ಡಿಸೆಂಬರ್ ತಿಂಗಳಿನಲ್ಲೇ ಜಾರಿಯಾಗಲಿದೆ ಯುವನಿಧಿ ಯೋಜನೆ ! ಡಿಪ್ಲೋಮಾ ಹಾಗೂ ಪಧವೀದಾರರು ಈ ದಾಖಲಾತಿಗಳನ್ನು ರೆಡಿ ಇಟ್ಕೊಂಡ್ರೆ ನೀವೇ ಮೊದಲು ಅರ್ಜಿ ಸಲ್ಲಿಸಬಹುದು.

ಎಲ್ಲರಿಗೂ ನಮಸ್ಕಾರ…

ಕಾಂಗ್ರೆಸ್ ಪಕ್ಷವು ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಆದರೆ ಉಳಿದ ಒಂದು ಯೋಜನೆಯನ್ನು ಈ ತಿಂಗಳಿನಲ್ಲೇ ಜಾರಿಗೊಳಿಸಲು ಮುಂದಾಗಿದೆ. ಯಾವ ಯೋಜನೆ ಎಂದರೆ ಅದುವೇ ಯುವನಿಧಿ ಯೋಜನೆ, ಈ ಯೋಜನೆ ಅಡಿಯಲ್ಲಿ ಡಿಪ್ಲೋಮಾ ಹಾಗೂ ಡಿಗ್ರಿ ಪದವೀಧರರಿಗೆ ಪ್ರತಿ ತಿಂಗಳು 3000 ಹಾಗೂ 1500 ಹಣವನ್ನು ಜಮಾ ಮಾಡುವುದಾಗಿ ಈ ಯೋಜನೆಯ ನಿರ್ಧಾರ. ಆದರೆ ಈ ಯೋಜನೆಯು ಈ ತಿಂಗಳಿನಲ್ಲಿ ಅಥವಾ ಜನವರಿ ತಿಂಗಳಲ್ಲಿ ಜಾರಿಯಾಗಲಿದೆ, ಎಂಬ ಸೂಚನೆಯನ್ನು ಸಿಎಂ ಸಿದ್ದರಾಮಯ್ಯನವರು ನೀಡಿದ್ದಾರೆ.

WhatsApp Group Join Now
Telegram Group Join Now

ಜನವರಿ ತಿಂಗಳಲ್ಲಿ ಈ ಐದು ಗ್ಯಾರಂಟಿ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವದಲ್ಲಿ ಇರುತ್ತವೆ. ಹಾಗಾಗಿ ನೀವು ಕೂಡ ಡಿಪ್ಲೋಮಾ ಹಾಗೂ ಡಿಗ್ರಿ ಪದವಿಯನ್ನು ಈ 2023ನೇ ಸಾಲಿನಲ್ಲಿ ಶಿಕ್ಷಣವನ್ನು ಪಡೆದು ಮುಗಿಸಿದರೆ ಅಂತಹ ಅರ್ಹ ವಿದ್ಯಾರ್ಥಿಗಳಿಗೆ ಈ ಯೋಜನೆ ಕಡೆಯಿಂದ ಪ್ರತಿ ತಿಂಗಳು ಹಣ ಜಮಾ ಆಗಲಿದೆ. ನೀವು ಕೂಡ ಈ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಬೇಕಾ ? ಹಾಗಾದ್ರೆ ಈ ಕೆಳಕಂಡ ಲೇಖನದಂತೆ ಈ ದಾಖಲಾತಿಗಳನ್ನು ರೆಡಿ ಇಟ್ಕೊಂಡಿರಿ. ಯಾಕೆಂದರೆ ಅರ್ಜಿಯ ಪ್ರಕ್ರಿಯಾಯ ನೊಂದಣಿ ಆರಂಭವಾದ ಬಳಿಕ ನೀವೇ ಮೊದಲು ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಫಲಾನುಭವಿಗಳಾಗಬಹುದು.

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ ರವರು ಶನಿವಾರದಂದು ಯುವನಿಧಿ ಯೋಜನೆಯ ಡೇಟ್ ಅನ್ನು ಫಿಕ್ಸ್ ಮಾಡಿದ್ದಾರೆ ಅಂದರೆ ಯುವನಿಧಿ ಯೋಜನೆಯು ಡಿಸೆಂಬರ್ 21ನೇ ದಿನಾಂಕದಿಂದ ನೋಂದಣಿಯ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಈ ಒಂದು ಯುವನಿಧಿ ಯೋಜನೆ ಅಡಿಯಲ್ಲಿ 5 ಲಕ್ಷ ಯುವಕರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ ಎಂದು ಸಚಿವರು ಹೇಳಿದ್ದಾರೆ. ಒಟ್ಟಾರೆ ಹೇಳುವುದಾದರೆ ಮುಂದಿನ ತಿಂಗಳಿನ ಜನವರಿಯಲ್ಲಿ ಈ ಯುವನಿಧಿ ಯೋಜನೆಯು ಎಲ್ಲಾ ಫಲಾನುಭವಿಗಳಿಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ಡಿಪ್ಲೋಮಾ ಹಾಗೂ ಪದವಿದಾರರು ಎರಡು ವರ್ಷಗಳ ಕಾಲ ಈ ಯೋಜನೆ ಅಡಿಯಲ್ಲಿ ಹಣವನ್ನು ಪಡೆಯಬಹುದು.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಅಥವಾ ನಿಮಗೆ ಎರಡು ವರ್ಷಗಳ ಒಳಗೆ ನೀವು ಓದಿದ ಶಿಕ್ಷಣಕ್ಕೆ ಮೆಚ್ಚುವಂತಹ ಉದ್ಯೋಗ ಸಿಕ್ಕರೆ ಆಗಿನ ಸಂದರ್ಭದಲ್ಲಿ ಈ ಯೋಜನೆಯು ಉದ್ಯೋಗ ಸಿಕ್ಕ ಬಳಿಕವೂ ಹಣ ಜಮಾ ಮಾಡುವುದಿಲ್ಲ. ಉದ್ಯೋಗ ಸಿಗುವವರೆಗೂ ಕೂಡ ಸರ್ಕಾರ ನಿಮಗೆ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುತ್ತದೆ. ಹಾಗಾಗಿ ಎಲ್ಲಾ ಪದವಿದಾರರು ಹಾಗೂ ಡಿಪ್ಲೋಮೋ ವಿದ್ಯಾರ್ಥಿಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಮುಖಾಂತರ 3000 ಹಣ ಹಾಗೂ 1500 ಹಣವನ್ನು ಪಡೆದುಕೊಳ್ಳಿರಿ. ಸರ್ಕಾರವು ಈಗಾಗಲೇ ಯುವನಿಧಿ ಯೋಜನೆಯ ಸಲುವಾಗಿ ಹಲವಾರು ತಯಾರನ್ನು ನಡೆಸುತ್ತಿದೆ ಆ ತಯಾರಿಯೂ ಮುಂದಿನ ಫಲಾನುಭವಿಗಳಿಗೆ ಪ್ರಯೋಜನವಾಗಬೇಕೆಂಬ ಉದ್ದೇಶದಲ್ಲಿದೆ.

ಈ ಯೋಜನೆಯ ಉದ್ದೇಶವೇನು ಎಂದರೆ ಯಾವ ವಿದ್ಯಾರ್ಥಿಗಳಿಗೆ ಉದ್ಯೋಗವು ಸಿಗದಂತಹ ಸಮಯದಲ್ಲಿ ಈ ಯೋಜನೆಯಿಂದ ಅವರಿಗೆ ತಲುಪಬೇಕಾದಂತಹ ಹಣವು ತಲುಪಿದರೆ ಅವರಿಗೂ ಕೂಡ ಸಮಾಧಾನಕರವಾಗಿ ಮುಂದಿನ ಉದ್ಯೋಗವನ್ನು ಹುಡುಕಲು ಪ್ರಾರಂಭ ಮಾಡುತ್ತಾರೆ ಆ ಪ್ರಾರಂಭದ ಬಳಿಕ ಅವರಿಗೆ ಒಂದೊಳ್ಳೆ ಉತ್ತಮವಾದ ಉದ್ಯೋಗ ಸಿಗಬೇಕೆಂಬ ಉದ್ದೇಶದಲ್ಲಿ ಈ ಯೋಜನೆಯು ಜಾರಿಯಾಗಿದೆ. ನೀವು ಕೂಡ ಈ ಯೋಜನೆಗೆ ಅರ್ಹರೆಂದು ತಿಳಿದುಕೊಳ್ಳಬೇಕಾ ಹಾಗಾದರೆ ಈ ಕೆಳಕಂಡ ದಾಖಲಾತಿಗಳನ್ನು ಪರಿಶೀಲಿಸಿಕೊಳ್ಳಿರಿ ನಿಮ್ಮ ಹತ್ತಿರ ಇದೆಯೋ ಅಥವಾ ಇಲ್ಲವೋ ಎಂದು.

  • ಅಭ್ಯರ್ಥಿಯಾದ ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ
  • ಇಮೇಲ್ ಐಡಿ
  • ಮೊಬೈಲ್ ಸಂಖ್ಯೆ
  • ಅಭ್ಯರ್ಥಿಯ ಭಾವಚಿತ್ರ
  • ಶಿಕ್ಷಣ ಸಂಸ್ಥೆಗಳಿಂದ ಪಡೆದ ಅಂಕಪಟ್ಟಿಗಳು.
  • ಡಿಪ್ಲೋಮಾ ಹಾಗೂ ಪದವಿದಾರರ ಕೊನೆಯ ವರ್ಷದ ಅಂಕಪಟ್ಟಿ.

ಈ ಮೇಲ್ಕಂಡ ದಾಖಲಾತಿಗಳನ್ನು ನೀವು ಕೂಡ ಹೊಂದಿದ್ದರೆ ನೀವು ಈ ಯೋಜನೆಗೆ ಅರ್ಹರು ಎಂದರ್ಥ ಹಾಗಾದ್ರೆ ಏಕೆ ತಡ ಮಾಡುತ್ತಿದ್ದೀರಿ ಈ ದಾಖಲಾತಿಗಳನ್ನೆಲ್ಲ ರೆಡಿ ಇಟ್ಕೊಂಡಿರಿ. ನೀವೇ ಮೊದಲು ಈ ಯೋಜನೆಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಉಪಯೋಗಿಸಿಕೊಳ್ಳಿರಿ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಖಾತೆಗೆ ಹಣವು ಬಂದು ವರ್ಗಾವಣೆ ಆಗುತ್ತದೆ. ಈ ಯೋಜನೆಯ ಹಣದಿಂದ ಪ್ರತಿ ತಿಂಗಳು ನಿಮ್ಮ ಖರ್ಚಿನ ಹಣವನ್ನು ನೀವೇ ನೋಡಿಕೊಳ್ಳಬಹುದು ನಿಮ್ಮ ಶಿಕ್ಷಣಕ್ಕೆ ಒಂದು ಒಳ್ಳೆಯ ಉದ್ಯೋಗ ಸಿಗುವವರೆಗೂ ಕೂಡ ಈ ಯೋಜನೆಯು ನಿಮಗೆ ಸಲ್ಲುತ್ತಲೇ ಹೋಗುತ್ತದೆ ಆದರೆ ಶಿಕ್ಷಣದ ಉದ್ಯೋಗ ಸಿಕ್ಕಿದ ಬಳಿಕ ಈ ಯೋಜನೆಯು ನಿಮಗೆ ಸಲ್ಲುವುದಿಲ್ಲ ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಳ್ಳಿ. ಜನವರಿ ತಿಂಗಳಿನಲ್ಲಿ ಜಾರಿಯಾಗಲಿದೆ ಯುವನಿಧಿ ಯೋಜನೆ ಈ ಎಲ್ಲಾ ದಾಖಲಾತಿಗಳನ್ನು ರೆಡಿ ಇಟ್ಟುಕೊಳ್ಳಿ ನೀವೇ ಮೊದಲು ಯೋಜನೆಯ ಫಲಾನುಭವಿಗಳಾಗುವಿರಿ.

ನಿಮ್ಮ ಸ್ನೇಹಿತರು ಕೂಡ ಪದವಿ ಹಾಗೂ ಡಿಪ್ಲೋಮೋ ಶಿಕ್ಷಣವನ್ನು ಈ ವರ್ಷದಲ್ಲೇ ಮುಗಿಸಿದ್ದಾರ ? ಹಾಗಾದ್ರೆ ಅವರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಈ ಯೋಜನೆಯ ಹೆಚ್ಚಿನ ವಿವರವನ್ನು ತಿಳಿಸಿರಿ. ಮುಂದಿನ ತಿಂಗಳಿನಿಂದಲೇ ಈ ಯೋಜನೆ ಜಾರಿಯಾಗಲಿದೆ ಎಂಬ ಮಾಹಿತಿಯು ಕೂಡ ಹೇಳಿರಿ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment