ಹಾಸನಾಂಬ ದೇವಿಯ ದರ್ಶನ ಪಡೆಯಲು ಹರಿದು ಬಂದ ಜನಸಾಗರ ! ಅನಾವರಣದಲ್ಲಿ ಅವ್ಯವಸ್ಥೆಗಳ ಪರಿಸ್ಥಿತಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಹಾಸನಾಂಬ ದೇವಿಯ ದರ್ಶನ ಪಡೆಯಲು ದಿನದಿಂದ ದಿನಕ್ಕೆ ಜನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲಾ ಆಡಳಿತದ ಪ್ರಕಾರ 10 ಲಕ್ಷಕ್ಕೂ ಹೆಚ್ಚು ಜನಸಾಗರ ಈ ಬಾರಿ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಬರುವುದು ಬಹುತೇಕವಾಗಿ ಖಚಿತವಾಗಿದೆ. ದಿನದಿಂದ ದಿನಕ್ಕೆ ಹೆಚ್ಚು ತಲೆ ಇದೆ ಭಕ್ತರ ಸಂಖ್ಯೆ. ಆದರೆ ಈ ಬಾರಿ ದರ್ಶನಕ್ಕೆ ಬರುವ ಭಕ್ತರ ಅನಾವರಣದಲ್ಲಿನ ಅವ್ಯವಸ್ಥೆಗಳ ಸ್ಥಿತಿ ಕಂಡು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. 

WhatsApp Group Join Now
Telegram Group Join Now

ಭಕ್ತರಸಂಖ್ಯೆ ಹೆಚ್ಚಾದಂತೆ ಅನಾವರಣದಲ್ಲಿನ ಸ್ಥಿತಿ ಹೆಚ್ಚಾಗುತ್ತಿದೆ ದೇವಾಲಯದ ಮೂಲಸೌಕರ್ಯ ಸೇರಿದಂತೆ ಸರದಿ ಸಾಲಿನಲ್ಲಿ ಬರುವ ಭಕ್ತಾದಿಗಳು ಗಂಟೆಗಟ್ಟಲೆ ನಿಂತು ಕಾದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಮರ್ಪಕ ನಿರ್ವಹಣೆ ಮಾಡಲು ತೊಡಕು ಉಂಟಾಗುತ್ತಿದೆ. ಆಗಲೋ ಈಗಲೋ ಬರುವ ಮಳೆಯಿಂದಲೂ ಕೂಡ ತೊಂದರೆ ಉಂಟಾಗುತ್ತದೆ.

ಹಾಸನಾಂಬೆ ದೇವಿ ದರ್ಶನಕ್ಕೆ ಗಣ್ಯರ ವಿಶೇಷ ದರ್ಶನವಿದ್ದು, ದಿನದಲ್ಲಿ 10 ರಿಂದ 20 ಗಣ್ಯರು ದರ್ಶನಕ್ಕೆ ಬರುತ್ತಿದ್ದಾರೆ ಎನ್ನಲಾಗುತ್ತಿದೆ. ಗಣ್ಯರು ಬಂದು ಸಾಮಾನ್ಯ ಜನರಿಗೆ ಪ್ರವೇಶವಿರುವುದಿಲ್ಲ. ಸಾರ್ವಜನಿಕರು ದೇವಿಯ ದರ್ಶನ ಪಡೆಯಲು ಹೊರಸಹಸ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಮೂಲಸೌಕರ್ಯವಿಲ್ಲ ಮಳೆಯ ಅಭಾವದಿಂದಲೂ ಕೂಡ ತೊಂದರೆ ಇದೆ ದರ್ಶನ ಪಡೆಯಲು. ಬೆಳಿಗ್ಗೆ ಬಂದವರು ಸಂಜೆ ದರ್ಶನ ಪಡೆಯ ಬೇಕಾಗುವ ಪರಿಸ್ಥಿತಿ ಬಂದಿದೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಹಾಸನಾಂಬೆ ದೇವಿ ದರ್ಶನ ಪಡೆಯಲು ಬರುತ್ತಿದ್ದಾರೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ದರ್ಶನ ಪಡೆಯಲು ಬಂದರೂ ಕೂಡ ಇಲ್ಲಿನ ಜನಸಂಖ್ಯೆಗಳ ರಾಶಿ ಮತ್ತು ಅನಾವರಣದ ತೊಂದರೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ಮ್ಯಾಟ್ ಗಳನ್ನು ಹಾಕಲಾಗಿತ್ತು,ಆದರೆ ಮಳೆಯಿಂದಾಗಿ ಮ್ಯಾಟ್ ಗಳು ಕೂಡ ಒದ್ದೆ ಆಗಿದೆ ಭಕ್ತಾದಿಗಳಿಗೆ ಸರತಿ ಸಾಲಿನಲ್ಲಿ ಹೋಗಲು ಕೂಡ ತೊಂದರೆಯಾಗುತ್ತಿದೆ. ಇದರಿಂದಾಗಿ ಮತ್ತು ಮ್ಯಾಟ್ ಗಳ ಮೇಲೆ ಮೊಸರನ್ನು ಚೆಲ್ಲಿದ್ದಾರೆ ಅದರಿಂದ ದುರ್ವಾಸನೆ ಕೂಡ ಬರುತ್ತಿದೆ ಇಂತಹ ಸಮಸ್ಯೆಗಳಲ್ಲಿ ಹೋಗಲು ಜನಗಳಿಗೆ ಕಿರಿಕಿರಿ ಉಂಟಾಗುತ್ತಿದೆ.

ಹಾಸನಾಂಬೆ ದರ್ಶನ ಪಡೆಯಲು ಸಮರ್ಪಕವಾಗಿ ಜನಗಳಿಗೆ ಬೇಕಾಗಿರುವಂತಹ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ದೇವಿಯ ದರ್ಶನ ಪಡೆಯಲು 9 ಗಂಟೆಗೆ ಬಂದಿದ್ದು, ಆದರೆ ನಾವು ಸಂಜೆ 5:00ಗೆ ದರ್ಶನ ಮುಗಿಸಿ ಈಚೆ ಬರುತ್ತಿದ್ದೇನೆ ಎಂದು ಭಕ್ತಾದಿಗಳು ದುಃಖವನ್ನು ಹೊರ ಹಾಕಿದ್ದಾರೆ.ಹಾಸನಾಂಬೆ ದೇವಿಯ ದರ್ಶನ ಪಡೆಯಲು ಗರ್ಭಗುಡಿಯಲ್ಲಿ ಕೇವಲ ಒಂದು ಎರಡು ಸೆಕೆಂಡ್ ಅವಕಾಶವನ್ನು ಕಲ್ಪಿಸಿ ಕೊಡುತ್ತಿದ್ದಾರೆ ಆದರೆ ಗಣ್ಯರಿಗೆ ಗರ್ಭಗುಡಿಯಲ್ಲಿ ದೇವಿ ದರ್ಶನ ಪಡೆಯಲು ಹೆಚ್ಚು ಸಮಯವನ್ನು ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ತಮ್ಮ ನೋವನ್ನು ಹೊರಹಾಕಿದ್ದಾರೆ.

ಭಕ್ತಾದಿಗಳಿಗೆ ಸರದಿ ಸಾಲಲ್ಲಿ ನಿಲ್ಲಲು ಸಹ ಯಾವುದೇ ರೀತಿಯ ಸೌಕರ್ಯವನ್ನು ಒದಗಿಸಿಲ್ಲ. ಗಂಟೆ ಗಂಟೆ ಗಳಕಾಲ ಸರದಿ ಸಾಲಿನಲ್ಲಿ ನಿಲ್ಲುವುದರಿಂದ ಕೆಲವು ಕಾಯಿಲೆಗಳು ಇರುವವರೆಗೂ ಕೂಡ ತೊಂದರೆಯಾಗುತ್ತಿದೆ. ಇನ್ನು ಕೆಲವರು ಊಟ ಇಲ್ಲದೆ ತಲೆ ತಿರುಗಿ ಬಿದ್ದಿದ್ದಾರೆ. ಹಸಿವಿನಿಂದ ನಿಲ್ಲಲು ಆಗುತ್ತಿಲ್ಲ ಎಷ್ಟೋ ಜನ ಕುಸಿದು ಬಿದ್ದಿದ್ದಾರೆ ಎಂದು ವಯಸ್ಸಾದವರು ಹೇಳುತ್ತಿದ್ದಾರೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ದೇವಿಯ ದರ್ಶನ ಪಡೆಯಲು ಗಂಟೆ ಸರದಿ ಸಾಲಿನಲ್ಲಿ ನಿಲ್ಲಬೇಕು. ಆದರೆ ವಿಶೇಷವಾಗಿ ಸರದಿ ಸಾಲಿನಲ್ಲಿ ಕುರ್ಚಿಗಳನ್ನು ನೀಡಿಲ್ಲ ವಯಸ್ಸಾದವರಿಗಾದರೂ ಕುರ್ಚಿಗಳನ್ನು ನೀಡಬೇಕಿತ್ತು. ಕಾಯಿಲೆ ಇರುವವರೆಗೂ ಅವರದೇ ರೀತಿಯಲ್ಲಿ ಸೌಕರ್ಯವನ್ನು ಒದಗಿಸಬೇಕಾಗಿತ್ತು ಆದರೆ ಯಾವುದೇ ಸೌಕರ್ಯವಿಲ್ಲದೆ ಜನಗಳು ನರಳಾಡಿ ದೇವಿಯ ದರ್ಶನ ಪಡೆಯಬೇಕಾಗುತ್ತದೆ. ವಯಸ್ಸಾದವರು ದುಃಖದಿಂದ ಇದನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಸನಾಂಬೆ ದೇವಿ ದರ್ಶನ ಕೇವಲ 12 ದಿನಗಳು ಮಾತ್ರ ಎಂದು ಹಾಸನಾಂಬ ದರ್ಶನೋತ್ಸವಕ್ಕೆ ಜಿಲ್ಲಾಡಳಿತವು ವ್ಯವಸ್ಥೆಯನ್ನು ಕಲ್ಪಿಸಿದೆ.

ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment