿಸಿರಿ.
  • ನಂತರ ಹೊಸ ವೆಪೇಜ್ ತೆರೆಯುತ್ತದೆ ಆ ಪೇಜಿನಲ್ಲಿ ನಿಮ್ಮ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಿ ಅಂದರೆ ಲಾಗಿನ್ ಪ್ರಕ್ರಿಯೆಯನ್ನು ಮುಗಿಸಿರಿ.
  • ನಿಮ್ಮ ಎಲ್ಲಾ ದಾಖಲಾತಿಗಳನ್ನು ಕೂಡ ನಮೂದಿಸಬೇಕಾಗುತ್ತದೆ ಮತ್ತು ನಿಮ್ಮ ಶೈಕ್ಷಣಿಕ ಮಾಹಿತಿಯನ್ನು ಕೂಡ ನೀಡಬೇಕು ನಂತರ ನಿಮ್ಮ ಅರ್ಜಿಯ ಪ್ರಕ್ರಿಯೆ ಮುಗಿದಿದೆ ಎಂದರ್ಥ.

ನಿಮ್ಮ ಅಕ್ಕ ಪಕ್ಕದ ಸ್ನೇಹಿತರಿಗೂ ಕೂಡ ರೈಲ್ವೆ ಇಲಾಖೆಯಲ್ಲಿ 393 ಹುದ್ದೆಗಳು ಖಾಲಿ ಇದೆ ಎಂದು ತಿಳಿಸಲು ಈ ಲೇಖನವನ್ನು ಶೇರ್ ಮಾಡಿ ಅವರು ಕೂಡ ಸರ್ಕಾರಿ ಉದ್ಯೋಗವನ್ನು ಪಡೆಯಲಿ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment