ನೀವೇನಾದರೂ SSLC ಅಂಕಪಟ್ಟಿಯನ್ನು ತಿದ್ದುಪಡಿ ಮಾಡಬೇಕು ಎಂದುಕೊಂಡಿದ್ದೀರಾ ? ಹಾಗಾದ್ರೆ ಈ ರೀತಿ ತಿದ್ದುಪಡಿ ಮಾಡಿ.

ಎಲ್ಲರಿಗೂ ನಮಸ್ಕಾರ..

ವಿದ್ಯಾರ್ಥಿಗಳು ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿಯೇ ಮುಂದಿನ ಶಿಕ್ಷಣಕ್ಕೆ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿರುತ್ತಾರೆ. ಆದರೆ ತಮ್ಮ SSLC ಅಂಕದ ಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ತಿದ್ದುಪಡಿ ಮಾಡಬೇಕೆಂದು ಅಂದುಕೊಂಡಿರುತ್ತಾರೆ, ಹಾಗೆ ಎಲ್ಲಿಯೂ ಕೂಡ ತಿದ್ದುಪಡಿ ಮಾಡಲು ಅವಕಾಶ ಸಿಕ್ಕಿರುವುದಿಲ್ಲ. ಆದರೆ ಇನ್ನು ಮುಂದೆ ಹಾಗಲ್ಲ ನಿಮ್ಮ ಶಾಲಾ ಹಂತದಲ್ಲೇ ಅಂಕಪಟ್ಟಿಯನ್ನು ತಿದ್ದುಪಡಿಗೆ ಹಾಕಬಹುದು. ಯಾವ ರೀತಿ ಅಂಕಪಟ್ಟಿಯನ್ನು ತಿದ್ದುಪಡಿ ಮಾಡುತ್ತಾರೆ, ಹಾಗೆ ಯಾರು ತಿದ್ದುಪಡಿ ಮಾಡುತ್ತಾರೆ, ಎಂಬುದನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ವಿದ್ಯಾರ್ಥಿಗಳು ಎಸೆಸೆಲ್ಸಿ ಅಂಕಪಟ್ಟಿಯನ್ನು ಬದಲಾವಣೆ ಮಾಡಲು ಅಂದರೆ ತಮ್ಮ ಅಪ್ಪ ಅಮ್ಮನ ಹೆಸರು ಹಾಗೂ ಜನ್ಮ ದಿನಾಂಕ ಅಥವಾ ಅಭ್ಯರ್ಥಿಯ ಹೆಸರೇ ಬದಲಾವಣೆಯಾಗಿದ್ದರೆ ಅಂಕಪಟ್ಟಿಯಲ್ಲಿ, ಅಂಥಹ ಬದಲಾವಣೆಯನ್ನು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಬದಲಾವಣೆ ಮಾಡಿಕೊಳ್ಳಬಹುದು. ಹಲವಾರು ವರ್ಷಗಳ ಹಿಂದೆ ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯಲ್ಲಿ ಬದಲಾವಣೆ ಕಾಣಬೇಕೆಂಬ ಆತಂಕದಿಂದ ಮುಖ್ಯ ಶಿಕ್ಷಕರ ಒಡನೆ ಮಾತನಾಡಿ, ಬೇಕಾದ ದಾಖಲಾತಿಗಳನ್ನು ನೀಡಿ ಬದಲಾಯಿಸಬೇಕೆಂಬ ನಿಟ್ಟಿನಲ್ಲಿ ಕೇಳಿರುವ ಎಲ್ಲಾ ದಾಖಲಾತಿಗಳನ್ನು ಸಲ್ಲಿಸುತ್ತಿದ್ದರು.

ಹಾಗೂ ಪರೀಕ್ಷೆ ನಡೆಸುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಹಾಗೂ ಪರೀಕ್ಷೆಗೆ ಸಂಬಂಧಿಸಿದ ಹಲವಾರು ಕಚೇರಿಗಳಿಗೆ ಭೇಟಿ ನೀಡಿ ಅಂಕಪಟ್ಟಿಯಲ್ಲಿ ಯಾವುದನ್ನು ಬದಲಾವಣೆ ಮಾಡಬೇಕೆಂದು ಮುಖಾಮುಖಿಯೇ ಹೇಳಿ ಹೆಚ್ಚಿನ ಸಮಯವನ್ನು ಓಡಾಡುವುದರಲ್ಲಿ ಕಳೆಯಬೇಕಿತ್ತು. ಆದರೆ ಇನ್ನು ಮುಂದೆ ಆಗಲ್ಲ, ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸುವಂತಹ ವ್ಯವಸ್ಥೆಗೆ ಶಿಕ್ಷಣ ಮಂಡಳಿಯೂ ಮುಂದಾಗಿದೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ.

ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಬಳಿ ಬೇಕಾದ ದಾಖಲಾತಿಗಳನ್ನು ಸಲ್ಲಿಸಬೇಕು, ಹಾಗೂ ಮುಖ್ಯ ಶಿಕ್ಷಕರೇ ಶಿಕ್ಷಣ ಮಂಡಳಿಯ ಜಾಲತಾಣಕ್ಕೆ ಭೇಟಿ ನೀಡಿ ಶಾಲಾ ಲಾಗಿನ್ ಪಾಸ್ವರ್ಡ್ ಅನ್ನು ಟೈಪಿಸಿ, ನಂತರ ಅಂಕಪಟ್ಟಿಯಲ್ಲಿನ ಬದಲಾವಣೆಯನ್ನು ಪೂರೈಸಿ, ಅರ್ಜಿಯನ್ನು ಸಲ್ಲಿಸತಕ್ಕದ್ದು, ತಿದ್ದುಪಡಿ ಶುಲ್ಕವನ್ನು ಆನ್ಲೈನ್ ಮೂಲಕ ಅಥವಾ ಚಲನ್ ಗಳ ಮೂಲಕ ಪಾವತಿಸಬೇಕು.

ಮುಖ್ಯ ಶಿಕ್ಷಕರು ದಾಖಲಾತಿಗಳನ್ನು ಅಪ್ಲೋಡ್ ಮಾಡಿದ ನಂತರ ತಕ್ಷಣವೇ ಸಂಬಂಧಪಟ್ಟ ಕಚೇರಿ ಹಾಗೂ ಮಂಡಳಿಗೆ ಹೋಗಿ ತಲುಪುತ್ತದೆ, ಅನಂತರ ಅಧಿಕಾರಿಗಳು ಪರಿಶೀಲಿಸಿ, ವ್ಯಾಸಂಗ ವ್ಯಾಸಂಗದ ಶಾಲೆಯಿಂದ ಅಂಕಪಟ್ಟಿಯನ್ನು ಪಡೆದುಕೊಂಡು ನಂತರ ತಿದ್ದುಪಡಿ ಮಾಡಬೇಕಾದ ವಿವರವನ್ನು ತಿದ್ದುಪಡಿ ಮಾಡಿ, ಪೋಸ್ಟ್ ಮೂಲಕ ಶಾಲೆಗೆ ತಲುಪಿಸಲಾಗುತ್ತದೆ. ಮುಖ್ಯ ಶಿಕ್ಷಕರೇ ಈ ಎಲ್ಲಾ ಪ್ರಕ್ರಿಯೆಗೆ ಹೊಣೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment