ಆಧಾರ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ ಜಾರಿ ! ಅಪ್ಪಿ ತಪ್ಪಿಯು ನೀವು ಈ ತಪ್ಪುಗಳನ್ನು ಮಾಡಬೇಡಿ ಜಾಗ್ರತೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ನೀವೇನಾದರೂ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು,ಜನ್ಮ,ದಿನಾಂಕ, ವಿಳಾಸ,ಮೊಬೈಲ್ ನಂಬರ್ ಗಳನ್ನು ನವೀಕರಿಸಬೇಕೆ ಹಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಆಧಾರ್ ಕಾರ್ಡ್ ಎಂಬುವುದು ಪ್ರತಿಯೊಬ್ಬ ನಾಗರೀಕನಿಗೂ ತುಂಬಾ ಮುಖ್ಯವಾದ ದಾಖಲೆ ಎಂದೇ ಹೇಳಬಹುದು. ಆಧಾರ್ ಕಾರ್ಡ್ ಎಂಬ ದಾಖಲೆಯಿಂದಾಗಿ ವ್ಯಕ್ತಿಯನ್ನು ಗುರುತಿಸಬಹುದು. ಆಧಾರ್ ಕಾರ್ಡ್ ನಲ್ಲಿ ವ್ಯಕ್ತಿಯ ಹೆಸರು ವಿಳಾಸ ಜನ್ಮ ದಿನಾಂಕ ಲಿಂಗ ಮೊಬೈಲ್ ನಂಬರ್ ತಂದೆಯ ಹೆಸರು ಅಥವಾ ಗಂಡನ ಹೆಸರು ಮೊಬೈಲ್ ನಂಬರ್ ಇರುತ್ತದೆ ಇದರಿಂದಾಗಿ ಒಬ್ಬ ವ್ಯಕ್ತಿಯನ್ನು ನಾವು ಗುರುತಿಸಲು ತುಂಬಾ ಸುಲಭವಾಗುತ್ತದೆ. ಆದ್ದರಿಂದ ಆಧಾರ್ ಕಾರ್ಡ್ ಎಂಬುದು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

WhatsApp Group Join Now
Telegram Group Join Now

ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಕೂಡ ತುಂಬಾ ಮುಖ್ಯವಾಗಿದೆ. ಆಧಾರ್ ಕಾರ್ಡ್ ಎಷ್ಟು ಮುಖ್ಯವಾದ ದಾಖಲೆಯಾಗಿದೆಯೋ ಪ್ಯಾನ್ ಕಾರ್ಡ್ ಕೂಡ ತುಂಬಾ ಮುಖ್ಯವಾಗಿದೆ.ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಒಬ್ಬ ವ್ಯಕ್ತಿಗೆ ಬ್ಯಾಂಕ್ ನಲ್ಲಿ ಹಣಕಾಸಿನ ವಹಿವಾಟುಗೆ ಉಪಯುಕ್ತವಾಗುತ್ತದೆ ಮತ್ತು ಸರ್ಕಾರಿ ಕೆಲಸಗಳಿಗೆ ತರಕಾರಿ ತರ ಕೆಲಸಗಳಿಗೆ ಮುಂತಾದ ಕೆಲವು ಚಟುವಟಿಕೆಗಳಿಗೆಲ್ಲ ಆಧಾರ್ ಕಾರ್ಡ್ ತುಂಬಾ ಮುಖ್ಯವಾಗಿದೆ. ಇದರಿಂದಾಗಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ನಾಗರೀಕನಿಗೆ ತುಂಬಾ ಮುಖ್ಯವಾದ ಪುರಾವೆಗಳಾಗಿವೆ.

ನೀವೇನಾದರೂ ಆಧಾರ್ ಕಾರ್ಡನ್ನು ಬದಲಾಯಿಸಬೇಕೇ ಅಂದರೆ ನಿಮ್ಮ ಜನ್ಮ ದಿನಾಂಕ ಮೊಬೈಲ್ ಸಂಖ್ಯೆ ಹೆಸರು ಈ ರೀತಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕೇ. ಹೇಗೆ ನಾವು ಆಧಾರ್ ಕಾರ್ಡನ್ನು ಬದಲಾಯಿಸಿಕೊಳ್ಳಬಹುದು ಎಂದರೆ. ಒಬ್ಬ ವ್ಯಕ್ತಿಗೆ ಎರಡು ಬಾರಿ ಮಾತ್ರ ಆಧಾರ್ ಕಾರ್ಡ್ ನಲ್ಲಿ ಹೆಸರು ವಿಳಾಸ ಮುಂತಾದ ಮಾಹಿತಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯ. ವ್ಯಕ್ತಿಯ ಲಿಂಗವನ್ನು ಒಂದು ಬಾರಿ ಮಾತ್ರ ಬದಲಾಯಿಸಲು ಅವಕಾಶವಿರುತ್ತದೆ. ಆದರೆ ಪದೇ ಪದೇ ಲಿಂಗವನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಆದ್ದರಿಂದ ನೀವು ಜಾಗರೂಕರಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.

ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು ವಿಳಾಸಾ,ಲಿಂಗ,ಜನ್ಮ ದಿನಾಂಕ, ತಂದೆಯ ಹೆಸರು,ಮೊಬೈಲ್ ಸಂಖ್ಯೆ, ಮಾಹಿತಿಗಳಲ್ಲಿ,ತಪ್ಪು ಇದ್ದರೆ ಅದನ್ನು ನವೀಕರಿಸಿಕೊಳ್ಳಿ ಆದರೆ ಜಾಗೃತಯಿಂದ ನವೀಕರಿಸಿ. ಆಧಾರ್ ಕಾರ್ಡ್ ಒಬ್ಬ ನಾಗರಿಕನನ್ನು ಗುರುತಿಸಲು ತುಂಬಾ ಮುಖ್ಯವಾಗಿದೆ. ಆದರೆ ಆಧಾರ್ ಕಾರ್ಡ್ ನಲ್ಲಿ ಹೆಸರು ಜನ್ಮ ದಿನಾಂಕ ವಿಳಾಸ ಮೊಬೈಲ್ ಸಂಖ್ಯೆ ಬದಲಿಸಲು ಎರಡು ಬಾರಿ ಮಾತ್ರ ಅವಕಾಶವಿರುತ್ತದೆ. ಆಧಾರ್ ಕಾರ್ಡನ್ನು ಬದಲಾಯಿಸುವಾಗ ನೀವೇನಾದರೂ ಅಪ್ಪಿ ತಪ್ಪಿ ಎರಡು ಬಾರಿ ಮೇಲೆ ಮಾಡಿದರೆ ನೀವು ವಿಶೇಷ ವಿನಂತಿಯನ್ನು ಪಡೆಯಬೇಕಾಗುತ್ತದೆ ಆದ್ದರಿಂದ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವಾಗ ಸ್ವಲ್ಪ ಜಾಗರೂ ಕತೆಯಿಂದ ಎಚ್ಚರವಹಿಸಿ ಆಧಾರ್ ಕಾರ್ಡ್ ನ ತಪ್ಪುಗಳನ್ನು ನಮೂದಿಸಿಕೊಳ್ಳಿ.

ಆಧಾರ್ ಕಾರ್ಡ್ ಸಮಸ್ಯೆಯನ್ನು ಬಗೆಹರಿಸಲು ಟೋಲ್ ಫ್ರೀ ಸಂಖ್ಯೆ ಲಭ್ಯವಿದೆ.UIDAI ಆಧಾರ್ ಸಹಾಯವಾಣಿ ಸಂಖ್ಯೆಯನ್ನು ಜಾರಿಗೆ ತರಲಾಗಿದೆ. ಹಾಗಿದ್ದರೆ ಈ ಸಹಾಯ ವಾಣಿಯ ಸಂಖ್ಯೆ 1947. ಈ ಸಂಖ್ಯೆಗೆ ನೀವು ಕರೆ ಮಾಡಿ ಸಹಾಯವನ್ನು ಪಡೆಯಬಹುದು. ಕರೆ ಮಾಡಲು ಯಾವುದೇ ಶುಲ್ಕವಿರುವುದಿಲ್ಲ. ನಿಮ್ಮ ಜೊತೆಗೆ UIDAI ಪ್ರತಿನಿಧಿಗಳು ಮಾತನಾಡುತ್ತಾರೆ.UIDAI ನಿಧಿಗಳು ಒಟ್ಟಾರೆ 12 ಭಾಷೆಗಳಲ್ಲಿ ಮಾತನಾಡುತ್ತಾರೆ. ಅಂದರೆ ಉರ್ದು, ತೆಲುಗು,ತಮಿಳು,ಮಲಯಾಳಂ,  ಕನ್ನಡ, ಇಂಗ್ಲೀಷ್, ಹಿಂದಿ, ಪಂಜಾಬಿ,ಗುಜರಾತ್, ಒರಿಯ, ಬೆಂಗಾಲಿ,ಅಸ್ಸಾಮಿ, ಮರಾಠಿ,ಭಾಷೆಗಳಲ್ಲಿ ಲಭ್ಯವಿರುತ್ತದೆ. ನೀವು ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ತಿಳಿಸಿ ಬಗೆಹರಿಸಿಕೊಳ್ಳಬಹುದು ಯಾವುದೇ ಶುಲ್ಕವಿಲ್ಲದೆ.

ಆಧಾರ್ ಕಾರ್ಡ್ ದಾಖಲೆಗಳನ್ನು ನವೀಕರಣ ಮಾಡಲು Myaadhaar ಎಂಬ ವೆಬ್ಸೈಟ್ಗೆ ಭೇಟಿ ನೀಡಿ ನವೀಕರಣ ಮಾಡಬಹುದು ಯಾವುದೇ ಶುಲ್ಕವಿರುವುದಿಲ್ಲ. ಆಧಾರ್ ಕಾರ್ಡ್ ದಾಖಲೆಗಳ ನವೀಕರಣ ಉಚಿತವಾಗಿ ಮಾಡಲು ಡಿಸೆಂಬರ್ 14 ಕೊನೆಯ ದಿನಾಂಕವೆಂದು ಸರ್ಕಾರ ತಿಳಿಸಿದೆ.ಆಧಾರ್ ಕಾರ್ಡ್ ಸಮಸ್ಯೆಗಳಿಗೆ emilhelp@uidai.gov.in ಮೇಲ್ ಮಾಡುವ ಮುಖಾಂತರ ನೀವು ಆಧಾರ್ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಬಹುದು.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದಲ್ಲಿ.

Leave a Comment