ವಿದ್ಯಾರ್ಥಿಗಳೇ ಓದಿದ್ದೆಲ್ಲಾ ಮರೆಯುತ್ತಿದ್ದೀರಾ ? ಹಾಗಾದ್ರೆ ಜ್ಞಾಪಕ ಶಕ್ತಿಯನ್ನು ಈ ಏಳು ಮಾರ್ಗಗಳ ಮೂಲಕ ಹೆಚ್ಚಿಸಿಕೊಳ್ಳಿ !

ಎಲ್ಲರಿಗೂ ನಮಸ್ಕಾರ..

ಕೆಲವು ವಿದ್ಯಾರ್ಥಿಗಳು ಎಷ್ಟೇ ಓದಿದರು, ಓದಿದನ್ನು ನೆನಪಲ್ಲಿಡುವುದು ಕಷ್ಟವಾಗಿದೆ. ಓದುವ ವಿಧಾನವನ್ನು ತಿಳಿದುಕೊಂಡರೆ, ನೀವು ಕೂಡ ತರಗತಿಯಲ್ಲಿ ಮೊದಲನೇ ಸ್ಥಾನದಲ್ಲಿ ಇರುತ್ತೀರಿ. ನಿಮ್ಮ ಸ್ನೇಹಿತರಿಗೂ ಕೂಡ ಓದುವ ವಿಧಾನವನ್ನು ನೀವೇ ತಿಳಿಸುತ್ತೀರಿ. ಹಾಗಾದ್ರೆ ಯಾವ ರೀತಿ ಓದಬೇಕು ? ಹಾಗೂ ಎಷ್ಟು ಸಮಯದವರೆಗೂ ಓದಬೇಕು, ಎಂಬುದನ್ನು 7 ಮಾರ್ಗಗಳ ಮೂಲಕ ಬೇರ್ಪಡಿಸಿ ಈ ಕೆಳಕಂಡ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ, ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ಓದಿನ ಮೇಲೆ ಆಸಕ್ತಿ ಇದ್ದರೂ ಕೂಡ, ಓದಲು ಆಗುತ್ತಿಲ್ಲ. ಹಾಗೂ ಹೆಚ್ಚು ಸಮಯವನ್ನು ಕಳೆಯುವ ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಲವಾರು ವಿಡಿಯೋಗಳನ್ನು ನೋಡುತ್ತಿರುತ್ತೀರಿ, ಆದರೆ ಎಷ್ಟೇ ಪ್ರಯತ್ನ ಮಾಡಿದರು ಕೂಡ ನಿಮಗೆ ಪ್ರತಿಫಲ ಸಿಕ್ಕಿರುವುದಿಲ್ಲ. ಆದರೆ ಈ ಒಂದು ಲೇಖನದಲ್ಲಿ ತಿಳಿಸಿದ ಹಾಗೆ ನಿಮ್ಮ ಜೀವನಕ್ಕೆ ಅಳವಡಿಸಿಕೊಂಡರೆ, ಎಲ್ಲವೂ ಸಾಧ್ಯವಾಗುತ್ತದೆ. ನಿಮ್ಮ ದಿನನಿತ್ಯ ಜೀವನದಲ್ಲಿ ಹಲವು ಬದಲಾವಣೆಯನ್ನು ಮಾಡಿಕೊಳ್ಳಿ, ಓದಿನ ಮೇಲೆ ಗಮನವಿಟ್ಟು ಓದಿ, ವಿದ್ಯಾರ್ಥಿಗಳಿಗೆ ಹೇಳುವುದೊಂದೇ ಇಷ್ಟಪಟ್ಟು ಓದಿ, ಕಷ್ಟಪಟ್ಟು ಯಾರು ಕೂಡ ಓದಬೇಡಿ, ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯೆ ಅರಿಯುವುದು. ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಈ ಕೆಳಕಂಡ 7 ಮಾರ್ಗದಲ್ಲಿ ತಿಳಿಸಿಕೊಡಲಾಗುತ್ತದೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

1. ಕ್ರ್ಯಮಿಂಗ್ ಸೆಷನ್ ಗೆ ಒಳಗಾಗಿದ್ದೀರಾ ?

ಕ್ರ್ಯಮಿಂಗ್ ಸೆಶನ್ ಎಂದರೆ ವಿದ್ಯಾರ್ಥಿಗಳು ಪರೀಕ್ಷೆ ಇಂದಿನ ದಿನ ಒಂದೇ ವಿಷಯದ ಬಗ್ಗೆ ಓದುವುದನ್ನು ಕ್ರ್ಯಮಿಂಗ್ ಸೆಷನ್ ಎನ್ನುತ್ತಾರೆ. ಒಂದೇ ವಿಷಯದ ಬಗ್ಗೆ ಪಟಪಟನೆ, ಬೇಗ ಬೇಗನೆ ಸ್ವಯಂ ಕೆಲಸಗಳನ್ನು ತೊರೆದು, ದಿನವಿಡೀ ಒಂದೇ ದಿನದಲ್ಲಿ ಒಂದು ವಿಷಯದ ಬಗ್ಗೆ ಮಾಹಿತಿಯನ್ನು ಮೆದುಳಿಗೆ ಕಲೆ ಹಾಕುವುದಕ್ಕೆ ಕ್ರ್ಯಮಿಂಗ್ ಎನ್ನುವರು.

ಪರೀಕ್ಷೆ ಇಂದಿನ ದಿನ ಓದುವುದಕ್ಕಿಂತ ಮುಂಚಿತವಾಗಿಯೇ ಕೆಲವು ತಿಂಗಳ ಹಿಂದೆಯೆ ಓದುವುದು ಸೂಕ್ತ. ಏಕೆಂದರೆ ಒಂದು ತರಗತಿಯನ್ನು ಓದುವುದಕ್ಕೆ 10 ತಿಂಗಳಾದರೂ ಸರ್ಕಾರ ನಿರ್ದಿಷ್ಟ ಸಮಯವನ್ನು ಒದಗಿಸಿಕೊಟ್ಟಿದೆ. ಆದರೆ ವಿದ್ಯಾರ್ಥಿಗಳು ಪರೀಕ್ಷೆ ಹಿಂದಿನ ದಿನ ಮಾತ್ರ ಓದುತ್ತಾರೆ. ಈ ಹತ್ತು ತಿಂಗಳನ್ನು ತೊರೆದು ಒಂದೇ ದಿನದಲ್ಲಿ ಪರೀಕ್ಷೆಗೆ ತಯಾರಾಗುತ್ತಾರೆ. ಕೆಲವು ತಿಂಗಳ ಹಿಂದೆಯಿಂದಲೇ ಓದಿದರೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕವನ್ನು ಗಳಿಸಬಹುದು. ಈ ಒಂದು ಮಾರ್ಗವು ಕೂಡ ನೆನಪಿನ ಶಕ್ತಿಯನ್ನು ಹೆಚ್ಚಿಸಿ ಪರೀಕ್ಷೆಯಲ್ಲಿ ಒಳ್ಳೆಯ ಅಂಕವನ್ನು ಗಳಿಸಲು ಸಹಾಯ ಮಾಡುತ್ತದೆ.

2. ಒಂದೇ ವಿಷಯವನ್ನು ಗುಂಪುಗಳಾಗಿ ಬೇರ್ಪಡಿಸಿ. 

ದೊಡ್ಡ ವಿಷಯವನ್ನು, ತೆಗೆದುಕೊಂಡ ವಿದ್ಯಾರ್ಥಿಯು ಓದುವುದಕ್ಕೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಾನೆ. ಒಂದೇ ವಿಷಯವನ್ನು ಗುಂಪುಗಳಾಗಿ ಬೇರ್ಪಡಿಸಿ ಓದುವುದರಿಂದ ಮೆದುಳು ಬೇಗನೆ ಅರಿತುಕೊಳ್ಳುತ್ತದೆ. ಪರೀಕ್ಷೆಯಲ್ಲೂ ಕೂಡ ನೆನಪಿಟ್ಟುಕೊಳ್ಳುತ್ತದೆ. ಮತ್ತು ಶಾಲೆಗಳಲ್ಲಿ ಸ್ನೇಹಿತರ ಜೊತೆ ಓದುವುದನ್ನು ಅಭ್ಯಾಸ ಮಾಡಿ ಸ್ನೇಹಿತರೊಟ್ಟಿಗೆ ಕೂಡ ಗುಂಪು ಗುಂಪುಗಳನ್ನು ಮಾಡಿಕೊಂಡು ಒಂದು ವಿಷಯದ ಬಗ್ಗೆ ಚರ್ಚಿಸಿ ಹಾಗೂ ಆ ಒಂದು ವಿಷಯವನ್ನು ನಿಮ್ಮ ಸ್ನೇಹಿತರೊಟ್ಟಿಗೆ ಹೇಳಿಕೊಳ್ಳಿ, ಇದರಿಂದಲೂ ಕೂಡ ನಿಮ್ಮ ಮೆದುಳಿನ ಜ್ಞಾಪಕ ಶಕ್ತಿಯು ಹೆಚ್ಚಿಸಿಕೊಳ್ಳಬಹುದು.

3. ದಿನನಿತ್ಯದ ಸಾಧನಗಳನ್ನು ಬಳಸಿಕೊಳ್ಳಿ.

ನಿಮಗೆ ದಿನನಿತ್ಯದ ಜೀವನದಲ್ಲಿ ಯಾವುದಾದರೂ ಒಂದು ಹಾಡು ಅಥವಾ ಕಥೆ ಇಷ್ಟ ಆಗೇ ಆಗಿರುತ್ತದೆ. ಹಾಡಿನ ಸ್ವರವನ್ನು ನೀವು ನೆನಪಲ್ಲಿಟ್ಟುಕೊಳ್ಳುತ್ತೀರಿ, ಆದರೆ ವಿದ್ಯಾಭ್ಯಾಸ ಮಾಡುತ್ತಿರುವ ಕಲಿಕೆಯಲ್ಲಿ ನೀವು ಹಿಂದುಳಿದಿರುತ್ತೀರಿ, ಆ ಹಾಡಿನ ಸಾಹಿತ್ಯವನ್ನೇ ನೆನಪಲ್ಲಿಟ್ಟಿದ್ದೀರಿ ಎಂದರೆ, ಇನ್ನೂ ಓದುವ ವಿಷಯದಲ್ಲಿ ಮುಂದೆ ಬರಬೇಕಲ್ಲವೇ ? ಆದ್ದರಿಂದ ಓದಿನ ವಿಷಯದಲ್ಲೂ ಗಮನವಿಟ್ಟು ಓದಿ, ನಿಮ್ಮ ದಿನನಿತ್ಯ ಜೀವನದ ಸಾಧನಗಳೆಂದರೆ, ನಿಮಗೆ ಯಾವ ರೀತಿ ಓದಿದರೆ ಜ್ಞಾಪಕ ಶಕ್ತಿ ಹೆಚ್ಚಿನಲ್ಲಿ ಉಳಿಯುತ್ತದೆ ಎಂದು ತಿಳಿದಿದೆಯೋ ಅದೇ ರೀತಿ ಓದಿ ಅಂದರೆ ಬರೆದು ಓದಿರಿ ಅಥವಾ ಓದಿದ್ದನ್ನು ಬರೆದು ಅಭ್ಯಾಸ ಮಾಡಿರಿ ಇದರಿಂದಲೂ ಕೂಡ ಜ್ಞಾಪಕ ಶಕ್ತಿಯು ಹೆಚ್ಚಾಗುತ್ತದೆ.

4. ಪಂಚೇಂದ್ರಿಯಗಳನ್ನು ಉಪಯೋಗಿಸಿಕೊಂಡು ಓದಿ. 

ಐದು ಪಂಚೇಂದ್ರಿಯಗಳೆಂದರೆ ಅದುವೇ ಕಿವಿ, ಕಣ್ಣು, ಮೂಗು, ನಾಲಿಗೆ, ಮತ್ತು ಚರ್ಮ, ಕಿವಿಯಲ್ಲಿ ಕೇಳಿಸಿಕೊಳ್ಳುವ ಮೂಲಕ ನಿಮ್ಮ ಮೆದುಳಿಗೆ ವಿಷಯವನ್ನು ತಲುಪುವಿಸಬಹುದು. ಹಾಗೂ ಕಣ್ಣಿನಲ್ಲಿ ನೋಡುವ ಮೂಲಕ ವಿಷಯವನ್ನು ಮೆದುಳಿಗೆ ತಲಿಪಿಸಬಹುದು. ಎಲ್ಲಾ ಪಂಚೇಂದ್ರಿಯಗಳನ್ನು ಉಪಯೋಗಿಸಿ ಓದಿನ ಮೇಲೆ ಗಮನವಿಟ್ಟು ಓದುವುದರಿಂದ ನಿಮ್ಮ ಮೆದುಳು ಯಾವುದೇ ಕಾರಣಕ್ಕೂ ವಿಷಯವನ್ನು ಮರೆಯುವುದಿಲ್ಲ. ಪರೀಕ್ಷೆಗೂ ಕೂಡ ಹೆಚ್ಚಿನ ಸಹಾಯ ಮಾಡುತ್ತದೆ, ಎಲ್ಲಾ ವಿಷಯವು ಕೂಡ ನೆನಪಲ್ಲಿ ಇಟ್ಟುಕೊಂಡಿರುತ್ತದೆ.

5. ಜಾಸ್ತಿ ಸಮಯವನ್ನು ನಿದ್ರೆಯಲ್ಲೇ ಕಳೆಯುತ್ತೀರಾ ?

ಪರೀಕ್ಷೆ ಇಂದಿನ ದಿನ, ಕೆಲವು ವಿದ್ಯಾರ್ಥಿಗಳು ಹೋದುವುದನ್ನೇ ಗಮನವಿಟ್ಟು ನಿದ್ರೆ ಕೆಡಿಸಿ ಓದುತ್ತಾರೆ, ಆದರೆ ಆ ರೀತಿ ಮಾಡುವುದು ನಿಮ್ಮ ಮೆದುಳಿಗೆ ಸಂಕಷ್ಟವನ್ನು ಉಂಟುಮಾಡುತ್ತದೆ. ಏಕೆಂದರೆ ನಿಮ್ಮ ಮೆದುಳಿಗೆ ವಿಶ್ರಾಂತಿ ಸಿಗುವುದು ನೀವು ಮಲಗಿದಾಗ ಮಾತ್ರ, ಆಗಿನ ಸಮಯದಲ್ಲಿ ಮಾತ್ರ ನಿಮ್ಮ ಮೆದುಳು ಏಕಾಂತದಲ್ಲಿ ತೆಲುತ್ತದೆ. ಆದ್ದರಿಂದ ದಿನವಿಡೀ ಓದಬೇಡಿ 10 ತಿಂಗಳು ಓದುವುದಕ್ಕೆ ಸಮಯ ಇದ್ದೇ ಇರುತ್ತದೆ ಆ ಸಮಯವನ್ನು ಉಪಯೋಗಿಸಿಕೊಳ್ಳಿ. ಅಧ್ಯಾಯನವನ್ನು ಅಂದಿನ ಪಾಠವನ್ನು ಅಂದೇ ಓದಿ ಎಂದು ಕೂಡ ಹೇಳಬಹುದು, ಆಗ ಪರೀಕ್ಷೆಗೆ ಸಹಾಯವಾಗುತ್ತದೆ, ಹೆಚ್ಚಿನ ಅಂಕಗಳಿಸಲು.

6. ನಿಮ್ಮ ದಿನಚರಿಯನ್ನು ಬದಲಿಸಿ.

ಪ್ರತಿನಿತ್ಯವೂ ಕೂಡ ಓದುವುದಕ್ಕೆ ನಿರ್ದಿಷ್ಟ ಸಮಯವನ್ನು ಎಲ್ಲಾ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುತ್ತಾರೆ, ಆ ಸಮಯದಲ್ಲಿ ಮಾತ್ರ ಓದುತ್ತಾರೆ. ಹಾಗೂ ಓದುವ ಸಮಯಕ್ಕೆ ಮೀಸಲಿಡುವುದು ಎರಡು ತಾಸು ಅಷ್ಟೇ, ಆ ಎರಡು ತಾಸಿನಲ್ಲಿ ಬರೆಯುವುದು ಮಾತ್ರ ಮಾಡುತ್ತಾರೆ. ಆದರೆ ಓದುವುದನ್ನು ಮಾಡುವುದಿಲ್ಲ. ಆ ತಪ್ಪನ್ನು ನೀವು ಮಾಡಬೇಡಿ, ಎಷ್ಟು ಬರೆಯುತ್ತಿರೋ, ಅಷ್ಟೇ ಓದುವುದನ್ನು ಅಭ್ಯಾಸ ಮಾಡಿ. ಹಾಗೂ ಬೆಳಗಿನ ಸಮಯದಲ್ಲಿ ಓದುವುದನ್ನು ಅಭ್ಯಾಸ ಮಾಡಿ. ನಾಲ್ಕು ಗಂಟೆಯ ಮೇಲೆ ಓದಿ, ಆ ಸಮಯದಲ್ಲಿ ಮಾತ್ರ ಹೆಚ್ಚಿನ ವಿಷಯವನ್ನು ಗಳಿಸಲು ಮೆದುಳು ಕಾತುರದಿಂದ ಕಾಯುತ್ತಿರುತ್ತದೆ, ಎಂದು ಕೂಡ ಹೇಳಬಹುದು. ಅದಕ್ಕಾಗಿ ಬೆಳಗಿನ ಸಮಯದಲ್ಲಿ ಓದುವುದನ್ನು ಅಭ್ಯಾಸ ಮಾಡಿ.

7. ಹೆಚ್ಚು ಪರಿಚಯವಿಲ್ಲದ ವಿಷಯವನ್ನು ತಿಳಿದುಕೊಳ್ಳಿ.

ಹೆಚ್ಚು ಪರಿಚಯವಿಲ್ಲದ ವಿಷಯವನ್ನು ಅಧ್ಯಯನ ಮಾಡಿ ಏಕೆಂದರೆ ಪರಿಚಯವಿಲ್ಲದ ವಿಷವು ವಿದ್ಯಾರ್ಥಿಗಳಿಗೆ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಹೊಸ ಹೊಸ ವಿಷಯದ ಬಗ್ಗೆ ಕಲಿಯಲು ಆಸಕ್ತಿ ಹೊಂದಿರಬೇಕು. ನಿಮ್ಮ ಮೆದುಳು ಕೂಡ ಹೊಸ ಹೊಸ ವಿಷಯವನ್ನು ತಿಳಿದುಕೊಳ್ಳಲು ಕಾತುರದಿಂದ ಕಾಯುತ್ತಿರುತ್ತದೆ. ಸಮಯ ಸಿಕ್ಕಲ್ಲಿ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಿ. ನೀವು ಓದುತ್ತಿರುವ ತರಗತಿ ಅಲ್ಲದೆ ಬೇರೊಂದು ವಿಷಯಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಿಸಿ. ಪರೀಕ್ಷೆಗೆ ಈ ಮೇಲಿನ ಎಲ್ಲಾ ಏಳು ಮಾರ್ಗಗಳು ಉಪಯುಕ್ತವಾಗುತ್ತದೆ ಎಂದು ಭಾವಿಸುತ್ತೇನೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ವಿಷಯದೊಂದಿಗೆ.

Leave a Comment