ನೀವೇನಾದ್ರೂ ಸ್ವಯಂ ಉದ್ಯೋಗ ಪ್ರಾರಂಭಿಸುತ್ತಿದ್ದೀರಾ ! ಹಾಗಾದ್ರೆ ಬಿಬಿಎಂಪಿ ಕಡೆಯಿಂದ 1 ಲಕ್ಷ ರೂ ಹಣ ಪ್ರೋತ್ಸಾಹ ಧನವಾಗಿ ಸಿಗಲಿದೆ, ಕೂಡಲೇ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ…

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈಗಾಗಲೇ ಹಲವಾರು ಜನರಿಗೆ ಆರ್ಥಿಕವಾಗಿ ಹಣದ ಸಹಾಯವನ್ನು ನಿವಾರಿಸಿದೆ. ಈ ಹಿಂದೆ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಆರೋಗ್ಯದ ಬಗ್ಗೆಯೂ ಕೂಡ ಗಮನಹರಿಸಿದೆ. ಸಾಮಾನ್ಯ ಜನಗಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಯಶಸ್ಸಿನ ಕಡೆ ಸಾಗುತ್ತಿದೆ. ಇಂಥಹ ಸಮಯದಲ್ಲೂ ಕೂಡ ಸ್ವಯಂ ಉದ್ಯೋಗಿಗಳಿಗೆ ಸ್ವಂತವಾದ ಉದ್ಯೋಗವನ್ನು, ಪ್ರಾರಂಭಿಸಲು ಪ್ರೋತ್ಸಾಹ ಧನವಾಗಿ ಒಂದು ಲಕ್ಷದವರೆಗೆ ಹಣವನ್ನು ಖಾತೆಗೆ ವರ್ಗಾವಣೆ ಮಾಡಲಿದೆ ಬಿಬಿಎಂಪಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಓದಿ.

WhatsApp Group Join Now
Telegram Group Join Now

ಸ್ವಯಂ ಉದ್ಯೋಗಕ್ಕೆ 1 ಲಕ್ಷ ಹಣ ಸಿಗಲಿದೆ !

ಸ್ವಯಂ ಉದ್ಯೋಗ ಎಂದರೆ ಅಭ್ಯರ್ಥಿಯು ಸ್ವಂತವಾದ ಸಣ್ಣ ಕೈಗಾರಿಕೋದ್ಯಮದ ಅಂಗಡಿಗಳನ್ನು ಪ್ರಾರಂಭಿಸುವುದು ಮತ್ತು ಅವರೇ ಮಾಲೀಕರು ಆ ಅಂಗಡಿಗೆ, ನೀವು ಕೂಡ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಬೇಕು ಎಂದುಕೊಂಡಿದ್ದರೆ, ಈ ಕೂಡಲೇ ಅರ್ಜಿ ಸಲ್ಲಿಸಿ, ಈ ಕೆಳಕಂಡ ಲೇಖನದಲ್ಲಿ ಅರ್ಜಿಯ ಜಾಲತಾಣವನ್ನು ಕೂಡ ನೀಡಲಾಗಿದೆ.

  • 10ನೇ ತರಗತಿ ಮುಗಿದ ನಂತರ ಐಟಿಐ ಭಾಗವನ್ನು ಆಯ್ಕೆ ಮಾಡಿಕೊಂಡು ಉತ್ತೀರ್ಣವಾದ ಅಂಕವನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಒಂದು ಲಕ್ಷ ಹಣವನ್ನು ಬಿಬಿಎಂಪಿ ಕಡೆಯಿಂದ ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ ಹಾಗೂ ಹಣವು ಸಿಗುವುದು ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಮಾತ್ರ.
  • ಡಿ-ಫಾರ್ಮಾ ಅಧ್ಯಯನವನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸವನ್ನು ಮುಗಿಸಿರುವ ವಿದ್ಯಾರ್ಥಿಗಳು ಸ್ವಯಂ ಉದ್ಯೋಗವನ್ನು ಪ್ರಾರಂಭಿಸಬೇಕು ಅಂದುಕೊಂಡಿರುತ್ತಾರೆ ಅಂದರೆ ಮೆಡಿಕಲ್ ಶಾಪ್‌ಗಳನ್ನು ಪ್ರಾರಂಭಿಸಬೇಕೆಂದುಕೊಂಡಿದ್ದರೆ ಅಂಥಹ ವಿಶೇಷ ಚೇತನ ವಿದ್ಯಾರ್ಥಿಗಳಿಗೆ 1 ಲಕ್ಷ ರೂ ಹಣವನ್ನು ಪ್ರೋತ್ಸಾಹ ಧನವಾಗಿ ಬಿಬಿಎಂಪಿ ಕಡೆಯಿಂದ ದೊರಕಲಿದೆ.
  • ಇವತ್ತಿನವರೆಗೂ ಕೂಡ ಸಣ್ಣ ಅಂಗಡಿಗಳನ್ನು ಪ್ರಾರಂಭಿಸಿ ಜೀವನ ನಡೆಸುತ್ತಿರುವ ವಿಶೇಷ ಚೇತನ ವ್ಯಕ್ತಿಗಳಿಗೆ ಹಾಗೂ ತೃತೀಯ ಲಿಂಗಿಗಳಿಗೆ 1 ಲಕ್ಷ ರೂ ಹಣ ಪ್ರೋತ್ಸಾಹ ಧನವಾಗಿ ಸಿಗಲಿದೆ. ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಹಣವನ್ನು ಪಡೆಯಿರಿ.
  • ಕೆಲವರಿಗೆ ಸಂಗೀತ ವಾದ್ಯಗಳನ್ನು ಖರೀದಿಸಲು ಹಣದ ಸಮಸ್ಯೆ ಉಂಟಾಗುತ್ತದೆ ಅಂತಹ ಅಂಧ/ ದೃಷ್ಟಿ ಮಾನ್ಯರಿಗೆ ವಾದ್ಯಗಳನ್ನು ಖರೀದಿಸಲು ಒಂದು ಲಕ್ಷ ರೂ ಹಣವನ್ನು ಖಾತೆಗೆ ವರ್ಗಾವಣೆ ಮಾಡಲಿದೆ ಬಿಬಿಎಂಪಿ.
  • ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ವಿಶೇಷ ಚೇತನರಿಗೆ, ಬಿಬಿಎಂಪಿ ಕಡೆಯಿಂದ 1 ಲಕ್ಷ ರೂ ಹಣ ದೊರೆಯಲಿದೆ.
  • ವಿಶೇಷ ಚೇತನರು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರೆ ಅಂಥಹ ವ್ಯಕ್ತಿಗಳಿಗೆ ಕ್ರೀಡೆಯ ಕಿಟ್ಗಳನ್ನು ಖರೀದಿಸಲು ಹಣವನ್ನು ವರ್ಗಾವಣೆ ಮಾಡುತ್ತದೆ.
  • ಮಹಿಳೆಯರು ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುತ್ತಿದ್ದರೆ ಅಂತಹ ಗಾರ್ಮೆಂಟ್ಸ್ ಮಹಿಳೆಯರಿಗೆ ಎಲೆಕ್ಟ್ರಿಕಲ್ ದ್ವಿ ಚಕ್ರ ವಾಹನವನ್ನು ಉಚಿತವಾಗಿ ನೀಡಲಾಗುತ್ತದೆ.
  • ವಿಶೇಷ ಚೇತನರಿಗೆ ದ್ವಿಜಕ್ರ ವಾಹನಗಳನ್ನು ಬಿಬಿಎಂಪಿ ಕಡೆಯಿಂದ ಉಚಿತವಾಗಿ ವಿತರಿಸುತ್ತದೆ.
  • ಸಂಘ ಸಂಸ್ಥೆಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆ ಆ ಕಾರ್ಯಕ್ರಮಗಳ ಖರ್ಚು ವೆಚ್ಚವನ್ನು ನಿವಾರಿಸುತ್ತದೆ ಈ ಯೋಜನೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಅರ್ಜಿ ಸಲ್ಲಿಸುವ ಪ್ರಕ್ರಿಯೆ.

ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 9 ವಲಯಗಳು ಕಾರ್ಯ ನಿರ್ವಹಿಸುತ್ತಿವೆ. ಹಾಯವಲಯದಲ್ಲಿ ಕಂಡುಬರುವ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ವರ್ಗದ ಮಹಿಳೆಯರಿಗೆ ಹಾಗೂ ವಿಶೇಷ ಚೇತನರಿಗೆ ಮತ್ತು ತೃತೀಯ ಲಿಂಗಗಳಿಗೆ ಈ ಮೇಲ್ಕಂಡ ಎಲ್ಲಾ ಸೌಲಭ್ಯಗಳು ದೊರೆಯಲಿದೆ. ಇವರು ಮಾತ್ರ ಅರ್ಜಿಯನ್ನು ಸಲ್ಲಿಸಲು ಸಾಧ್ಯ. ಅರ್ಜಿಯನ್ನು ಸಲ್ಲಿಸಲು ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಂತರ ಅರ್ಜಿಯನ್ನು ಡೌನ್ಲೋಡ್ ಮಾಡಿ. ಅನಂತರ ನಿಮ್ಮ ತಾಲೂಕಿನ ಸಹಾಯಕ ಕಂದಾಯ ವ್ಯಾಪ್ತಿಯಲ್ಲಿರುವವರನ್ನು ಸಂಪರ್ಕಿಸಿ, ಅರ್ಜಿ ಭರ್ತಿ ಮಾಡಿದ ನಂತರ ಸಹಾಯ ಕಂದಾಯ ಕಚೇರಿಗೆ ತಲುಪಿಸಬೇಕು.

ಅರ್ಜಿ ಸಲ್ಲಿಸಲು ಡಿಸೆಂಬರ್ 16 ಕೊನೆಯ ದಿನಾಂಕವಾಗಿದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment