ಸರ್ಕಾರದ ಯೋಜನೆ ಅಡಿಯಲ್ಲಿ 15 ಸಾವಿರ ಸಹಾಯಧನ ಹಾಗೂ 3 ಲಕ್ಷದವರೆಗೂ ಸಾಲ ಸಿಗುತ್ತದೆ, ಯಾವ ಯೋಜನೆ ಎಂದು ಇಲ್ಲಿ ತಿಳಿಯಿರಿ.

ಎಲ್ಲರಿಗೂ ನಮಸ್ಕಾರ…

ಈ ಒಂದು ಯೋಜನೆ ಅಡಿಯಲ್ಲಿ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ ಜಾಮೀನು ರಹಿತ ಬಡ್ಡಿ ಸಿಗುತ್ತದೆ. ಹಾಗೂ ಈ ಸಾಲಕ್ಕೆ ಕೇವಲ 5% ಬಡ್ಡಿ ದರದಲ್ಲಿ ಯೋಜನೆಯು ನೀಡುತ್ತದೆ. ಕೇಂದ್ರ ಸರ್ಕಾರವು ಭಾರತದಲ್ಲಿನ ಎಲ್ಲಾ ಜನರಿಗೂ ಕೂಡ ತಮ್ಮ ಕೆಲಸಗಳನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು, ಸಹಾಯಧನವನ್ನು ನೀಡಲು ಮುಂದಾಗಿದೆ. ಹಲವಾರು ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿದೆ. ಆ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಬಳಸಿ ಕೋಟ್ಯಾಂತರ ಜನರು ಫಲಾನುಭವಿಗಳಾಗಿದ್ದಾರೆ.

WhatsApp Group Join Now
Telegram Group Join Now

ಆದರೆ ಸ್ವಂತ ಉದ್ಯಮಗಳನ್ನು ಮಾಡುತ್ತಿರುವ ಉದ್ಯೋಗಿಗಳಿಗೆ ಹಾಗೂ ವೃತ್ತಿ ಉದ್ಯೋಗವನ್ನು ಈವರೆಗೂ ಕೂಡ ನಡೆಸಿಕೊಂಡು ಬಂದ ಉದ್ಯಮಿಗಳಿಗೆ ಈ ಯೋಜನೆಯಡಿಯಲ್ಲಿ 15 ಸಾವಿರ ಸಹಾಯಧನವನ್ನು ನೀಡಲಾಗುತ್ತದೆ. ಹಾಗೂ 3 ಲಕ್ಷದವರೆಗೂ ಕೂಡ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ. ನೀವೇನಾದರೂ ಸಹಾಯಧನವನ್ನು ಪಡೆದುಕೊಳ್ಳಬೇಕೆಂಬ ಉದ್ದೇಶದಲ್ಲಿದ್ದರೆ ಈ ಕೂಡಲೇ ಈ ಕೆಳಕಂಡ ಮಾಹಿತಿಯಂತೆ ಅರ್ಜಿಯನ್ನು ಪೂರೈಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಕೊನೆವರೆಗೂ ಓದಿರಿ.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ.

ಈ ಒಂದು ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಸಾಂಪ್ರದಾಯಿಕ ವೃತ್ತಿಗಳನ್ನು ಈವರೆಗೂ ಕೂಡ ಮುಂದುವರೆಸಿಕೊಂಡ ಬಂದ ಉದ್ಯಮಿಗಳಿಗೆ ಈ ಒಂದು ಯೋಜನೆ ಅಡಿಯಲ್ಲಿ ಸಹಾಯಧನವನ್ನು ನೀಡಲಾಗುತ್ತದೆ. ಹಾಗೂ ಸಾಲದ ಸೌಲಭ್ಯವು ಕೂಡ ಲಭ್ಯವಿದೆ. ಹಾಗಾಗಿ 2023ನೇ ಸಾಲಿನಲ್ಲಿ ಸಾಂಪ್ರದಾಯಿಕ ಉದ್ಯಮವನ್ನು ಅಳವಡಿಸಿಕೊಂಡ ಉದ್ಯೋಗಿಗಳಿಗಾಗಿ ಈ ಒಂದು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಲ್ಲೇ ಹಲವಾರು ಸೌಲಭ್ಯಗಳು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಿಗಲಿದೆ. ನೀವು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಬೇಕಾ ಹಾಗಾದ್ರೆ ಈ ಕೆಳಕಂಡ ರೀತಿಯಲ್ಲಿ ಅರ್ಜಿಯನ್ನು ಪೂರೈಸಿ ನೀವು ಕೂಡ ಈ ಯೋಜನೆಯ ಫಲಾನುಭವಿಗಳಾಗಿರಿ.

ಈ ಒಂದು ಯೋಜನೆಯು ಕೌಶಲ್ಯ ಆಧರಿತ ಉದ್ಯಮಿಗಳಿಗೆ ಸಲ್ಲುತ್ತದೆ. ಅವರು ಮಾತ್ರ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಫಲಾನುಭವಿಗಳಾಗಬಹುದು. ನೀವು ಕೂಡ ಸಾಂಪ್ರದಾಯಿಕ ವೃತ್ತಿಗಳನ್ನು ಅಳವಡಿಸಿಕೊಂಡು ಈವರೆಗೂ ಕೆಲಸವನ್ನು ಮುಂದುವರಿಸಿಕೊಂಡು ಬರುತ್ತಿದ್ದೀರ ಹಾಗಾದರೆ ಏಕೆ ತಡ ಮಾಡುತ್ತಿದ್ದೀರಿ ಈ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆದುಕೊಳ್ಳಿ ಹಾಗೂ ಸಾಲವನ್ನು ಕೂಡ ಕಡಿಮೆ ಬಡ್ಡಿ ದರದಲ್ಲಿ ಪಡೆಯಿರಿ.

ಇವರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯ !

ಈ ಒಂದು ಯೋಜನೆ ಗೆ ನೀವು ಕೂಡ ಅರ್ಜಿಯನ್ನು ಸಲ್ಲಿಸಬೇಕೆಂದು ಬಯಸಿದರೆ ನೀವು ತಮ್ಮದೇ ಆದ ಹಳೆಯ ಸಂಪ್ರದಾಯಿಕ ಉದ್ಯೋಗವನ್ನು ಮಾಡುತ್ತಿರಬೇಕು ಅಂದರೆ ಕಮ್ಮಾರರು, ಶಸ್ತ್ರ ತಯಾರಿಸುವವರು, ಬಟ್ಟೆ, ಚಾಪೆಗಳನ್ನು ತಯಾರಿಸುವವರು ಹಾಗೂ ಪೊರಕೆಯನ್ನು ಮಾಡುವವರು, ಕೆಲವರು ಗೊಂಬೆಗಳ ಆಟಿಕೆಗಳನ್ನು ಕೂಡ ಮಾಡುತ್ತಾರೆ ಅಂತವರಿಗೂ ಕೂಡ ಈ ಯೋಜನೆ ಸಲ್ಲುತ್ತದೆ. ಮತ್ತು ಹೂಮಾಲೆಗಳನ್ನು ಮಾಡುವವರು ಹಾಗೂ ಅಗರಬತ್ತಿಗಳನ್ನು ತಯಾರಿಸುವವರು ಮತ್ತು ಕುಂಬಾರರು, ಮೀನು ಬಲೆಗಳನ್ನು ಮಾಡುವವರು,

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಹಾಗೂ ಶಿಲ್ಪಿಗಳು ಮೂರ್ತಿಗಳನ್ನು ಕೆತ್ತುವಂತಹ ಶಿಲ್ಪಿಗಳು, ಮತ್ತು ದೋಬಿಗಳು, ಹಾಗೂ ಬಟ್ಟೆ ಹೊಲೆಯುವವರು, ಈ ಸಾಂಪ್ರದಾಯಿಕ ಕೆಲಸಗಳನ್ನು ಕೂಡ ಮಾಡುತ್ತಿರುವ ಎಲ್ಲಾ ಉದ್ಯಮಿಗಳಿಗೆ ಸರ್ಕಾರದಿಂದ 15,000 ಸಹಾಯಧನ ಸಿಗಲಿದೆ.15,000 ಸಹಾಯಧನವನ್ನು ಪಡೆದುಕೊಂಡು ಇನ್ನೂ ಹೆಚ್ಚಿನ ಹಣವನ್ನು ಪಡೆದುಕೊಳ್ಳಬೇಕೆಂಬ ಉದ್ದೇಶ ಇದ್ದರೆ ನೀವು ಸಾಲವನ್ನು ಕೂಡ ಕಡಿಮೆ ಬಡ್ಡಿ ದರದಲ್ಲಿ ಪಡೆಯಬಹುದು. ಮೂರು ಲಕ್ಷ ಸಾಲ ಈ ಯೋಜನೆ ಅಡಿಯಲ್ಲಿ ಸಿಗಲಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಯನ್ನು ತಿಳಿಯಿರಿ.

  1. ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಾಂಪ್ರದಾಯಿಕ ಉದ್ಯೋಗವನ್ನು ಮಾಡುತ್ತಿರಬೇಕು ಅಂದರೆ ಈ ಮೇಲ್ಕಂಡ ಕೆಲಸಗಳನ್ನು ದಿನನಿತ್ಯ ಜೀವನದಲ್ಲಿ ತೊಡಗಿಸಿಕೊಳ್ಳಬೇಕು. ಇಂಥವರು ಮಾತ್ರ ಅರ್ಹರಿರುತ್ತಾರೆ ಅರ್ಜಿ ಸಲ್ಲಿಸಲು.
  2. ಅರ್ಜಿ ಸಲ್ಲಿಸುವ ಅಭ್ಯರ್ಥಿಯು 18 ವರ್ಷ ಮೇಲ್ಪಟ್ಟ ವಯಸ್ಸುಳ್ಳ ವ್ಯಕ್ತಿಗಳಾಗಿರಬೇಕು.
  3. ಕಳೆದ ಐದು ವರ್ಷಗಳಲ್ಲಿ ಯಾವುದೇ ರೀತಿಯ ಸರ್ಕಾರ ಯೋಜನೆ ಗಳಲ್ಲಿ ಸಾಲವನ್ನು ಪಡೆದಿರಬಾರದು ಅಂತಹ ಅರ್ಹ ಅಭ್ಯರ್ಥಿಗಳನ್ನು ಕೇಂದ್ರ ಸರ್ಕಾರವು ಪರಿಶೀಲಿ ನಿಮಗೆ ಸಾಲವನ್ನು ನೀಡಲು ಮುಂದಾಗುತ್ತದೆ ನಂತರ ನಿಮಗೆ ಯಾವುದೇ ರೀತಿಯ ತೊಂದರೆ ಆಗದೆ ಸಾಲವು ತಕ್ಷಣಕ್ಕೆ ಸಿಗಲಿದೆ.

ಈ ದಾಖಲಾತಿಗಳನ್ನು ಹೊಂದಿರಬೇಕು.

  • ಅಭ್ಯರ್ಥಿಯ ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಸಾಂಪ್ರದಾಯಿಕ ವೃತ್ತಿಯ ದಾಖಲಾತಿ
  • ಆದಾಯ ಪ್ರಮಾಣ ಪತ್ರ
  • ಅಭ್ಯರ್ಥಿಯ ಭಾವಚಿತ್ರ
  • ಬ್ಯಾಂಕ್ ಖಾತೆ

ಈ ಯೋಜನೆಯ ಪ್ರಯೋಜನಗಳನ್ನು ತಿಳಿಯಿರಿ.

ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅಭ್ಯರ್ಥಿಗೆ ಯಾವುದೇ ರೀತಿಯ ಜಮೀನು ರಹಿತ ಸಾಲವನ್ನು ನೀಡುತ್ತದೆ. ಈ ಯೋಜನೆ ಅಡಿಯಲ್ಲಿ ಮೊದಲನೇ ಹಂತವಾಗಿ ಒಂದು ಲಕ್ಷ ಸಾಲವನ್ನು ನೀಡುತ್ತದೆ ಆ ಒಂದು ಲಕ್ಷ ಸಾಲವನ್ನು 18 ತಿಂಗಳ ಒಳಗೆ ನೀವು ಹಿಂ ಪಾವತಿಸಬೇಕು ಅನಂತನ ನಿಮಗೆ ಹೆಚ್ಚಿನ ಹಣ ದೊರೆಯುತ್ತಾ ಹೋಗುತ್ತದೆ. ಮತ್ತು 5% ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ.

ಎರಡನೇ ಹಂತದಲ್ಲಿ ನೀವು ಒಂದು ಲಕ್ಷವನ್ನು ಇಂಪಾವತಿಸಿದ ನಂತರ ನಿಮಗೆ ಎರಡು ಲಕ್ಷ ಸಾಲ ಸಿಗಲಿದೆ ಈ ಸಾಲವನ್ನು 5% ಬಡ್ಡಿ ದರದಲ್ಲಿ 30 ತಿಂಗಳ ಒಳಗಿನ ಕಾಲಾವಕಾಶವನ್ನು ನೀಡುತ್ತದೆ ಸರ್ಕಾರ ಇಂಪಾವತಿಸಲು. ಬರೋಬ್ಬರಿ ಎರಡು ವರ್ಷಗಳ ಕಾಲ ನಿಮಗೆ ಕಾಲಾವಕಾಶ ಸಿಗಲಿದೆ 2 ಲಕ್ಷ ಸಾಲ ಪಡೆದರೆ.

ನೀವು ಮಾಡುತ್ತಿರುವ ಸಂಪ್ರದಾಯಿಕ ವೃತ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲು ನಿಮಗೆ 15,000 ಹಣವನ್ನು ಸಹಾಯಧನವಾಗಿ ಉಪಕರಣಗಳನ್ನು ಖರೀದಿಸಲು ಸರ್ಕಾರವೇ ಈ ಯೋಜನೆ ಸಲುವಾಗಿ ನೀಡುತ್ತದೆ. ನೀವು ಕೂಡ ಈ ಯೋಜನೆ ಅಡಿಯಲ್ಲಿ 15 ಸಾವಿರ ಸಹಾಯಧನವನ್ನು ಕೂಡ ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಈ ಎಲ್ಲಾ ಪ್ರಯೋಜನಗಳ ಸೌಲಭ್ಯವನ್ನು ನೀವು ಕೂಡ ಪಡೆದುಕೊಳ್ಳಿರಿ.

ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಯು ಯಾವ ಸಾಂಪ್ರದಾಯಿಕ ಕೆಲಸವನ್ನು ಆಯ್ಕೆ ಮಾಡಿಕೊಂಡು ಕೌಶಲ್ಯಅಭಿವೃದ್ಧಿಯ ತರಬೇತಿಯನ್ನು ಕೂಡ ಸರ್ಕಾರವೇ ನೀಡುತ್ತದೆ ಹಾಗೂ ಆತರ ಭೇಟಿ ಮುಗಿದ ನಂತರ ನಿಮಗೆ 500 ಹಣವನ್ನು ನೀಡಲಾಗುತ್ತದೆ ಮತ್ತು ಸಾಂಪ್ರದಾಯಿಕ ಉದ್ಯೋಗದ ಪ್ರಮಾಣ ಪತ್ರವನ್ನು ಕೂಡ ವಿತರಿಸಲಾಗುತ್ತದೆ. ನೀವು ಮಾಡುವ ಉದ್ಯೋಗದ ಕೆಲಸವನ್ನು ಜಾಹೀರಾತು ಮಾಡಲು ಸರ್ಕಾರವೇ ಮಾರ್ಕೆಟಿಂಗ್ ಗಳಂತಹ ಕೆಲಸಗಳನ್ನು ಮಾಡಿಕೊಡಲಿದೆ. ಇಂತಹ ಎಲ್ಲ ಸೌಲಭ್ಯಗಳು ಕೂಡ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಿಗುತ್ತದೆ ನೀವು ಕೂಡ ಈ ಕೆಳಕಂಡ ರೀತಿಯಲ್ಲಿ ಅರ್ಜಿಯನ್ನು ಪೂರೈಸಿ ಯೋಜನೆಯ ಫಲಾನುಭವಿಗಳಾಗಿರಿ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ.

ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದು ಬಯಸಿದ್ದರೆ ನೀವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅದಕ್ಕಾಗಿ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ಕಿಸಿರಿ.

https://pmvishwakarma.gov.in/

ವೆಬ್ಸೈಟ್ಗೆ ಭೇಟಿ ನೀಡಿದ ನಂತರ ನಿಮ್ಮ ಎಲ್ಲಾ ದಾಖಲಾತಿಗಳನ್ನು ಪೂರೈಸಿರಿ ಎಂದು ಕೇಳಲಾಗುತ್ತದೆ ಆ ಎಲ್ಲಾ ದಾಖಲಾತಿಗಳನ್ನು ಕೂಡ ನೀವು ಸಬ್ಮಿಟ್ ಮಾಡಬೇಕು. ನಂತರ ನಿಮಗೆ ಅರ್ಜಿ ಪೂರೈಕೆಯಾಗುತ್ತದೆ. ನಿಮಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಗೊತ್ತಾಗದಿದ್ದರೆ ನೀವು ಸಿಎಸ್ಸಿ ಸೆಂಟರ್ ಗಳಲ್ಲಿ ನಿಮ್ಮ ಎಲ್ಲಾ ದಾಖಲಾತಿಗಳನ್ನೆಲ್ಲ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಈ ರೀತಿ ಆನ್ಲೈನ್ ಮೂಲಕ ಹಾಗೂ ನಿಮ್ಮ ಹತ್ತಿರದ ಸಿಎಸ್‌ಸಿ ಸೆಂಟರ್ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 

ನಿಮ್ಮ ಸ್ನೇಹಿತರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಯೋಜನೆಯ ಬಗ್ಗೆ ತಿಳಿಸಿರಿ ಹಾಗು ಈ ಯೋಜನೆ ಅಡಿಯಲ್ಲಿ 15,000 ಸಹಾಯಧನವನ್ನು ನೀಡಲಾಗುತ್ತದೆ ಎಂದು ಕೂಡ ಹೇಳಿರಿ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷದವರೆಗೆ ಸಾಲ ಸಿಗುತ್ತದೆ ಎಂದು ಕೂಡ ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment