ವಿದ್ಯಾರ್ಥಿಗಳೇ ಗಮನಿಸಿ : ವಿದ್ಯಾಸಿರಿ ಸ್ಕಾಲರ್ಶಿಪ್ ಮುಖಾಂತರ 15 ಸಾವಿರ ಹಣ ವಿದ್ಯಾರ್ಥಿ ವೇತನವಾಗಿ ಸಿಗಲಿದೆ. ಈ ಕೂಡಲೇ ಈ ರೀತಿ ಅರ್ಜಿ ಸಲ್ಲಿಸಿರಿ.

ಎಲ್ಲರಿಗೂ ನಮಸ್ಕಾರ…

ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಖರ್ಚುಗಳನ್ನು ನಿಭಾಯಿಸಿಕೊಳ್ಳಲು, ಈಗಾಗಲೇ ಸರ್ಕಾರದಿಂದ ಹಲವಾರು ವಿದ್ಯಾರ್ಥಿ ವೇತನಗಳನ್ನು ಕೂಡ ಜಾರಿಗೊಳಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಹಣವನ್ನು ಎಲ್ಲರ ಖಾತೆಗೆ ಜಮಾ ಮಾಡಲಾಗಿದೆ. ಹಾಗೂ ಕಂಪನಿಗಳಿಂದ ಮತ್ತು ಸಂಸ್ಥೆಗಳಿಂದ ಬೇರೆಬೇರೆ ರೀತಿಯ ಹಲವಾರು ವಿದ್ಯಾರ್ಥಿ ವೇತನಗಳ ಹೆಸರಿನ ಹಣವು ಕೂಡ ವಿದ್ಯಾರ್ಥಿಗಳಿಗೆ ತಲುಪಿದೆ. ಹತ್ತಾರು ವಿದ್ಯಾರ್ಥಿ ವೇತನಗಳು ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಈಗಾಗಲೇ ನಮ್ಮ ಹಿಂದಿನ ಲೇಖನಗಳಲ್ಲಿ ಹಲವಾರು ವಿದ್ಯಾರ್ಥಿ ವೇತನದ ಬಗ್ಗೆ ತಿಳಿಸಲಾಗಿದೆ.

WhatsApp Group Join Now
Telegram Group Join Now

ನೀವು ಕೂಡ ಆ ವಿದ್ಯಾರ್ಥಿ ವೇತನಗಳ ಫಲಾನುಭವಿಗಳಾಗಲು ಹಿಂದಿನ ಲೇಖನವನ್ನು ಓದಿರಿ. ಹಾಗೂ ಈ ವಿದ್ಯಾಸಿರಿ ಸ್ಕಾಲರ್ಶಿಪ್ ಮುಖಾಂತರ ಹದಿನೈದು ಸಾವಿರದವರೆಗೆ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಯಾವ ರೀತಿ ಈ ವಿದ್ಯಾಸಿರಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹಾಗೂ ಯಾವ ವಿದ್ಯಾರ್ಥಿಗಳು ಈ ಸ್ಕಾಲರ್ ಶಿಪ್ ಗೆ ಅರ್ಹರು ಎಂಬ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಲೇಖನವನ್ನು ಓದಿ.

ವಿದ್ಯಾಸಿರಿ ವಿದ್ಯಾರ್ಥಿ ವೇತನ !

ಈ ಒಂದು ವಿದ್ಯಾರ್ಥಿ ವೇತನವು ಕರ್ನಾಟಕ ಸರ್ಕಾರದಿಂದ ಜಾರಿಯಾಗಿದೆ. ಈ ವಿದ್ಯಾರ್ಥಿ ವೇತನದಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರತಿ ತಿಂಗಳು 1,500 ಹಣ ಅವರ ಖಾತೆಗೆ ಜಮಾ ಆಗಲಿದೆ. ಏಕೆ ಪ್ರತಿ ತಿಂಗಳು ಜಮಾ ಆಗುತ್ತದೆ ಎಂದು ನಿಮ್ಮ ಪ್ರಶ್ನೆಯೇ, ಉತ್ತರ ಹೀಗಿದೆ 10 ತಿಂಗಳವರೆಗೂ ಕೂಡ ತಿಂಗಳಿಗೊಮ್ಮೆ ರೂ.1500 ಹಣವನ್ನು ವಿದ್ಯಾರ್ಥಿಯ ಖಾತೆಗೆ ಜಮಾ ಮಾಡಲಾಗುತ್ತದೆ. ಈ ರೀತಿಯ ನಿಯಮವನ್ನು ಏಕೆ ಜಾರಿಗೊಳಿಸಿದೆ ಸರ್ಕಾರ ಎಂದರೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಒಂದೊಳ್ಳೆ ಶಾಲಾ-ಕಾಲೇಜುಗಳು ಬಹಳ ಮುಖ್ಯ. ಆ ಶಾಲಾ-ಕಾಲೇಜುಗಳು ತಮ್ಮ ಊರಿನಲ್ಲಿ ಇರದ ಕಾರಣದಿಂದ ಬೇರೊಂದು ಗ್ರಾಮೀಣ ಪ್ರದೇಶಕ್ಕೆ ಹೋಗಿ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿಗಳು ಹಾಸ್ಟೆಲ್ಗಳಲ್ಲಿ ಉಳಿದುಕೊಂಡು ದಿನನಿತ್ಯದ ಊಟ ತಿಂಡಿ ಯನ್ನು ಸೇವಿಸಬೇಕಾಗುತ್ತದೆ. ಆದರೆ ಕೆಲವೊಂದು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರೆಯುವುದಿಲ್ಲ. ಈ ಕಾರಣಕ್ಕಾಗಿ ಸರ್ಕಾರವು 1,500 ಹಣವನ್ನು ವಿದ್ಯಾರ್ಥಿಯ ವಸತಿ ಹಾಗೂ ಊಟ ತಿಂಡಿ ಖರ್ಚಿಗೆ ಈ ಹಣದ ಸೌಲಭ್ಯವನ್ನು ನೀಡಲಿದೆ. ಈ ಒಂದು ವಿದ್ಯಾರ್ಥಿ ವೇತನವು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ, ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರು.

ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ 1,500 ಹಣ ಖಾತೆಗೆ ವರ್ಗಾಯಿಸಲಾಗುತ್ತದೆ. 15,000 ಹಣವನ್ನು ಒಂದೇ ಬಾರಿ ಜಮಾ ಮಾಡುವುದಿಲ್ಲ ಏಕೆಂದರೆ, ವಿದ್ಯಾರ್ಥಿಗಳು ಪ್ರತಿ ತಿಂಗಳ ಊಟ ತಿಂಡಿಯ ಖರ್ಚನ್ನು ನಿಭಾಯಿಸಲು 1500 ಹಣದಲ್ಲಿ ತಮ್ಮ ದಿನನಿತ್ಯ ಜೀವನವನ್ನು ವಿದ್ಯಾಭ್ಯಾಸದ ಜೊತೆಗೆ ಸಾಗಿಸಲು ಈ ನಿರ್ಧಾರ ಮಾಡಿದೆ. ಹತ್ತು ತಿಂಗಳವರೆಗೂ ಕೂಡ ಈ ವಿದ್ಯಾರ್ಥಿ ವೇತನ ಎಲ್ಲಾ ಅರ್ಹ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಜೂನ್ 2023 ರಂದು ವಿದ್ಯಾರ್ಥಿಗಳಿಗೆ 15 ಸಾವಿರಹಣವನ್ನು ಜಮಾ ಮಾಡಲಾಗುತ್ತದೆ.

ಹಾಗೂ ಮಾರ್ಚ್ ತಿಂಗಳವರೆಗೂ ಕೂಡ ಪ್ರತಿ ತಿಂಗಳು 1,500 ಹಣ ಜಮಾ ಆಗಲಿದೆ. ಒಟ್ಟಾರೆ ಹೇಳುವುದಾದರೆ ಒಟ್ಟು ಮೊತ್ತ 15,000 ಹಣ. ನೀವು ಕೂಡ ಬೇರೊಂದು ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದೀರಾ ಹಾಗಾದ್ರೆ ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರು ಎಂದರ್ಥ. ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಪ್ರತಿ ತಿಂಗಳು 1500 ಹಣವನ್ನು ಪಡೆಯಿರಿ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಈ ಕೆಳಕಂಡ ಅರ್ಹತೆ ಹೊಂದಿದ್ದರೆ ಮಾತ್ರ ವಿದ್ಯಾರ್ಥಿ ವೇತನ ಸಿಗುತ್ತದೆ.

ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ಹಾಗೂ ಎಸ್ಸಿ ಎಸ್ಟಿ ಓಬಿಸಿ ಗಳಂತಹ ವರ್ಗಕ್ಕೆ ಸೇರಿದವರಾಗಿರಬೇಕು. ಹಾಗೂ ತಮ್ಮ ಕುಟುಂಬದ ಆದಾಯವು ಎರಡುವರೆ ಲಕ್ಷಕ್ಕಿಂತ ಒಳಗಿರಬೇಕು. ಇಂತಹ ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಈ ಒಂದು ವಿದ್ಯಾರ್ಥಿ ವೇತನ ಸಲ್ಲುತ್ತದೆ. ಓಬಿಸಿ ಗಳಂತಹ ವರ್ಗದವರು ಒಂದು ಲಕ್ಷಕ್ಕಿಂತ ಕುಟುಂಬದ ಆದಾಯ ಮೀರಿರಬಾರದುm ಇಂತಹ ಎಲ್ಲ ಅರ್ಹತೆ ಹೊಂದ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಹಣವನ್ನು ಪಡೆಯಲು ಸಾಧ್ಯ.

ವಿದ್ಯಾರ್ಥಿಯು ಕನಿಷ್ಠ ಎರಡು ವರ್ಷವಾದರೂ ಈ ಕರ್ನಾಟಕದಲ್ಲಿ ಶಿಕ್ಷಣವನ್ನು ಪಡೆದಿರಬೇಕು. ಮತ್ತು ಹಾಜರಾತಿಯು 75% ಹೊಂದಿರಬೇಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಸಂಸ್ಥೆಗಳಲ್ಲಿ ಓದುತ್ತಿರಬೇಕು ಅಂತಹ ಅರ್ಹ ವಿದ್ಯಾರ್ಥಿಗಳು ಈ ವಿದ್ಯಾಸಿರಿ ಸ್ಕಾಲರ್ಶಿಪ್ ನ ಪಡೆಯಲು ಸಾಧ್ಯ. ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿರುವ ಶಾಲಾ ಕಾಲೇಜು 5 ಕಿಮಿ ದೂರದಲ್ಲಿರಬೇಕು.

ಈ ಕೆಳಕಂಡ ದಾಖಲಾತಿಯನ್ನು ಕಡ್ಡಾಯವಾಗಿ ಹೊಂದಿರಬೇಕು.

ವಿದ್ಯಾರ್ಥಿಯು ವಿದ್ಯಾಸಿರಿ ವಿದ್ಯಾರ್ಥಿ ವೇತನವನ್ನು ಪಡೆಯಲು ಗುರುತಿನ ಚೀಟಿ ಅಂದರೆ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, 10ನೇ ತರಗತಿಯ ಮಾರ್ಕ್ಸ್ ಕಾರ್ಡ್, ಪಿಯುಸಿ ಅಥವಾ ಸೆಮಿಸ್ಟರ್ ಅಂಕ ಪಟ್ಟಿ, ಹಾಗೂ ಬ್ಯಾಂಕ್ ಖಾತೆ ಇನ್ನು ಮುಂತಾದ ದಾಖಲಾತಿಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಒಟ್ಟಾರೆ ಹೇಳುವುದಾದರೆ ಈ ದಾಖಲಾತಿಗಳು ವಿದ್ಯಾರ್ಥಿ ವೇತನಕ್ಕೆ ಬಹಳ ಪಾತ್ರವನ್ನು ವಹಿಸುತ್ತವೆ. ಇಂತಹ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾಸಿರಿ ಸ್ಕಾಲರ್ಶಿಪ್ ಸಲ್ಲುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ !

  • ವಿದ್ಯಾಸಿರಿ ಸ್ಕಾಲರ್ಶಿಪ್ ನಲ್ಲಿ ಪಾಲ್ಗೊಳ್ಳಬೇಕಾದ ನೀವು ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು. ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಈ ಕೆಳಕಂಡ ಲಿಂಕನ್ನು ಕ್ಲಿಕ್ಕಿಸಿರಿ.
  • https://bcwd.karnataka.gov.in/info-2/Scholarships/Vidyasiri/kn
  • ಜಾಲತಾಣಕ್ಕೆ ಭೇಟಿ ನೀಡಿದ ನಂತರ ಲಾಗಿನ್ ಆಗಿರಿ ಅನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ಕೂಡ ಸಲ್ಲಿಸಬೇಕಾಗುತ್ತದೆ ಸಲ್ಲಿಸದೆ ನಂತರ ಅರ್ಜಿಯ ಪ್ರಕ್ರಿಯೆ ಮುಗಿದಿದೆ ಎಂದರ್ಥ ನೀವು ಈ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಹರು ಎಂದು ಖಚಿತಪಡಿಸಿಕೊಂಡು ನಂತರ ಈ ರೀತಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿರಿ. ಸರ್ಕಾರ ನಿಮ್ಮ ಅರ್ಜಿಯನ್ನು ಪರಿಶೀಲಿಸಿ ನಂತರ ನಿಮ್ಮ ನಿಮ್ಮನ್ನು ಆಯ್ಕೆ ಮಾಡಿಕೊಂಡು ಪ್ರತಿ ತಿಂಗಳು 1500 ಹಣವನ್ನು ಜಮಾ ಮಾಡಲಾಗುತ್ತದೆ ಒಟ್ಟು ಈ ವಿದ್ಯಾರ್ಥಿ ವೇತನದ ಹಣ 15000.
  • ನೀವು ಕೂಡ ಈ ವಿದ್ಯಾರ್ಥಿ ವೇತನದಲ್ಲಿ ಭಾಗವಹಿಸಬೇಕಾ ಹಾಗಾದ್ರೆ ಈ ಮೇಲ್ಕಂಡ ಮಾಹಿತಿಯಂತೆ ಅರ್ಜಿಯನ್ನು ಪೂರೈಸಿರಿ. ನಿಮ್ಮ ಅಕ್ಕ ಪಕ್ಕದ ಸ್ನೇಹಿತರಿಗೂ ಕೂಡ ಈ ವಿದ್ಯಾರ್ಥಿ ವೇತನದ ಬಗ್ಗೆ ತಿಳಿಸಿರಿ. ಸ್ಕಾಲರ್ಶಿಪ್ನ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಶೇರ್ ಮಾಡಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment