ಸಾಮಾನ್ಯ ಜನರು ದೀಪಾವಳಿ ಹಬ್ಬದ ಪ್ರಯುಕ್ತ ಬ್ಯುಸಿನೆಸ್ ಮಾಡಿ ಹಣ ಗಳಿಸಬಹುದು ! ನವೆಂಬರ್ ತಿಂಗಳಿನಲ್ಲಿ ಕೈತುಂಬಾ ಕಾಸು ಮಾಡುವ ಅವಕಾಶ ಸಿಕ್ಕಿದೆ.

ಎಲ್ಲರಿಗೂ ನಮಸ್ಕಾರ..

ದೀಪಾವಳಿ ಹಬ್ಬ ಎಂದರೆ, ಹುಡುಗರಿಗೆ ಸಂತಸದ ಹಬ್ಬ ಎಂದು ಕೂಡ ಹೇಳಬಹುದು. ಏಕೆಂದರೆ ಹುಡುಗರು ಪಟಾಕಿ ಒಡೆಯುವುದಕ್ಕೆ ಸಜ್ಜಾಗಿರುತ್ತಾರೆ, ದೀಪಾವಳಿ ಹಬ್ಬ ಯಾವಾಗ ಬರುತ್ತದೆ ಎಂದು ಕಾತುರದಿಂದ ಕಾಯುತ್ತಿರುತ್ತಾರೆ, ಹಾಗೂ ಹೆಣ್ಣು ಮಕ್ಕಳಿಗೂ ಕೂಡ ಇದು ದೀಪ ಹಚ್ಚುವ ಹಬ್ಬ, ಮನೆಮನೆಯಲ್ಲೂ ಕೂಡ ಸಂಜೆ ಹೊತ್ತಿನಲ್ಲಿ ದೀಪವನ್ನು ಹಚ್ಚಿ ಮನೆಯನ್ನು ನಂದಾದೀಪ ದಂತೆ ಇರಿಸಿರುತ್ತಾರೆ. ಹಾಗೆ ಹೆಣ್ಣು ಮಕ್ಕಳಿಗೂ ಕೂಡ ಚಿಕ್ಕ ಪುಟ್ಟ ಪಟಾಕಿ ಹಚ್ಚುವ ಅಭ್ಯಾಸ ಇದ್ದೇ ಇರುತ್ತದೆ, ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಹಲವಾರು ಹೊಸ ಹೊಸ ರೀತಿಯ ಪಟಾಕಿ ಕೂಡ ತಯಾರಾಗಿರುತ್ತವೆ ಗ್ರಾಹಕರನ್ನು ಆಕರ್ಷಿಸಲು. ಇನ್ನೂ ಕೆಲವರು ಪಟಾಕಿ ಚೀಟಿಗಳನ್ನು ಕೂಡ ಹಾಕಿಕೊಂಡು ಪಟಾಕಿಯನ್ನು ಪಡೆದುಕೊಳ್ಳುತ್ತಾರೆ. ಈ ಹಬ್ಬದ ಸಡಗರದಲ್ಲೂ ಕೂಡ ಬ್ಯುಸಿನೆಸ್ ಮಾಡಿ ಹಣವನ್ನು ಗಳಿಸಬಹುದು, ಹಾಗೂ ದೊಡ್ಡಮಟ್ಟದಲ್ಲಿ ಹಣ ಸಿಗುತ್ತದೆ. ಈ ಕೆಳಗಿನಂತಹ ಬಿಸಿನೆಸ್ ಮಾಡಿ ನೀವು ಕೂಡ ಹಣ ಮಾಡಲು ಪ್ರಯತ್ನಿಸಿ. ಈ ಕೆಳಕಂಡ ಲೇಖನದಲ್ಲಿ ಪೂರ್ತಿ ಮಾಹಿತಿಯನ್ನು ನೀಡಲಾಗುತ್ತದೆ ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ಕಡಿಮೆ ಸಮಯದಲ್ಲಿ ಹಣವನ್ನು ಗಳಿಸಿ !

ಹೌದು ಕಡಿಮೆ ಸಮಯದಲ್ಲಿ ಹಣವನ್ನು ಗಳಿಸಬಹುದು ಯಾವ ರೀತಿ ಎಂದರೆ, ಈ ದೀಪಾವಳಿಯಲ್ಲಿ ಜನರು ವಸ್ತುಗಳನ್ನು ಖರೀದಿಸಲು ಸಜ್ಜಾಗಿರುತ್ತಾರೆ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ಕೂಡ ಕಡಿಮೆ ಖರ್ಚಿನಲ್ಲಿ ವಸ್ತುವನ್ನು ವ್ಯಾಪಾರ ಮಾಡಿ ಗ್ರಾಹಕರಿಂದ ಲಾಭವನ್ನು ಪಡೆದುಕೊಳ್ಳಿ. ಯಾವ ರೀತಿ ಲಾಭವನ್ನು ಪಡೆದುಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳಿ. ಹಾಗೂ ಯಾವ ಯಾವ ವಸ್ತುಗಳನ್ನು ಮಾರಾಟ ಮಾಡಿದರೆ ಲಾಭವಾಗುತ್ತದೆ ಇದರಿಂದ ಹಣ ಸಿಗುತ್ತದೆ ಎಂಬುದನ್ನು ಕೂಡ ಅರಿತುಕೊಳ್ಳಿ.

ಇದನ್ನೂ ಓದಿ :- ಶಕ್ತಿ ಯೋಜನೆಯನ್ನು 10 ವರ್ಷಗಳ ಕಾಲ ಮುನ್ನಡೆಸಲಿದೆ ಕಾಂಗ್ರೆಸ್ ಸರ್ಕಾರ ! ಬಸ್ ಟಿಕೆಟ್ ಗಾಗಿ 2021 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ.

ದೀಪ ಹಚ್ಚುವ ಹೆಣ್ಣು ಮಕ್ಕಳಿಂದ ಮೊದಲು ಶುರು ಮಾಡೋಣ, ಹೆಣ್ಣು ಮಕ್ಕಳು ಈ ಒಂದು ಹಬ್ಬದಲ್ಲಿ ಯಾವ ರೀತಿ ಬ್ಯುಸಿನೆಸ್ ಮಾಡಿ ಹಣವನ್ನು ಗಳಿಸಬಹುದೆಂದರೆ, ಮೆಹೆಂದಿ ಹಾಕುವ ಮೂಲಕ ಹಣವನ್ನು ಸಂಪಾದಿಸಬಹುದು. ಅಕ್ಕಪಕ್ಕ ಮನೆಗಳಲ್ಲಿ ಇರುವ ಹೆಣ್ಣು ಮಕ್ಕಳಿಗೆ ಮೆಹಂದಿ ಬಿಡಿಸಿ ಹಣವನ್ನು ಪಡೆದುಕೊಳ್ಳುವುದು, ಹಬ್ಬ ಹರಿದಿನಗಳಂದು ಹೆಣ್ಣು ಮಕ್ಕಳು ಮೆಹೆಂದಿ ಹಾಕಿಸಿ ಕೊಳ್ಳುತ್ತಾರೆ. ಯಾರೂ ಕೂಡ ಮೆಹಂದಿಯನ್ನು ಇಷ್ಟಪಡದ ಹುಡುಗಿರು ಇಲ್ಲವೇ ಇಲ್ಲ, ಈ ಪ್ರಪಂಚದಲ್ಲಿ ಕೆಲವು ಬೆರಳೆಣಿಕೆಯ ಹೆಣ್ಣು ಮಕ್ಕಳು ಮಾತ್ರ ಮೆಹೆಂದಿಯನ್ನು ಇಷ್ಟಪಡುವುದಿಲ್ಲ. ಮೆಹಂದಿ ಬಿಡಿಸಿ ಕೂಡ ಹಣವನ್ನು ಗಳಿಸಬಹುದು.

ದೀಪಾವಳಿ ಹಬ್ಬಕ್ಕೆ ದೀಪಗಳು ಬಹಳ ಮುಖ್ಯ, ಅದರಲ್ಲೂ ಪ್ರತಿವರ್ಷವು ಕೂಡ ಜನಗಳು ದೀಪಗಳನ್ನು ಖರೀದಿಸುತ್ತಿರುತ್ತಾರೆ, ಈ ಒಂದು ವ್ಯಾಪಾರವನ್ನು ಗಮನಿಸಿ ವ್ಯಾಪಾರಿಗಳು ದೀಪಗಳನ್ನು ಕೂಡ ಮಾರಾಟ ಮಾಡಬಹುದು ಯಾವ ರೀತಿ ದೀಪಗಳೆಂದರೆ ಮಣ್ಣಿನಲ್ಲಿ ತಯಾರಾದ ದೀಪಗಳನ್ನು ಬಹಳಷ್ಟು ಜನರು ಇಷ್ಟಪಡುತ್ತಾರೆ, ಈ ಮಣ್ಣಿನ ದೀಪಗಳನ್ನು ಮಾಡಿ ಕೂಡ ಹಣ ಗಳಿಸಬಹುದು. ಯಾವ ವ್ಯಕ್ತಿಯಾದರೂ ಕೂಡ ದೀಪಗಳನ್ನು ಮಾರಟ ಮಾಡಿ ಹಣವನ್ನು ಸಂಪಾದಿಸಬಹುದು.

ಕೆಲವರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿ ತಿನಿಸುಗಳನ್ನು ಸೇವಿಸಲು ಅಭ್ಯಾಸ ಇರುತ್ತದೆ ಇಂಥಹ ಗುಟ್ಟನ್ನು ಗಮನಿಸಿ ವ್ಯಾಪಾರಿಗಳು ಸಿಹಿ ತಿನಿಸುಗಳನ್ನು ಮಾರಾಟ ಮಾಡುತ್ತಾರೆ. ಅಂದರೆ ಗುಲಾಬ್ ಜಾಮೂನ್, ರಸ್ಗುಲ್ಲ, ಹಾಗೂ ಲಡ್ಡುಗಳಂತಹ ಹಲವಾರು ನಾನಾ ರೀತಿಯ ತಿನಿಸುಗಳು. ಇಂತಹ ಸಿಹಿ ತಿನಿಸುಗಳನ್ನು ಮಾರಿ ಕೂಡ ಹಣವನ್ನು ಈ ಹಬ್ಬದದಲ್ಲಿ ಗಳಿಸಬಹುದು.

ದೀಪಾವಳಿ ಹಬ್ಬದ ಲ್ಲಿ ಕೆಲ ಜನರು ದೇವರ ವಿಗ್ರಹಗಳನ್ನು ಕೂಡ ಖರೀದಿಸುತ್ತಾರೆ. ಬೇರೊಂದು ಅಂಗಡಿಗಳಲ್ಲಿ ಕಡಿಮೆ ಬೆಲೆಯಲ್ಲಿ ಖರೀದಿಸಿ ನೀವು ಕೂಡ ಹೆಚ್ಚಿನ ಬೆಲೆಯ ಮೊತ್ತದಲ್ಲಿ ಜನರಿಗೆ ಮಾರಾಟ ಮಾಡಬಹುದು, ಇದರಿಂದಲೂ ಕೂಡ ನಿಮಗೆ ಲಾಭದಾಯಕವಾದ ವ್ಯಾಪಾರ ಆಗುತ್ತದೆ, ಎಂದು ಕೂಡ ಹೇಳಬಹುದು.

ದೀಪಾವಳಿ ಹಬ್ಬಕ್ಕೆ ಪಟಾಕಿ ಬಹಳ ಮುಖ್ಯವಾದದ್ದು. ಈ ಒಂದು ಪಟಾಕಿಯನ್ನು ಮಾರಟ ಮಾಡಿ ಕೂಡ ಹಣವನ್ನು ಸಂಪಾದಿಸಬಹುದು. ಯಾವ ರೀತಿ ಪಟಾಕಿಯನ್ನು ಖರೀದಿಸುವುದೆಂದರೆ ನಿಮ್ಮ ಊರಿನಲ್ಲಿರುವ ಅಂಗಡಿಗಳಲ್ಲಿ ಕಡಿಮೆ ಬೆಲೆಯಲ್ಲಿ ಪಟಾಕಿಯನ್ನು ಖರೀದಿಸಿ ಆ ಕಡಿಮೆ ಮುತ್ತದ ಪಟಾಕಿಯನ್ನು ನೀವು ಬೇರೊಂದು ಜನಗಳಿಗೆ ಮಾರಾಟ ಮಾಡಿ ಇದರಿಂದ ಕೂಡ ನಿಮಗೆ ಹಣ ಸಿಗುತ್ತದೆ ಹಾಗೂ ಲಾಭವಾಗುತ್ತದೆ. ಈ ರೀತಿಯ ಕೆಲಸಗಳನ್ನು ಮಾಡಿ ಹಣವನ್ನು ಗಳಿಸಬಹುದು, ದೀಪಾವಳಿ ಹಬ್ಬದ ಪ್ರಯುಕ್ತ ಈ ಕೂಡಲೇ ಕೆಲಸಗಳನ್ನು ಮಾಡಲು ಶುರು ಮಾಡಿ ನೀವು ಕೂಡ ಹಣವನ್ನು ಗಳಿಸಿಕೊಳ್ಳಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ವಿಷಯದೊಂದಿಗೆ..

Leave a Comment