ಶಕ್ತಿ ಯೋಜನೆಯ ಫಲಾನುಭವಿಗಳು ಇನ್ಮುಂದೆ ಗುರುತಿನ ಚೀಟಿಯನ್ನು ಫೋನಿನ ಮೂಲಕವೇ ತೋರಿಸಿ ಪ್ರಯಾಣ ಮಾಡಬಹುದು ! ಕಂಡಕ್ಟರ್ ಒಪ್ಪದಿದ್ದರೆ ಕೇಸ್ ಆಗೋದು ಗ್ಯಾರಂಟಿ.

ಎಲ್ಲರಿಗೂ ನಮಸ್ಕಾರ…

ಶಕ್ತಿ ಯೋಜನೆಯು ಈವರೆಗೂ ಕೂಡ ಯಶಸ್ಸಿನಲ್ಲೇ ಸಾಗುತ್ತಿದೆ. ಆದರೆ ಶಕ್ತಿ ಯೋಜನೆಯ ಫಲಾನುಭವಿಗಳಾದ ಮಹಿಳೆಯರು KSRTC ಹಾಗೂ BMTC ಬಸ್ಸಿನಲ್ಲಿ ಪ್ರಯಾಣ ಮಾಡುವುದಕ್ಕೆ ಅಸಲಿ ಗುರುತಿನ ಚೀಟಿಯನ್ನೇ ತೋರಿಸಿ ಪ್ರಯಾಣ ಮಾಡಬೇಕೆಂಬ ಸುತ್ತೋಲೆಯನ್ನು ಕಂಡಕ್ಟರ್ ಗಳೇ ಹೊಸ ನಿಯಮವನ್ನು ಜಾರಿ ಮಾಡಿದ್ದಾರೆ. ಆದರೆ ಇನ್ನು ಮುಂದೆ ಈ ಶರತ್ತುಗಳು ಅನ್ವಯವಾಗುವುದಿಲ್ಲ.

WhatsApp Group Join Now
Telegram Group Join Now

ಮಹಿಳೆಯರು ಫೋನಿನ ಮೂಲಕವೇ ತಮ್ಮ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣ ಮಾಡಬಹುದು ಹಾಗೂ ಜೆರಾಕ್ಸ್ ತೋರಿಸಿ ಕೂಡ ಪ್ರಯಾಣ ಮಾಡಬಹುದು. ಈ ನಿಯಮಕ್ಕೆ ಕಂಡಕ್ಟರ್ಗಳು ಒಪ್ಪದಿದ್ದರೆ ಅವರ ಮೇಲೆ ಕೇಸ್ ಪ್ರಕರಣ ದಾಖಲಾಗುತ್ತದೆ ಎಂದು ರಾಜ್ಯ ಸಾರಿಗೆ ಸಂಸ್ಥೆ ಹೊಸ ಆದೇಶವನ್ನು ಹೊರಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಓದಿ.

ಮೊಬೈಲ್ನಲ್ಲೇ ಆಧಾರ್ ಕಾರ್ಡ್ ತೋರಿಸಿ ಪ್ರಯಾಣ ಮಾಡಬಹುದು !

ಈ ಹಿಂದೆ ಶಕ್ತಿ ಯೋಜನೆ ಅಡಿ ಪ್ರಯಾಣಿಸುತ್ತಿದ್ದ ಮಹಿಳೆಯರು ಹಾರ್ಡ್ ಕಾಪಿಯನ್ನೇ ತೋರಿಸಿ ಪ್ರಯಾಣ ಮಾಡಬೇಕಿತ್ತು. ಆದರೆ ಇನ್ನು ಮುಂದೆ ನಿಯಮವನ್ನು ತೊರೆದು ಹಾಕಿ ಹೊಸ ಆದೇಶಕ್ಕೆ ಸಾಗಲಿದೆ ಸಾರಿಗೆ ಸಂಸ್ಥೆ. ಮಹಿಳೆಯರು ಹಾರ್ಡ್ ಕಾಪಿಯನ್ನೇ ಕೆಲವು ಬಾರಿ ಮರೆತು ಪ್ರಯಾಣ ಮಾಡುವ ಪರಿಸ್ಥಿತಿ ಉಂಟಾಗಬಹುದು. ಮತ್ತು ಈ ವಿಷಯದ ಬಗ್ಗೆ ಹಲವಾರು ಕಡೆ ಜಗಳವೂ ಉಂಟಾಗಬಹುದು ಎಂದಲ್ಲ, ಮುಂಚಿತವಾಗಿಯೇ ಜಗಳಗಳು ಹಲವಾರು ನಗರಗಳಲ್ಲಿ ಆಗಿವೆ.

ಇದನ್ನೆಲ್ಲಾ ಗಮನಿಸಿದ ರಾಜ್ಯ ಸಾರಿಗೆ ಸಂಸ್ಥೆಯು ಹೊಸ ನಿಯಮವನ್ನು ಜಾರಿ ಮಾಡಿದೆ. ಕಂಡಕ್ಟರ್ ಗಳಿಗೆ ಆದೇಶವನ್ನು ಕೂಡ ಹೊರಡಿಸಿದೆ. ಫೋನಿನ ಮೂಲಕ ಸಾಫ್ಟ್ ಕಾಪಿಯನ್ನು ತೋರಿಸಿ ಪ್ರಯಾಣ ಮಾಡುವ ಮಹಿಳೆಯರ ಮೇಲೆ ಕಂಡಕ್ಟರ್ ಗಳು ಯಾವುದೇ ರೀತಿಯಲ್ಲಿ ಟಿಕೇಟುಗಳನ್ನು ತೆಗೆದುಕೊಳ್ಳಿ ಎಂದು ಕೇಳಬಾರದು ಈ ರೀತಿ ನಡೆದುಕೊಂಡಲ್ಲಿ ಕಂಡಕ್ಟರ್ಗಳ ಮೇಲೆ ಕೇಸ್ ಪ್ರಕರಣ ದಾಖಲಾಗುತ್ತದೆ.

ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಟಿಕೆಟ್ ಸ್ವೀಕರಿಸದೆ ಪ್ರಯಾಣ ಮಾಡುತ್ತಿದ್ದರೆ, ಅಂಥಹ ಪ್ರಯಾಣಿಕರ ಮೇಲೆ 500 ದಂಡ ವಿಧಿಸಲಾಗುತ್ತದೆ. ಹಾಗೂ ಕಂಡಕ್ಟರ್ ಅನ್ನು ಸಸ್ಪೆಂಡ್ ಮಾಡಲಾಗುತ್ತದೆ. ಈ ಕಾನೂನು ಹಲವಾರು ವರ್ಷಗಳಿಂದ ಜಾರಿಯಲ್ಲಿದೆ. ಪ್ರಯಾಣಿಕರು ಟಿಕೆಟ್ ಸ್ವೀಕರಿಸದೆ, ಪ್ರಯಾಣಿಸುವ ಒಂದೇ ಕಾರಣದಿಂದ ಕಂಡಕ್ಟರ್ ಗೆ ಸಸ್ಪೆಂಡ್ ಸಿಗುತ್ತಿದೆ. ಹಲವಾರು ನಗರ ಪ್ರದೇಶಗಳಲ್ಲಿ ಈ ರೀತಿ ಪ್ರಕರಣಗಳು ದಾಖಲಾಗುತ್ತಿದೆ. ಪ್ರಯಾಣಿಕರೆ ಇನ್ಮುಂದೆ ಆದ್ರೂ ಟಿಕೆಟ್ ಗಳನ್ನು ನೀವೇ ಕೇಳಿ ಸ್ವೀಕರಿಸಿರಿ. ಒಬ್ಬ ವ್ಯಕ್ತಿಯ ಜೀವನವನ್ನು ನಡೆಸುವ ಉದ್ಯೋಗವನ್ನು ಕಿತ್ತುಕೊಳ್ಳಬೇಡಿ. ಪ್ರಯಾಣಿಕರೆ ಟಿಕೆಟ್ ಗಳನ್ನು ನೀವೇ ಕೇಳುವಂಥಹ ಮನಸ್ಥಿತಿಯನ್ನು ಇನ್ನಾದರೂ ಒಂದಿರಿ.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಹೊಸ ಸುತ್ತೋಲೆಯನ್ನು ಜಾರಿ ಮಾಡಿದೆ ಸಾರಿಗೆ ಸಂಸ್ಥೆ !

ಏನಿದು ಹೊಸ ಸುತ್ತೋಲೆ ಅಂತೀರಾ ? ಬೇರೆ ಯಾವ ವಿಷಯದಲ್ಲಲ್ಲ, ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಒಂದು ಸುತ್ತೋಲೆ. ರಾಜ್ಯ ಸರ್ಕಾರವು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೂ ಮಹಿಳೆಯರು ತಮ್ಮ ಗುರುತಿನ ಚೀಟಿಗಳೊಂದಿಗೆ, ಪ್ರಯಾಣವನ್ನು ಮುಂದುವರಿಸಬೇಕು. ಹಾರ್ಡ್ ಕಾಪಿಯನ್ನೇ ಮಹಿಳೆಯರು ಪ್ರಯಾಣ ಮಾಡಬೇಕೆಂಬ ಹಿಂದಿನ ಆದೇಶ ರದ್ದುಗೊಳ್ಳಲಿದೆ. ಹೊಸ ಸುತ್ತೋಲೆ ಜಾರಿಯಾಗಲಿದೆ ಫೋನಿನ ಮೂಲಕವೇ ಸಾಫ್ಟ್ ಕಾಪಿಯನ್ನಾದರೂ ತೋರಿಸಿ ಪ್ರಯಾಣ ಮಾಡಬಹುದು.

ಇನ್ಮುಂದೆ ಒತ್ತಡದ ಜೀವನ ನಿಮ್ಮದಲ್ಲ. ಏಕೆಂದರೆ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಹಾರ್ಡ್ ಕಾಪಿಯನ್ನ ಮರೆತು ಬಂದಿದ್ದೀನಿ ಎನ್ನುವವರಿಗೆ ಈ ಒಂದು ಹೊಸ ನಿಯಮ ಖುಷಿ ಕೊಡಲಿದೆ. ಅವಸರದ ಜೀವನದಲ್ಲಿ ಯಾವುದೋ ವಿಷಯಗಳನ್ನು ತಲೆಯಲ್ಲಿ ಇಟ್ಟುಕೊಂಡು ಬಸ್ಸಿನಲ್ಲಿ ಪ್ರಯಾಣಿಸುವಾಗ ಹಾರ್ಡ್ ಕಾಪಿಯನ್ನ ಮನೆಯಲ್ಲೇ ಬಿಟ್ಟು ಬಂದಿರುತ್ತೀರಿ, ಅಂಥಹ ಪರಿಸ್ಥಿತಿ ಎದುರಾದರೆ, ಇನ್ಮುಂದೆ ಫೋನಿನ ಮೂಲಕವೇ ಸಾಫ್ಟ್ ಕಾಪಿಯನ್ನಾದರೂ ತೋರಿಸಬಹುದು.

ಸರ್ಕಾರಿ ಕಂಡಕ್ಟರ್ ಗಳು ಮೂಲ ಗುರುತಿನ ಚೀಟಿ ಕೇಳಿ, ನಿಮ್ಮ ಹತ್ತಿರ ಗುರುತಿನ ಚೀಟಿ ಇಲ್ಲದ ಕಾರಣದಿಂದ ಟಿಕೆಟ್ಗಳನ್ನು ನೀಡುವಂತಿಲ್ಲ. ನೀವು ಕೂಡ ಕಂಡಕ್ಟರ್ಗಳು ನೀಡುವ ಟಿಕೆಟ್ಗಳನ್ನು ಸ್ವೀಕರಿಸುವಂತಿಲ್ಲ. ಅಂಥಹ ಸಂದರ್ಭ ಉಂಟಾದರೆ ನೀವು ಅವರ ಮೇಲೆ ಕೇಸ್ ಪ್ರಕರಣವನ್ನು ದಾಖಲಿಸಬಹುದು. ಹಲವಾರು ಕಡೆ ಟಿಕೆಟ್ಗಳ ಪ್ರಕರಣಗಳು ಜಾಸ್ತಿ ಆಗುತ್ತಿದೆ ಇದನ್ನೆಲ್ಲ ಗಮನಿಸಿ ಹೊಸ ಸುತ್ತೋಲೆಯನ್ನು ಜಾರಿಗೊಳಿಸಿದೆ ಸಾರಿಗೆ ಸಂಸ್ಥೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment