ಇನ್ಮುಂದೆ ಬೃಂದಾವನ ಧಾರವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟಿಸುವ ವ್ಯಕ್ತಿ ಇವರೇ ನೋಡಿ ! ಇನ್ಸ್ಟಾಗ್ರಾಮ್ ಮೂಲಕ ಜನಪ್ರಿಯತೆ ಪಡೆದುಕೊಂಡ ಹೀರೋ ಇವರು.

ಎಲ್ಲರಿಗೂ ನಮಸ್ಕಾರ…

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಬೃಂದಾವನ ಧಾರವಾಹಿ, ಕಳೆದ ಸೆಪ್ಟೆಂಬರ್ 23ರಂದು, ರಾತ್ರಿ 8 ಗಂಟೆಯ ವೇಳೆಗೆ ಪ್ರಸಾರವಾಗುತ್ತಿತ್ತು. ದಾರಾವಾಹಿ ಶುರುವಾಗಿ ಇನ್ನು ಎರಡು ತಿಂಗಳು ಕೂಡ ಆಗಿಲ್ಲ, ಆದರೂ ಕೂಡ ಹೀರೋ ಪಾತ್ರವನ್ನು ಬದಲಿಸಿದೆ ಬೃಂದಾವನ ಧಾರವಾಹಿ. ಕಳೆದ ಒಂದು ತಿಂಗಳಿಂದ ಬೃಂದಾವನ ಸೀರಿಯಲ್ನ ಆಕಾಶ್ ಎಂಬ ಹೀರೋ ಪಾತ್ರವನ್ನು ನಿಭಾಯಿಸುತ್ತಿದ್ದ ವಿಶ್ವನಾಥ್ ರವರು ಇನ್ಮುಂದೆ ಈ ಸೀರಿಯಲ್ನಲ್ಲಿ ಇರೋ ಪಾತ್ರವನ್ನು ನಟಿಸುವುದಿಲ್ಲ. ಏಕೆಂದರೆ ಇನ್ಮುಂದೆ ಹೀರೋ ಪಾತ್ರವನ್ನು ಇನ್ಸ್ಟಾಗ್ರಾಮ್ ಪ್ರಖ್ಯಾತ ವ್ಯಕ್ತಿಯೊಬ್ಬರಿಗೆ, ಅವಕಾಶ ಕಲ್ಪಿಸಿ ಕೊಟ್ಟಿದೆ ಬೃಂದಾವನ ಸೀರಿಯಲ್. ಯಾರು ಆ ಹೀರೋ ಎಂಬುದನ್ನು ಕೆಳಕಂಡ ಲೇಖನದಲ್ಲಿ ತಿಳಿಸಲಾಗುತ್ತದೆ ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ವರುಣ್ ಆರಾಧ್ಯರವರು ಇಂದಿನಿಂದ ನಾಯಕ ಪಾತ್ರವನ್ನು ನಿರ್ವಹಿಸಲಿದ್ದಾರೆ. 

ಯಾರು ಈ ವರುಣಾರಾದ್ಯ ಎಂಬುದು ನಿಮ್ಮ ಪ್ರಶ್ನೆ ? ಬೇರೆ ಯಾರು ಅಲ್ಲ ಟಿಕ್ ಟಾಕ್ ಮೂಲಕ ವರುಣಾರಾಧ್ಯ ಎಂಬ ಹೆಸರನ್ನು ಗುರುತಿಸಿಕೊಂಡ ವ್ಯಕ್ತಿ ಇವರು. ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ಜನರ, ಜನಪ್ರಿಯತೆಯನ್ನು ಗಳಿಸಿದ್ದರು, ಒಂದೇ ಮಾತಲ್ಲಿ ಹೇಳುವುದಾದರೆ, ಸೋಶಿಯಲ್ ಮೀಡಿಯಾದಲ್ಲಿ ವರುಣ್ ಆರಾಧ್ಯ ರವರು ಆಕ್ಟಿವ್ ನಲ್ಲಿ ಇದ್ದರು. ಅಂದರೆ ಪ್ರತಿನಿತ್ಯವೂ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಹಾಗೂ ಯೂಟ್ಯೂಬ್ ಮೂಲಕ ದಿನನಿತ್ಯ ಜೀವನದ ಸಣ್ಣ ( 20 min ) ವಿಡಿಯೋಗಳನ್ನು ಯೂಟ್ಯೂಬ್ ಚಂದದಾರರೊಂದಿಗೆ ಹಂಚಿಕೊಳ್ಳುತ್ತಿದ್ದರು.

ಯೂಟ್ಯೂಬ್ ಚಂದದಾರರಿಗೂ ಕೂಡ ವರುಣ್ ಆರಾಧ್ಯರವರ ವಿಡಿಯೋ ಎಂದರೆ ಇಷ್ಟ. ಹಾಗೂ ಒಂದು ತಿಂಗಳಲ್ಲೇ ಒಂದು ಲಕ್ಷ ಚಂದಾದಾರರನ್ನು ಪಡೆದುಕೊಂಡ ವ್ಯಕ್ತಿ ಇವರು. ಒಂದು ಲಕ್ಷ ಸಬ್ಸ್ಕ್ರೈಬರ್ಸ್ ಗಳನ್ನು ಒಂದೇ ತಿಂಗಳಿನಲ್ಲಿ ಪಡೆದುಕೊಳ್ಳುವುದು ತುಂಬಾ ಕಠಿಣವಾದ ವಿಷಯ ಅಂಥದರಲ್ಲೂ ಕೂಡ ವರುಣ್ ಆರಾಧ್ಯರವರನ್ನು ಪ್ರೀತಿಸುವ ಜನರು ಒಂದು ಲಕ್ಷ Subscribers ತಲುಪುವ ಹಾಗೆ ಬೆಂಬಲಿಸಿದ್ದಾರೆ. ಇಂಥಹ ಪ್ರಖ್ಯಾತ ವ್ಯಕ್ತಿ ಕಲರ್ಸ್ ಕನ್ನಡ ವಾಹಿನಿಯ ಬೃಂದಾವನ ಧಾರವಾಹಿಯಲ್ಲಿ ಹೀರೋ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಜನರುಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಎಷ್ಟು ಬೆಂಬಲವನ್ನು ವರುಣ್ ರವರಿಗೆ ನೀಡಿದ್ದಾರೋ, ಅಷ್ಟೇ ಬೆಂಬಲವನ್ನು ನೀಡುತ್ತಾರ, ಎಂಬುದನ್ನು ಕಾದು ನೋಡಬೇಕಿದೆ. ವರುಣ್ ರವರ ಅಭಿಮಾನಿಗಳು, ಆಕಾಶ್ ಪಾತ್ರವನ್ನು ಮೆಚ್ಚಿ ವರುಣ್ ರವರಿಗೆ ಬೆಂಬಲಿಸುತ್ತಾರ ಎಂಬುದು ಕೆಲವು ದಿನಗಳಲ್ಲೇ ಗೊತ್ತಾಗುತ್ತದೆ.

ಬೃಂದಾವನ ಸೀರಿಯಲ್ ನಲ್ಲಿ ನಾಯಕ ಪಾತ್ರದಲ್ಲಿ ನಟಿಸಲಿದ್ದಾರೆ ವರುಣ್ !

ಬೃಂದಾವನ ಸೀರಿಯಲ್ ನಲ್ಲಿ ಇದೀಗ ಮದುವೆ ಸಂಭ್ರಮ ನಡೆಯುತ್ತಿದೆ. ಈ ಕಲ್ಯಾಣ ಸಂಭ್ರಮದಲ್ಲಿ, ಮೊದಲಿಗೆ ನಾಯಕ ಪಾತ್ರವನ್ನು ನಟಿಸಿದ ವಿಶ್ವನಾಥ್ ರವರು ಚಿಕ್ಕ ವಯಸ್ಸುಳ್ಳ ನಾಯಕ ಎಂದು ಕಾಣುತ್ತಾರೆ, ಎಂಬ ಸಂಶಯದಲ್ಲಿ ನಾಯಕ ಪಾತ್ರವನ್ನು ಬದಲಿಸಿ ವರುಣ್ ರವರಿಗೆ ನಿರ್ವಹಿಸಿದೆ ಬೃಂದಾವನ ಸೀರಿಯಲ್. ಇವತ್ತಿನ ಸಂಚಿಕೆಯಲ್ಲಿ ಈ ಸೀರಿಯಲ್ ನಲ್ಲಿ ವರುಣ್ ಆರಾಧ್ಯರವರ ಎಂಟ್ರಿಗೆ ಅಭಿಮಾನಿಗಳು ಕಾಯಬೇಕಿದೆ.

ಕೆಲ ಜನರಿಗೆ ವರುಣ್ ನಾಯಕ ಪಾತ್ರದಲ್ಲಿ ನಟಿಸುವುದು ಇಷ್ಟವಿಲ್ಲವ ?

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲ ಜನರು ಕಾಮೆಂಟ್ ಮೂಲಕ ಅವರ ಸ್ಪಷ್ಟನೆಯನ್ನು ತಿಳಿಸುತ್ತಿದ್ದಾರೆ. ಏನೆಂದರೆ ವರುಣ್ ರವರನ್ನು ಏಕೆ ನಾಯಕ ಪಾತ್ರನಾಗಿ ಆಯ್ಕೆ ಮಾಡಿಕೊಂಡಿದೆ ಧಾರಾವಾಹಿ, ಹಾಗೂ ಇವರನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಾ ಎಂಬುದು ಜನರ ಪ್ರಶ್ನೆ. ಹಾಗೂ ಕಳೆದ ಮೂರು ತಿಂಗಳಿನ ಹಿಂದೆ ‘ಬ್ರೇಕ್ ಅಪ್’ ವಿಷಯದಲ್ಲಿ ಸುದ್ದಿಯಾಗಿದ್ದರೂ ವರುಣ್ ರವರು. ಪ್ರೀತಿ ಮುರಿದು ಹೋಗಲು ಹಲವಾರು ಕಾರಣಗಳನ್ನು ವರ್ಷಾ ಕಾವೇರಿ ರವರು ಸ್ಪಷ್ಟನೆ ನೀಡಿದ್ದಾರೆ.

ಜನರು ವರ್ಷ ಕಾವೇರಿ ಅವರ ಸ್ಪಷ್ಟನೆ ಮಾತ್ರ ಗಮನಿಸಿ, ವರುಣ್ ರವರೆ ತಪ್ಪು ಮಾಡಿರುವುದು ಎಂದು ಖಚಿತಪಡಿಸಿಕೊಂಡಿದ್ದಾರೆ. ಆದರೆ ವರುಣ್ ರವರು ಬ್ರೇಕ್ ಅಪ್ ವಿಷಯದಲ್ಲಿ ಯಾವ ರೀತಿಯ ಸ್ಪಷ್ಟನೆ ಕೂಡ ನೀಡಿಲ್ಲ, ಅದಕ್ಕಾಗಿ ಕೆಲ ಜನರು ಇವರನ್ನು ವಿರೋಧಿಸುತ್ತಾರೆ. ಇನ್ಮುಂದೆ ಆದ್ರೂ ಬೃಂದಾವನ ಧಾರವಾಹಿಯಲ್ಲಿ ಆಕಾಶ್ ನ ಪಾತ್ರವನ್ನು ನೋಡಿ ವರುಣ್ ರವರನ್ನು ಕೆಲ ಜನರು ಪ್ರೀತಿಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment